
ಮನಾಲಿ(ಮೇ.17) ಸದ್ಯ ಮಕ್ಕಳ ಯಾವುದೇ ಕನಸುಗಳನ್ನು ಈಡೇರಿಸಲು ಪೋಷಕರು ತುದಿಗಾಲಲ್ಲಿ ನಿಲ್ಲುತ್ತಾರೆ. ಆಸಕ್ತಿ, ಸಾಧನೆಗೆ ಪೋಷಕರು ನೆರವಾಗುತ್ತಾರೆ. ಆದರೆ ಈ ಹಿಂದಿನ ಜನರೇಶನ್ ಹಾಗಲ್ಲ. ಅದರಲ್ಲೂ ಹೆಣ್ಣುಮಕ್ಕಳು ಅದೆಷ್ಟೇ ಆಸೆ ಇದ್ದರೂ ಬಹುಬೇಗನೆ ಮದುವೆಯಾಗಿ ಬಳಿಕ ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಕುಟುಂಬ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಹೀಗೆ ಮಹಿಳೆಯೊಬ್ಬರು ಯೌವ್ವನದಲ್ಲಿ ಕಂಡ ಕನಸೊಂದು ಹಾಗೇ ಉಳಿದಿತ್ತು. ಬರೋಬ್ಬರಿ 40 ವರ್ಷದ ಬಳಿಕ ಮಗ ತನ್ನ ತಾಯಿಯ ಬಾಲಿವುಡ್ ಕನಸನ್ನು ಈಡೇರಿಸಿದ್ದಾನೆ. ಹೌದು, ಈ ಮಹಿಳೆ ಬಾಲಿವುಡ್ ನಟಿ ಶ್ರೀದೇವಿಯ ಚಾಂದಿನಿ ಚಿತ್ರ ತೇರೆ ಮೇರೆ ಹೊಂಟೊಪೇ ಮಿತ್ವ ಹಾಡಿಗೆ ಅದೇ ಲೋಕೇಶನ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಅಮ್ಮ ಹಾಗೂ ಮಗನಿಗೆ ಇದೀಗ ಭಾರಿ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.
ವಯಸ್ಸು ಕೇವಲ ನಂಬರ್ ಅನ್ನೋ ಮಾತಿದೆ. ಇದೀಗ ಈ ವಿಡಿಯೋ ನೋಡಿದ ಬಳಿಕ ಹಲವರು ಇದೇ ಕಮೆಂಟ್ ಮಾಡಿದ್ದಾರೆ. ಆವಿ ವಡೇಕರ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ವೇಳೆ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. 1989ರಲ್ಲಿ ಯಶ್ ಚೋಪ್ರಾ ನಿರ್ದೇಶನದ ಚಾಂದಿನಿ ಚಿತ್ರ ತೆರೆ ಕಂಡಿತ್ತು. ರಿಶಿ ಕಪೂರ್ ಹಾಗೂ ಶ್ರೀದೇವಿ ನಾಯಕ ಹಾಗೂ ನಾಯಕಿಯಾಗಿ ಕಾಣಿಸಿಕೊಂಡ ಈ ಚಿತ್ರ ಬಾರಿ ಹಿಟ್ ಆಗಿತ್ತು. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು.
ಕರಿಮಣಿ ಮಾಲಿಕನಿಗೆ ಇರಬೇಕಾದ ಸ್ಪೆಷಲ್ ಕ್ವಾಲಿಫಿಕೇಶನ್ಸ್ ಹೇಳ್ತಿದ್ದಾರೆ, ತಿಳ್ಕೊಳ್ಳಿ!
ಈ ಪೈಕಿ ತೇರೆ ಮೇರೆ ಹೊಂಟೊಪೆ ಮಿತ್ವಾ ಹಾಡು ಈಗಲೂ ಸೂಪರ್ ಹಿಟ್. ಈ ಚಿತ್ರದ ನೋಡಿದ ಈ ಮಹಿಳೆಗೆ ಶ್ರೀದೇವಿಯಂತೆ ಈ ಚಿತ್ರದ ಹಾಡಿನ ಶೂಟಿಂಗ್ ಮಾಡಿದ ಲೋಕೇಶನ್‌ನಲ್ಲಿ ನಾನು ಕೂಡ ಸ್ವಚ್ಚಂದವಾಗಿ ಹೆಜ್ಜೆ ಹಾಕಬೇಕು ಅನ್ನೋ ಬಯಕೆ. ಆದರೆ ಮದುವೆ, ಪತಿ, ಮಕ್ಕಳು ಹೀಗೆ ಒಂದೊಂದೆ ಜವಾಬ್ದಾರಿಯಿಂದ ಸಾಧ್ಯವೇ ಆಗಿಲ್ಲ.
ಬರೋಬ್ಬರಿ 40 ವರ್ಷಗಳಿಂದ ತಮ್ಮ ಬಯಕೆ ಹಾಗೇ ಉಳಿದಿಕೊಂಡಿತ್ತು. ತಾಯಿಯ ಈ ಕನಸು ಅರಿತ ಮಗ ಈಡೇರಿಸಲು ಮುಂದಾಗಿದ್ದಾನೆ. ಶ್ರೀದೇವಿ ಹೆಜ್ಜೆ ಹಾಕಿದ ಈ ಹಾಡಿನ ಚಿತ್ರೀಕರಣ ಮಾಹಿತಿ ಪಡೆದುಕೊಂಡಿದ್ದಾನೆ. ಈ ಹಾಡು ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಮನಾಲಿಯಲ್ಲಿ ಚಿತ್ರೀಕರಣಗೊಂಡಿತ್ತು. ಹೀಗಾಗಿ ತಾಯಿಯನ್ನು ಕರೆದುಕೊಂಡು ಮನಾಲಿಗೆ ತೆರಳಿದ್ದಾನೆ.
ಶ್ರೀದೇವಿ ಹಾಗೂ ರಿಶಿ ಕಪೂರ್ ಹೆಜ್ಜೆ ಹಾಕಿದ ಅದೇ ಜಾಗದಲ್ಲಿ ಆವಿ ವಡೇಕರ್ ಅಮ್ಮ ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಶ್ರೀದೇವಿ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ವಡೇಕರ್ ತಾಯಿ ಕೆಂಪು ಬಣ್ಣದ ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಅಮ್ಮ ಮಗನ ಜೋಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೀದಿ ಜಗಳ ಮನೆವರೆಗೂ ತರಬಾರದು ಅಂತಾರೆ..! ಮನೆಗೆ ತಂದ್ರೆ ಏನಾಗುತ್ತೆ ಗೊತ್ತಾ..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