ನವದೆಹಲಿ (ಜ.28): ಭಾರತ ಮತ್ತು ಯುರೋಪ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕದ ತೆರಿಗೆ ಕಿರಿಕ್‌ಗೆ ಜಗತ್ತಿನ ಅತಿದೊಡ್ಡ ಆರ್ಥಿಕತೆಗಳು ತಿರುಗೇಟು ನೀಡಿವೆ. ಪರ್ಯಾಯ ಮಾರುಕಟ್ಟೆ ಸ್ಥಾಪನೆ ಕಡೆ ಭಾರತ ಮುಖ ಮಾಡಿದ್ದು, ಎನ್‌ಡಿಎ ಸರ್ಕಾರದ 8ನೇ ಡೀಲ್ ಇದಾಗಿದೆ. ಇದು 200 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ. ಡೀಲ್‌ನ ಮೊತ್ತ ವಿಶ್ವದ ಜಿಡಿಪಿಯ ಶೇ. 25ರಷ್ಟಿದ್ದು, ಭಾರತದ ಶೇ. 93 ಉತ್ಪನ್ನಕ್ಕೆ ಯುರೋಪ್‌ನಲ್ಲಿ ಶೂನ್ಯ ತೆರಿಗೆ ಇರಲಿದೆ. ಭಾರತಕ್ಕೆ ಅಮೆರಿಕದ ಹೊರತಾದ ಹೊಸ ಮಾರುಕಟ್ಟೆ ಸಿಕ್ಕಂತಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:26 AM (IST) Jan 28
Indian VIPs Lost in Aviation Tragedies: From Sanjay Gandhi to Ajit Pawar ಈ ಲೇಖನವು ಸಂಜಯ್ ಗಾಂಧಿ, ವೈ.ಎಸ್. ರಾಜಶೇಖರ ರೆಡ್ಡಿ, ಮತ್ತು ಜನರಲ್ ಬಿಪಿನ್ ರಾವತ್ ಸೇರಿದಂತೆ ವಿಮಾನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತದ ಪ್ರಮುಖ ರಾಜಕಾರಣಿಗಳು ಮತ್ತು ಗಣ್ಯರ ಪಟ್ಟಿ.
11:00 AM (IST) Jan 28
ಸಹಕಾರಿ ಕ್ಷೇತ್ರದಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆಯವರೆಗೂ ಸಾಗಿಬಂದ ಅಜಿತ್ ಪವಾರ್, ತಮ್ಮ ರಾಜಕೀಯ ರಣತಂತ್ರಗಳಿಂದ 'ಪವರ್' ಎಂದೇ ಗುರುತಿಸಿಕೊಂಡಿದ್ದರು. ಚಿಕ್ಕಪ್ಪ ಶರದ್ ಪವಾರ್‌ರಿಂದ ಬೇರ್ಪಟ್ಟು ಎನ್‌ಸಿಪಿ ಇಬ್ಬಾಗ ಮಾಡಿದ ಅವರ ರಾಜಕೀಯ ಜೀವನ ಅನಿರೀಕ್ಷಿತ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ.
