ದುಬೈ: ತನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಿಂದ ಆಕ್ರೋಶಗೊಂಡಿರುವ ಇರಾನ್, ಶತ್ರು ದೇಶಗಳ ಮೇಲೆ ಭಾನುವಾರ ಪ್ರತೀಕಾರದ ದಾಳಿ ಆರಂಭಿಸಿದೆ. ಶನಿವಾರ ದಾಳಿ ನಡೆಸಿದ್ದ ಬಹುತೇಕ ಎಲ್ಲಾ ಕೊಲ್ಲಿ ದೇಶಗಳ ಮೇಲೆ ಭಾನುವಾರ ಕೂಡಾ ಕ್ಷಿಪಣಿ ಮತ್ತು ಡ್ರೋನ್ ಬಳಸಿ ದಾಳಿ ನಡೆಸಿದೆ. ಇದರಿಂದ ದುಬೈ ಸೇರಿದಂತೆ ಯುಎಇ, ಕುವೈತ್, ಬಹ್ರೈನ್, ಜೋರ್ಡನ್, ಸೌದಿ ಅರೇಬಿಯಾ ತತ್ತರಿಸಿವೆ.
11:17 PM (IST) Mar 02
ವಿಶ್ವದ ಶೇ. 20-30ರಷ್ಟು ತೈಲ ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸುಳಿವನ್ನು ಇರಾನ್ ನೀಡಿದೆ. ಈ ಕಿರಿದಾದ ಸಮುದ್ರ ಮಾರ್ಗ ಬಂದ್ ಆದರೆ, ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿ ಜಾಗತಿಕ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.
10:54 PM (IST) Mar 02
After Iran, Is Cuba Donald Trump's Next Target? US Senator Reveals ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಟ್ರಂಪ್ ಆಡಳಿತವು ಈಗ ಕ್ಯೂಬಾವನ್ನು ಗುರಿಯಾಗಿಸಿಕೊಂಡಿದೆ ಎಂದು ಅಮೆರಿಕದ ಸಂಸದ ಲಿಂಡ್ಸೆ ಗ್ರಹಾಂ ಬಹಿರಂಗಪಡಿಸಿದ್ದಾರೆ.
10:35 PM (IST) Mar 02
ಮಧ್ಯಪ್ರಾಚ್ಯದಲ್ಲಿ ಇರಾನ್ ತನ್ನ ಅಪಾಯಕಾರಿ 'ಷಾಹೆದ್-136' ಡ್ರೋನ್‌ಗಳನ್ನು ಬಳಸಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಈ ಡ್ರೋನ್‌ಗಳು ಭಾರಿ ಹಾನಿ ಉಂಟುಮಾಡುತ್ತಿದೆ.
10:04 PM (IST) Mar 02
09:24 PM (IST) Mar 02
ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಭಾರತ ಸರ್ಕಾರವು ಸಂತಾಪ ಸೂಚಿಸದೆ ರಾಜತಾಂತ್ರಿಕ ಮೌನವನ್ನು ಕಾಯ್ದುಕೊಂಡಿದೆ. ಭಾರತದ ಈ ವರ್ತನೆ ಹಿಂದೆ ಹಲವು ಕಾರಣಗಳಿದ್ದು, ಅದೇನು ಎಂಬ ಮಾಹಿತಿ ಇಲ್ಲಿದೆ.
08:06 PM (IST) Mar 02
ನಟ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನಟಿ ತ್ರಿಶಾ ಜೊತೆಗಿನ ಸಂಬಂಧವನ್ನು ಆರೋಪಿಸಿದ್ದಾರೆ. ಈ ಬೆಳವಣಿಗೆಯು ತ್ರಿಶಾ ಮತ್ತು ಮಾಜಿ ಸಿಎಂ ಜಯಲಲಿತಾ ನಡುವಿನ ಸಾಮ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
07:58 PM (IST) Mar 02
ಪ್ರೀತಿಗೆ ವಯಸ್ಸಿನ ಹಂಗಿಲ್ಲವಾದರೂ, ದಂಪತಿಗಳ ನಡುವಿನ ದೊಡ್ಡ ವಯಸ್ಸಿನ ಅಂತರವು ಸಂಬಂಧದಲ್ಲಿ ಹಲವು ಸವಾಲುಗಳನ್ನು ತರಬಹುದು. ಸಂಶೋಧನೆಗಳ ಪ್ರಕಾರ ಆದರ್ಶ ವಯಸ್ಸಿನ ಅಂತರ ಯಾವುದು ಮತ್ತು ವಯಸ್ಸಿನ ವ್ಯತ್ಯಾಸವಿದ್ದರೂ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
07:24 PM (IST) Mar 02
07:04 PM (IST) Mar 02
06:30 PM (IST) Mar 02
ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲು ವಿಫಲವಾದ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಪಿಸಿಬಿ 5 ಮಿಲಿಯನ್ ಪಿಕೆಆರ್ ದಂಡ ವಿಧಿಸಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಜಾವೇದ್ ಮಿಯಂದಾದ್, ಮೊಹಮ್ಮದ್ ಯೂಸುಫ್ ಅವರಂತಹ ದಿಗ್ಗಜರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
06:27 PM (IST) Mar 02
04:50 PM (IST) Mar 02
04:30 PM (IST) Mar 02
ನಟ ವಿಜಯ್ ಪತ್ನಿ ಸಂಗೀತಾ, ವಿವಾಹೇತರ ಸಂಬಂಧ ಆರೋಪದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ, ವಿಜಯ್ ಅವರ 600 ಕೋಟಿ ರೂ. ಆಸ್ತಿಯಲ್ಲಿ ಸಂಗೀತಾ ಅವರಿಗೆ 50% ಪಾಲು ಸಿಗುವುದೇ ಮತ್ತು ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ.
