ಏರ್‌ಪೋರ್ಟ್‌ನಲ್ಲಿ ಪೈಲಟ್‌ನಂತೆ ವೇಷ ಧರಿಸಿ ಪೋಸ್ ನೀಡ್ತಿದ್ದ ಯುವಕನೋರ್ವನನ್ನು ದೆಹಲಿ ಏರ್‌ಪೋರ್ಟ್‌ನ ಸಿಐಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಯುವಕನನ್ನು 24 ವರ್ಷದ ಸಂಗೀತ್ ಸಿಂಗ್ ಎಂದು ಗುರುತಿಸಲಾಗಿದೆ.
ನವದೆಹಲಿ: ಏರ್‌ಪೋರ್ಟ್‌ನಲ್ಲಿ ಪೈಲಟ್‌ನಂತೆ ವೇಷ ಧರಿಸಿ ಪೋಸ್ ನೀಡ್ತಿದ್ದ ಯುವಕನೋರ್ವನನ್ನು ದೆಹಲಿ ಏರ್‌ಪೋರ್ಟ್‌ನ ಸಿಐಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಯುವಕನನ್ನು 24 ವರ್ಷದ ಸಂಗೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಸಿಂಗಾಪುರ ಏರ್‌ಲೈನ್ಸ್‌ನ ಪೈಲೆಟ್‌ಗಳ ರೀತಿ ವೇಷಭೂಷಣ ಬ್ಯಾಡ್ಜು ಧರಿಸಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್ ತರ ಪೋಸ್ ಕೊಟ್ಟಿದ್ದಾನೆ. ಪೈಲಟ್ ವೇಷ ತೊಟ್ಟಿದ್ದ ಈತ ಏರ್‌ಪೋರ್ಟ್‌ನ ಸ್ಕೈವಾಕ್ ಬಳಿ ಅಡ್ಡಾಡುತ್ತಿದ್ದಾಗ ಅನುಮಾನಗೊಂಡ ಸಿಐಎಸ್‌ಎಫ್ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.
ಸಂಗೀತ್ ಸಿಂಗ್ ಬಳಿ ಬರೀ ವೇಷಭೂಷಣ ಮಾತ್ರವಲ್ಲ, ಸಿಂಗಾಪುರ ಏರ್‌ಲೈನ್ಸ್‌ಗೆ ಸೇರಿದ ಗುರುತಿನ ಚೀಟಿಯೂ ಇತ್ತು. ಆತ ಈ ಐಡಿ ಕಾರ್ಡ್‌ನ್ನು ಕತ್ತಿಗೆ ಹಾಕಿಕೊಂಡು ಸಿಂಗಾಪುರ ಏರ್‌ಲೈನ್ಸ್‌ನ ಉದ್ಯೋಗಿಯಂತೆ ನಟಿಸಿದ್ದ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಿಂಗ್ ಅವರ ಈ ವೇಷ ಅಸಲಿ ಅಲ್ಲ ಎಂಬುದು ಗೊತ್ತಾಗಿದೆ. ಈತ ಬ್ಯುಸಿನೆಸ್ ಕಾರ್ಡ್ ಮೇಕರ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸಿಂಗಾಪುರ್ ಏರ್‌ಲೈನ್ಸ್‌ನ ಪ್ರತಿನಿಧಿಗಳು ಬಳಸುವ ನಕಲಿ ಗುರುತಿನ ಚೀಟಿಯನ್ನು ತಯಾರಿಸಿದ್ದ. ಬಳಿಕ ಸಿಂಗಾಪುರ ಏರ್‌ಲೈನ್ಸ್‌ಗೆ ಸೇರಿದ ಪೈಲಟ್‌ನ ಸಮವಸ್ತ್ರದಂತೆ ಇರುವ ಬಟ್ಟೆಯನ್ನು ದೆಹಲಿಯ ದ್ವಾರಕಾ ಪ್ರದೇಶದಿಂದ ಖರೀದಿಸಿದ್ದ.
ಈ ವರ್ಷ ಭಾರತದ ಬ್ಯಾಂಕರ್ ಗಳಿಗೆ ಬಂಪರ್; ಸಿಂಗಾಪುರದ ಉದ್ಯೋಗಿಗಳಿಗಿಂತಲೂ ಅಧಿಕ ವೇತನ ಹೆಚ್ಚಳ!
ಪೊಲೀಸರ ವಿಚಾರಣೆ ವೇಳೆ ಈತ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ನಿವಾಸಿಯಾಗಿದ್ದು, 2020ರಲ್ಲಿಯೇ ಮುಂಬೈನಲ್ಲಿ ಒಂದು ವರ್ಷದ ಏವಿಯೇಷನ್ ಹಾಸ್ಪಿಟಾಲಿಟಿ ಕೋರ್ಸ್‌ನ್ನು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಏರ್‌ಪೋರ್ಟ್‌ನ ಭದ್ರತೆಗೆ ಇರುವ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್‌ನ ಸಿಬ್ಬಂದಿಗೆ ಈತ ತಾನು ಸಿಂಗಾಪುರ ಏರ್‌ಲೈನ್ಸ್ ಸಿಬ್ಬಂದಿ ಎಂದು ಹೇಳಿ ಆತನ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಐಡಿ ಕಾರ್ಡನ್ನು ತೋರಿಸಿದ್ದಾನೆ. ಆದರೆ ವಿಚಾರಣೆ ವೇಲೆ ಈತನ ಈ ವೇಷ ನಕಲಿ ಎಂಬುದು ತಿಳಿದು ಬಂದಿದೆ. ಉದ್ಯೋಗವಿಲ್ಲದ ಈತ ತನ್ನ ಮನೆಯವರ ಬಳಿ ತಾನು ಕಮರ್ಷಿಯಲ್ ಪೈಲಟ್ ಎಂದು ಹೇಳಿಕೊಂಡಿದ್ದು, ತನ್ನ ಕುಟುಂಬವನ್ನು ನಂಬಿಸುವುದಕ್ಕಾಗಿಯೇ ಈ ಕೃತ್ಯ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ತಂದೆತಾಯಿಗೆ ಮೊದಲ ಅಂತಾರಾಷ್ಟ್ರೀಯ ಪ್ರವಾಸದ ಸರ್ಪ್ರೈಸ್ ನೀಡಿದ ಮಗ; ಪೋಷಕರ ಪ್ರತಿಕ್ರಿಯೆ ನೋಡಿ!