ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿದ ಘಟನೆ ಘಟನೆ ಸಂಭವಿಸಿದೆ. ಲಂಡನ್‌ನ ಚಾಥಂ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಜೈಶಂಕರ್ ವಾಪಸ್ ಹೋಗುತ್ತಿದ್ದಾಗ ಅವರ ಬೆಂಗಾವಲು ಪಡೆ ವಾಹನದತ್ತ ನುಗ್ಗಿದ ಖಲಿಸ್ತಾನಿ ಪರ ಪ್ರತಿಭಟನಾಕಾರನೊಬ್ಬ ಭಾರತದ ಧ್ವಜ ಹರಿದು ಧಾರ್ಷ್ಟ್ಯ ಮೆರೆದಿದ್ದಾನೆ. ಈ ಭದ್ರತಾ ವೈಫಲ್ಯದ ಕುರಿತು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಭದ್ರತಾ ವೈಫಲ್ಯ ಕುರಿತು ಖಂಡನೆ ವ್ಯಕ್ತಪಡಿಸಿದೆ. ನಾವು ಭದ್ರತೆ ಉಲ್ಲಂಘನೆಯ ವಿಡಿಯೋ ನೋಡಿದ್ದೇವೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಣ್ಣ ಗುಂಪೊಂದರ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬ್ರಿಟನ್ ಸರ್ಕಾರ ಈ ಕುರಿತು ಕ್ರಮ ಕೈಕೊಂಡು ರಾಜತಾಂತ್ರಿಕ ಬಾಧ್ಯತೆ ಪಾಲಿಸುವ ವಿಶ್ವಾಸವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

10:31 PM (IST) Mar 07
Silli Lalli Kannada Serial Artist Real Story: ʼಸಿಲ್ಲಿ ಲಲ್ಲಿʼ ಧಾರಾವಾಹಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಸೀರಿಯಲ್ ತೆರೆಕಂಡು ಎಷ್ಟೋ ವರ್ಷಗಳು ಉರುಳಿವೆ. ಇನ್ನೂ ಈ ಧಾರಾವಾಹಿಯ ಪಾತ್ರಗಳು ಜನರಿಗೆ ನೆನಪಿವೆ. ಈ ಸೀರಿಯಲ್‌ನಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಜೋಡಿಯಿಂದ ರಿಯಲ್ ಲೈಫ್‌ನಲ್ಲಿ ಸತಿ-ಪತಿಯಾಗಿ ಜೀವನ ಮಾಡುತ್ತಿದೆ.
ಪೂರ್ತಿ ಓದಿ10:30 PM (IST) Mar 07
iQOO Neo 10R ಮಾರ್ಚ್ 11ಕ್ಕೆ ಲಾಂಚ್ ಆಗ್ತಿದೆ. Snapdragon 8s Gen 3 ಚಿಪ್‌ಸೆಟ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಇರತ್ತೆ. 144Hz AMOLED ಡಿಸ್ಪ್ಲೇ ಇರಬಹುದು, ಬೆಲೆ 30,000 ರೂ.ಗಿಂತ ಕಮ್ಮಿ ಇರಬಹುದು.
ಪೂರ್ತಿ ಓದಿ08:57 PM (IST) Mar 07
ಮುಕೇಶ್-ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ. ಮುಕೇಶ್ ಮತ್ತು ನೀತಾ ಅಂಬಾನಿ ಅವರ ವಿವಾಹವಾಗಿ 40 ವರ್ಷಗಳಾಗಿವೆ. ವಿಶೇಷ ಅಂದರೆ ಮೊದಲ ನೋಟದಲ್ಲಿ ನೀತಾಗೆ ಮುಕೇಶ್ ಅಂಬಾನಿ ಕ್ಲೀನ್ ಬೋಲ್ಡ್ ಆಗಿದ್ದರು. ಇವರ ಲವ್ ಸ್ಟೋರಿ ಇಲ್ಲಿದೆ.