04:02 PM (IST) Mar 02
ತನ್ನ ನಾಯಕನ ಹತ್ಯೆಯ ನಂತರ ಇರಾನ್, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಘಟಕ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ ಇದರಿಂದ ಜಾಗತಿಕವಾಗಿ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದೆ.
04:00 PM (IST) Mar 02
ಇರಾನ್‌ನ ನಟಾನ್ಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿರುವುದಾಗಿ ಇರಾನ್ ಆರೋಪಿಸಿದೆ. ಆದರೆ, ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ಇದನ್ನು ನಿರಾಕರಿಸಿದೆ. ಇದೇ ವೇಳೆ, ಇಬ್ಬರು ಹಿರಿಯ ಇರಾನಿನ ಗುಪ್ತಚರ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಖಚಿತಪಡಿಸಿದೆ.
03:51 PM (IST) Mar 02
ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ ತಮ್ಮ ವೈಯುಕ್ತಿಕ ಜೀವನಕ್ಕಿಂತ ಮಿಗಿಲಾಗಿ ವೃತ್ತಿಜೀವನ ಮುಖ್ಯ ಎನ್ನುವ ಸಂದೇಶ ಸಾರಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
03:44 PM (IST) Mar 02
ಇರಾನಿನ ಸರ್ವಾಧಿಕಾರಿ ಅಲಿ ಖಮೇನಿ ಅವರ ಸಾವಿಗೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶೋಕವನ್ನು ಆಚರಿಸಿದರೆ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಇರಾನಿಗರು ಬೀದಿಗಳಲ್ಲಿ ನೃತ್ಯ ಮಾಡಿ, ಟ್ರಂಪ್‌ಗೆ ಧನ್ಯವಾದ ಸಲ್ಲಿಸುವ ಮೂಲಕ ಸಂಭ್ರಮಿಸಿದ್ದಾರೆ.
02:54 PM (IST) Mar 02
ನಟ ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಮ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಅವರ ಪುತ್ರ ಜೇಸನ್ ಸಂಜಯ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ವಿವಾಹೇತರ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.
02:41 PM (IST) Mar 02
ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ಆಟವನ್ನು ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ. ಸಂಜು ಅವರ ಪ್ರದರ್ಶನವನ್ನು 'ವಿಶ್ವದರ್ಜೆಯದ್ದು' ಎಂದು ಬಣ್ಣಿಸಿದ್ದಾರೆ.
02:39 PM (IST) Mar 02
ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಚೀನಾ ಒತ್ತಾಯಿಸಿದೆ. ಟೆಹ್ರಾನ್ ಸ್ಫೋಟದಲ್ಲಿ ತನ್ನ ಪ್ರಜೆಯೊಬ್ಬರು ಸಾವನ್ನಪ್ಪಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ಯುದ್ಧವು ಬೇರೆ ದೇಶಗಳಿಗೆ ಹರಡದಂತೆ ತಡೆಯುವುದೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.
02:16 PM (IST) Mar 02
ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪಿದ ನಂತರ, ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಆಮಿರ್, ಶಿಮ್ರಾನ್ ಹೆಟ್ಮೇಯರ್ ಅವರ ವಿಕೆಟ್ ಅನುಮಾನಾಸ್ಪದವಾಗಿದೆ ಎಂದು ವಿವಾದ ಸೃಷ್ಟಿಸಿದ್ದಾರೆ. ಹೆಟ್ಮೇಯರ್ ಔಟಾಗದಿದ್ದರೆ ಭಾರತ ವಿಶ್ವಕಪ್‌ನಿಂದ ಹೊರಬೀಳುತ್ತಿತ್ತು ಎಂದು ಅವರು ವಾದಿಸಿದ್ದಾರೆ.
