Asia Cup 2025: ಒಮಾನ್ ಎದುರು ಗೆದ್ದು ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ!
ಅಬುದಾಬಿ: ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಒಮಾನ್ ತಂಡವನ್ನು ಮಣಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಭಾರತಕ್ಕೆ ಭರ್ಜರಿ ಜಯ
ಏಷ್ಯಾಕಪ್ ಟೂರ್ನಿಯ 'ಎ' ಗುಂಪಿನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಒಮಾನ್ ಎದುರು 21 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವುದರ ಜತೆಗೆ ಅಜೇಯವಾಗಿಯೇ ಸೂಪರ್ 4 ಹಂತಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.
ಒಮಾನ್ ಸೋಲಿಸಿ ಅಪರೂಪದ ದಾಖಲೆ ಬರೆದ ಭಾರತ
ಇನ್ನು ಇದರ ಜತೆಗೆ ಈ ಪಂದ್ಯದ ಮೂಲಕ ಕೆಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯಾವುದವು ಅಪರೂಪದ ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
250ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಭಾರತ
ಒಮಾನ್ ಎದುರಿನ ಪಂದ್ಯವು ಭಾರತದ ಪಾಲಿಗೆ 250ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಎನಿಸಿಕೊಂಡಿತು. ಈ ಮೂಲಕ 250 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಜಗತ್ತಿನ ಎರಡನೇ ತಂಡ ಎನ್ನುವ ಹಿರಿಮೆಗೆ ಟೀಂ ಇಂಡಿಯಾ ಪಾತ್ರವಾಗಿದೆ.
ಮೊದಲ ಸ್ಥಾನದಲ್ಲಿದೆ ಪಾಕಿಸ್ತಾನ
ಇನ್ನು 275 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ನ್ಯೂಜಿಲೆಂಡ್ 235, ವೆಸ್ಟ್ ಇಂಡೀಸ್ 228 ಹಾಗೂ ಶ್ರೀಲಂಕಾ 212 ಪಂದ್ಯಗಳನ್ನಾಡಿವೆ.
2006ರಲ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ಭಾರತ
ಟಿ20 ಕ್ರಿಕೆಟ್‌ನಲ್ಲಿ ಭಾರತ ತನ್ನದೇ ಆದ ಪ್ರಾಬಲ್ಯ ಸಾಧಿಸಿದೆ. 2006ರಲ್ಲಿ ದಕ್ಷಿಣ ಆಫ್ರಿಕಾ ಎದುರು ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ಭಾರತ, 2007 ಹಾಗೂ 2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿದೆ.
19 ದೇಶಗಳ ಎದುರು ಚುಟುಕು ಕ್ರಿಕೆಟ್ ಆಡಿರುವ ಭಾರತ
ಭಾರತ ತಂಡವು 2006ರಿಂದ 2025ರ ಅವಧಿಯವರೆಗೆ ಒಟ್ಟು 19 ದೇಶಗಳ ಎದುರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದೆ. ಇದುವರೆಗೂ ಭಾರತ ಒಟ್ಟಾರೆ 250 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 167 ಪಂದ್ಯಗಳನ್ನು ಗೆದ್ದಿದೆ.
ಇಲ್ಲಿಯವರೆಗೆ ಭಾರತದ ಅಂತಾರಾಷ್ಟ್ರೀಯ ಟಿ20 ರೆಕಾರ್ಡ್ ಹೀಗಿದೆ
ಒಟ್ಟು ಪಂದ್ಯಗಳು: 250
ಗೆಲುವು: 167
ಸೋಲು: 72
ನೋ ರಿಸಲ್ಟ್: 6