ನಾಳೆಯೇ ವಾಪಸ್ ಬರಬೇಕಿಲ್ಲ, ವಿರೋಧದ ಬಳಿಕ H1B ವೀಸಾ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಟ್ರಂಪ್, ಹೊಸ ನೀತಿ ಯಾರಿಗೆ ಅನ್ವಯವಾಗಲಿದೆ, ಇದರ ಷರತ್ತುಗಳೇನು ಅನ್ನೋ ಕುರಿತು ಅಮೆರಿಕ ಸ್ಪಷ್ಟನೆ ಕೊಟ್ಟಿದೆ. ಭಾರತೀಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. 

ವಾಶಿಂಗ್ಟನ್ (ಸೆ.20) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೆಚ್1ಬಿ ವೀಸಾ ಮೇಲೆ ವಾರ್ಷಿಕ 88 ಲಕ್ಷ ರೂಪಾಯಿ ಶುಲ್ಕ ವಿಧಿಸಿದ ಆದೇಶ ಭಾರತೀಯರನ್ನು ಕಂಗಾಲು ಮಾಡಿತ್ತು. ಅಮೆರಿಕದಲ್ಲಿಹೆಚ್1ಬಿ ವೀಸಾ ಪಡೆದು ಕೆಲಸ ಮಾಡುತ್ತಿರುವ ಭಾರತೀಯರಿಗೆ ಅತೀ ದೊಡ್ಡ ಆಘಾತ ತಂದ ನೀತಿ ಇದಾಗಿದೆ. ನಾಳೆಯಿಂದಲೇ ಅಂದರೆ ಸೆಪ್ಟೆಂಬರ್ 21ರಿಂದ ಈ ನೀತಿ ಜಾರಿಯಾಗುತ್ತಿದೆ. ಭಾರತೀಯರೇ ಹೆಚ್ಚಾಗಿ ಬಳಸುತ್ತಿದ್ದ ಹೆಚ್1ಬಿ ವೀಸಾ ನೀತಿಯಲ್ಲಿನ ಬದಲಾವಣೆಯಿಂದ ರಜೆಯಲ್ಲಿ, ತುರ್ತು ಕಾರಣಕ್ಕಾಗಿ ಅಮೆರಿಕದಿಂದ ಭಾರತಕ್ಕೆ, ಇತರ ದೇಶಗಳಿಗೆ ತೆರಳಿದವರಿಗೆ ನಾಳೆಯೇ ಅಮೆರಿಕಾಗೆ ವಾಪಾಸ್ ಆಗಲು ಹಲವು ಕಂಪನಿಗಳು ಸೂಚಿಸಿತ್ತು. ಕೋಲಾಹಲ, ಆತಂಕ, ವಿರೋದದ ಬಳಿಕ ಹೊಸ ವೀಸಾ ನೀತಿ ಕುರಿತು ಸ್ಪಷ್ಟನೆ ನೀಡಿದೆ. ನಾಳೆಯೇ ವಾಪಸ್ ಬರಬೇಕಿಲ್ಲ ಎಂದಿದೆ.

ಹೊಸ ವೀಸಾ ನೀತಿ ಯಾರಿಗೆ ಅನ್ವಯ?

ಭಾರಿ ವಿರೋಧದ ಬಳಿಕ ಅಮೆರಿಕದ ಆಡಳಿತ ವಿಭಾಗದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಹೆಚ್1ಬಿ ವೀಸಾ ನೀತಿ ಈಗಾಗಲೇ ವೀಸಾ ಪಡೆದುಕೊಂಡವರಿಗೆ ಅಲ್ಲ, ಹೊಸದಾಗಿ ಹೆಚ್1ಬಿ ವೀಸಾ ಪಡೆಯುವವರಿಗೆ ಅನ್ವಯವಾಗಲಿದೆ.ಅಮೆರಿಕದಿಂದ ತೆರಳುತ್ತಿರುವವರು, ಭಾರತಕ್ಕೆ ಪ್ರಯಾಣ ಮಾಡುವವರು, ಈಗಾಗಲೇ ತೆರಳಿದವರು ನಾಳೇಯೇ ಮರಳಬೇಕಿಲ್ಲ. ನಾಳೇಯೇ ಬಂದು 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಿಲ್ಲ. ಇದು ಹೊಸದಾಗಿ ಹೆಚ್1ಬಿ ವೀಸಾ ಪಡೆಯುವರಿಗೆ, ಸದ್ಯ ಹೆಚ್1ಬಿ ವೀಸಾ ಇರುವವರಿಗೆ ಅಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ನವರಾತ್ರಿ, ದೀಪಾವಳಿ ಹಬ್ಬದ ಪ್ರಯಾಣ ರದ್ದು, ಅಮೆರಿಕದಲ್ಲಿ H-1B ವೀಸಾ ಭಾರತೀಯರು ಕಂಗಾಲು

