ಮಾರ್ಕ್‌ ಜುಕರ್‌ಬರ್ಗ್‌ ಸ್ಟೈಲ್‌ಅನ್ನೇ ಬದಲಾಯಿಸಿಬಿಟ್ಟ ಮುಖೇಶ್‌ ಅಂಬಾನಿ, ಫೇಸ್‌ಬುಕ್‌ ಮಾಲೀಕ ಇಂದು ಫ್ಯಾಶನ್‌ ಐಕಾನ್‌!

By Santosh Naik  |  First Published May 17, 2024, 5:03 PM IST

ಮೆಟಾ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಫೋಟೋ ಸರ್ಚ್‌ ಮಾಡಿದಾಗಲೆಲ್ಲಾ, ಒಂದೇ ರೀತಿಯ ಟಿಶರ್ಟ್‌ ಹಾಗೂ ಜೀನ್ಸ್‌ ಧರಿಸಿದ ಚಿತ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ಮಾರ್ಕ್‌ ಜುಕರ್‌ಬರ್ಗ್ ಫ್ಯಾಶನ್‌ನಲ್ಲಿ ದೊಡ್ಡ ಬದಲಾವಣೆ ಆಗಿದೆ. ಇದಕ್ಕೆ ಕಾರಣ ಅಂಬಾನಿ.
 


ಬೆಂಗಳೂರು (ಮೇ.17): ಸಾಮಾನ್ಯವಾಗಿ ಬಿಲಿಯನೇರ್‌ ಅಂದಾಕ್ಷಣ, ಬೆಲೆಬಾಳುವ ವಸ್ತುಗಳು, ಅದಂಚಂದ ಸೂಟ್‌ಗಳು, ಕೇಳಿಯೇ  ಇರದ ಬ್ರ್ಯಾಂಡ್‌ಗಳ ಶೂಗಳು, ಪ್ರತಿ ಕಾರ್ಯಕ್ರಮಕ್ಕೂ ದುಬಾರಿಯಲ್ಲೇ ದುಬಾರಿಯಾದ ಡ್ರೆಸ್‌ಗಳನ್ನು ಹಾಕೋದನ್ನ ನೋಡಿದ್ದೇವೆ. ತಮ್ಮ ಅಕ್ಕಪಕ್ಕದಲ್ಲೂ ಬಹಳ ಗಂಭೀರವಾದ ವ್ಯಕ್ತಿಗಳನ್ನು ಇರಿಸಿಕೊಳ್ಳುವ ಮೂಲಕ ತಾವೇನೋ ಗಂಭೀರವಾದ ವಿಚಾರ ಚರ್ಚೆ ಮಾಡ್ತಿರುವಂತೆ ಫೋಟೋಗಳಿಗೆ ಪೋಸ್‌ ನೀಡುತ್ತಾರೆ. ಬಹಳ ದೀರ್ಘಕಾಲದವರೆಗೂ ಬಿಲಿಯನೇರ್‌ ಅಂದ್ರೆ, ಇದೇ ರೀತಿಯ ಚಿತ್ರಣವಿತ್ತು. ತುಂಬಾ ಪ್ರೊಫೆಶನಲ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಇವರುಗಳು ಸದಾ ಕಾಲ ಬೋರ್ಡ್‌ ಮೀಟಿಂಗ್‌ಗಳು, ಬ್ಯುಸ್‌ನೆಸ್‌ ಸಭೆಗಳಲ್ಲಿ ಭಾಗಿಯಾಗುವಂತೆ ಕಾಣ್ತಿದ್ದರು. ಹೀಗಿರುವಾಗ ಒಂದು ದಿನ ಬೂದಿ ಬಣ್ಣದ ಟೀರ್ಶ್‌, ಸೀದಾಸಾದಾ ಜೀನ್ಸ್‌ ಹಾಗೂ ಅದಕ್ಕೆ ಒಪ್ಪುವ ಸ್ನೀಕರ್ಸ್‌ ಧರಿಸಿಕೊಂಡ ವ್ಯಕ್ತಿ ಬಿಲಿಯನೇರ್‌ ಪಟ್ಟದಲ್ಲಿ ಕೂತಿದ್ದ. ಹಿಂದಿನ ಬಿಲಿಯನೇರ್‌ಗಳಲ್ಲಿ ಇದ್ದ ಯಾವೊಂದು ಲಕ್ಷಣವೂ ಆತನಲ್ಲಿ ಇದ್ದಿರಲಿಲ್ಲ. ಇದ್ದಿದ್ದು ಒಂದೇ ಕಂಪ್ಯೂಟರ್‌ ಸ್ಕ್ರೀನ್‌. ಅದರ ಮೇಲಿನ ಫೇಸ್‌ಬುಕ್‌. ಹೌದು, ಈಗ ಮೆಟಾ ಆಗಿ ಗುರುತಿಸಿಕೊಂಡಿರುವ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌, ಲೇಜಿ ಬ್ಯಾಚುಲರ್‌ ಆಗಿದ್ದ. ಶಿಸ್ತಾಗಿ ಸೂಟು ಬೂಟು ಹಾಕಿಕೊಂಡು ಹೋಗೋದು ಆತನಿಗೆ ಗೊತ್ತೇ ಇರಲಿಲ್ಲ.