10:54 AM (IST) Jan 28
10:36 AM (IST) Jan 28
ಭಾರಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶದ ವೇಳೆ ನಡೆದ ಸಮಯದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಆರು ಮಂದಿಯೂ ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಅವರು ಎಲ್ಲಿಗೆ ಹೋಗುತ್ತಿದ್ದರು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
10:31 AM (IST) Jan 28
09:56 AM (IST) Jan 28
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿಯಲ್ಲಿ ಪತನಗೊಂಡಿದೆ. ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ವೇಳೆ ಲ್ಯಾಂಡಿಂಗ್ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
08:47 AM (IST) Jan 28
ಜಮ್ಮು ಕಾಶ್ಮೀರದ ಪ್ರವಾಸಿ ತಾಣ ಸೋನಾಮಾರ್ಗ್‌ನಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಹಿಮದ ಪ್ರವಾಹವು ಹಲವು ಮನೆಗಳು ಮತ್ತು ವಾಹನಗಳನ್ನು ಸಮಾಧಿ ಮಾಡಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
07:59 AM (IST) Jan 28
ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ತಮಗೆ ಮತ್ತು ರಾಹುಲ್ ಗಾಂಧಿಗೆ 3ನೇ ಸಾಲಿನಲ್ಲಿ ಆಸನ ನೀಡಿ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
07:41 AM (IST) Jan 28
ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಯುರೋಪಿಗೆ ರಫ್ತಾಗುವ ಭಾರತದ ಶೇ.93ರಷ್ಟು ಉತ್ಪನ್ನಗಳು ಡ್ಯೂಟಿ ಫ್ರೀ ಆಗಲಿವೆ. ಅದೇ ರೀತಿ ಯುರೋಪ್‌ನಿಂದ ಆಮದಾಗುವ ದುಬಾರಿ ಐಷಾರಾಮಿ ಕಾರುಗಳು, ಔಷಧ, ವೈನ್, ಮದ್ಯ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ತಗ್ಗಲಿದೆ.
07:41 AM (IST) Jan 28
ರಷ್ಯಾ ತೈಲ ಖರೀದಿ, ಗ್ರೀನ್‌ಲ್ಯಾಂಡ್ ವಶ ವಿಷಯದಲ್ಲಿ ಭಾರತ ಹಾಗೂ ಐರೋಪ್ಯ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ಯಾಕ್ಸ್ ವಾರ್ ನಡೆಸುತ್ತಿರುವ ಹೊತ್ತಿನಲ್ಲೇ, ಐತಿಹಾಸಿಕ ಮುಕ್ತ ತೆರಿಗೆ ವ್ಯಾಪಾರ ಒಪ್ಪಂದ ವನ್ನು ಭಾರತ ಮತ್ತು ಯುರೋಪಿಯನ್ ಒಕ್ಕೂಟಗಳು ಮಂಗಳವಾರ ಅಂತಿಮಗೊಳಿಸಿವೆ
07:41 AM (IST) Jan 28
ಜಮ್ಮು ಕಾಶ್ಮೀರದಲ್ಲಿನ ತೀವ್ರ ಹಿಮಪಾತದಿಂದ ರಸ್ತೆಗಳು ಬಂದ್ ಆಗಿದ್ದವು. ಈ ಸಂದರ್ಭದಲ್ಲಿ, ಶೋಪಿಯಾನ್ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಬಶರತ್ ಪಂಡಿತ್ ಅವರು, ತುರ್ತು ಶಸ್ತ್ರಚಿಕಿತ್ಸೆಗಾಗಿ 3 ಕಿಲೋ ಮೀಟರ್ ನಡೆದು, ನಂತರ ಜೆಸಿಬಿ ಮೂಲಕ ಆಸ್ಪತ್ರೆ ತಲುಪಿ ತಮ್ಮ ಕರ್ತವ್ಯ ಮೆರೆದಿದ್ದಾರೆ.
07:40 AM (IST) Jan 28
ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ-ಎಸ್ಟಿ, ಒಬಿಸಿಗಳ ಜಾತಿ ತಾರತಮ್ಯ ಹತ್ತಿಕ್ಕುವ ಸಲುವಾಗಿ ಸಮಿತಿ ರಚಿಸಲು ಯುಜಿಸಿ ಹೊರಡಿಸಿರುವ ಹೊಸ ಆದೇಶ ವಿವಾದಕ್ಕೀಡಾಗಿದೆ. ‘ಈ ಸಮಿತಿಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
07:40 AM (IST) Jan 28
ಬಜೆಟ್ ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ. ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಬಜೆಟ್ ಮಂಡನೆಯ ಕುತೂಹಲ ಒಂದೆಡೆಯಾದರೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ರದ್ದು ಮಾಡಿ ಜಾರಿಗೆ ತಂದಿರುವ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸುವುದು ನಿಶ್ಚಿತ
07:39 AM (IST) Jan 28
ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.