ಐಫೋನ್‌ 17 ಸರಣಿಯ ಮೊಬೈಲ್‌ ಶುಕ್ರವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಅದರ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪಲ್ ಸ್ಟೋರ್‌ ಹೊರಗಡೆ ದೊಡ್ಡ ಹೊಡೆದಾಟವೇ ನಡೆದಿದೆ.

ಮುಂಬೈ: ಐಫೋನ್‌ 17 ಸರಣಿಯ ಮೊಬೈಲ್‌ ಶುಕ್ರವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಅದರ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪಲ್ ಸ್ಟೋರ್‌ ಹೊರಗಡೆ ದೊಡ್ಡ ಹೊಡೆದಾಟವೇ ನಡೆದಿದೆ.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಾಲ್‌ ಆಫ್‌ ಏಷ್ಯಾ, ದೆಹಲಿ ಮತ್ತು ಮುಂಬೈ,ಫೋನ್‌ ಖರೀದಿಗೆ ಜನಸ್ತೋಮವೇ ನೆರೆದಿತ್ತು. ತಡರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನ ಮೊಬೈಲ್‌ ಖರೀದಿಗೆ ಮುಂದಾಗಿದ್ದರು.

ಈ ನಡುವೆ ಮುಂಬೈನ ಬಂದಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ಸೆಂಟರ್‌ನಲ್ಲಿರುವ ಆ್ಯಪಲ್‌ ಸ್ಟೋರ್‌ ಹೊರಗಡೆ ಮೊಬೈಲ್‌ ಖರೀದಿಗೆ ಬಂದಿದ್ದ ಪುರುಷರ ನಡುವೆ ನೂಕುನುಗ್ಗಲಿನಲ್ಲಿ ಮಾರಾಮಾರಿ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದಾರೆ. ಆ್ಯಪಲ್‌ ತನ್ನ ಐಫೋನ್ 17 ಸರಣಿಯನ್ನು 82,900 - 2,29,900 ಬೆಲೆಯಲ್ಲಿ ಅನಾವರಣಗೊಳಿಸಿದೆ.

ಐಫೋನ್ 17 ಅಸಲಿಯತ್ತು ಬಹಿರಂಗ

ನವದೆಹಲಿ : ಆ್ಯಪಲ್ 17 ಬಿಡುಗಡೆಯಾಗಿ ಭರ್ಜರಿ ಮಾರಾಟ ಕಾಣುತ್ತಿದೆ. ಐಫೋನ್ 17 ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಆ್ಯಪಲ್ ತನ್ನ ಐಫೋನ್‌ಗೆ ನೀಡುತ್ತಿರುವ ಹೈಪ್ ಮೂಲಕ ಹಣ ಮಾಡಿಕೊಳ್ಳುತ್ತಿದೆಯಾ? ಈ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಐಫೋನ್ 17 ಸಿಕ್ಕಿರುವ ಪ್ರಚಾರ ಹಾಗೂ ಐಫೋನ್ 17 ಅಸಲಿಯತ್ತು. ಇನ್ನೋವೇಶನ್‌ಗಿಂತ ಐಫೋನ್ 17ನಲ್ಲಿ ಹೈಪ್ ಜಾಸ್ತಿಯಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ವರ್ಷ ಆ್ಯಪಲ್ ಅಪ್‌ಗ್ರೇಡೆಡ್ ವರ್ಶನ್ ಐಫೋನ್ ಬಿಡುಗಡೆ ಮಾಡುತ್ತಿದೆ. ಆದರೆ ನಿಜಕ್ಕೂ ಇದು ಅಪ್‌ಗ್ರೇಡೆಡ್, ಇನ್ನೋವೇಶನ್ ಐಫೋನ್ ಆಗಿದೆಯಾ?

ಐಫೋನ್ 11 ರಿಂದ ಐಫೋನ್ 17, ಇನ್ನೋವೇಶನ್ ಏನು?

ಆ್ಯಪಲ್ ಐಫೋನ್ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಇನ್ನೋವೇಶನ್ ಮೂಲಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಆದರೆ 2019 ರಿಂದ ಅಂದರೆ ಐಫೋನ್ 11 ರಿಂದ ಐಫೋನ್‌ 17ರ ವರೆಗೆ ಆ್ಯಪಲ್ ಮಾಡಿದ ಇನ್ನೋವೇಶನ್ ಏನು? ಪ್ರತಿ ವರ್ಷ ಹೊಸ ಬಾಟಲಿಯಲ್ಲಿ ಹಳೇ ವೈನ್ ಅನ್ನೋ ರೀತಿ. ಪ್ರತಿ ವರ್ಷ ಆ್ಯಪಲ್ ಹೊಸ ಹೊಸ ಉತ್ಪನ್ನ, ಎಐ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ್ ಟೆಕ್ ಚಾಲಿತ ಫೋನ್ ಬಿಡುಗಡೆ ಮಾಡುತ್ತಿದೆ ಎಂದು ಪ್ರಚಾರ ಮಾಡುತ್ತೆ. ಆದರೆ ನಿಜಕ್ಕೂ ಏನು?