ಆತನೇ ಹೇಳಿದ ಹಾಗೆ, ಅವರ ವಾರ್ಡ್‌ರೋಬ್‌ನಲ್ಲಿ ಒಂದೇ ಕಲರ್‌ ಅಂದರೆ ಬೂದಿ ಬಣ್ಣದ ಲೆಕ್ಕವಿಲ್ಲದಷ್ಟು ಟಿಶರ್ಟ್‌ಗಳಿದ್ದವಂತೆ. ಅದು ಪಾರ್ಟಿಯಾಗಿರಲಿ, ಮೀಟಿಂಗ್‌ ಆಗಿರಲಿ ಎಲ್ಲಿಯೂ ಹೋದರೂ ಜುಕರ್‌ಬರ್ಗ್‌ಗೂ ಒಂದೇ ರೀತಿಯ ಡ್ರೆಸ್‌. ತಲೆಗೂದಲನ್ನು ಅತ್ಯಂತ ಚಿಕ್ಕದಾಗಿ ಕಟ್‌ ಮಾಡಿಸಿಕೊಳ್ಳುತ್ತಿದ್ದ ಜುಕರ್‌ಬರ್ಗ್‌ ವರ್ಷದ ಎಲ್ಲಾ ದಿನ ಒಂದೇ ರೀತಿಯ ಟಿಶರ್ಟ್‌ ಧರಿಸುತ್ತಿದ್ದ. ತನ್ನದು ಲೋ ಮೇಂಟೆನೆನ್ಸ್ ಲೈಫ್‌ಸ್ಟೈಲ್‌ ಅನ್ನೋದು ಜುಕರ್‌ಬರ್ಗ್‌ ಮಾತು. ವಾರ್ಡ್‌ರೋಬ್‌ ಬಳಿ ಹೋದಾಗ ಯಾವ ಬಟ್ಟೆ ಹಾಕಿಕೊಳ್ಳಬೇಕು ಅನ್ನೋ ಗೊಂದಲಗಳೇ ನನಗೆ ಇರಬಾರದು ಅದೇ ಕಾರಣಕ್ಕೆ ಒಂದೇ ರೀತಿಯ ಟಿಶರ್ಟ್‌ ಹಾಗೂ ಜೀನ್ಸ್‌ ನನ್ನ ಬಳಿ ಇದೆ ಎಂದು 2014ರಲ್ಲಿ ಫೇಸ್‌ಬುಕ್‌ ಫೋರಂನಲ್ಲಿ ಅವರು ಹೇಳಿದ್ದರು. ಅವರ ಈ ಧೋರಣೆಯೇ ಕೆಲವು ಯುವಕರಿಗೆ ಸ್ಪೂರ್ತಿಯಾಗಿತ್ತು. ಯಶಸ್ಸಿನ ಏಣಿಯನ್ನು ಹತ್ತುವ ವೇಳೆ ತಮ್ಮ ಟಿಶರ್ಟ್‌ನ ಕಲರ್‌ ಯಾವುದು, ನನ್ನ ಡೆನಿಮ್‌ ಹೇಗಿದೆ ಅನ್ನೋದರ ಕಡೆ ಎಂದಿಗೂ ಯೋಚನೆಗಳು ಇರಬಾರದು ಎನ್ನುವುದು ಇದರ ಹಿಂದಿನ ಅರ್ಥವಾಗಿತ್ತು.

ಹೀಗಿದ್ದ ಮಾರ್ಕ್‌ಜುಕರ್‌ಬರ್ಗ್‌ ಈ ವರ್ಷದಿಂದ ಬದಲಾಗಿ ಹೋಗಿದ್ದಾರೆ. ಅವರ ಇನ್ಸ್‌ಟಾಗ್ರಾಮ್‌ನಲ್ಲಿ ಫ್ಯಾಶನ್‌ ಟ್ರೆಂಡಿಂಗ್‌ಗಳು ಕಾಣುತ್ತಿವೆ. ತಮ್ಮ ಮ್ಯೂಟ್‌ ಫ್ಯಾಶನ್‌ನಿಂದ ಅವರು ದೂರ ಸರಿಯಲು ಆರಂಭಿಸಿದ್ದಾರೆ. ಕೊನೆಯದಾಗಿ ಜುಕರ್‌ಬರ್ಗ್‌ ಕೂಡ ತಮ್ಮ ಡ್ರೆಸ್‌ಗಳ ಮೂಲಕವೇ ತಾವು ಬಿಲಿಯನೇರ್‌ ಎಂದು ತೋರಿಸಿಕೊಳ್ಳಲು ಆರಂಭಿಸಿದ್ದಾರೆ. ಈಗ ಅವರ ಕೈಗಳಲ್ಲಿ ಚಿನ್ನದ ಚೈನ್‌ಗಳು, ಲೆದರ್‌ ಜಾಕೆಂಟ್‌ಗಳು, ಉಣ್ಣೆಯ ದಪ್ಪನೆಯ ಕೋಟ್‌ಗಳು ಕಾಣಿಸಿಕೊಳ್ಳುತ್ತಿವೆ. ಇನ್ನು ಅವರ ಇನ್ಸ್‌ಟಾಗ್ರಾಮ್‌ ಪೋಸ್ಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರ ಹಿಂದೆ ಇರೋದು ಅಂಬಾನಿಗಳು ಅನ್ನೋದೂ ಖಚಿತವಾಗುತ್ತದೆ.

