ಭಾರತದಲ್ಲಿ ಅಮೆರಿಕ ಕಂಪನಿ ನೇಮಕಾತಿ: ಕೆಲಸ CCTV ಲೈವ್ ಫೀಡ್ ವೀಕ್ಷಣೆ, ತಿಂಗಳಿಗೆ ವೇತನ 30 ಸಾವಿರ!

By Suvarna NewsFirst Published Jun 22, 2021, 8:14 PM IST
Highlights
  • ಭಾರತದಲ್ಲಿ ನೇಮಕಾತಿ ಆರಂಭಿಸಿದ ಅಮೆರಿಕ ಕಂಪನಿ
  • ಲೈವ್ ಸಿಸಿಟಿವಿ ಫೀಡ್ ವೀಕ್ಷಣೆ ಮಾಡುವುದೇ ಕೆಲಸ
  • ತಿಂಗಳಿಗೆ 30,000 ರೂಪಾಯಿ ವೇತನ 

ನವದೆಹಲಿ(ಜೂ.22):  ಕೊರೋನಾ ವೈರಸ್ 2ನೇ ಅಲೆ ತಗ್ಗಿದೆ. ಬಹುತೇಕ ರಾಜ್ಯಗಳು ಅನ್‌ಲಾಕ್ ಘೋಷಿಸಿದೆ. ಇದರ ಬೆನ್ನಲ್ಲೇ ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿದೆ. ಇದೀಗ ಅಮೆರಿಕದ ಮಳಿಗೆಗಳು ಭಾರತದಲ್ಲಿ ನೇಮಕಾತಿ ಆರಂಭಿಸಿದೆ. ಕೆಲಸ ಸಿಸಿಟಿವಿ ಲೈಫ್ ಫೀಡ್ ವೀಕ್ಷಣೆಯಾಗಿದೆ. ತಿಂಗಳಿಗೆ 30,000 ರೂಪಾಯಿ ವೇತನ ನೀಡುತ್ತಿದೆ.

ನೀವೇ ನಿಮ್ಮ ಬಾಸ್‌ ಆಗುವುದು ಹೇಗೆ? ಇಲ್ಲಿವೆ ಸೂತ್ರಗಳು

ಸಿಸಿಟಿವಿ ಕಣ್ಗಾವಲು ಮೂಲಕ ಅನುಮಾನಾಸ್ವದ ಚಟುವಟಿಕೆಗಳನ್ನು ವೀಕ್ಷಿಸಲು ಹಾಗೂ ತಕ್ಕ ಸಮಯಕ್ಕೆ ಮಾಲ್, ಅಥವಾ ಶಾಪ್ ಕೀಪರ್‌ಗಳನ್ನು ಎಚ್ಚರಿಸಲು ನೇಮಕಾತಿ ಆರಂಭಿಸಿದೆ. ಭಾರತದಲ್ಲಿನ ಮಳಿಗೆಗೆಗಳಿ ಈ ನೇಮಕಾತಿ ನಡೆಯುತ್ತಿದೆ. 

ನೇಮಕಗೊಂಡ ವ್ಯಕ್ತಿ ವರ್ಚುವಲ್ ಮೇಲ್ವಿಚಾರನಾಗಿ ಕಾರ್ಯನಿರ್ವಹಸಲಿದ್ದಾನೆ. ಮಾಲ್ ಅಥವಾ ಅಂಗಡಿ ಒಳಗೆ ಹದ್ದಿನ ಕಣ್ಣಿಡುವುದು, ಕ್ಯಾಷಿಯರ್, ಇತರ ಪ್ರದೇಶಗಳ ಕಡೆ ಗಮನ, ಗ್ರಾಹಕರ ಮೇಲ್ವಿಚಾರಣೆಯನ್ನು ಸಿಸಿಟಿವಿ ಫೂಟೇಜ್ ನೋಡಿ, ಅನುಮಾನಸ್ಪದವಾಗಿದ್ದರೆ ಕೂಡಲೇ ಎಚ್ಚರಿಸಬೇಕು.

SSLC ಪಾಸಾದ ಹೆಣ್ಣುಮಕ್ಕಳಿಗೆ ಮಿಲಿಟರಿ ಸೇರಲು ಅವಕಾಶ, ಅರ್ಜಿ ಹಾಕಿ

ಅಮೆರಿಕ ಲೈವ್ ಐ ಸರ್ವಿಲೆನ್ಸ್ ಕಂಪನಿ ಈ ನೇಮಕಾತಿ ನಡೆಸುತ್ತಿದೆ. ಭಾರತದಲ್ಲಿನ ತನ್ನ ಪಾರ್ಟ್ನರ್‌ಗೆ ಈ ನೇಮಕಾತಿ ನಡೆಯುತ್ತಿದೆ. ಭಾರತದಲ್ಲಿ ಶೆಲ್,  7-ಇಲೆವೆನ್, ಡೈರಿ ಕ್ವೀನ್, ಹಾಲಿಡೇ ಇನ್ ಸೇರಿದಂತೆ ಹಲವು ಕಂಪನಿಗಳಿಗೆ ಸಿಸಿಟಿವಿ ವರ್ಚುವಲ್ ಮೇಲ್ವಿಚಾರಕರನ್ನು ನೇಮಿಸುತ್ತಿದೆ.

click me!