ನರೇಂದ್ರ ಮೋದಿ ಅವರಿಂದ ನಾನು ಏನ್ ಬೇಕಾದರೂ ಹೇಳಿಸಬಲ್ಲೆ: ರಾಹುಲ್ ಗಾಂಧಿ

By Mahmad Rafik  |  First Published May 17, 2024, 5:26 PM IST

ರಾಯ್‌ಬರೇಲಿಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.


ಲಕ್ನೋ: ಉತ್ತರಪ್ರದೇಶದ ರಾಯ್‌ಬರೇಲಿಯ ಚುನಾವಣೆ ಪ್ರಚಾರದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ನರೇಂದ್ರ ಮೋದಿ ಅವರಿಂದ  ಏನು ಬೇಕಾದರೂ ಹೇಳಿಸಬಲ್ಲೆ ಎಂದು ಹೇಳಿದ್ದಾರೆ. 

ನರೇಂದ್ರ ಮೋದಿ ಅವರೇ ನೀವು ಅದಾನಿ ಮತ್ತು ಅಂಬಾನಿ ಹೆಸರು ಯಾಕೆ ಹೇಳಲ್ಲ ಎಂದು ಕೇಳಿದ್ದೆ. ಇದಾದ ಎರಡು ದಿನಗಳ ಬಳಿಕ ಅದಾನಿ ಮತ್ತು ಅಂಬಾನಿ ಹೆಸರನ್ನು ಹೇಳಿದರು. ನಾವು ಬ್ಯಾಂಕ್ ಖಾತೆಗೆ ಟಾಕ್ ಟಕ್, ಟಾಕ್ ಟಕ್ ಅಂತ ಹಣ ಹಾಕುತ್ತೇವೆ ಎಂದು ಹೇಳಿದೆ. ಇದಾದ ಬಳಿಕ ಪ್ರಧಾನಿ ಮೋದಿ ಸಹ  ಟಾಕಾ ಟಕ್ ಎಂದ ಪದವನ್ನು ಬಳಸಿದರು.

Tap to resize

Latest Videos

ನರೇಂದ್ರ ಮೋದಿ ಅವರಿಂದ ಏನು ಹೇಳಿಸಬೇಕು ಅಂತ ನೀವೆಲ್ಲರೂ ಹೇಳಿ. ನಾಳೆ ನಾನು ಹೇಳಿಸುತ್ತೇನೆ. ಇದಕ್ಕೆ ನನಗೆ ಕೇವಲ ಎರಡು ನಿಮಿಷ ಸಾಕು. ಒಂದು ವೇಳೆ ಏನು ಹೇಳಬಾರದು  ಅಂತ ಇದ್ರೆ ಅದನ್ನು ಹೇಳಿ ಎಂದು ರಾಹುಲ್ ಗಾಂಧಿ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಕೇಳಿದರು.

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, ಕೋವಿಡ್ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ ಹೇಳತ್ತಾರೆ. ಜನರು ಸಾಯುತ್ತಿದ್ದರೆ ಪ್ರಧಾನಿಗಳು ದೀಪ ಬೆಳಗಿ, ಮೊಬೈಲ್ ಟಾರ್ಚ್ ಹಿಡಿಯಿರಿ ಎಂದು ಹೇಳುತ್ತಾರೆ. 

ಜೂನ್ 4ರಂದು ನರೇಂದ್ರ ಮೋದಿ ಹಿಂದೂಸ್ತಾನದ ಪ್ರಧಾನಿ ಆಗಿರಲ್ಲ ಎಂದು ನಾನು ಬರೆದುಕೊಡುತ್ತೇನೆ. ಪ್ರಧಾನಿ ಮೋದಿ ಬಡವರನ್ನು ಅವಮಾನಿಸಿದ್ದಾರೆ. ಕೇವಲ 22 ಜನರ  16 ಸಾವಿರ ಕೋಟಿ ಸಾಲವನ್ನು ಮಾಡುತ್ತಾರೆ ಎಂದು ರಾಹುಲ್ ಗಾಂಧಿ  ವಾಗ್ದಾಳಿ ನಡೆಸಿದರು. 