ಬೂದಿ ಬಣ್ಣದ ಟೀಶರ್ಟ್‌ ಹಾಗೂ ಡೆನಿಮ್‌ ಹೊರತಾಗಿ ಮತ್ತೇನನ್ನೂ ಧರಿಸಲು ಇಷ್ಟಪಡದ ಜುಕರ್‌ಬರ್ಗ್‌, ಜಾಮ್‌ನಗರದಲ್ಲಿ ನಡೆದ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಸಖತ್‌  ಸ್ಟೈಲಿಶ್‌ ಆಗಿ ಕಾಣಿಸಿದರು.  ಒಂದು ದಿನವಂತೂ ಅವರು, ಕಪ್ಪು ಬಣ್ಣದ ಸೂಟ್‌ನಲ್ಲಿ ಚಿನ್ನದ ಡ್ರಾಗನ್‌ಫ್ಲೈಗಳನ್ನು ಹೊಲಿಸಲಾಗಿತ್ತು. ಮರುದಿನ, ಅವರು ರಾಹುಲ್ ಮಿಶ್ರಾ ಅವರಿಂದ ಗೋಲ್ಡನ್ ಪ್ರಿಂಟೆಡ್ ಶರ್ಟ್ ಧರಿಸಿದ್ದರು. ತಮ್ಮ ಜೀವನದಲ್ಲಿ ಹಿಂದೆಂದೂ ಧರಿಸದೇ ಇದ್ದ ಐಷಾರಾಮಿ ಹಾಗೂ ಕಣ್ಣುಕುಕ್ಕುವ ಬಟ್ಟೆಯನ್ನು ಅವರು ಅಂಬಾನಿ ಪುತ್ರನ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಧರಿಸಿದ್ದರು.

Latest Videos

undefined

ಅನಂತ್-ರಾಧಿಕಾ ಮದ್ವೇಲಿ ಭಾಗಿಯಾದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಇವ್ರ ಮುಂದೆ ಅಂಬಾನಿ ಸಂಪತ್ತು ಲೆಕ್ಕಕ್ಕೇ ಇಲ್ಲ!

ಈ ಮದುವೆಯ ಬಳಿಕ ಜುಕರ್‌ಬರ್ಗ್‌ ಅವರ ಇನ್ಸ್‌ಟಾಗ್ರಾಮ್‌ ಫೀಡ್‌ ಸಖತ್‌ ಡಿಫರೆಂಟ್‌ ಆಗಿ ಕಾಣುತ್ತಿದೆ. ಗುಜರಾತಿ ಉದ್ಯಮಿಯ ಪುತ್ರನ ವಿವಾಹದಲ್ಲಿ ಭಾಗಿಯಾಗಿದ್ದು, ಜುಕರ್‌ಬರ್ಗ್‌ ಅವರ ಹೊಸ ರೀತಿಯ ಫ್ಯಾಶನ್‌ ಐಕಾನ್‌ ಟ್ರೆಂಡ್‌ಗೆ ಕಾರಣವಾಗಿರಬಹುದು ಎಂದಿದ್ದಾರೆ. ಇನ್ನೂ ಕೆಲವರು ಇದು ಮೆಟಾ ಮೇಲೆ ಬಂದಿರುವ ಆರೋಪಗಳನ್ನು ತಣ್ಣಗೆ ಮಾಡುವ ಜುಕರ್‌ಬರ್ಗ್‌ ಪ್ರಯತ್ನವೂ ಆಗಿರಬಹುದು ಎಂದು ಹೇಳಿದ್ದಾರೆ.

ಅಬ್ಬಬ್ಬಾ..ಒಂದು ಗಂಟೆಗೆ ಬರೋಬ್ಬರಿ 3 ಕೋಟಿ ಗಳಿಸೋ ವ್ಯಕ್ತಿ, ಅಂಬಾನಿ, ಅದಾನಿ ಅಲ್ಲ..ಮತ್ಯಾರು?

click me!