ವರ್ಕ್ ಫ್ರಂ ಹೋಮ್‌ ರದ್ದು ಮಾಡಿ : ಟ್ರಾವೆಲ್‌ ಆಪರೇಟ​ರ್ಸ್

By Kannadaprabha NewsFirst Published Jul 6, 2021, 8:08 AM IST
Highlights
  •  ಐಟಿ ಬಿಟಿ ವಲಯ ಆಧರಿಸಿ ಜೀವಿಸುತ್ತಿರುವ ಅಸಂಘಟಿತ ಸಾವಿರಾರು ಕಾರ್ಮಿಕರು
  • ಕೊರೋನಾ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಕಾರ್ಮಿಕರು
  • ವರ್ಕ್ ಫ್ರಂ ಹೋಮ್‌ ರದ್ದು ಮಾಡಲು ಮನವಿ

ಬೆಂಗಳೂರು (ಜು.06):  ಐಟಿ ಬಿಟಿ ವಲಯ ಆಧರಿಸಿ ಜೀವಿಸುತ್ತಿರುವ ಅಸಂಘಟಿತ ಸಾವಿರಾರು ಕಾರ್ಮಿಕರು ಕೊರೋನಾ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರ ಚೇತರಿಕೆಗಾಗಿ ಐಟಿ ಉದ್ಯೋಗಿಗಳು ಕಚೇರಿಯಿಂದಲೇ ಕಾರ್ಯ ನಿರ್ವಹಿಸುವಂತೆ ಆದೇಶಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸೋಮವಾರ ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮನೆಯೇ ಆಫೀಸಾದರೆ? #HappyWorkfromHome! ...

ಲಾಕ್‌ಡೌನ್‌ನಿಂದಾಗಿ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದವು. ಅಲ್ಲದೆ, ಬಿಸಿನೆಸ್‌ ಪ್ರೊಸೆಸ್‌ ಔಟ್‌ಸೋರ್ಸ್‌ ಮತ್ತು ಐಟಿ ಆಧಾರಿತ ಸೇವಾ ಕಂಪನಿಗಳ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಸರಳಗೊಳಿಸಿತು. ಇದರಿಂದ ನಗರದಲ್ಲಿ ನಿತ್ಯ 20 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಸಾರಿಗೆ ಸೇವೆ ನೀಡುತ್ತಿದ್ದ ಟ್ಯಾಕ್ಸಿ, ಮಿನಿ ಬಸ್‌ ಇತರ ಸಾವಿರಾರು ವಾಹನಗಳು ನಿಂತಲ್ಲೆ ನಿಂತವು. ಕಳೆದ 17 ತಿಂಗಳಿಂದ ಕೆಲಸವಿಲ್ಲದೇ ವಾಹನಗಳ ಅವಲಂಬಿತ ಐದು ಲಕ್ಷ ಕುಟುಂಬಗಳು ಸಂಷಕ್ಟಕ್ಕೀಡಾಗಿವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಉದ್ಯೋಗಸ್ಥ ಮಹಿಳೆಯರು ಬಯಸೋದು ಇಂಥ ಗಂಡನನ್ನು!

ಉದ್ಯೋಗಿಗಳಿಗೆ ಸಾರಿಗೆ ಒದಗಿಸುವ ಸಾರಿಗೆ ಉದ್ಯಮ, ಆತಿಥ್ಯ ಕ್ಷೇತ್ರಉದ್ಯಮ, ಮೂಲಸೌಕರ್ಯ ಸೇರಿ ಒಟ್ಟು ಶೇ.25ರಷ್ಟುಅಸಂಘಟಿತ ವಲಯದಿಂದ ವಾರ್ಷಿಕ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರು. ರಸ್ತೆ ತೆರಿಗೆæ ಪಾವತಿಯಾಗುತ್ತದೆ. ಅನ್‌ಲಾಕ್‌ ಬಳಿಕವೂ ಈ ಎಲ್ಲ ವಾಹನಗಳಿಗೆ ಕೆಲಸವೇ ಇಲ್ಲವಾಗಿದೆ. ಆದ್ದರಿಂದ ಸರ್ಕಾರ ಐಟಿ ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಬೇಕು. ಜತೆಗೆ ವಾಹನಗಳ ರಸ್ತೆ ತೆರಿಗೆಗೆ ವಿನಾಯಿತಿ ನೀಡಿ ಆದೇಶಿಸಬೇಕು ಎಂದು ಕೋರಲಾಗಿದೆ.

click me!