ಗೋಧಿ ಕೊಯ್ಲಿಗೆ ಜನ ಬೇಕು, ಪಿಎಚ್ಡಿ ಮಾಡಿದೋರಿಗೂ ಅವಕಾಶ! ದಿನಕ್ಕೆರಡು ಗುಟ್ಕಾ!

By Suvarna NewsFirst Published Apr 29, 2024, 4:14 PM IST
Highlights

ಹೊಲದಲ್ಲಿ ಕೆಲಸ ಮಾಡಲು ಜನರನ್ನು ಹುಡುಕುವ ಸ್ಥಿತಿ ಈಗ ನಿರ್ಮಾಣವಾಗಿದೆ. ಉದ್ಯೋಗಕ್ಕೆ ಬರೀ ಐಟಿ ಕಂಪನಿಗಳು ಮಾತ್ರ ಅರ್ಜಿ ಆಹ್ವಾನಿಸೋದಲ್ಲ ಗದ್ದೆ ಕೆಲಸಕ್ಕೂ ಅರ್ಜಿ ಆಹ್ವಾನಿಸುವ ಸ್ಥಿತಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಇಂಥ ಒಂದು ಪೋಸ್ಟ್ ವೈರಲ್ ಆಗಿದೆ.
 

ಉದ್ಯೋಗ ಕ್ಷೇತ್ರದಲ್ಲಿ ಈಗ ಸಾಕಷ್ಟು ಏರುಪೇರು ಕಾಣಿಸ್ತಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೆ ನೀವು ಸರಿಯಾಗಿ ಗಮನಿಸಿ ನೋಡಿದಾಗ ನಿಮಗೆ ಸತ್ಯ ಗೊತ್ತಾಗುತ್ತೆ. ದೇಶದಲ್ಲಿ ಮಾಡಲು ಸಾಕಷ್ಟು ಉದ್ಯೋಗವಿದೆ. ಆದ್ರೆ ಜನರು ಎಲ್ಲ ಕೆಲಸ ಮಾಡಲು ಮುಂದೆ ಬರ್ತಿಲ್ಲ. ತಮ್ಮ ವಿದ್ಯಾರ್ಹತೆ, ಸ್ಟ್ಯಾಂಡರ್ಡ್ ಹೆಸರಿನಲ್ಲಿ ನಿರುದ್ಯೋಗಿಯಾಗಿಯೇ ಇರಲು ಇಷ್ಟಪಡ್ತಿದ್ದಾರೆಯೇ ವಿನಃ ಸಿಕ್ಕ ಕೆಲಸ ಮಾಡ್ತಿಲ್ಲ. 

ಹಳ್ಳಿ (Village) ಜನ ಪಟ್ಟಣಕ್ಕೆ ಬರ್ತಿದ್ದಾರೆ. ಇದ್ರಿಂದಾಗಿ ಹಳ್ಳಿಗಳು ಬರಿದಾಗುತ್ತಿವೆ. ಹಳ್ಳಿಯಲ್ಲಿ ಹೊಲ – ಗದ್ದೆಗಳಲ್ಲಿ ಕೆಲಸ ಮಾಡಲು ಜನರಿಲ್ಲ. ಹಾಗಂತ ಪಟ್ಟಣ (Town) ದಲ್ಲಿ ಕೂಡ ಎಲ್ಲ ಕೆಲಸಕ್ಕೆ ಜನ ಸಿಗ್ತಿದ್ದಾರೆ ಎಂದಲ್ಲ. ಸೇಲ್ಸ್, ಕ್ಲೀನಿಂಗ್ ಸೇರಿದಂತೆ ಅನೇಕ ಕೆಲಸಕ್ಕೆ ಜನರ ಕೊರತೆ ಕಾಡ್ತಿದೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ (Instagram), ಫೇಸ್ಬುಕ್, ಯುಟ್ಯೂಬ್ ನಲ್ಲಿ ಗಳಿಕೆ ಹೆಚ್ಚಾಗ್ತಿದ್ದಂತೆ ಕೆಲವರು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಕಷ್ಟಪಟ್ಟು ದುಡಿಯುವ ಬದಲು ತಲೆಯೋಡಿಸಿ, ಜನರಿಗೆ ಮನರಂಜನೆ ನೀಡುವ ಮೂಲಕವೇ ಹಣ ಸಂಪಾದನೆ ಮಾಡ್ತಿದ್ದಾರೆ.  ಹಳ್ಳಿ ಜನ ತಮ್ಮ ಹೊಲದ ಕೆಲಸವನ್ನು ತಾವು ಮಾಡೋದನ್ನೇ ಸಣ್ಣ ಕೆಲಸ ಎಂದು ಭಾವಿಸ್ತಿದ್ದಾರೆ. ಇಡೀ ದಿನ ಬಿಸಿಲಿನಲ್ಲಿ ಕೆಲಸ ಮಾಡೋಕೆ ಅವರಿಗೆ ಇಷ್ಟವಾಗ್ತಿಲ್ಲ. ಗದ್ದೆಯಲ್ಲಿ ಕೆಲಸ ಮಾಡಲು ಜನ ಇಲ್ಲ ಅನ್ನೋದು ಹೊಲದ ಮಾಲೀಕನಿಗೆ ದೊಡ್ಡ ತಲೆನೋವಾಗಿದೆ. ಕೆಲಸಗಾರರನ್ನು ಎಲ್ಲಿಂದ ತರೋದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟರ್ ಒಂದು ವೈರಲ್ ಆಗಿದೆ. 

ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅನಂತ್ ಅಂಬಾನಿ-ರಾಧಿಕಾ ಸೆಕೆಂಡ್ ಪ್ರಿ ವೆಡ್ಡಿಂಗ್‌!

ಸಾಮಾಜಿಕ ಜಾಲತಾಣದಲ್ಲಿ ಗೋಧಿ ಕೊಯ್ಲಿಗೆ ಜನ ಬೇಕು ಎಂಬ ಪೋಸ್ಟರ್ ಒಂದು ವೈರಲ್ ಆಗಿದೆ. ಒಂದು ಮರಕ್ಕೆ ಪೋಸ್ಟರ್ ಅಂಟಿಸಲಾಗಿದೆ. ಅದರ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಆ ಪೋಸ್ಟಿನಲ್ಲಿ ಗೋಧಿ ಕೊಯ್ಲಿಗೆ ಜನರು ಬೇಕೆಂದು ಹೇಳಲಾಗಿದೆ. ಅನಕ್ಷರಸ್ಥರಿಂದ ಹಿಡಿದು ಪಿಎಚ್‌ಡಿ ಮಾಡುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಗೋಧಿ ಕತ್ತರಿಸುವ ಜನರಿಗೆ ಪ್ರತಿದಿನ 350 ರೂಪಾಯಿ ನೀಡಲಾಗುವುದು ಎಂದು ಅದ್ರಲ್ಲಿ ಬರೆಯಲಾಗಿದೆ. ಗೋಧಿ ಕೊಯ್ಲು ಮಾಡುವ ಕಾರ್ಮಿಕರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪೋಸ್ಟರ್ ನಲ್ಲಿ ಹಾಕಲಾಗಿದೆ. ಪ್ರತಿಯೊಬ್ಬರಿಗೂ ದಿನಕ್ಕೆ 2 ಬಾರಿ ಉಪಹಾರ, 4 ಗುಟ್ಕಾ, 2 ಬೀಡಿ ಮತ್ತು 2 ಬಾರಿ ಚಹಾ ನೀಡಲಾಗುವುದು ಎಂದು ಅದರಲ್ಲಿ ಬರೆಯಲಾಗಿದೆ. ಇಷ್ಟೇ ಅಲ್ಲ ಈ ಕೆಲಸ ಬೇಕಾದವರು ಎಲ್ಲಿ ಸಂಪರ್ಕಿಸಬೇಕು ಎಂಬುದಕ್ಕೆ ಐಡಿ ಕೂಡ ನೀಡಲಾಗಿದೆ. 

WWE ರೆಸ್ಲರ್ ಎರಿಕಾ ಹ್ಯಾಮಂಡ್ ಮದ್ವೆಯಾದ ಟೆಕ್ ಬಿಲಿಯನೇರ್ ಅಂಕುರ್ ಜೈನ್

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅನೇಕ ಜನರು ಇದ್ರ ಬಗ್ಗೆ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಯಾವಾಗ ಬರ್ಬೇಕು ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೀಡಿ ಸಂಖ್ಯೆಯನ್ನು ಹೆಚ್ಚು ಮಾಡಿ ಅಂತ ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಗೋಧಿ ಗದ್ದೆಯಲ್ಲಿ ಬೀಡಿ ಹಚ್ಬಬೇಡಿ. ಗೋಧಿ ಬೆಳೆ ಬೆಂಕಿಗೆ ಸುಟ್ಟು ಹೋಗುವ ಸಾಧ್ಯತೆ ಇರುತ್ತೆ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಮ್ಮ ಹಳ್ಳಿಯಲ್ಲಿ ದಿನಕ್ಕೆ 600 ರೂಪಾಯಿ ಕೊಡ್ತಾರೆ ಅಂತಾ ಕಮೆಂಟ್ ನಲ್ಲಿ ತಿಳಿಸಿದ್ದಾರೆ. ಬೀಡಿ ಬೇಡ ಅದರ ಬದಲು ಎರಡು ಗ್ಲಾಸ್ ಹೆಚ್ಚುವರಿ ಟೀ ನೀಡಿ ಅಂತ ಒಬ್ಬರು ಹೇಳಿದ್ರೆ ಮತ್ತೊಬ್ಬರು ಕೆಲಸದ ಟೈಮ್ಸ್ ತಿಳಿಸಿ ಅಂತ ಕೇಳಿದ್ದಾರೆ. ಬಹುತೇಕ ಬಳಕೆದಾರರು ದಿನಗೂಲಿ ಕಡಿಮೆ ಎಂದು ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. 

click me!