ಬೆಂಗಳೂರು (ಸೆ.20): ನವದೆಹಲಿ: ಶೇ.50 ಸುಂಕ ಹೇರಿಕೆ ಬಳಿಕ ಹದಗೆಟ್ಟಿರುವ ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆವ 45ನೇ ಆಸಿಯಾನ್ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೋದಿ ಮತ್ತು ಟ್ರಂಪ್ ಅ.26-28ರವರೆಗೆ ನಡೆವ ಈ ಶೃಂಗದಲ್ಲಿ ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸುವ ನಿರೀಕ್ಷೆಯೂ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಅಮೆರಿಕದ ಪ್ರತಿ ಸುಂಕ ವಿವಾದದ ಬಳಿಕ ಹಳೆಯ ದೋಸ್ತಿಗಳಾದ ಮೋದಿ ಮತ್ತು ಟ್ರಂಪ್ ಮೊದಲ ಮುಖಾಮುಖಿ ಭೇಟಿ ಇದಾಗಲಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:36 PM (IST) Sep 20
ನವರಾತ್ರಿ ಹಬ್ಬವು ದೇವಿಯ ಒಂಬತ್ತು ರೂಪಗಳನ್ನು ಪೂಜಿಸುವ ಒಂಬತ್ತು ರಾತ್ರಿಗಳ ಆಚರಣೆಯಾಗಿದೆ. ಈ ಹಬ್ಬವು ಮಹಿಷಾಸುರನ ಮೇಲೆ ದುರ್ಗಾದೇವಿಯ ವಿಜಯವನ್ನು ಸ್ಮರಿಸುತ್ತದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ಜಯವನ್ನು ಸಂಕೇತಿಸುತ್ತದೆ.
10:35 PM (IST) Sep 20
ನಾಳೆಯೇ ವಾಪಸ್ ಬರಬೇಕಿಲ್ಲ, ವಿರೋಧದ ಬಳಿಕ H1B ವೀಸಾ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಟ್ರಂಪ್, ಹೊಸ ನೀತಿ ಯಾರಿಗೆ ಅನ್ವಯವಾಗಲಿದೆ, ಇದರ ಷರತ್ತುಗಳೇನು ಅನ್ನೋ ಕುರಿತು ಅಮೆರಿಕ ಸ್ಪಷ್ಟನೆ ಕೊಟ್ಟಿದೆ. ಭಾರತೀಯರಿಗೆ ಕೊಂಚ ರಿಲೀಫ್ ಸಿಕ್ಕಿದೆ.
10:04 PM (IST) Sep 20
2025ರ ಶಾರದಿ ನವರಾತ್ರಿಯು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಆಚರಿಸಲಾಗುವುದು. ಈ ಹಬ್ಬವು ದುರ್ಗಾ ದೇವಿಯ ಒಂಬತ್ತು ರೂಪಗಳ ಆರಾಧನೆಗೆ ಮೀಸಲಾಗಿದ್ದು, ಪ್ರತಿ ದಿನಕ್ಕೂ ನಿರ್ದಿಷ್ಟ ಬಣ್ಣವನ್ನು ಧರಿಸುವುದರ ಮಹತ್ವವನ್ನು ವಿವರಿಸುತ್ತದೆ.
09:56 PM (IST) Sep 20
ನವರಾತ್ರಿ, ದೀಪಾವಳಿ ಹಬ್ಬಕ್ಕೆ ಪ್ರಯಾಣ ರದ್ದು, ಅಮೆರಿಕದಲ್ಲಿ H-1B ವೀಸಾ ಭಾರತೀಯರ ಪರದಾಟ, ಡೋನಾಲ್ಡ್ ಟ್ರಂಪ್ ಕೊಟ್ಟ ಮತ್ತೊಂದು ಶಾಕ್‌ಗೆ ಭಾರತೀಯರು ಕಂಗಾಲಾಗಿದ್ದಾರೆ. ಭಾರತ ಪ್ರವಾಸ ಮಾಡಲು ಸಾಧ್ಯವಾಗದೇ, ಅಮೆರಿಕದಲ್ಲಿ ಇರಲೂ ಸಾಧ್ಯವಾಗದೇ ಕಂಗೆಟ್ಟು ಕುಳಿತಿದ್ದಾರೆ.
