ಕಚೇರಿ ವಾತಾವರಣ ಕೆಟ್ಟದಾಗಿದ್ದರೆ ಅಲ್ಲಿ ಹೆಚ್ಚುಕಾಲ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ರಾಜೀನಾಮೆ ನೀಡಿ ಹೊರಬರುವವರೇ ಹೆಚ್ಚು. ಆದರೆ, ಅಂತಹ ಕಚೇರಿಯಿಂದ ಹೊರಬರುವ ಖುಷಿಯನ್ನು ತೋರಿಸಿಕೊಳ್ಳುವುದು ಹೇಗೆ? ಇವರನ್ನು ನೋಡಿ ಕಲೀರಿ.
ಕೆಲಸವಿಲ್ಲದೇ ಇದ್ದಾಗ ಕೆಲಸಬೇಕು ಎನ್ನುವ ಹಂಬಲ, ಕೆಲಸ ದೊರೆತ ಮೇಲೆ ಸರಿಯಾದ ಸ್ಥಳ, ವಾತಾವರಣದ ಚಿಂತೆ. ಇನ್ನೂ ಉತ್ತಮ ಕೆಲಸದ ಹುಡುಕಾಟವೂ ಜತೆಯಲ್ಲೇ ನಡೆದಿರುತ್ತದೆ. ಇದು ಸಾಮಾನ್ಯ ಅಭ್ಯಾಸ. ಹೀಗಾಗಿ, ಉದ್ಯೋಗ ಮಾರುಕಟ್ಟೆಗೆ ಪ್ರದೇಶ ಪಡೆದ ನಾಲ್ಕಾರು ವರ್ಷಗಳಲ್ಲೇ ನಾಲ್ಕಾರು ಕಡೆ ವೃತ್ತಿ ಮಾಡುವವರಿದ್ದಾರೆ. ಕೆಲವೇ ಕೆಲವು ಮಂದಿ ಮಾತ್ರ ಹೆಚ್ಚು ದೀರ್ಘಕಾಲ ಒಂದೇ ಕಡೆ ಕೆಲಸ ಮಾಡುವುದು ಕಂಡುಬರುತ್ತದೆ. ಇನ್ನು, ಉದ್ಯೋಗದ ಸ್ಥಳ, ಅಲ್ಲಿನ ವಾತಾವರಣ ಕೆಟ್ಟದಾಗಿದ್ದರೆ, ಹಿತಕರವಾಗಿಲ್ಲದದ್ದರೆ, ಕಿರಿಕಿರಿಯಿಂದ ಕೂಡಿದ್ದರೆ, ಸಣ್ಣಸಣ್ಣದಕ್ಕೂ ಮೇಲಧರಿಕಾರಿಗಳು ಬೈಯ್ಯುವವರಾಗಿದ್ದರೆ, ಎಲ್ಲರೆದುರು ಮರ್ಯಾದೆ ತೆಗೆಯುವಂಥವಾಗಿದ್ದರೆ ಅಲ್ಲಿಂದ ಯಾವಾಗ ಹೊರಬೀಳುತ್ತೇವೋ ಎನ್ನುವ ತುಡಿತ ಉಂಟಾಗುತ್ತದೆ. ಒಂದು ಕಚೇರಿಯ ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ಜನರು ಸಾಮಾನ್ಯವಾಗಿ ತಮ್ಮ ಸಹೋದ್ಯೋಗಿಗಳಿಗೆ ಟ್ರೀಟ್ ಕೊಡಿಸುವುದು ಹೆಚ್ಚು. ಹೋಟೆಲಿನಲ್ಲಿ ಊಟವೋ, ಡ್ರಿಂಕ್ಸ್ ಪಾರ್ಟಿಯೋ ಅಥವಾ ಸಣ್ಣದೊಂದು ಚಹಾವನ್ನೋ ಕೊಡಿಸುವುದು ಕಂಡುಬರುತ್ತದೆ. ಆದರೆ, ಪುಣೆಯ ಉದ್ಯೋಗಿಯೊಬ್ಬ ತಾನು ಕೆಲಸ ಬಿಟ್ಟಾಗ ಏನು ಮಾಡಿದ ಎನ್ನುವುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಕೆಟ್ಟ ವಾತಾವರಣ ಮೂಡಿಸಿರುವ ಬಾಸ್ ಮುಖಕ್ಕೆ ಮಂಗಳಾರತಿ ಎತ್ತಿದಂತೆ ಆಗುತ್ತದೆ.
ಪುಣೆಯ ಅನಿಕೇತ್ ಎಂಬಾತ ಇತ್ತೀಚೆಗೆ ತಮ್ಮ ಉದ್ಯೋಗ (Job) ತೊರೆದರು. ಸೇಲ್ಸ್ (Sales) ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಅನಿಕೇತ್ ಕಚೇರಿಯ (Office) ನಡವಳಿಕೆಯಿಂದ ಬೇಸತ್ತಿದ್ದರು. ಬಾಸ್ (Boss) ವಿಚಿತ್ರ ಧೋರಣೆಗೆ ಹೈರಾಣಾಗಿದ್ದರು. ಅದಕ್ಕಾಗಿ ಕೆಲಸಕ್ಕೆ ರಾಜೀನಾಮೆ (Resign) ನೀಡಿರುವುದನ್ನು ವಿಭಿನ್ನವಾಗಿ ಆಚರಿಸಬೇಕು ಎಂದು ನಿರ್ಧಾರ ಮಾಡಿ, ಸ್ನೇಹಿತರು ಡೊಳ್ಳು (Dhol) ಹಿಡಿದುಕೊಂಡು ಬರುವಂತೆ ಮಾಡಿದರು. ಬಳಿಕ, ಡೊಳ್ಳಿನ ಬೀಟ್ಸ್ (Beats) ಗೆ ಮನಸೋ ಇಚ್ಛೆ ನೃತ್ಯ ಮಾಡಿದರು. ಈ ಸಂಪೂರ್ಣ ಕ್ರಿಯೆಯನ್ನು ಅವರ ಬಾಸ್ ನೋಡುತ್ತಲೇ ಇದ್ದರು ಎನ್ನುವುದು ವಿಶೇಷ.
