ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ರೋಬೋಟ್‌: ಸುರಂಗದಲ್ಲಿರುವವರಿಗೆ 9 ದಿನ ಬಳಿಕ ಬಿಸಿಯೂಟ

By Kannadaprabha NewsFirst Published Nov 21, 2023, 8:59 AM IST
Highlights

20 ಕೆಜಿ ಹಾಗೂ 50 ಕೆಜಿ ತೂಕದ 2 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಇವು ರಂಧ್ರ ಕೊರೆಯುವಾಗ ರಕ್ಷಣಾ ತಂಡಗಳಿಗೆ, ಅಲ್ಲಿನ ಭೂಮಿ ಹಾಗೂ ಸುರಂಗದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತವೆ.

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಸಿಲ್‌ಕ್ಯಾರಾ ಎಂಬಲ್ಲಿ ಸಂಭವಿಸಿದ ಸುರಂಗ ಭೂಕುಸಿತ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗಲು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) 2 ರೋಬೋಟ್‌ಗಳನ್ನು ಸೋಮವಾರ ಕಳಿಸಿಕೊಟ್ಟಿದೆ. ಈ ರೋಬೋಟ್‌ಗಳು ರಕ್ಷಣಾ ತಂಡಗಳಿಗೆ ಸ್ಥಳದ ಪರಿಸ್ಥಿತಿ ಬಗ್ಗೆ ಮುನ್ಸೂಚನೆ ನೀಡಿ ಅವರಿಗೆ ಮಾರ್ಗದರ್ಶನ ಮಾಡಲಿವೆ.

20 ಕೆಜಿ ಹಾಗೂ 50 ಕೆಜಿ ತೂಕದ 2 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಇವು ರಂಧ್ರ ಕೊರೆಯುವಾಗ ರಕ್ಷಣಾ ತಂಡಗಳಿಗೆ, ಅಲ್ಲಿನ ಭೂಮಿ ಹಾಗೂ ಸುರಂಗದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತವೆ. ಸ್ಥಳದಲ್ಲಿ ಮಣ್ಣಿನ ಪರಿಸ್ಥಿತಿ ಹಾಗೂ ಸುರಂಗದ ಸ್ಥಿತಿ ಹೇಗಿದೆ? ಮಣ್ಣು ಕುಸಿಯುವ ಸಂಭವ ಇದೆಯೇ ಅಥವಾ ಮಣ್ಣನ್ನು ಸಲೀಸಾಗಿ ಕೊರೆದು ಮುಂದೆ ಸಾಗಬಹುದೇ ಎಂಬ ಮಾಹಿತಿ ನೀಡುತ್ತವೆ. ಅಲ್ಲದೆ, ಯಾವ ಸ್ಥಳದಲ್ಲಿ 41 ಕಾರ್ಮಿಕರು ಸಿಲುಕಿದ್ದಾರೆ ಎಂಬ ಮಾಹಿತಿಯನ್ನೂ ನೀಡುತ್ತವೆ.

ಇದನ್ನು ಓದಿ: ಸುರಂಗದಲ್ಲಿ ಸಿಲುಕಿರುವ 41 ಜನರ ನೆರವಿಗೆ ಪೈಪ್‌: ಘನಾಹಾರ ಪೂರೈಕೆ, ರಕ್ಷಣಾ ಕಾರ್ಯಕ್ಕೆ ಮೊದಲ ಯಶಸ್ಸು

ಈಗಾಗಲೇ 2 ರೋಬೋಟ್‌ಗಳನ್ನು ಹೊತ್ತ ಡಿಆರ್‌ಡಿಒ ತಜ್ಞರ ತಂಡ ಸೋಮವಾರ ಸಿಲ್‌ಕ್ಯಾರಾದಲ್ಲಿ ಬೀಡುಬಿಟ್ಟಿದೆ.

