ನವದೆಹಲಿ (ನ.8): ಬಿಹಾರದಲ್ಲಿ ದಾಖಲೆಯ ಮತದಾನ ನಡೆದಿರುವುದು ನಮಗೆ ವರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನರೇಂದ್ರ ಮೋದಿ-ನಿತೀಶ್ ಕುಮಾರ್ ಜೋಡಿಯ ಮೇಲೆ ದೇಶದ ಜನಕ್ಕೆ ವಿಶ್ವಾಸ ಬಂದಿದೆ ಎಂದಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ ಬಿಜೆಪಿ ನಾಯಕರಿಂದ ದೆಹಲಿಯಲ್ಲೂ ಮತ, ಬಿಹಾರದಲ್ಲೂ ಮತ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಎಲ್‌ಜೆಪಿ ಸಂಸದೆಯ ಎರಡೂ ಕೈ ತೋರು ಬೆರಳಿಗೆ ಶಾಯಿ ಹಾಕಲಾಗಿದೆ ಎಂದು ಆರೋಪ ಮಾಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:08 PM (IST) Nov 08
ಬಂಡಾಯಗಾರರು ಎಂದು ಜರೆಯಲ್ಪಡುವ ಜೆನ್ ಝೀ ಯುವ ಸಮೂಹವು 'ಭಜನ್ ಕ್ಲಬ್ಬಿಂಗ್' ಎಂಬ ಹೊಸ ಟ್ರೆಂಡ್ ಸೃಷ್ಟಿಸಿದೆ. ಕ್ಲಬ್‌ಗಳಲ್ಲಿ ಮೋಜು-ಮಸ್ತಿಯ ಬದಲು, ಇವರು ಭಕ್ತಿಗೀತೆಗಳನ್ನು ಹಾಡುತ್ತಾ ಆಧ್ಯಾತ್ಮಿಕ ಹಾದಿಯಲ್ಲಿ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುತ್ತಿದ್ದಾರೆ.
10:19 PM (IST) Nov 08
ವೋಟ್ ಚೋರಿ ಹೈಡ್ರೋಜನ್ ಬಾಂಬ್ ಮುಖವಾಡ ಬಯಲು, ಪೇಚಿಗೆ ಸಿಲಕಿದ ರಾಹುಲ್ ಗಾಂಧಿ, ಭಾರತದಲ್ಲಿ ಬಿಜೆಪಿ ಮತ ಕಳ್ಳತನ ಮಾಡಿ ಚುನಾವಣೆ ಗೆಲ್ಲುತ್ತಿದೆ ಆರೋಪಗಳ ಅಸಲಿಯತ್ತೇನು? ಆರೋಪ ಮಾಡಿದ ರಾಹುಲ್ ಸಂಕಷ್ಟಕ್ಕೆ ಸಿಲುಕಿದ್ದು ಯಾಕೆ?
06:28 PM (IST) Nov 08
Woman attacks McDonald's employee: ಮ್ಯಾಕ್‌ಡೋನಲ್ಡ್ಸಲ್ಲಿ ಆರ್ಡರ್ ತಡವಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸಿಬ್ಬಂದಿಯ ಮೇಲೆ ಬಿಸಿ ಟೀ ಎರಚಿದ್ದಾಳೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶದ ನಂತರ ಪೊಲೀಸರು ಮಹಿಳೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
06:22 PM (IST) Nov 08
ಮನೆಯಲ್ಲಿ ರಹಸ್ಯ ಶಾಲೆ ತೆರೆದ ಫೇಸ್‌ಬುಕ್ ಸಿಇಒ, ಸ್ಥಳೀಯರಿಂದ ದೂರಿನಿಂದ ಸ್ಕೂಲ್ ಬಂದ್, 30 ರಿಂದ 40 ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಂಡಿದ್ದರು. ನಿಯಮ ಉಲ್ಲಂಘಿಸಿದ ಮಾರ್ಕ್ ಜುಕರ್‌ಬರ್ಗ್ ಹಾಗೂ ಮಾರ್ಕ್ ಪತ್ನಿ ವಿರುದ್ದ ದೂರು ದಾಖಲಾಗಿದೆ.