ಮಗಳಿಗೆ ಲವ್ ಮಾಡೋದ್ಹೇಗೆಂದು ಹೇಳಿ ಕೊಟ್ಟ ಬಾಲಿವುಡ್ ನಟಿ ರವೀನಾ ಟಂಡನ್
ಕೊನೆಯ ದಿನದ ಮಜಾ
ಸೋಷಿಯಲ್ ಮೀಡಿಯಾ ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಅನೀಶ್ ಭಗತ್ ಎನ್ನುವವರು ಈ ವೀಡಿಯೋವನ್ನು ಶೇರ್ (Share) ಮಾಡಿದ್ದಾರೆ. ಕಂಪನಿಯಲ್ಲಿ ಅನಿಕೇತ್ ಅವರು 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಒಂದು ರೂಪಾಯಿಯನ್ನೂ ಸಂಬಳದಲ್ಲಿ ಏರಿಕೆ ಮಾಡಿರಲಿಲ್ಲ ಹಾಗೂ ಅವರ ಬಾಸ್ ಇವರಿಗೆ ಗೌರವವನ್ನೇ (Respect) ನೀಡುತ್ತಿರಲಿಲ್ಲ. ಹೀಗಾಗಿ ಒಂದ ದಿನ ರಾಜೀನಾಮೆ ಸಲ್ಲಿಸಿಯೇ ಬಿಟ್ಟರು. ಕಚೇರಿ ಕೆಲಸದ ಕೊನೆಯ ದಿನದಂದು ಅವರ ಸ್ನೇಹಿತರು ಡೊಳ್ಳು ಹಿಡಿದು ಕೊಂಡುಬಂದರು. ಆ ಸಮಯದಲ್ಲಿ ಅವರ ಬಾಸ್ ಸಿಟ್ಟಿಗೆ (Angry) ಒಳಗಾಗಿರುವುದು ಹಾಗೂ ಇವರ ಮೇಲೆ ಕೂಗುವುದು, ಅಲ್ಲಿನ ಜನರನ್ನು ತಳ್ಳಲು ಯತ್ನಿಸುವುದು ವೀಡಿಯೋದಲ್ಲಿ ಕಂಡುಬರುತ್ತದೆ. ಆದರೆ ಯಾವುದಕ್ಕೂ ಕೇರ್ ಮಾಡದ ಅನಿಕೇತ್ ತಮ್ಮ ಸ್ನೇಹಿತರ ಜತೆಗೆ ಮನಸೋಇಚ್ಛೆ ಡಾನ್ಸ್ (Dance) ಮಾಡಿ ಖುಷಿ ಪಟ್ಟರು.
ಪ್ರೀತಿ ಅಂತ ಹೆಂಡ್ತಿಗೆ ಪದೆ ಪದೇ ಮೆಸೇಜ್ ಕಳುಹಿಸಿದ್ರೆ ಉಸಿರುಗಟ್ಟಬಹುದು ಎಚ್ಚರ!
ಈ ವೀಡಿಯೋ ಶೇರ್ ಮಾಡಿರುವ ಅನೀಶ್ ಭಗತ್, ‘ಇದು ಹಲವರಿಗೆ ಸಂಬಂಧಪಟ್ಟಿರಬಹುದು. ಟಾಕ್ಸಿಕ್ ವರ್ಕ್ ಕಲ್ಚರ್ (Toxic Working Culture) ಎನ್ನುವುದು ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಹೆಚ್ಚಾಗಿದೆ. ಗೌರವದ ಕೊರತೆ, ಉತ್ತೇಜನದ ಕೊರತೆ ಸರ್ವೇಸಾಮಾನ್ಯ. ಅನಿಕೇತ್ ಕೊನೆಗೊಮ್ಮೆ ರಾಜೀನಾಮೆ ನೀಡ ಖುಷಿಯಿಂದ (Happy) ಹೊರಗೆ ಬಂದದ್ದಾರೆ. ಇದು ಅನೇಕ ಜನರಿಗೆ ಪ್ರೇರಣೆ (Inspiration) ನೀಡುವ ವಿಚಾರವಾಗಿದೆ’ ಎಂದು ಹೇಳಿದ್ದಾರೆ. ಇಷ್ಟೆಲ್ಲ ಆದ ಬಳಿಕ, ಎಲ್ಲರೂ ಸೇರಿ ಕೇಕ್ ತಿಂದಿದ್ದಾರೆ.
ವಿಡಿಯೋವನ್ನು ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು, ಲಕ್ಷಕ್ಕೂ ಅಧಿಕ ಜನ ವೀಕ್ಷಣೆ (Views) ಮಾಡಿದ್ದಾರೆ. ಸಾಕಷ್ಟು ಜನ ಲೈಕ್ (Likes), ಕಾಮೆಂಟ್ ಮಾಡಿದ್ದಾರೆ.