ಪೂರ್ತಿ ಓದಿ08:56 PM (IST) Mar 07
ಡ್ಯಾನ್ಸರ್ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಕಿಶನ್ ಬಿಳಗಲಿ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಒಂದು ವಿಶೇಷ ವಿಡೀಯೋ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.
08:47 PM (IST) Mar 07
ಬಿಜೆಪಿ ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕಿಸಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಟೀಕೆಯನ್ನು ಅವರು ಬೌದ್ಧಿಕ ದಿವಾಳಿತನ ಎಂದು ಲೇವಡಿ ಮಾಡಿದ್ದಾರೆ.
ಪೂರ್ತಿ ಓದಿ08:13 PM (IST) Mar 07
ನಟ ವಿಜಯ್ ಚೆನ್ನೈನಲ್ಲಿ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸಿದ್ದರು. ಮುಸ್ಲಿಂ ಟೋಪಿ ಧರಿಸಿ ನಮಾಜ್‌ನಲ್ಲಿ ಭಾಗಿಯಾದ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪೂರ್ತಿ ಓದಿ07:30 PM (IST) Mar 07
ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಪ್ರೀತಿ ಬ್ರೇಕ್ ಅಪ್ ಆಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ತಮನ್ನಾ ಮೊದಲ ಬಾರಿ ಪ್ರೀತಿ ಕುರಿತು ಮಾತನಾಡಿದ್ದಾರೆ. ಮಾತುಗಳನ್ನೇ ನೋವು ಹೊರಹಾಕಿದ್ರಾ ತಮನ್ನಾ?
07:25 PM (IST) Mar 07
ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಭಾನುವಾರ ಮಾಗಡಿ ರಸ್ತೆ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ.
ಪೂರ್ತಿ ಓದಿ07:18 PM (IST) Mar 07
ಕಾಟೇರ ಬೆಡಗಿ ಹಾಗೂ ನಟಿ ಮಾಲಾಶ್ರೀಯ ಪುತ್ರಿ ಆರಾಧನಾ ರಾಮ್ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ್ದು, ಇದನ್ನು ನೋಡಿ ಅಭಿಮಾನಿಗಳು, ನೆಟ್ಟಿಗರು ಯಾಕೆ ಕನ್ನಡ ಹಾಡು ಸಿಕ್ಲಿಲ್ವಾ ಅಂತ ಕೇಳ್ತಿದ್ದಾರೆ.
ಪೂರ್ತಿ ಓದಿ07:11 PM (IST) Mar 07
ಕುಂಭಮೇಳದ ಮೌನಿ ಅಮವಾಸ್ಯೆಯ ದಿನ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟಿರುವುದಾಗಿ ಭಾವಿಸಿದ ವೃದ್ಧನೊಬ್ಬ, ತನ್ನ ತಿಥಿಯ ದಿನವೇ ವಾಪಸಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು?
06:52 PM (IST) Mar 07
ಕರ್ನಾಟಕ ಸರ್ಕಾರವು ಫಾಕ್ಸ್‌ಕಾನ್‌ಗೆ ₹6,970 ಕೋಟಿ ಪ್ರೋತ್ಸಾಹಧನವನ್ನು ಘೋಷಿಸಿದೆ. ದೇವನಹಳ್ಳಿಯಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ಈ ಪ್ರೋತ್ಸಾಹ ನೀಡಲಾಗುತ್ತಿದೆ.
ಪೂರ್ತಿ ಓದಿ06:30 PM (IST) Mar 07
ಗೌರಿಬಿದನೂರಿನಲ್ಲಿ ಆಸ್ತಿಗಾಗಿ ತಾಯಿಯ ಶವವನ್ನೇ ಬೀದಿಯಲ್ಲಿಟ್ಟು ಮಕ್ಕಳು ಜಗಳವಾಡಿದ್ದಾರೆ. ಪರಿಹಾರದ ಹಣಕ್ಕಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡದೆ ವಿವಾದ ಸೃಷ್ಟಿಸಿದ್ದಾರೆ.