08:56 PM (IST) Sep 20
ಭಾರತ ವಿರುದ್ಧ ಸೋಲುಕಂಡರೂ ಸೂರ್ಯಕುಮಾರ್‌ಗೆ ಓಮನ್ ನಾಯಕ ಧನ್ಯವಾದ ಹೇಳಿದ್ದೇಕೆ? ಟೀಂ ಇಂಡಿಯಾ ನಾಯಕನಿಗೆ ಥ್ಯಾಂಕ್ಸ್ ಹೇಳಿದ ಜತಿಂದರ್ ಸಿಂಗ್, ಬಿಸಿಸಿಐಗೂ ಮಾಡಿದ ವಿಶೇಷ ಮನವಿ ಏನು?
08:19 PM (IST) Sep 20
ಭಾರತ ಮೇಲೆ ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಸೌದಿ ನೆರವಾಗುತ್ತಾ?ಒಪ್ಪಂದ ಸೀಕ್ರೆಟ್ ಬಿಚ್ಚಿಟ್ಟ ಸಚಿವ, ಇತ್ತೀಚೆಗೆ ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ನ್ಯಾಟೋ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಪಾಕ್ ರಕ್ಷಣಾ ಸಚಿವ ಸ್ಫೋಟಕ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.
07:28 PM (IST) Sep 20
ನಟ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ, 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ನಟನಿಗೆ ಶ್ರೇಷ್ಠ ಗೌರವ ಸಂದಿದೆ.ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ.
05:43 PM (IST) Sep 20
ನವರಾತ್ರಿ ಹಬ್ಬಕ್ಕೆ ವಿಶ್ವ ಹಿಂದೂ ಪರಿಷತ್ ಮಾರ್ಗಸೂಚಿ, ತಿಲಕ, ಆಧಾರ್ ಕಾರ್ಡ್ ಕಡ್ಡಾಯ, ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಲು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟಕ್ಕೂ ವಿಹೆಚ್‌ಪಿ ಈ ಮಾರ್ಗಸೂಚಿ ಪ್ರಕಟಿಸಿದ್ದೇಕೆ?
05:22 PM (IST) Sep 20
ಏಷ್ಯಾಕಪ್‌ನ ಒಮಾನ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಪ್ರದರ್ಶನದೊಂದಿಗೆ, ಅವರು ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ಎಂ ಎಸ್ ಧೋನಿಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದರು.
04:11 PM (IST) Sep 20
Campa Sure ರಿಲಯನ್ಸ್ ಕಂಪನಿಯು ತನ್ನ ಜಿಯೋ ಮಾದರಿಯ ತಂತ್ರದೊಂದಿಗೆ ಬಾಟಲ್ ನೀರಿನ ಉದ್ಯಮಕ್ಕೆ ಕಾಲಿಡುತ್ತಿದೆ. 'ಕ್ಯಾಂಪಾ ಶ್ಯೂರ್' ಬ್ರ್ಯಾಂಡ್ ಅಡಿಯಲ್ಲಿ, ಬಿಸ್ಲೆರಿ ಮತ್ತು ಕಿನ್ಲೆಯಂತಹ ಪ್ರಮುಖ ಬ್ರ್ಯಾಂಡ್‌ಗಳಿಗಿಂತ ಕಡಿಮೆ ಬೆಲೆಗೆ ನೀರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
03:58 PM (IST) Sep 20
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಸೂಪರ್ 4 ಪಂದ್ಯಗಳು ಆರಂಭವಾಗುತ್ತಿವೆ. ಭಾರತ 'ಎ' ಗುಂಪಿನಿಂದ ಅಗ್ರಸ್ಥಾನಿಯಾಗಿ ಸೂಪರ್ 4 ಪ್ರವೇಶಿಸಿದೆ. ಭಾರತೀಯ ಆಟಗಾರರ ಪೈಕಿ 5 ಅತಿಹೆಚ್ಚು ಫಾಲೋವರ್ಸ್ ಯಾರಿಗಿದೆ ನೋಡೋಣ ಬನ್ನಿ.