05:52 PM (IST) Nov 08
2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖರಾಗಲಿರುವ ಇಬ್ಬರು ಆಟಗಾರರನ್ನು ರವಿಚಂದ್ರನ್ ಅಶ್ವಿನ್ ಗುರುತಿಸಿದ್ದಾರೆ. ಬುಮ್ರಾ ಅವರನ್ನು ಬದಿಗಿಟ್ಟು ಇವರನ್ನು ಯಾಕೆ ಆಯ್ಕೆ ಮಾಡಿದೆ ಎಂಬುದರ ವಿವರಗಳನ್ನು ಸಹ ಬಹಿರಂಗಪಡಿಸಿದ್ದಾರೆ. ಆ ವಿವರಗಳನ್ನು ಈಗ ತಿಳಿಯೋಣ.
05:41 PM (IST) Nov 08
ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ಗೆ ಸಿಎಂ ಸೂಚನೆ, ಕಚೇರಿ ಸಮಯವೂ ಬದಲಾವಣೆ ಮಾಡಲಾಗಿದೆ. ಖಾಸಗಿ ಕಂಪನಿಗಳ ಬಳಿ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಕಾರ್ ಪುಲ್ಲಿಂಗ್ ಸೇರಿದಂತೆ ವಿವಿಧ ಕ್ರಮಗಳಿಗೆ ಮನವಿ ಮಾಡಲಾಗಿದೆ.
05:29 PM (IST) Nov 08
Madhya Pradesh school midday meal: ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ರದ್ದಿ ಪೇಪರ್ ಮೇಲೆ ಬಡಿಸಿದ ಅಮಾನವೀಯ ಘಟನೆ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
05:25 PM (IST) Nov 08
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರ ಪರಿಣಾಮವಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
04:17 PM (IST) Nov 08
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಟ್ರೇಡ್ ವಿಂಡೋ ಓಪನ್ ಆಗಿದ್ದು, ಸಂಜು ಸ್ಯಾಮ್ಸನ್ ಅವರನ್ನು ಕರೆ ತರಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಶತಾಯಗತಾಯ ಪ್ರಯತ್ನದಲ್ಲಿದೆ. ಇದರ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.
04:14 PM (IST) Nov 08
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ 4ನೇ ತರಗತಿ ಓದ್ತಿದ್ದ ಬಾಲಕಿ ಅಮೈರಾ ಈ ತಿಂಗಳ 1ರಂದು ಶಾಲಾ ಕಟ್ಟಡದಿಂದಲೇ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಳು. ಆದರೆ ವರ್ಷದ ಹಿಂದಿನ ಆಕೆಯ ವಾಯ್ಸ್ ರೆಕಾರ್ಡರ್ ಈಗ ಆಕೆಯ ಪೋಷಕರನ್ನು ಜೀವನ ಪೂರ್ತಿ ಕೊರಗುವಂತೆ ಮಾಡಿದೆ.
04:01 PM (IST) Nov 08
ಆರೇ ವರ್ಷದಲ್ಲಿ 67 ಲಕ್ಷ ರೂ ಮನೆ ಸಾಲ ಅಂತ್ಯ, ಭಾರತೀಯ ಟೆಕ್ಕಿ ಮಾರ್ಗ ಪಾಲಿಸಿದರೆ ಟೆನ್ಶನ್ ಫ್ರಿ, ಸಾಲ ಅದರ ಜೊತೆಗೆ ಬಡ್ಡಿ ಎಲ್ಲವನ್ನೂ ತೀರಿಸಿದ್ದಾನೆ. ಮನೆ ಸಾಲ, ಇತರ ಅವಶ್ಯಕತೆಗಾಗಿ ಸಾಲ ಮಾಡುವವರು ಅತೀ ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ ಎಂದು ಟೆಕ್ಕಿ ಹೇಳಿದ್ದಾರೆ.
