ಜಮ್ಮು ಮತ್ತು ಕಾಶ್ಮೀರದಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಕತಾಲ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ದಾಳಿಯ ವೇಳೆ ಹಫೀಜ್ ಸಯೀದ್ ಮೇಲೂ ಗುಂಡಿನ ದಾಳಿ ನಡೆದಿದೆ ಎಂದು ಪಾಕಿಸ್ತಾನಿ ಪತ್ರಕರ್ತೆ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಕತಾಲ್‌ನನ್ನು ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಕೊಂದಿದ್ದಾರೆ. ಇದರ ಬೆನ್ನಲ್ಲೇ ದಾಳಿ ವೇಳೆ ಅಬು ಕತಾಲ್ ಜೊತೆಗೇ ಇದ್ದ ಹಫೀಜ್ ಸಯೀದ್ ಮೇಲೂ ಗುಂಡಿನ ದಾಳಿನ ನಡೆಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಂದು ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪಂಜಾಬ್ ಪ್ರಾಂತ್ಯದ ಝೇಲಂ ಪ್ರದೇಶದಲ್ಲಿ ಶನಿವಾರ ಸಂಜೆ ಜಿಯಾ-ಉರ್-ರೆಹಮಾನ್ ಅಲಿಯಾಸ್ ನದೀಮ್ ಅಲಿಯಾಸ್ ಅಬು ಕಟಲ್ ನನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು.
ಇದನ್ನೂ ಓದಿ: PM Modi: ಪಾಕಿಸ್ತಾನಕ್ಕೆ ಮೋದಿ ಸ್ಟ್ರಾಂಗ್ ವಾರ್ನಿಂಗ್! ವಿಶ್ವಸಂಸ್ಥೆಯ ವರ್ತನೆ ಪ್ರಶ್ನಿಸಿದ ಪಿಎಂ!
ಉಗ್ರ ರೆಹಮಾನ್ ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ ನ ಆಪ್ತ ಸಹಾಯಕ ಎಂದು ಪರಿಗಣಿಸಲಾಗಿತ್ತು. ಭಾರತದ ಮೇಲಿನ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಮಾಸ್ಟರ್ ಮೈಂಡ್ ಆಗಿದ್ದವನು ಇದೇ ಉಗ್ರ. ಅಬು ಕಟಲ್ ಮೇಲೆ ಅಪರಿಚಿತ ಗುಂಡಿನ ದಾಳಿ ನಡೆಸಿ ಕೊಂದಿದ್ದರು. ಈ ದಾಳಿಯ ಸಮಯದಲ್ಲಿ ಹಫೀಜ್ ಸಯೀದ್ ಕೂಡ ಅಬು ಕಟಲ್ ಜೊತೆಗಿದ್ದ ಎನ್ನಲಾಗಿದೆ. ಅಪರಿಚಿತರು ಸಯೀದ್ ಮೇಲೂ ದಾಳಿ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಮಾಡಿವೆ. ಇನ್ನೊಂದೆಡಡೆ ಇದೊಂದು ಸುಳ್ಳು ಸುದ್ದಿಯಾಗಿರಬಹುದು ಪಾಕಿಸ್ತಾನಿ ಸೇನೆಯು ಹಫೀಜ್ ಸಯೀದ್‌ನನ್ನು ಸುರಕ್ಷಿತ ಸ್ಥಳದಲ್ಲಿ ಅಡಗಿಸಿಟ್ಟಿದೆ ಎಂದೂ ಹೇಳಲಾಗುತ್ತಿದೆ. ಹಫೀಜ್ ಸಯೀದ್ ಸಾವಿನ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಹಫೀಜ್ ಸಯೀದ್ ಸ್ಥಿತಿ ಗುಟ್ಟಾಗಿಯೇ ಉಳಿದಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಎಲ್ಲೆಡೆ ಹೊಡೆತ; ಬಲೂಚ್ ದಾಳಿಗೆ ಹೆದರಿ ಹೂಡಿಕೆಯಿಂದ ಹಿಂದೆ ಸರಿದ ಚೀನಾ!
ಇದೆಲ್ಲದರ ನಡುವೆ, ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಹಫೀಜ್ ಸಯೀದ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅದರ ಪ್ರಕಾರ,. 'ನಿನ್ನೆಯಿಂದ, ಹಫೀಜ್ ಸಯೀದ್‌ನನ್ನು ಪಾಕಿಸ್ತಾನದಲ್ಲಿ ಕೆಲವರು ಕೊಂದಿದ್ದಾರೆ ಎಂಬ ಸುದ್ದಿ ಇದೆ. ಇದು ಸುಳ್ಳು ಸುದ್ದಿ. ಅವರು ಬದುಕಿದ್ದಾರೆ ಆದರೆ ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ. ಅವರು ಪ್ರಸ್ತುತ ಸುರಕ್ಷಿತ ಸ್ಥಳದಲ್ಲಿರಬಹುದು. ಅವರ ಸಾವಿನ ಸುದ್ದಿ ಕಟ್ಟುಕಥೆ ಎಂದು ನನಗೆ ತಿಳಿದಿದೆ ಎಂದು ತ್ರಕರ್ತೆ ಮೋನಾ ಆಲಂ ತಿಳಿಸಿದ್ದಾರೆ ಎಂದು ವರದಿಯಾಗಿದೆ.