122 ಡೆಂಘೀ ಪ್ರಕರಣ..? ಉತ್ತರ ಕನ್ನಡದಲ್ಲಿ ಆತಂಕ

By Kannadaprabha NewsFirst Published May 16, 2020, 10:13 AM IST
Highlights

ಕಾರವಾರ ಜಿಲ್ಲೆಯಾದ್ಯಂತ ಶನಿವಾರ (ಮೇ 16) ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಮಾತ್ರ ಮುಖ್ಯ ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತಿದೆ

ಉತ್ತರ ಕನ್ನಡ(ಮೇ 16): ಕಾರವಾರ ಜಿಲ್ಲೆಯಾದ್ಯಂತ ಶನಿವಾರ (ಮೇ 16) ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಮಾತ್ರ ಮುಖ್ಯ ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತಿದೆ.

ಜನರಲ್ಲಿ ಡೆಂಘೀ ರೋಗದ ಕುರಿತು, ಅದರ ನಿಯಂತ್ರಣದ ಮಾರ್ಗೋಪಾಯಗಳ ಕುರಿತು ಅರಿವು ಮೂಡಿಸುವುದು, ಮುಂದಿನ ಮಳೆಗಾಲದ ಸಮಯದಲ್ಲಿ ರೋಗ ಉಲ್ಬಣವಾಗಬಹುದಾದ ಪರಿಸ್ಥಿತಿಯನ್ನು ನಿಯಂತ್ರಿಸಲು ಬೇಕಾದ ಕಾರ್ಯಚಟುವಟಿಕೆಗಳ ಮಾರ್ಗಸೂಚಿಯನ್ನು ತಯಾರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಜಿಲ್ಲೆಯಲ್ಲಿ ಎಷ್ಟು?:

ಉತ್ತರ ಕನ್ನಡದಲ್ಲಿ 2020ನೇ ಸಾಲಿನ ಜನವರಿಯಿಂದ ಇಲ್ಲಿಯ ವರೆಗೆ 122 ಶಂಕಿತ ಪ್ರಕರಣಗಳ ಪೈಕಿ, 21 ಖಚಿತ ಡೆಂಘೀ ಪ್ರಕರಣಗಳು ಪತ್ತೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾರವಾರ, ಹೊನ್ನಾವರ ಹಾಗೂ ಮುಂಡಗೋಡ ತಾಲೂಕಿನಲ್ಲಿ ಕಂಡುಬಂದಿದೆ. ಮಳೆಗಾಲವು ಪ್ರಾರಂಭವಾಗುತ್ತಿದ್ದು, ಈ ರೋಗದ ವಾಹಕ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ಕೊಪ್ಪಳ: ಯುವಕನ ಕೊಲೆ ಪ್ರಕರಣ, 24 ಗಂಟೆಯಲ್ಲೇ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು

ಕಾರವಾರ ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬೈತ್‌ಖೋಲ್‌ನಲ್ಲಿ ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರಲ್ಲಿ, ಹೊನ್ನಾವರ ತಾಲೂಕಿನ ಸಾಲ್ಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾನಕ್ಕಿ, ಕೆಳಗಿನಕೇರಿ ಗ್ರಾಮಗಳಲ್ಲಿ, ಮುಂಡಗೋಡ ತಾಲೂಕಿನ ಅರಿಶೀನಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚೌಡಳ್ಳಿ ಗ್ರಾಮದಲ್ಲಿ ಡೆಂಘೀ ಪ್ರಕರಣಗಳು ವರದಿಯಾಗಿದೆ.

ಲಕ್ಷಣಗಳಾವುವು?:

ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳು. ತೀವ್ರ ತೆರನಾದ ಡೆಂಘೀ ಖಾಯಿಲೆಯಾದ ಡೆಂಘೀ ಹಿಮೋರೀಜಿಕ್‌ ಸಿಂಡ್ರೋಮ್‌ನಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತ ಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.

ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಘಿಘಿಘಿಘೀ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್‌ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಬ್ಯಾರೆಲ್‌, ಮಣ್ಣಿನ ಮಡಕೆ, ಉಪಯೋಗಿಸದ ಒರಳುಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು.

ಕೊರೋನಾ ಕಾಟ: ಎರಡನೇ ಪರೀಕ್ಷೆಯಲ್ಲಿಯೂ ನೆಗೆಟಿವ್‌, ಕೊಪ್ಪಳದ ಜನತೆ ನಿರಾಳ

ಎಲ್ಲಾ ಡೆಂಘೀ ವರದಿಯಾದ ಪ್ರದೇಶಗಳಲ್ಲಿ ಇಲಾಖೆಯು ಸೂಕ್ತ ರೀತಿಯಲ್ಲಿ ನಿಯಂತ್ರಿಸಿದೆ. ಈ ಪ್ರದೇಶಗಳಲ್ಲಿ ನಿರಂತರವಾಗಿ ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಹಾಗೂ ಆರೋಗ್ಯ ಶಿಕ್ಷಣವನ್ನು ನಡೆಸಲಾಗಿದೆ. ಸ್ಥಳೀಯ ಪಂಚಾಯಿತಿ ಹಾಗೂ ನಗರಸಭೆಯ ಸಹಕಾರದಿಂದ ಫಾಗಿಂಗ್‌ ನಡೆಸಲಾಗಿದೆ. ಎಲ್ಲಾ ನಿಯಂತ್ರಣ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಕ್ಯಾ. ರಮೇಶ ರಾವ್‌ ತಿಳಿಸಿದ್ದಾರೆ.

click me!