ಹೆಚ್1ಬಿ ವೀಸಾಗೆ 88 ಲಕ್ಷ ರೂಪಾಯಿ ಶುಲ್ಕ

ವಾರ್ಷಿಕ 2,000 ಡಾಲರ್‌ನಿಂದ 7000 ಡಾಲರ್ ವರೆಗೆ ಇರುವ ಹೆಚ್1ಬಿ ವೀಸಾ ಶುಲ್ಕವನ್ನು ನಾಳೆಯಿಂದ (ಸೆ.21) ಏರಿಕೆ ಮಾಡಲಾಗಿದೆ. ಈ ಶುಲ್ಕವನ್ನು ಡೋನಾಲ್ಡ್ ಟ್ರಂಪ್ 1 ಲಕ್ಷ ಡಾಲರ್‌ಗೆ ಹೆಚ್ಚಳ ಮಾಡಿದ್ದಾರೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಹೆಚ್1ಬಿ ವೀಸಾದ ವಾರ್ಷಿಕ ಶುಲ್ಕ ಬರೋಬ್ಬರಿ 88 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.

Scroll to load tweet…

ಭಾರತೀಯರೇ ಹೆಚ್ಚಾಗಿ ಬಳಸುವ ಹೆಚ್1ಬಿ ವೀಸಾ ಶುಲ್ಕ ಏರಿಕೆ ಮಾಡಿದ ಟ್ರಂಪ್ ಭಾರತೀಯರ ಬೆನ್ನಿಗೆ ಚೂರಿ ಹಾಕಿದ್ದಾರೆ. ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯರ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ಅಮೆರಿಕದಲ್ಲಿನ ಯುವಕರು, ವಿದ್ಯಾರ್ಥಿಗಳು ವಿದೇಶಿಗರಿಂದ ಕೆಲಸದಿಂದ ವಂಚಿತರಾಗುತ್ತಿದ್ದಾರೆ. ಅಮೆರಿಕನ್ನರಿಗೆ ಉದ್ಯೋಗ ಸಿಗುವಂತಾಗಲು ಹಾಗೂ ದೇಶದ ಸುರಕ್ಷತಾ ಕಾರಣಗಳನ್ನು ಟ್ರಂಪ್ ನೀಡಿದ್ದಾರೆ.

ಹೆಚ್1ಬಿ ವೀಸಾ ಪೈಕಿ ಶೇಕಡಾ 71ರಷ್ಟು ಭಾರತೀಯರೇ ಬಳಕೆ ಮಾಡುತ್ತಿದ್ದಾರೆ. ಈ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ದಿಢೀರ್ ಅಮೆರಿಕದ ನಿರ್ಧಾರದ ಭಾರತೀಯರನ್ನು ಕಂಗಾಲಾಗಿಸಿದೆ. ಹೆಚ್1ಬಿ ವೀಸಾವನ್ನು ಅಮೆರಿಕನ್ ಕಂಪನಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇಷ್ಟೇ ಅಲ್ಲ ನಿಯಮ ವಿರುದ್ದವಾಗಿ ಕಾರ್ಮಿಕರನ್ನು ನೇಮಕಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತದ ಟೆಕ್ಕಿಗಳ ಅಮೆರಿಕನ್‌ ಕನಸಿಗೆ ಕೊಳ್ಳಿ, H-1B ವೀಸಾ ವಾರ್ಷಿಕ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಸಿದ ಟ್ರಂಪ್!