ಪೂರ್ತಿ ಓದಿ06:04 PM (IST) Mar 07
ಈಗೆಲ್ಲಾ ವಯಸ್ಸಿನ ಭೇದವಿಲ್ಲದೆ ತುಂಬಾ ಜನರಿಗೆ ಒಂದಲ್ಲ ಒಂದು ಕಾಯಿಲೆ ಇದ್ದೇ ಇದೆ. ಇದಕ್ಕೆಲ್ಲಾ ಲೈಫ್ ಸ್ಟೈಲ್, ತಿಂಡಿ ಅಭ್ಯಾಸಗಳು ಒಂದು ಕಾರಣವಾದರೆ, ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವ ಉದ್ಯೋಗಗಳು ಇನ್ನೊಂದು ಕಾರಣ. ಇತ್ತೀಚೆಗೆ ನಡೆದ ಒಂದು ಸಂಶೋಧನೆಯಲ್ಲಿ ಐಟಿ ಉದ್ಯೋಗಿಗಳಲ್ಲಿ 80% ಜನರನ್ನು ಒಂದು ಕಾಯಿಲೆ ಕಾಡುತ್ತಿದೆ. ಅದು ಏನು ಅಂತ ಇಲ್ಲಿ ತಿಳಿದುಕೊಳ್ಳೋಣ.
ಪೂರ್ತಿ ಓದಿ06:00 PM (IST) Mar 07
ನೀಲಿ ಕಂಗಳ ಈ ಚೆಲುವೆಗೆ ಮೆಸೇಜ್ ಮಾಡಿ ಮನಸಿನ ಮಾತು ಹೇಳಿಕೊಳ್ಳಬಹುದು, ಒಂಟಿತನಕ್ಕೆ ಸಮಾಧಾನ ಹೇಳ್ತಾಳೆ ಈಕೆ. ಬರೀ ಮಾತು, ಮೆಸೇಜ್ ಮೂಲಕ ತಿಂಗಳಿಗೆ 27 ಲಕ್ಷ ಗಳಿಸೋ ಈಕೆ ಬಗ್ಗೆ ಇಂಟರೆಸ್ಟಿಂಗ್ ವಿಷ್ಯ...
05:40 PM (IST) Mar 07
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಪ್ರಾರಂಭಿಸಲಾದ ಉಚಿತ ಆನ್‌ಲೈನ್ ಕಲಿಕಾ ವೇದಿಕೆ ಸ್ವಯಂ. ಇದರಲ್ಲಿ 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿವಿಧ ಕೋರ್ಸ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ ಅತ್ಯುತ್ತಮ ಶಿಕ್ಷಕರಿಂದ ಈ ಕೋರ್ಸ್‌ಗಳನ್ನು ಬೋಧಿಸಲಾಗುತ್ತದೆ.
ಪೂರ್ತಿ ಓದಿ05:26 PM (IST) Mar 07
ಸಿಂಧಿಯಾ ರಾಜವಂಶದ ಮಹಾನಾರ್ಯಮನ್ ರಾಜಕೀಯವನ್ನು ಮೀರಿ ಕೃಷಿ ಮತ್ತು ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮೈಮಂಡಿ ಕೃಷಿ ಉದ್ಯಮದ ಮೂಲಕ ಯುವ ಸಬಲೀಕರಣ ಮತ್ತು ಸುಸ್ಥಿರತೆಗೆ ಒತ್ತು ನೀಡುತ್ತಿದ್ದಾರೆ.
ಪೂರ್ತಿ ಓದಿ05:24 PM (IST) Mar 07
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಗಣಿತವನ್ನು ಇಸ್ಲಾಂ ಜಗತ್ತಿಗೆ ಪರಿಚಯಿಸಿತು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಟೀಕಿಸಿದ್ದು, ಇದು ಅಸಂಬದ್ಧ ಎಂದಿದೆ. ಈ ಹಿಂದೆ ರೋಹಿತ್ ಶರ್ಮಾ ಬಗ್ಗೆ ನೀಡಿದ್ದ ಹೇಳಿಕೆಗೂ ವಿರೋಧ ವ್ಯಕ್ತವಾಗಿತ್ತು.