ಬಹುಮತ ಬರದಿದ್ದರೆ ಬಿಜೆಪಿಯ ಪ್ಲಾನ್ ಬಿ ಏನು? ಅಮಿತ್ ಶಾ ನೀಡಿದ ಉತ್ತರ ಹೀಗಿತ್ತು

24 ವರ್ಷದ ಮನರೇಗಾ ಹಣವನ್ನು ಮೋದಿಯವರು 22 ಜನರಿಗೆ ಹಂಚಿದರು. ಈ ಹಿಂದೆ ಯುಪಿಎ ಸರ್ಕಾರ ದೇಶದ ರೈತರ ಸಾಲಮನ್ನಾ ಮಾಡಿತ್ತು.ಕೋವಿಡ್ ಕಾಲದಲ್ಲಿ ಕಾರ್ಮಿಕರು ಸಾವಿರಾರು ನಡೆದುಕೊಂಡು ಹೋಗುವಂತೆ ಮಾಡಿದರು. ಇಂತಹ ಸಮಯದಲ್ಲಿ ಜನರಿಗೆ ತಪ್ಪಾಳೆ ತಟ್ಟುವಂತೆ ಹೇಳಿದರು.

ಜೂನ್ 4ರಂದು ಐಎನ್‌ಡಿಐಎ ಸರ್ಕಾರ

ಜೂನ್ 4ರಂದು ದೇಶದಲ್ಲಿ ಐಎನ್‌ಡಿಐ ಒಕ್ಕೂಟದ ಸರ್ಕಾರ ಬರಲಿದೆ. ಇದು ಬಡವರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವ ಜನತೆಯ ಸರ್ಕಾರ ಆಗಿರಲಿದೆ. ಇಡೀ ದೇಶದ ಯುವ ಜನತೆ ನಮಗೆ ನರೇಂದ್ರ ಮೋದಿ ಬೇಡ ಎಂದು ನಿರ್ಧರಿಸಿದ್ದಾರೆ. ಈ ಚುನಾವಣೆ ಸಂವಿಧಾನ ಉಳಿವಿಗಾಗಿ ಎಂದರು.

ಸಂವಿಧಾನ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಸಂವಿಧಾನ ಉಳಿಸಲು ಈ ಚುನಾವಣೆ ನಡೆಯುತ್ತಿದೆ. ಈ ಸಂವಿಧಾನ ನಿಮಗೆ ಕೆಲಸ ಕೊಡಿಸುತ್ತದೆ.  ನಿಮ್ಮ ಹಕ್ಕುಗಳನ್ನು ಸಂವಿಧಾನ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್-ಇಂಡಿಯಾ ಕೂಟ ಚೆನ್ನಾಗಿದೆ; ಉ.ಪ್ರದೇಶದಲ್ಲಿ 40 ಸೀಟು ಗೆಲ್ಲುತ್ತೇವೆ: ಡಿಕೆ ಶಿವಕುಮಾರ ವಿಶ್ವಾಸ

ಬಿಜೆಪಿಯ ಜನರು ಈ ಸಂವಿಧಾನವನ್ನು ಅಂತ್ಯಗೊಳಿಸಲು ಹೊರಟಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನವರೇ ನೀವು ಕನಸು ಕಾಣಬೇಡಿ. ನಮ್ಮ ಸಂವಿಧಾನವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. 

ಜೂನ್ 4ರಂದು ರಾಯ್‌ಬರೇಲಿಯ ಅತಿ ಬಡ ಜನರ  ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ರೀತಿ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಸಿದ್ಧಪಡಿಸಲಾಗುತ್ತದೆ. ಪ್ರತಿ ಬಡ ಕುಟುಂಬದ ಮಹಿಳೆಯೊಬ್ಬರ ಖಾತೆಗೆ ಒಂದು ಲಕ್ಷ ರೂಪಾಯಿ ಜಮೆ ಮಾಡಲಾಗುವುದು. ನೀವು ಬಡತನ ರೇಖೆಯಿಂದ ಹೊರ ಬರೋವರೆಗೂ ಹಣ ನೀಡಲಾಗುತ್ತದೆ ಎಂದು ರಾಹುಲ್ ಗಾಂಧಿ  ಹೇಳಿದರು.

click me!