ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಏನಾಗಲಿದೆ? ರಾಜ್ಯದಲ್ಲಿ ಸಿಎಂ ಬದಲಾವಣೆ ಆಗತ್ತಾ? ಅಭಿಮನ್ಯು ಯಾರು? ದುರ್ಯೋಧನ ಯಾರು? ಕೋಡಿಶ್ರೀ ಸ್ಫೋಟಕ ಭವಿಷ್ಯ ಕೇಳಿ...
ಸದ್ಯ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ವಿಚಿತ್ರ ಬೆಳವಣಿಗೆಗಳು ಆಗುತ್ತಿವೆ. ಸಭೆ-ಚರ್ಚೆಗಳು ಜೋರಾಗಿವೆ. ಇದಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯ ಖುರ್ಚಿಯ ಬಗ್ಗೆ ಮಾತನಾಡಿದ್ದಾರೆ. ಅವರ ಪುತ್ರಿ ಐಶ್ವರ್ಯ ಕೂಡ ತಮ್ಮ ತಂದೆಯೇ ಮುಂದಿನ ಸಿಎಂ ಎಂದಿದ್ದಾರೆ. ಅದೇ ಇನ್ನೊಂದೆಡೆ, ಡಿಕೆಶಿ ಅವರು ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿರುವುದು, ಸದ್ಗುರು ಜಗ್ಗಿ ವಾಸುದೇವ ಅವರನ್ನು ಭೇಟಿಯಾಗಿರುವುದು ಎಲ್ಲವೂ ವಿಚಿತ್ರ ಎನ್ನಿಸುವ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅದೇ ಇನ್ನೊಂದೆಡೆ, ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುವುದಾದರೆ, ಹೇಗಾದರೂ ಮಾಡಿ ರಾಹುಲ್ ಗಾಂಧಿಯವರನ್ನು ಮುಂದಿನ ಪ್ರಧಾನಿಯನ್ನಾಗಿಸಲು ಕಾಂಗ್ರೆಸ್ಸಿಗರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಇದೀಗ, ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕೆಲವೊಂದು ಭವಿಷ್ಯಗಳನ್ನು ನುಡಿದಿದ್ದಾರೆ.
ಕ್ರೋಧಿನಾಮ ಸಂವತ್ಸರದಲ್ಲಿ ಒಳ್ಳೆಯದ್ದಕ್ಕಿಂತ ಕೆಟ್ಟದ್ದೇ ಜಾಸ್ತಿ ಇದೆ. ಪ್ರಾಕೃತಿಯವಾಗಿ ದೋಷ ಕಾಣಿಸಿಕೊಳ್ಳಲಿದೆ. ಡ್ಯಾಮುಗಳು ತುಂಬಿ ಜಲಕಂಟಕ ಮುಂದುವರೆಯಲಿದೆ ಎಂದಿದ್ದಾರೆ. ಬೀಯಿಂಗ್ ಕನ್ನಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಕೋಡಿಶ್ರೀ ಅವರಿಗೆ ರಾಜಕಾರಣದ ಭವಿಷ್ಯ ನುಡಿಯುವಂತೆ ಕೇಳಿಕೊಂಡಾಗ ಅವರು, ಒಬ್ಬ ಸನ್ಯಾಸಿಯ ಕಥೆ ಹೇಳಿದ್ದಾರೆ. 'ಒಬ್ಬ ಸನ್ಯಾಸಿ ತಪಸ್ಸಿಗೆ ಕೂತಿದ್ದನಂತೆ. ಒಬ್ಬ ಬೇಡ ಜಿಂಕೆ ಓಡಿಸಿಕೊಂಡು ಬಂದನಂತೆ. ಜಿಂಕೆ ಸನ್ಯಾಸಿ ಮುಂದೆ ಹೋಯಿತು. ಬೇಡ ಬಂದು ಸನ್ಯಾಸಿಯ ಬಳಿ, ಜಿಂಕೆ ಹೋಯ್ತಾ ಎಂದು ಕೇಳಿದನಂತೆ. ಹೋಯ್ತು ಅಂದರೆ ಕೊಲ್ಲುತ್ತಾನೆ, ಆ ಕೊಂದ ಪಾಪ ನನಗೆ ಬರುತ್ತದೆ. ಒಂದು ವೇಳೆ ಇಲ್ಲ ಎಂದರೆ, ಸುಳ್ಳು ಹೇಳಿದ ಪಾಪ ಬರುತ್ತದೆ. ಏನು ಮಾಡುವುದು ಎಂದು ಸನ್ಯಾಸಿಗೆ ತಿಳಿಯಲಿಲ್ಲ. ಇಲ್ಲೇ ಹೋಗಿದ್ದು ನೋಡಿದ್ದೆ, ಬೇಗ ಹೇಳಿ ಅಂದ ಬೇಡ. ಆಗ ಸನ್ಯಾಸಿ, ಬೇಡನ ಬಳಿ, ಯಾವುದು ನೋಡ್ತು, ಅದಕ್ಕೆ ಮಾತನಾಡಲು ಬರುವುದಿಲ್ಲ, ಯಾವುದು ಮಾತನಾಡುತ್ತೋ ಅದಕ್ಕೆ ನೋಡಲು ಬರಲ್ಲ. ಅಂದ್ರೆ ಕಣ್ಣು ನೋಡಿದೆ, ಅದಕ್ಕೆ ಮಾತನಾಡಲು ಬರುವುದಿಲ್ಲ... ಬಾಯಿ ಮಾತನಾಡುತ್ತೆ ಅದಕ್ಕೇ ನೋಡಲು ಬರುವುದಿಲ್ಲ ಎಂದನಂತೆ. ಆದ್ದರಿಂದ ರಾಜಕಾರಣಿಗಳ ಬಗ್ಗೆ ಹೇಳುವಾಗ ಸಿಕ್ಕಾಪಟ್ಟೆ ಹುಷಾರಾಗಿ ಇರಬೇಕು. ಅದಕ್ಕೆ ಸರಿಯಾಗಿ ಹೇಳುವುದು ಕಷ್ಟ, ನಮ್ಮ ಮೈಮೇಲೇ ಬರುತ್ತದೆ' ಎನ್ನುತ್ತಲೇ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಬಗ್ಗೆ ಕೋಡಿಶ್ರೀ ಮಾತನಾಡಿದ್ದಾರೆ.
ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?
ರಾಷ್ಟ್ರ ರಾಜಕಾರಣದ ಬಗ್ಗೆ ಕೇಳಿದಾಗ, ಕೋಡಿಶ್ರೀ, ರಾಷ್ಟ್ರ ರಾಜಕಾರಣದ ಬಗ್ಗೆ ಹೇಳುವುದಾದರೆ ಮಹಾಭಾರತದಲ್ಲಿ ಕೃಷ್ಣ ಇದ್ದ ಎಂದು ಭೀಮ ಗೆದ್ದ. ದುರ್ಯೋಧನ ಸೋತ. ಆದರೆ ಇಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ, ಭೀಮ ಸೋಲುತ್ತಾನೆ ಎಂದಿದ್ದಾರೆ. ಇದರ ಬಗ್ಗೆ ಯಾವ ರೀತಿಯ ಅರ್ಥ ಮಾಡಿಕೊಳ್ಳಬೇಕು ಎನ್ನುವುದನ್ನು ಜನರಿಗೆ ಬಿಟ್ಟಿದ್ದಾರೆ. ಇನ್ನು, ರಾಜ್ಯ ರಾಜಕಾರಣದ ಬಗ್ಗೆ ಹೇಳಿ ಎಂದಾಗ, ಮಹಾಭಾರತದ ಉದಾಹರಣೆ ಕೊಟ್ಟಿದ್ದಾರೆ ಕೋಡಿಶ್ರೀ. ವೀರನಾಗಿರುವ ಅಭಿಮನ್ಯುವನ್ನು ಎಲ್ಲರೂ ಸೇರಿ ಮೋಸದಲ್ಲಿ ಕೊಲ್ಲುತ್ತಾರೆ. ಅಭಿಮನ್ಯುವನ್ನು ಮೋಸದಿಂದ ಸೋಲಿಸುತ್ತಾರಲ್ಲ, ಇಲ್ಲಿಯೂ ಹಾಗೆಯೇ ಆಗುತ್ತದೆ. ಸಿಎಂ ಬದಲಾವಣೆ ಸದ್ಯಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಹಾಗಿದ್ದರೆ ಅಭಿಮನ್ಯು ಯಾರು? ಯಾರಿಗೆ ಮೋಸ ಆಗುತ್ತದೆ ಎನ್ನುವ ಪ್ರಶ್ನೆ ಇಲ್ಲಿದೆ. ಸದ್ಯ ಸಿಎಂ ಬದಲಾವಣೆ ಇಲ್ಲ ಸರಿ, ಆದರೆ ಮುಂದೆ ಎಂದಾಗ ಜೋರಾಗಿ ನಕ್ಕಿರುವ ಕೋಡಿಶ್ರೀ ಅವರು, ಮೊದಲೇ ಸನ್ಯಾಸಿ ಕಥೆ ಹೇಳಿದ್ನಲ್ಲಾ, ನಿಜವನ್ನು ನಾವು ಹೇಳಿಬಿಟ್ಟರೆ ರಸ್ತೆಯ ಮೇಲೆ ಓಡಾಡಲು ಬಿಡುವುದಿಲ್ಲ. ಊರಿಗೆ ಹೋಗುವ ಹಾಗೆಯೂ ಇರುವುದಿಲ್ಲ. ಅದಕ್ಕೆ ಅದೆಲ್ಲಾ ಬೇಡ ಬಿಡಿ ಎಂದಿದ್ದಾರೆ. ಇದೇ ವೇಳೆ ಮತದಾನ ಎಂದರೆ ಆತ್ಮಸಾಕ್ಷಿಯಾಗಿ ಮತ ನೀಡುವುದು ಎಂದು. ಆದರೆ ಈಗ ಮತವನ್ನು ಖರೀದಿ ಮಾಡುವ ಪ್ರಕ್ರಿಯೆ ಇದೆ. ಇದು ಬಹಳ ಅಪಾಯಕಾರಿ ಎಂದಿರುವ ಕೋಡಿಶ್ರೀ ಅವರು, ಎಲ್ಲಿಯವರೆಗೆ ಮತವನ್ನು ಖರೀದಿ ಮಾಡುತ್ತಾರೆಯೊ ಅಲ್ಲಿಯವರೆಗೂ ಲಾಭ- ನಷ್ಟ ಇದ್ದದ್ದೇ. ಗೆದ್ದವನು ಸೋತ, ಸೋತವ ಸತ್ತ ಅಷ್ಟೇ ಎಂದಿದ್ದಾರೆ.
ಸ್ಯಾಂಡ್ವಿಚ್ ಕದ್ದು ಸಿಕ್ಕಿಬಿದ್ದ ಇಲಿಗಳ ನೆನಪಿಗೆ ಮೂರ್ತಿ ನಿರ್ಮಾಣ! ಈ ವಿಚಿತ್ರ ಸ್ಟೋರಿ ಕೇಳಿ...