ಪೂರ್ತಿ ಓದಿ05:17 PM (IST) Mar 07
ಅಪ್ಪ ನಿಧನರಾಗಿ ವರ್ಷಗಳಾದರೂ ಮಗನ ಮದುವೆಗೆ ಬಂದು ಆಶೀರ್ವದಿಸಿ ಹೋಗಿದ್ದಾರೆ. ಮದುವೆಯ ಮನೆಯಲ್ಲಿ ಕಣ್ಣೀರಿನ ಧಾರೆಯೇ ಹರಿದಿದೆ. ಹೇಗಿದು ಸಾಧ್ಯವಾಯಿತು? ಇಲ್ಲಿದೆ ನೋಡಿ ಡಿಟೇಲ್ಸ್.
05:03 PM (IST) Mar 07
25 ವರ್ಷಗಳ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ದುಬೈನಲ್ಲಿ ನಡೆಯುವ ಈ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿರುವ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಪೂರ್ತಿ ಓದಿ05:00 PM (IST) Mar 07
ಬರೋಬ್ಬರಿ 30 ನಿಮಿಷ ಯುವತಿ ಒಂದೆ ಒಂದು ಬಟ್ಟೆ ಇಲ್ಲದೆ ವಿಮಾನದಲ್ಲಿ ರಂಪಾಟ ಮಾಡಿದ್ದಾಳೆ. ಸಹ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಹಲವರು ಒಳಗೊಳಗೆ ಖುಷಿ ಪಟ್ಟ ಘಟನೆ ನಡೆದಿದೆ.
ಪೂರ್ತಿ ಓದಿ04:53 PM (IST) Mar 07
ಮೈಸೂರು ಮುಡಾ ನಿವೇಶನ ಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ನೀಡಿದ್ದ ಇಡಿ ಸಮನ್ಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ತನಿಖೆ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಪೂರ್ತಿ ಓದಿ04:52 PM (IST) Mar 07
2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಅವಕಾಶದ ಬಗ್ಗೆ ಎಬಿ ಡಿವಿಲಿಯರ್ಸ್ ಮಾತನಾಡಿದ್ದಾರೆ. ಕೊಹ್ಲಿ ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ, ಆದರೆ ಟ್ರೋಫಿ ಗೆಲ್ಲುವುದು ಕೊಹ್ಲಿಗೆ ಫಿನಿಶಿಂಗ್ ಟಚ್ ಆಗಲಿದೆ ಎಂದು ಹೇಳಿದ್ದಾರೆ.
ಪೂರ್ತಿ ಓದಿ04:51 PM (IST) Mar 07
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕಿಸ್ತಾನಕ್ಕೆ ಭೇಟಿ ನೀಡಿ ಲಾಹೋರ್‌ನಲ್ಲಿರುವ ಲವ ಸಮಾಧಿಗೆ ಭೇಟಿ ನೀಡಿದ್ದಾರೆ. ಲವನಿಂದಲೇ ಲಾಹೋರ್ ಹೆಸರು ಬಂದಿದೆ ಎಂದು ಹೇಳಲಾಗಿದ್ದು, ಪಾಕ್ ಸರ್ಕಾರವೂ ಇದನ್ನು ಒಪ್ಪಿಕೊಂಡಿದೆ ಎಂದು ಶುಕ್ಲಾ ಹೇಳಿದ್ದಾರೆ.
ಪೂರ್ತಿ ಓದಿ04:29 PM (IST) Mar 07
ಮೀನ ರಾಶಿಯಲ್ಲಿ ಬುಧ, ಶುಕ್ರ, ಸೂರ್ಯ, ರಾಹು ಮತ್ತು ಚಂದ್ರ ಎಂಬ ಐದು ಗ್ರಹಗಳ ಪಂಚಗ್ರಹಿ ಯೋಗವು ಸೃಷ್ಟಿಯಾಗುತ್ತದೆ.
