ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಹೈಪರ್‌ಲೂಪ್ ಯೋಜನೆಯು ಏಷ್ಯಾದ ಅತಿ ಉದ್ದದ ಮಾರ್ಗವಾಗಿದೆ. ಶೀಘ್ರದಲ್ಲೇ ವಿಸ್ತರಣೆಯೊಂದಿಗೆ ವಿಶ್ವದಲ್ಲೇ ಅತಿ ಉದ್ದದ ಸುರಂಗವಾಗಲಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಈ ತಂತ್ರಜ್ಞಾನವು ಗರಿಷ್ಠ 1000 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಚೆನ್ನೈ: ಐಐಟಿ ಮದ್ರಾಸ್ ಅಭಿವೃದ್ಧಿ ಪಡಿಸಿರುವ ಹೈಪರ್‌ಲೂಪ್ ಯೋಜನೆಯು 410 ಮೀ. ಉದ್ದದ ಮಾರ್ಗವನ್ನು ಹೊಂದಿದ್ದು, ಸದ್ಯ ಏಷ್ಯಾದ ಅತಿ ಉದ್ದದ ಹೈಪರ್ ಲೂಪ್ ಮಾರ್ಗ ಎಂಬ ಹಿರಿಮೆ ಹೊಂದಿದೆ. ಜೊತೆಗೆ ಶೀಘ್ರವೇ ಈ ಸುರಂಗ ಮಾರ್ಗದ ವಿಸ್ತರಣೆ ಕಾರ್ಯ ನಡೆಯಲಿದ್ದು, ಬಳಿಕ ಅದು ವಿಶ್ವದಲ್ಲೇ ಅತಿ ಉದ್ದನೆಯ ಸುರಂಗ ಎನ್ನಿಸಿಕೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಹೈಪರ್‌ಲೂಪ್ ತಂತ್ರಜ್ಞಾನ ತಯರಾಗುತ್ತಿರುವ ಮದ್ರಾಸ್‌ನ ಐಐಟಿಗೆ ಭಾನುವಾರ ಭೇಟಿ ನೀಡಿದ್ದ ಅಶ್ವಿನ್, ಈ ವೇಳೆ ಅಲ್ಲಿನ ತಂತ್ರಜ್ಞಾನಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ನಿರ್ವಾತ ಪ್ರದೇಶದಲ್ಲಿ ಚಲಿಸುವ ಹೈಪರ್‌ಲೂಪ್‌ನ ಮಾದರಿಯೊಂದರ ಸಂಚಾರವನ್ನೂ ಸಚಿವರು ವೀಕ್ಷಿಸಿದರು. ಹೈಪರ್‌ಲೂಪ್ ಎನ್ನುವುದು ನಿರ್ವಾತ ಪ್ರದೇಶದಲ್ಲಿ ಮ್ಯಾಗ್ನೆಟಿಕ್ ತಂತ್ರಜ್ಞಾನ ಬಳಸಿ ವಾಹನ ಚಲಿಸುವ ವಿಧಾನ. ಇದರಲ್ಲಿ ರೈಲು ಗರಿಷ್ಠ 1000 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿರಲಿದೆ.
ಭಾರತದಲ್ಲಿ ಹೈಪರ್‌ಲೂಪ್ ರೈಲು: ಹೈದರಾಬಾದ್-ಬೆಂಗಳೂರು ಕೇವಲ 30 ನಿಮಿಷ ಪ್ರಯಾಣ
ದೇಶದ ಮೊದಲ ಹೈಪರ್‌ಲೂಪ್ ಟ್ರ್ಯಾಕ್ ಅನಾವರಣ