
ರಾಮಮೂರ್ತಿ ನವಲಿ
ಬೆಂಗಳೂರು(ನ.29): ಗಂಗಾವತಿ ಪಾನಮತ್ತರಾದವರನ್ನು ಪತ್ತೆ ಮಾಡುವ ಯಂತ್ರಗಳು ಬಂದಿರುವುದು ಹಳೆಯ ವಿಷಯವಾಗಿದೆ. ಈಗ ಗಾಂಜಾ ಸೇದುವರನ್ನು ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ಇಲಾಖೆಗೆ ಮಾರಿಜೋನಾ ಕಿಟ್ ಗಳು ಪೂರೈಕೆಯಾಗಿವೆ. ರಾಜ್ಯಾದ್ಯಂತ ಗಾಂಜಾ ಸೇದುವರನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಿಟ್‌ಗಳನ್ನು ಪೊಲೀಸ್ ಇಲಾಖೆ ಕಳಿಸಿಕೊಟ್ಟಿದೆ. ಅದರಂತೆ ಗಂಗಾವತಿ ನಗರ ಠಾಣೆಗೆ 20 ಕಿಟ್‌ಗಳನ್ನು ಪೂರೈಸಲಾಗಿದೆ.
ಹೇಗೆ ಪತ್ತೆ:
ಗಾಂಜಾ ಸೇದಿದವರು ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ತಮ್ಮ ಬಾಯಿ ಸ್ವಚ್ಛ ಮಾಡಿಕೊಂಡು ಸಂಚರಿಸ ಬಹುದು. ಆದರೆ ಗಾಂಜಾ ಸೇದಿದವರನ್ನು ಹಿಡಿದು ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಕಿಟ್ ಮೂಲಕ ಪರೀಕ್ಷೆ ಮಾಡಿದರೆ ಗಾಂಜಾಪ್ರಿಯರು ಸಲೀಸಾಗಿ ಸಿಕ್ಕಿ ಬೀಳುತ್ತಾರೆ. ಕಿಟ್‌ನಲ್ಲಿ ಮೂತ್ರ ಪರೀಕ್ಷೆ ಮಾಡಿದರೆ ಒಂದು ಪಾಯಿಂಟ್ ಬಂದರೆ ಅದು ಧೃಡವಾದಂತೆ. ಈಗ ಗಂಗಾವತಿ ನಗರ ಸೇರಿದಂತೆ ತಾಲೂಕಿನಲ್ಲಿ ಗಾಂಜಾ ಸೇದುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ಈ ಕಿಟ್‌ಗಳನ್ನು ಪೊಲೀಸ್ ಸಿಬ್ಬಂದಿಗೆ ನೀಡಿ ವಿವಿಧ ವೃತ್ತಗಳಲ್ಲಿ ನಿಯೋಜಿಸಲಾಗಿದೆ. ₹10 ಸಾವಿರ ದಂಡ, 6 ತಿಂಗಳು ಕಾರಾಗೃಹ: ಈ ಹಿಂದೆ ಗಾಂಜಾ ಮಾರಾಟ ಮಾಡುವವರಿಗೆ ದಂಡ ಹಾಕಲಾಗುತ್ತಿತ್ತು. ಈಗ ಸೇದುವವರ ಮೇಲೆ ದಂಡ ವಿಧಿಸಲು ಸರ್ಕಾರ ಆದೇಶ ನೀಡಿದೆ. ಗಾಂಜಾ ಸೇದಿರುವುದು ಧೃಡಪಟ್ಟರೆ ಆ ವ್ಯಕ್ತಿಗೆ ₹10 ಸಾವಿರ ದಂಡ, 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. ನಗರದಲ್ಲಿ ಈಗ ಗಾಂಜಾ ಸೇದುವರ ಪತ್ತೆ ಹಚ್ಚುವ ಕಾರ್ಯ ಚುರುಕುಗೊಂಡಿದೆ.
ಗಾಂಜಾ ಬೀಡಿ ಹಚ್ಚಲು ಅಬಕಾರಿ ಅಧಿಕಾರಿ ಬಳಿಯೇ ಬೆಂಕಿಕಡ್ಡಿ ಕೇಳಿದ ವಿದ್ಯಾರ್ಥಿಗಳು, ಆಮೇಲೆ ಆಗಿದ್ದೇನು?