04:13 PM (IST) Mar 07
ಚಂದನವನದ ನಟಿ ಶುಭ ಪೂಂಜಾ ಅವರ ತಾಯಿ ಮಾರ್ಚ್ 6 ರಂದು ನಿಧನರಾಗಿದ್ದು, ಈ ಕುರಿತು ನಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
04:01 PM (IST) Mar 07
ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು ಐಜ್ವಾಲ್‌ನಲ್ಲಿ ಮ್ಯಾನ್ಮಾರ್ ಮೂಲದ ಬಂಡಾಯ ಗುಂಪುಗಳ ನಾಯಕರ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಈ ಸಭೆ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ. ಈ ಸಭೆಯು ಚಿನ್ ರಾಷ್ಟ್ರೀಯ ಮಂಡಳಿ (CNC) ರಚನೆಗೆ ಕಾರಣವಾಯಿತು.
ಪೂರ್ತಿ ಓದಿ03:39 PM (IST) Mar 07
ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ. ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಚಿತ್ರಗಳಿಗೆ..
ಪೂರ್ತಿ ಓದಿ03:17 PM (IST) Mar 07
ವಾರದಲ್ಲಿ 90 ಗಂಟೆ ಕೆಲಸ ಅನಿವಾರ್ಯ ಎಂದ ಭಾರಿ ವಿವಾದ ಸೃಷ್ಟಿಸಿದ L&T ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯನ್ ಇದೀಗ ಮಹಿಳಾ ದಿನಾಚರಣೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಪೂರ್ತಿ ಓದಿ03:12 PM (IST) Mar 07
ಭಾರತದಲ್ಲಿ ಕೆಲವು ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಯುಪಿಎಸ್‌ಸಿ ಕಾರ್ಖಾನೆಗಳೆಂದು ಕರೆಯಲಾಗುತ್ತದೆ ಎಂದು ನಿಮಗೆ ತಿಳಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಇಲ್ಲಿಂದಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ಈ ಕಾಲೇಜುಗಳು ಯಾವುವು ಎಂದು ತಿಳಿಯಿರಿ.
ಪೂರ್ತಿ ಓದಿ03:09 PM (IST) Mar 07
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಇದಕ್ಕೆ ಅಲಟ್ರಾವೈಲೆಟ್ ಉತ್ತಮ ನಿದರ್ಶನ. ಅದ್ರ ಶಾಕ್ ವೇವ್ ಮೋಟರ್ ಸೈಕಲ್ ಶಾಕ್ ನೀಡಿದೆ.
02:57 PM (IST) Mar 07
ಭಾರತದಲ್ಲಿ ಅತಿ ಹೆಚ್ಚು ದೂರ ಸಂಚರಿಸುವ ರೈಲಿನ ಬಗ್ಗೆ ಕೇಳಿದ್ದೀರಾ? ಈ ರೈಲು 9 ರಾಜ್ಯಗಳ ಮೂಲಕ ಒಟ್ಟು 4,189 ಕಿ.ಮೀ ಪ್ರಯಾಣಿಸುತ್ತದೆ. ಈ ರೈಲಿನ ಹೆಸರು, ಯಾವ ರಾಜ್ಯಗಳಲ್ಲಿ ಸೇವೆ ನೀಡುತ್ತದೆ? ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂಬಂತಹ ಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪೂರ್ತಿ ಓದಿ02:51 PM (IST) Mar 07
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ದುಬೈನಲ್ಲೇ ಎಲ್ಲಾ ಪಂದ್ಯಗಳನ್ನು ಆಡಿದ್ದು, ತಂಡಕ್ಕೆ ವರದಾನವಾಗಿದೆ. ಆದರೆ ನ್ಯೂಜಿಲೆಂಡ್ ತಂಡ ಟೂರ್ನಿಯುದ್ದಕ್ಕೂ ಸುಮಾರು 7,048 ಕಿ.ಮೀ ಪ್ರಯಾಣಿಸಿ ಸಂಕಷ್ಟ ಅನುಭವಿಸಿದೆ.