03:02 PM (IST) Sep 20
Couple Caught on Camera ಹಗಲು ಹೊತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ಯುವ ಜೋಡಿಯೊಂದು ಪ್ರೇಮದಾಟದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ಸ್ಥಳಗಳಲ್ಲಿನ ನಡವಳಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
01:45 PM (IST) Sep 20
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಸೂಪರ್ 4 ಹಂತದ ಪಂದ್ಯಾಟಗಳು ಆರಂಭವಾಗಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಪಾಳಯದಲ್ಲಿ ಹೊಸದೊಂದು ಆತಂಕ ಶುರುವಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
01:15 PM (IST) Sep 20
Terrorists Relocate from PoK to Khyber Pakhtunkhwa ಗುಪ್ತಚರ ಮಾಹಿತಿಯ ಪ್ರಕಾರ, ಭಾರತೀಯ ವೈಮಾನಿಕ ಮತ್ತು ಡ್ರೋನ್ ದಾಳಿಗಳ ವ್ಯಾಪ್ತಿಯಿಂದಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಇನ್ನು ಮುಂದೆ ಸುರಕ್ಷಿತವಲ್ಲ ಎಂದು ಈ ಉಗ್ರ ಸಂಘಟನೆಗಳಿಗೆ ಅನಿಸಿದೆ.
12:38 PM (IST) Sep 20
Microsoft and JPMorgan advised their employees H-1B visa ಟ್ರಂಪ್ ಅವರ H-1B ವೀಸಾ ಪರಿಷ್ಕರಣೆಯ ನಂತರ, ಮೈಕ್ರೋಸಾಫ್ಟ್ ಮತ್ತು ಜೆಪಿ ಮಾರ್ಗನ್‌ನಂತಹ ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮಹತ್ವದ ಸೂಚನೆ ನೀಡಿವೆ.
12:11 PM (IST) Sep 20
ಅಬುದಾಬಿ: ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಒಮಾನ್ ತಂಡವನ್ನು ಮಣಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
11:50 AM (IST) Sep 20
EPFO Pension Hike: A Diwali Gift for Employees ಅಕ್ಟೋಬರ್ 10-11 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಪಿಎಫ್‌ಒ ಕೇಂದ್ರ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ, ಇಪಿಎಸ್-1995 ಯೋಜನೆಯಡಿ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ನಿರೀಕ್ಷಿಸಲಾಗಿದೆ.
09:58 AM (IST) Sep 20
H-1B Visa Fee Hiked ಹೊಸ ನಿಯಮಗಳ ಪ್ರಕಾರ, ಹೊಸ ಅರ್ಜಿಗಳಿಗಾಗಿ H-1B ಅರ್ಜಿಗಳ ಜೊತೆಯಲ್ಲಿ 1 ಲಕ್ಷ ಡಾಲರ್ ಪಾವತಿ ಮಾಡಬೇಕಿದೆ. ಪಾವತಿಸದ ಕಾರಣಕ್ಕಾಗಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅರ್ಜಿಯನ್ನು ನಿರಾಕರಿಸಬಹುದು.
09:18 AM (IST) Sep 20
Donald Trump massive annual fee for H-1B visas ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, H-1B ವೀಸಾಗಳ ಮೇಲೆ ವಾರ್ಷಿಕ $100,000 ಶುಲ್ಕ ವಿಧಿಸುವ ಘೋಷಣೆಗೆ ಸಹಿ ಹಾಕಿದ್ದಾರೆ. ಇದು ಭಾರತದ ಟೆಕ್ಕಿಗಳ ಅಮೆರಿಕನ್ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.
08:36 AM (IST) Sep 20
seven terrorists were trapped in two separate encounters in Jammu and Kashmir ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕನೊಬ್ಬ ಗಾಯಗೊಂಡಿದ್ದು, ಎನ್‌ಕೌಂಟರ್‌ನಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ.
07:48 AM (IST) Sep 20
ಶೇ.50 ಸುಂಕ ಹೇರಿಕೆ ಬಳಿಕ ಹದಗೆಟ್ಟಿರುವ ಭಾರತ-ಅಮೆರಿಕ ನಡುವಿನ ಸಂಬಂಧ ಸುಧಾರಣೆಗೆ ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ 45ನೇ ಆಸಿಯಾನ್ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆ ಇದೀಗ ಗರಿಗೆದರಿದೆ.
07:48 AM (IST) Sep 20
ಕಳೆದ 33 ವರ್ಷಗಳಲ್ಲಿ ಕನ್ನಡ ಸೇರಿದಂತೆ 40 ಭಾಷೆಗಳಲ್ಲಿ 38000ಕ್ಕೂ ಹೆಚ್ಚು ಹಾಡುಗಳನ್ನು ಹೇಳಿದ್ದ ಖ್ಯಾತ ಗಾಯಕ ಜುಬೀಗ್ ಗಾರ್ಗ್ (52) ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ
07:47 AM (IST) Sep 20
ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂದೂರವನ್ನು ಮೇ 7ರ ಮಧ್ಯರಾತ್ರಿ 1 ಗಂಟೆಗೇ ಏಕೆ ಕೈಗೊಳ್ಳಲಾಯಿತು ಎಂಬ ಅಚ್ಚರಿಯ ವಿಷಯವನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಅನಿಲ್ ಚೌಧರಿ ಬಹಿರಂಗಪಡಿಸಿದ್ದಾರೆ.