ಕಿಟ್ ಉಪಯೋಗಿಸಿ ಮೊದಲ ಪ್ರಕರಣ ದಾಖಲು
ಗಾಂಜಾ ಸೇವನೆ ಮಾಡಿದ ವ್ಯಕ್ತಿಯನ್ನು ಮಾರಿಜೋನಾ ಕಿಟ್ ಉಪಯೋಗಿಸಿ ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳೇ ತಿಳಿಸಿದ್ದಾರೆ. ಗುಂಡಮ್ಮ ಕ್ಯಾಂಪಿನ ಅಸ್ಲಂ ಪಾಷಾ ಚಾಂದಾ ಪಾಷ ಎನ್ನುವರು ಗಾಂಜಾ ಸೇವನೆ ಮಾಡಿದ್ದು, ಕಿಟ್ ಮೂಲಕ ಪತ್ತೆ ಹಚ್ಚಿ ವ್ಯಕ್ತಿಯ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಐ ತಿಳಿಸಿದ್ದಾರೆ.
ನಗರದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಅದರ ಪತ್ತೆಗಾಗಿ ಮಾರಿಜೋನಾ ಕಿಟ್ ಪೂರೈಸಿದೆ ಎಂದು ಗಂಗಾವತಿ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳೇ ತಿಳಿಸಿದ್ದಾರೆ.
ಕಲಬುರಗಿ ಜೈಲಲ್ಲೂ ರಾಜಾತಿಥ್ಯ: ಗಾಂಜಾ ಹೊಡೆಯುತ್ತ ಸೆಲ್ಫಿಗೆ ಪೋಸ್ ಕೊಟ್ಟ ಕೈದಿಗಳು!
ಕಲಬುರಗಿ ಜೈಲೊಳಗೆ ಮೊಬೈಲ್, ಗಾಂಜಾ ಎಸೆದಿದ್ದ ನಾಲ್ವರ ಸೆರೆ
ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದೊಳಗೆ ನಿಷಿದ್ದ ಪದಾರ್ಥಗಳಿಂದ ತುಂಬಿದ್ದ ಚೆಂಡಿನ ಮಾದರಿಯ ವಸ್ತುಗಳನ್ನು ಎಸೆದ ಆರೋಪದ ಮೇಲೆ ವಿಚಾರಣೆ ನಡೆಸಿರುವ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಈ ಸಂಬಂಧ ಇಂದಿರಾ ನಗರದ ನಿವಾಸಿ ಲೋಕೇಶ ಸುಭಾಷ (24), ಹೋಟೆಲ್ ಕಾರ್ಮಿಕ ಉದಯ ಕುಮಾರ್ ದೊಡ್ಡನಿ (29), ಜೆಸಿಬಿ ಆಪರೇಟರ್ ಮುಬಾರಕ್ ಅಬ್ಬಾಸ ಅಲಿ ಹಾಗೂ ಮೆಕ್ಯಾನಿಕ್ ಸಾಜೀದ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಚೆಂಡಿನಾಕಾರದ ವಸ್ತುವಿನಲ್ಲಿ ಮೊಬೈಲ್ ಸೆಟ್, ಗಾಂಜಾ ಪ್ಯಾಕೆಟ್, ನಿಷೇಧಿತ ಡ್ರಗ್ಸ್ ಹೋಲುವಂತಹ ಟ್ಯಾಬ್ಲೆಟ್, ತಂಬಾಕು ಪದಾರ್ಥಗಳು ಪತ್ತೆಯಾಗಿದ್ದವು. ಕೊಲೆ ಕೇಸ್‌ನಲ್ಲಿ ಜೈಲೊಳಗಿರುವ ಅಪರಾಧಿಗಳಿಗೆ ಇವುಗಳನ್ನು ತಲುಪಿಸಲು ತಾವು ಯತ್ನಿಸಿದ್ದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಕಲಬುರಗಿ ಪೊಲೀಸ್ ಕಮೀಷನರ್ ಡಾ.ಶರಣಪ್ಪಗೆ ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