ಪೂರ್ತಿ ಓದಿ02:45 PM (IST) Mar 07
ವೈವಿಧ್ಯಮಯವಾಗಿ ಸುದ್ದಿ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಜನವರಿ 2025ರ ಕಾಮ್‌ಸ್ಕೋರ್ ವರದಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಪೂರ್ತಿ ಓದಿ02:40 PM (IST) Mar 07
ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಮನಮೋಹನ್ ಸಿಂಗ್ ವಿವಿ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಮ್ಮಡಿ ಪುಲಿಕೇಶಿ ಹೆಸರಿಡುವಂತೆ ಒತ್ತಾಯ ಕೇಳಿಬಂದಿದೆ.
ಪೂರ್ತಿ ಓದಿ02:28 PM (IST) Mar 07
ಅವರು ಹುಟ್ಟಿದ ಊರು ಅವರು ಸ್ಟಾರ್ ನಟರಾದ ಬಳಿಕ ಇನ್ನಷ್ಟು ಫೇಮಸ್ ಆಯ್ತು.. ಹಾಗಿದ್ದರೆ ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು ಅನ್ನೋದಕ್ಕೆ ಇಲ್ಲಿ ನೋಡಿ.. ಡಾ ರಾಜ್‌ಕುಮಾರ್-ಗಾಜನೂರು, ನರಸಿಂಹರಾಜು-ತುಮಕೂರು..
ಪೂರ್ತಿ ಓದಿ02:19 PM (IST) Mar 07
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಪುರುಷರು ಮದುವೆಯಾಗಲು ಉತ್ತಮರು ಎಂದು ಪರಿಗಣಿಸಲಾಗುತ್ತದೆ.
02:01 PM (IST) Mar 07
ನ್ಯೂಸ್ ರೀಡರ್ ಸುದ್ದಿ ಓದುವಾಗಲೇ ಆಕೆ ಕುಳಿದ ಕುರ್ಚಿ ಬಿದ್ದೋಯಿತು. ಆ ಸಮಯದಲ್ಲಿ ಆಕೆ ಮಾಡಿದ್ದೇನು? ವಿಡಿಯೋ ವಿಡಿಯೋಗೆ ಶ್ಲಾಘನೆಗಳ ಮಹಾಪೂರ
01:41 PM (IST) Mar 07
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಒಲಿಂಪಿಕ್ಸ್‌ಗೆ ತಯಾರಿ, ಕ್ರೀಡಾಂಗಣಗಳ ಅಭಿವೃದ್ಧಿ, ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
ಪೂರ್ತಿ ಓದಿ01:41 PM (IST) Mar 07
ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಗಾಯಗೊಂಡಿದ್ದ ಯುವಕನನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೂತ್ರದ ಬ್ಯಾಗ್ ಹಿಡಿದು ಆತ ಆಸ್ಪತ್ರೆಯಿಂದ ಹೊರಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಪೂರ್ತಿ ಓದಿ01:21 PM (IST) Mar 07
ಬಾಲಿವುಡ್‌ನ ಈ ಸಿನಿಮಾ ಕೇವಲ 6 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಬರೋಬ್ಬರಿ 47 ಕಿಸ್ಸಿಂಗ್ ಸೀನ್‌ಗಳಿವೆ. ಈ ಸೂಪರ್ ಡೂಪರ್ ಚಿತ್ರ ಗಳಿಸಿದ್ದು ಅದೆಷ್ಟು ಕೋಟಿ ರೂಪಾಯಿ ಗೊತ್ತಾ?
ಪೂರ್ತಿ ಓದಿ