ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ.
ಕಾಬೂಲ್: ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ.
ಈ ಪುಸ್ತಕಗಳು ಷರಿಯಾ ಕಾನೂನು, ತಾಲಿಬಾನ್‌ನ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವುಗಳ ಬೋಧನೆ ನಿಷೇಧಿಸುವಂತೆ ಎಲ್ಲಾ ವಿವಿಗಳಿಗೆ ಅಲ್ಲಿನ ಶಿಕ್ಷಣ ಸಚಿವ ಸೂಚಿಸಿದ್ದಾರೆ. ಈ ಹಿಂದೆ ಭೀಕರ ಭೂಕಂಪಕ್ಕೆ ಆಫ್ಘಾನ್ ತುತ್ತಾಗಿದ್ದಾಗ, ಮಹಿಳೆಯರ ರಕ್ಷಣೆ ಮೇಲೆ ತಾಲಿಬಾನ್ ನಿಷೇಧ ಹೇರಿತ್ತು. ಜೊತೆಗೆ ಹೆಣ್ಣುಮಕ್ಕಳಿಗೆ 5ನೇ ತರಗತಿಗಿಂತ ಹೆಚ್ಚು ಶಿಕ್ಷಣ, ಪರಪುರುಷರಿಗೆ ಮುಖ ತೋರಿಸುವುದು, ವಿಶ್ವ ವಿದ್ಯಾಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿತ್ತು.
ಮತ್ತೊಂದು ತುಗ್ಲಕ್ ಆದೇಶ ಹೊರಡಿಸಿದ ತಾಲಿಬಾನ್
ನವದೆಹಲಿ : ಆಗಸ್ಟ್ 2021 ರಿಂದ ಅಫ್ಘಾನಿಸ್ತಾನ ತಾಲಿಬಾನ್ ಆಳ್ವಿಕೆಯಲ್ಲಿದೆ. ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ನಾಗರಿಕರ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲಿ ಮಹಿಳೆಯರ ಮೇಲೆ ಹಲವು ನಿರ್ಬಂಧಗಳಿದ್ದು, ಇದೇ ಕಾರಣಕ್ಕೆ ವಿಶ್ವದ ಹಲವು ದೇಶಗಳು ತಾಲಿಬಾನ್ ಅನ್ನು ಟೀಕಿಸುತ್ತಿವೆ. ಈಗ ತಾಲಿಬಾನ್ ಮತ್ತೊಂದು ತುಗ್ಲಕ್ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಸಾವಿರಾರು ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ. ಈ ನಿರ್ಧಾರ ನಿಖರವಾಗಿ ಏನು ಅನ್ನೋದರ ವಿವರ ಇಲ್ಲಿದೆ.
ವರದಿಗಳ ಪ್ರಕಾರ, ಉತ್ತರ ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದಲ್ಲಿ ತಾಲಿಬಾನ್ ಸರ್ಕಾರ ಫೈಬರ್-ಆಪ್ಟಿಕ್ ಇಂಟರ್ನೆಟ್ ಅಥವಾ ವೈಫೈ ಅನ್ನು ನಿಷೇಧಿಸಿದೆ. ಪರಿಣಾಮವಾಗಿ, ನಾಗರಿಕರು ಇನ್ನು ಮುಂದೆ ವೈಫೈ ಬಳಸಲು ಸಾಧ್ಯವಾಗುವುದಿಲ್ಲ. ಅನೇಕ ಜನರ ಮನೆಗಳು, ವ್ಯವಹಾರಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ವೈಫೈ ಅನ್ನು ದಿಢೀರ್ ಆಗಿ ಸ್ಥಗಿತಗೊಳಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಾಲಿಬಾನ್ ವಿಧಿಸಿದ ಮೊದಲ ಪ್ರಮುಖ ಇಂಟರ್ನೆಟ್ ನಿಷೇಧ ಇದಾಗಿದೆ.
ವೈಫೈಗೆ ನಿಷೇಧ ಹೇರಿದ್ದರೂ, ಮೊಬೈಲ್ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿದೆ. ಇದು ನಾಗರಿಕರಿಗೆ ಕೊಂಚ ಪರಿಹಾರವನ್ನು ನೀಡಿದೆ. ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬ್ತುಲ್ಲಾ ಅಖುಂಡ್‌ಜಾದಾ ವೈಫೈ ಸ್ಥಗಿತಗೊಳಿಸಲು ಆದೇಶಿಸಿದ ನಂತರ, ಎಲ್ಲಾ ಕೇಬಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಹುಡುಗಿಯರು ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಶಿಕ್ಷಣ ಪಡೆಯಲು ವೈಫೈ ಒಂದು ಸಾಧನವಾಗಿತ್ತು, ಆದರೆ ಈಗ ಸರ್ಕಾರದ ಈ ನಿರ್ಧಾರವು ಅವರ ಶಿಕ್ಷಣಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.
