ಬೆಲೆ ಕುಸಿತದಿಂದ ನಲುಗಿದ್ದ ಕೆಂಪು ಮೆಣಸು ಬೆಳೆಗಾರರ ಕೈ ಹಿಡಿದ ಕೇಂದ್ರ, ಆಂಧ್ರ ಸರ್ಕಾರ

Published : Mar 17, 2025, 09:22 AM ISTUpdated : Mar 17, 2025, 09:27 AM IST
  ಬೆಲೆ ಕುಸಿತದಿಂದ ನಲುಗಿದ್ದ ಕೆಂಪು ಮೆಣಸು ಬೆಳೆಗಾರರ ಕೈ ಹಿಡಿದ ಕೇಂದ್ರ, ಆಂಧ್ರ ಸರ್ಕಾರ

ಸಾರಾಂಶ

ಕೆಂಪು ಮೆಣಸಿನ ಬೆಲೆ ಕುಸಿತದಿಂದ ತತ್ತರಿಸಿದ್ದ ಆಂಧ್ರಪ್ರದೇಶದ ರೈತರಿಗೆ ಬೆಲೆ ಏರಿಕೆಯು ಸಂತಸ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮಗಳಿಂದ ಬೆಲೆಯಲ್ಲಿ ಚೇತರಿಕೆ ಕಂಡುಬಂದಿದೆ.

ವಿಜಯವಾಡ: ಕೆಂಪು ಮೆಣಸಿನ ಬೆಲೆ ಕುಸಿತದಿಂದ ನಲುಗಿದ್ದ ಆಂಧ್ರಪ್ರದೇಶದ ರೈತರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ. ಕಾರಣ, ಬೆಲೆ ಕುಸಿತ ತಡೆಗೆ ಕೇಂದ್ರ ಮತ್ತು ಆಂಧ್ರಪ್ರದೇಶ ಸರ್ಕಾರ ಕೈಗೊಂಡ ಕ್ರಮದ ಫಲವಾಗಿ ಕಳೆದೊಂದು ವಾರದಿಂದ ಮೆಣಸಿನ ಖರೀದಿ ಬೆಲೆಯಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ.

ಕಳೆದ ವರ್ಷ ಗುಣಮಟ್ಟದ ಕೆಂಪು ಮೆಣಸಿನ ಬೆಲೆ ಗರಿಷ್ಠ 28000 ರು.ವರೆಗೂ ತಲುಪಿತ್ತು. ಆದರೆ ಈ ವರ್ಷ ದರ ಕೇವಲ 7000 ರು.ಗೆ ಕುಸಿದ ಕಾರಣ ರೈತರು ಕಂಗಾಲಾಗಿ ಹೋಗಿದ್ದರು. ಹೀಗಾಗಿ ಬೆಲೆ ಸ್ಥಿರೀಕರಣಕ್ಕೆ ಮಧ್ಯಪ್ರವೇಶ ಮಾಡುವಂತೆ ಮುಖ್ಯಮಂತ್ರಿ ನಾಯ್ಡು ಸರ್ಕಾರದ ಕೇಂದ್ರದ ಮೊರೆ ಹೋಗಿತ್ತು.ಅದಕ್ಕೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಫೆ.25ರಿಂದ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕ್ವಿಂಟಲ್‌ಗೆ 11781 ರು. ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಿತ್ತು. ರೈತರು ಬೆಳೆದ ಒಟ್ಟು ಬೆಲೆಯಲ್ಲಿ ಈ ಶೇ.25ರಷ್ಟನ್ನು ಈ ಬೆಲೆಯಲ್ಲಿ ಖರೀದಿ ಆರಂಭಿಸಿತ್ತು.

Healthy Food : ಖಾರವಾಗಿದ್ರೂ ಆರೋಗ್ಯಕ್ಕೆ ಒಳ್ಳೆಯದು ಈ ಫುಡ್

ಅದರ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಬೆಲೆ ಶೇ.15-20ರಷ್ಟು ಏರಿಕೆಯಾಗಿದೆ. ಗುಣಮಟ್ಟದ ಮೆಣಸಿ ಕ್ವಿಂಟಲ್‌ಗೆ 14000 ರು.ವರೆಗೂ ದರ ಸಿಕ್ಕಿದೆ. ಜೊತೆಗೆ ಕಳೆದ ಕೆಲ ದಿನಗಳಿಂದ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲೇ ಮಾರುಕಟ್ಟೆಯಲ್ಲಿ ಮೆಣಸು ಖರೀದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನಷ್ಟು ಹೆಚ್ಚಬಹುದು ಎಂದು ರೈತರು ಆಶಾಭಾವನೆ ಹೊಂದಿದ್ದಾರೆ.
ಕರ್ನಾಟಕದಲ್ಲೂ ಇದೇ ರೀತಿ ಬೆಲೆ ಕುಸಿದಿದ್ದು, ನೆರವಿಗೆ ಧಾವಿಸುವಂತೆ ಪ್ರಧಾನಿ ಮೋದಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ರಾಜ್ಯದಲ್ಲಿ ಇನ್ನೂ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಧಾವಿಸಿಲ್ಲ.

ಹೃದ್ರೋಗ- ತೂಕ ಕಡಿಮೆ : ಮೆಣಸಿನಕಾಯಿಯ ಪ್ರಯೋಜನ ಹತ್ತು ಹಲವು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