07:47 AM (IST) Sep 20
ಆಳಂದ ಚುನಾವಣೆಯಲ್ಲಿ ಮತಗಳವು ಆಗಿದೆ ಎಂದು ದಾಖಲೆಗಳನ್ನು ಮುಂದಿಟ್ಟು ಆರೋಪಿಸಿದ್ದ ರಾಹುಲ್ ಗಾಂಧಿ ಶುಕ್ರವಾರವೂ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಕಾವಲುಗಾರ, ಕಳ್ಳತನವನ್ನು ನೋಡಿಕೊಂಡು ಸುಮ್ಮನಿದ್ದು ಕಳ್ಳರನ್ನು ರಕ್ಷಿಸಿದ ಎಂದು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.
07:46 AM (IST) Sep 20
ತನ್ನ ರೂಂಮೇಟ್‌ಗಳಿಗೆ ಚೂರಿ ಇರಿಯುತ್ತಿದ್ದ ಎಂಬ ಆರೋಪದ ಮೇಲೆ ತೆಲಂಗಾಣದ ಮೆಹಬೂಬ್ ನಗರದ ಮೂಲದ ಟೆಕ್ಕಿಯೊಬ್ಬನನ್ನು ಅಮೆರಿಕದ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ನಡುವೆ ಪುತ್ರನ ಹತ್ಯೆಯ ಘಟನೆಗೆ ಕಾರಣವಾದ ಅಂಶಗಳ ಕುರಿತು ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಆಗ್ರಹಿಸಿದ್ದಾರೆ.
07:44 AM (IST) Sep 20
ಐಫೋನ್ 17 ಸರಣಿಯ ಮೊಬೈಲ್ ಶುಕ್ರವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಅದರ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪಲ್ ಸ್ಟೋರ್ ಹೊರಗಡೆ ದೊಡ್ಡ ಹೊಡೆದಾಟವೇ ನಡೆದಿದೆ.
07:44 AM (IST) Sep 20
ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ.
07:43 AM (IST) Sep 20
ಅಪ್ರಾಪ್ತೆಯ ಖಾಸಗಿ ಅಂಗವನ್ನು ಮುಟ್ಟುವುದು ಅತ್ಯಾ೧ಚಾರ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ, 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿಗೆ ವಿಧಿಸಲಾಗಿದ್ದ 20 ವರ್ಷಗಳ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿ ಆದೇಶಿಸಿದೆ.
07:43 AM (IST) Sep 20
ದೆಹಲಿಯ ಲವ್ ಕುಶ್ ರಾಮಲೀಲಾದಲ್ಲಿ ನಟಿ ಪೂನಂ ಪಾಂಡೆ ಅವರು ಮಂಡೋದರಿಯ ಪಾತ್ರ ನಿರ್ವಹಿಸುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಈ ಆಯ್ಕೆಯನ್ನು ಸಂಪ್ರದಾಯಕ್ಕೆ ವಿರುದ್ಧ ಎಂದು ವಿರೋಧಿಸಿವೆ
07:42 AM (IST) Sep 20
ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರು 'ಪಾಕಿಸ್ತಾನ ಮನೆಯಂತೆ ಭಾಸವಾಗುತ್ತಿದೆ' ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು 'ರಾಷ್ಟ್ರವಿರೋಧಿ' ಎಂದು ಕರೆದಿರುವ ಬಿಜೆಪಿ, ಇದು ದೇಶದ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ತೀವ್ರವಾಗಿ ಖಂಡಿಸಿದೆ.
07:42 AM (IST) Sep 20
ಸಂಜು ಸ್ಯಾಮ್ಸನ್ ಅವರ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ತಂಡವು ಒಮಾನ್ ವಿರುದ್ಧ 188 ರನ್ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಒಮಾನ್, ಅಮೀರ್ ಕಲೀಂ ಮತ್ತು ಹಮ್ಮದ್ ಮಿರ್ಜಾ ಅವರ ಅರ್ಧಶತಕಗಳ ಹೊರತಾಗಿಯೂ 21 ರನ್‌ಗಳಿಂದ ಸೋಲನುಭವಿಸಿತು.