ಆಕ್ಷೇಪಾರ್ಹ ಪೋಸ್ಟ್ ಹಾಕುವವರ ವಿವಸ್ತ್ರಗೊಳಿಸಿ ಮೆರವಣಿಗೆ: ತೆಲಂಗಾಣ ಸಿಎಂ ಎಚ್ಚರಿಕೆ

ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪತ್ರಕರ್ತರಂತೆ ನಟಿಸಿ ಜನಪ್ರತಿನಿಧಿಗಳ ಬಗ್ಗೆ ಆಕ್ಷೇಪಾರ್ಹ ವಿಷಯ ಪೋಸ್ಟ್ ಮಾಡುವವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿವೆ.


ಹೈದರಾಬಾದ್: ಪತ್ರಕರ್ತರಂತೆ ನಟಿಸಿ ಜನಪ್ರತಿನಿಧಿಗಳ ಬಗ್ಗೆ ಆಕ್ಷೇಪಾರ್ಹ ಮತ್ತು ನಿಂದನೀಯ ವಿಷಯವನ್ನು ಪೋಸ್ಟ್ ಮಾಡುವವರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಗುವುದು ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಎಚ್ಚರಿಸಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಸಂಬಂಧ ಇಬ್ಬರು ಮಹಿಳಾ ಪತ್ರಕರ್ತರ ಬಂಧನ ಸಮರ್ಥಿಸಿಡು ವಿಧಾನಸಭೆಯಲ್ಲಿ ಮಾತನಾಡುವ ವೇಳೆ ರೇವಂತ್‌ ರೆಡ್ಡಿ ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಟೀಕೆ ಹಾಗೂ ವಿವಾದಕ್ಕೆ ಕಾರಣವಾಗಿದೆ. 

ಮೆರವಣಿಗೆ: ತಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ಇಬ್ಬರು ಮಹಿಳಾ ಪತ್ರಕರ್ತರನ್ನು ಬಂಧಿಸಿದ್ದನ್ನು ಉಲ್ಲೇಖಿಸಿ ಶನಿವಾರ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, 'ನನ್ನ ಕುಟುಂಬದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡುವ ಹಕ್ಕು ಯಾರಿಗೂ ಇಲ್ಲ. ಅಂತಹ ಪೋಸ್ಟ್‌ಗಳನ್ನು ಹಾಕುವವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತೇನೆ. ಇಂದು ಪತ್ರಕರ್ತ ಯಾರು ಎಂದು ವ್ಯಾಖ್ಯಾನಿಸುವ ಸಮಯ ಬಂದಿದೆ. ಆನ್‌ಲೈನ್‌ನಲ್ಲಿ ಕೆಟ್ಟ  ಪ್ರಚಾರಗಳನ್ನು ನಿಲ್ಲಿಸಲು ಕಾನೂನನ್ನು ತರಬೇಕಾಗಬಹುದು' ಎಂದು ಹೇಳಿದ್ದಾರೆ. 

Latest Videos

‘ಗ್ಯಾರಂಟಿ’ ಯೋಜನೆಗಳ ಹೊಡೆತಕ್ಕೆ ಸಿಲುಕಿತಾ ತೆಲಂಗಾಣ..?

ಪ್ರತಿಪಕ್ಷ ಕಿಡಿ: 
ಸಿಎಂ ಮಾತಿಗೆ ಪ್ರತಿಪಕ್ಷ ಬಿಆರ್‌ಎಸ್ ಆಕ್ರೋಶ ವ್ಯಕ್ತಪಡಿಸಿದ್ದು, 'ಹಿಂದೆ ನಮ್ಮ ಸರ್ಕಾರವನ್ನು ಗುರಿಯಾಗಿಸಿ ಡು ಕಂಟೆಂಟ್‌ ರಚಿಸಲು ಯೂಟ್ಯೂಬ್ ಪತ್ರಕರ್ತರನ್ನು ರೆಡ್ಡಿ ಪ್ರೋತ್ಸಾಹಿಸಿದ್ದರು. ಟಿವಿ ಚಾನೆಲ್‌ಗಳಲ್ಲಿ ನಿಂದನೀಯ ಭಾಷೆಯಿಂದಲೇ ಕುಖ್ಯಾತರಾಗಿದ್ದ, ಅಮಾನತುಗೊಂಡ ಎಂಎಲ್‌ಸಿ ಚಿಂತಪಂಡು ನವೀನ್ ಅವರಿಗೆ ತಾವೇ ಬೆಂಬಲ ನೀಡಿದ್ದರು. ಆದರೆ ಇದೀಗ ರೇವಂತ್ ಬೂಟಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. 
ಬಿಆರ್‌ಎಸ್‌ ಶಾಸಕಿ ಕೆ.ಕವಿತಾ ಮಾತನಾಡಿ, 'ಕರ್ಮವೇ ಹೀಗೆ. ರೇವಂತ್ ರೆಡ್ಡಿ ಬಿಆರ್‌ಎಸ್ ನಾಯಕರ ವಿರುದ್ಧ ಅಸಹ್ಯಕರ ಹೇಳಿಕೆಗಳನ್ನು ನೀಡುತ್ತಿದ್ದರು. ಅವರ ಸಂಚು ಈಗ ಮರಳಿ ಅವರಿಗೆ ಬಡಿದಿದೆ ಎಂದು ತಿರುಗೇಟು ನೀಡಿದ್ದಾರೆ.

ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಟ್ಟ ವಿಚಾರ ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್

click me!