ಈ ಹಿಂದೆ ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಬಳಿಯ ಬಸ್ ನಿಲ್ದಾಣದ ಮೇಲ್ಭಾಗ ಗುಂಬಜ್ ಮಾದರಿ ನಿರ್ಮಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿತ್ತು.
ಮೈಸೂರು(ಅ.02): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹೊತ್ತಲ್ಲಿ ‘ಗುಂಬಜ್’ ಮಾದರಿ ವಿವಾದ.ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಸಯ್ಯಾಜಿ ರಾವ್ ರಸ್ತೆಯಲ್ಲಿನ ಹಸಿರು ಚಪ್ಪರದ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ. ಜತೆಗೆ ಚಪ್ಪರ ಮೇಲ್ಭಾಗದಲ್ಲಿ ಹಸಿರು ಬಣ್ಣದ ದೀಪಗಳಿಂದ ‘ಗುಂಬಜ್’ ಹೋಲುವ ಮಾದರಿ ನಿರ್ಮಾಣ ಮಾಡಲಾಗಿದೆ.
ಈ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್ ಖಾತೆಯಲ್ಲಿ ಫೋಟೋ ಹಂಚಿಕೆಯಾಗಿದೆ. ಸಯ್ಯಾಜಿ ರಸ್ತೆಯಲ್ಲಿರುವ ಇದನ್ನು ಬದಲಾಯಿಸಲು ಹೇಳಿದ್ದೇನೆ ಎಂದು ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.
undefined
ಶೂದ್ರರಿಗೆ ಮಾನ-ಮಾರ್ಯಾದೆ ಇದ್ರೆ ಬ್ರಾಹ್ಮಣರ ದೇಗುಲಕ್ಕೆ ಹೋಗಬಾರದು, ಮತ್ತೆ ನಾಲಗೆ ಹರಿಬಿಟ್ಟ ಭಗವಾನ್
ಈ ಬಗ್ಗೆ ಪರ, ವಿರೋಧ ಚರ್ಚೆಗಳು ವ್ಯಕ್ತವಾಗಿವೆ. ಈ ಹಿಂದೆ ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಬಳಿಯ ಬಸ್ ನಿಲ್ದಾಣದ ಮೇಲ್ಭಾಗ ಗುಂಬಜ್ ಮಾದರಿ ನಿರ್ಮಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿತ್ತು. ಇದೀಗ ದಸರಾ ಮಹೋತ್ಸವದ ಉದ್ಘಾಟನೆ ವೇಳೆ ಅಂತಹದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.