03:25 PM (IST) Nov 08
LG Energy Solution Accuses Ola Electric of Technology Theft by Former Researcher ದಕ್ಷಿಣ ಕೊರಿಯಾದ ಎಲ್‌ಜಿ ಎನರ್ಜಿ ಸೊಲ್ಯೂಷನ್, ಓಲಾ ಎಲೆಕ್ಟ್ರಿಕ್ ತನ್ನ ಬ್ಯಾಟರಿ ಉತ್ಪಾದನಾ ತಂತ್ರಜ್ಞಾನವನ್ನು ಅಕ್ರಮವಾಗಿ ಕದ್ದಿದೆ ಎಂದು ಆರೋಪಿಸಿದೆ.
03:12 PM (IST) Nov 08
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
03:08 PM (IST) Nov 08
ಲಕ್ಸುರಿ ಫ್ಯಾಷನ್ ಬ್ರಾಂಡ್ ಪ್ರಾಡಾ ಈಗ ಹೊಸದೊಂದು ಸೇಫ್ಟಿ ಪಿನ್ ಬಿಡುಗಡೆ ಮಾಡಿದ್ದು, ಆದರ ಬೆಲೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ. ಹೌದು ಇದೊಂದು ಸೇಫ್ಟಿ ಪಿನ್‌ಗೆ ಕೊಡುವ ಹಣದಲ್ಲಿ ನೀವು ಮನೆಗೆ ವಾಶಿಂಗ್ ಮಿಷನ್ ಟಿವಿ ಫ್ರಿಡ್ಜ್‌ನ್ನು ಕೊಳ್ಳಬಹುದು.
02:33 PM (IST) Nov 08
ನಟಿ ಐಶ್ವರ್ಯಾ ರೈ ಬಚ್ಚನ್ ಅವರು 4 ಕೋಟಿ ರೂಪಾಯಿ ತೆರಿಗೆ ವಿವಾದದಲ್ಲಿ ಜಯ ಸಾಧಿಸಿದ್ದಾರೆ. 2022-23ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಆದಾಯ ತೆರಿಗೆ ಇಲಾಖೆ ವಿಧಿಸಿದ್ದ ಹೆಚ್ಚುವರಿ ತೆರಿಗೆಯನ್ನು ರದ್ದುಗೊಳಿಸಿ, ಅವರ ಪರವಾಗಿ ತೀರ್ಪು ನೀಡಿದೆ.
01:41 PM (IST) Nov 08
01:39 PM (IST) Nov 08
ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಾಡಹಗಲೇ ಮಹಿಳೆಯೊಬ್ಬಳು ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದು, ಜ್ಯುವೆಲ್ಲರಿ ಶಾಪ್ ಮಾಲೀಕ ಆಕೆಗೆ ಸರಿಯಾಗಿ ಥಳಿಸಿದ್ದಾನೆ. ಈ ಘಟನೆಯ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
01:23 PM (IST) Nov 08
ಬೆಂಗಳೂರು: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯಕ್ಕೂ ಒಂದು ದಿನ ಮೊದಲು ಸಚಿನ್ ತೆಂಡೂಲ್ಕರ್, ಹರ್ಮನ್‌ಗೆ ಕಾಲ್ ಮಾಡಿ ಹೇಳಿದ್ದೇನು?
12:59 PM (IST) Nov 08
12:05 PM (IST) Nov 08
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ಪಾಲಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರತೀಕಾಗಾಗಿ ಐಸಿಸಿ ತನ್ನ ರೂಲ್ಸ್ ಅನ್ನೇ ಬದಲಿಸಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ.
09:52 AM (IST) Nov 08
09:48 AM (IST) Nov 08
SC Urges Central Govt to Reform Land Laws Replace British Era Registration System ಬ್ರಿಟಿಷ್ ಕಾಲದ ಭೂ ನೋಂದಣಿ ಕಾನೂನುಗಳು ಗೊಂದಲ ಮತ್ತು ವ್ಯಾಜ್ಯಗಳಿಗೆ ಕಾರಣವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
09:18 AM (IST) Nov 08
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಅರ್ಷ್‌ದೀಪ್ ಸಿಂಗ್ ಅವರನ್ನು ಹೊರಗಿಟ್ಟಿದ್ದಕ್ಕೆ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಸ್ಪಷ್ಟನೆ ನೀಡಿದ್ದಾರೆ.
09:00 AM (IST) Nov 08
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿವೆ. ಏಳು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.