ಕಾರ್ಮಿಕರ ಮಾನಸಿಕ ಸ್ಥೈರ್ಯ ಕಾಪಾಡಿ: ಮೋದಿ 
ಉತ್ತರಾಖಂಡದ ಸಿಲ್ಕ್ಯಾರಾ ಬಳಿ ನಿರ್ಮಿಸುತ್ತಿರುವ ಸುರಂಗದಡಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಯ ಜೊತೆಗೆ ಅವರ ಮಾನಸಿಕ ಸ್ಥೈರ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಇದನ್ನು ಓದಿ: 2 ಕಿ.ಮೀ. ಸುರಂಗದಲ್ಲಿ 41 ಜೀವ: ರಕ್ಷಣೆಗೆ ‘ಪಂಚತಂತ್ರ’ ಕಾರ್ಯಾಚರಣೆ

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಜತೆ ದೂರವಾಣಿ ಮೂಲಕ ಮಾತನಾಡಿದ ಮೋದಿ, ‘ಸುರಂಗದಡಿ ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕ, ಆಹಾರ-ನೀರು ಪೂರೈಸುವ ಜೊತೆಗೆ ಅವರ ಮಾನಸಿಕ ಸ್ಥಿತಿ ಉತ್ತಮವಾಗಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಈ ಕೆಲಸದಲ್ಲಿ ಪ್ರಧಾನಿ ಕಾರ್ಯಾಲಯವೂ ಕೇಂದ್ರ ಹಾಗೂ ರಾಜ್ಯಮಟ್ಟದ ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ನೆರವು ಪೂರೈಸುತ್ತಿದ್ದು, ಶೀಘ್ರ ಕಾರ್ಮಿಕರನ್ನು ರಕ್ಷಿಸುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾಗಿ ಉತ್ತರಾಖಂಡ ಮುಖ್ಯಮಂತ್ರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಉತ್ತರಾಖಂಡ ಸುರಂಗ ಕುಸಿದು 7 ದಿನ : ಇನ್ನೂ ಹೊರಬರದ 41 ಕಾರ್ಮಿಕರು: ಕುಟುಂಬಗಳಲ್ಲಿ ಆತಂಕ

ಸುರಂಗದಲ್ಲಿರುವವರಿಗೆ 9 ದಿನ ಬಳಿಕ ಬಿಸಿ ಊಟ
ಸುರಂಗಲ್ಲಿ ಸಿಲುಕಿರುವ 41 ಕಾರ್ಮಿಕರಿಗೆ 9 ದಿನಗಳ ಬಳಿಕ ಮೊದಲ ಬಾರಿ ಬಿಸಿ ಬಿಸಿಯಾದ ಕಿಚಡಿ ಆಹಾರವನ್ನು ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಬಿಸಿ ಕಿಚಡಿಯನ್ನು ಬಾಟಲ್‌ ಮೂಲಕ ತುಂಬಿ ಪೈಪ್‌ನಲ್ಲಿ ಸುರಂಗದಲ್ಲಿ ಮಧ್ಯೆ ಸಿಲುಕಿರುವವರಿಗೆ ಕಳುಹಿಸಲು ತಯಾರಿ ನಡೆಸಲಾಯಿತು. ಕಿಚಡಿಯನ್ನು ಸ್ಥಳೀಯ ಹೇಮಂತ್‌ ಎಂಬುವವರು ತಯಾರಿಸಿದ್ದಾರೆ. ಆಹಾರ ಕಳಿಸಲು ವಿಶೇಷವಾದ ಬಾಟಲ್‌ ಸಿದ್ಧಪಡಿಸಲಾಗಿದೆ. ಈ ಬಾಟಲ್‌ಗಳಲ್ಲಿ ಸೇಬು, ಕಿಚಡಿ ಇತರೆ ಆಹಾರಗಳನ್ನು ಕಳುಹಿಸಬಹುದಾಗಿದೆ.  

ಇದನ್ನು ಓದಿ: ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ

click me!