01:36 PM (IST) Mar 02
ಇಸ್ರೇಲ್-ಯುಎಸ್ ದಾಳಿಗೆ ಪ್ರತೀಕಾರವಾಗಿ ಇರಾನ್, ಯುಎಇಯ ಅಬುಧಾಬಿಯಲ್ಲಿರುವ ಫ್ರೆಂಚ್ ನೌಕಾನೆಲೆ ಮತ್ತು ಅಮೆಜಾನ್ ಡೇಟಾ ಸೆಂಟರ್ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಸರಣಿ ದಾಳಿಗಳ ಹಿನ್ನೆಲೆಯಲ್ಲಿ, ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳು ತುರ್ತು ಸಭೆ ನಡೆಸಿ, ಇರಾನ್‌ನ ಆಕ್ರಮಣವನ್ನು ಖಂಡಿಸಿವೆ.
12:48 PM (IST) Mar 02
ಟಿ20 ವಿಶ್ವಕಪ್‌ನಲ್ಲಿ ಆರಂಭದಲ್ಲಿ ಕಡೆಗಣಿಸಲ್ಪಟ್ಟು, ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ವ್ಯಂಗ್ಯಕ್ಕೊಳಗಾಗಿದ್ದ ಸಂಜು ಸ್ಯಾಮ್ಸನ್, ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
11:59 AM (IST) Mar 02
11:59 AM (IST) Mar 02
52ನೇ ವಯಸ್ಸಿನಲ್ಲೂ ಫಿಟ್ ಆಗಿರುವ ನಟಿ ಮಲೈಕಾ ಅರೋರಾ ತಮ್ಮ ಸೌಂದರ್ಯದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರು ಪ್ರತಿದಿನ ಬೆಳಿಗ್ಗೆ ಸೇವಿಸುವ ಈ ಸರಳ ಪಾನೀಯವೇ ಅವರ ಫಿಟ್ನೆಸ್ಗೆ ಪ್ರಮುಖ ಕಾರಣವೆಂದು ಅವರು ಬಹಿರಂಗಪಡಿಸಿದ್ದಾರೆ.
11:45 AM (IST) Mar 02
Communal violence risk in India: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ, ಭಾರತದಲ್ಲಿ ಕೋಮುಗಲಭೆಗಳು ಸಂಭವಿಸುವ ಸಾಧ್ಯತೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ಹೈ ಅಲರ್ಟ್ ಘೋಷಿಸಿದೆ.
11:41 AM (IST) Mar 02
11:15 AM (IST) Mar 02
ಇರಾನ್‌ನ ನಾಯಕ ಅಯತೊಲ್ಲಾ ಖಮೇನಿ ಅವರ ಪೂರ್ವಜರು ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಕಿಂತೂರ್ ಗ್ರಾಮದವರು. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಭಾರತದಲ್ಲಿ ಜನಿಸಿ ನಂತರ ಇರಾನ್‌ಗೆ ತೆರಳಿದರು. ಖಮೇನಿ ಹತ್ಯೆಯ ನಂತರ ಭಾರತದಲ್ಲಿ ನಡೆದ ಪ್ರತಿಭಟನೆಗಳು ಈ ಭಾರತೀಯ ಸಂಪರ್ಕವನ್ನು ಮತ್ತೆ ಮುನ್ನೆಲೆಗೆ ತಂದಿವೆ.
10:45 AM (IST) Mar 02
ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್, ಆತಂಕದ ವಾತಾವರಣದ ನಡುವೆಯೂ ಧೈರ್ಯ ಕಳೆದುಕೊಂಡಿಲ್ಲ. ಅವರು ಅಲ್ಲಿರುವ ಇತರ ಕನ್ನಡಿಗರಿಗೆ ಧೈರ್ಯ ತುಂಬುತ್ತಾ, ಎಲ್ಲರೂ ಸುರಕ್ಷಿತವಾಗಿದ್ದಾರೆಂದು ವಿಡಿಯೋ ಮೂಲಕ ಭರವಸೆ ನೀಡುತ್ತಿದ್ದಾರೆ.
10:30 AM (IST) Mar 02
10:28 AM (IST) Mar 02
10:01 AM (IST) Mar 02
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯು ಜಾಗತಿಕ ಕ್ರೀಡಾಲೋಕದ ಮೇಲೆ ಗಂಭೀರ ಪರಿಣಾಮ ಬೀರಿದೆ. ಫುಟ್ಬಾಲ್, ಕ್ರಿಕೆಟ್, ಐಪಿಎಲ್ ಸೇರಿದಂತೆ ಹಲವು ಕ್ರೀಡಾಕೂಟಗಳು ರದ್ದಾಗಿವೆ. ಪಿ.ವಿ. ಸಿಂಧು ಅವರಂತಹ ಕ್ರೀಡಾಪಟುಗಳು ವೈಯಕ್ತಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಅನುಭವವನ್ನು ಹಂಚಿಕೊಂಡಿದ್ದಾರೆ.
08:53 AM (IST) Mar 02
ಇರಾನ್-ಇಸ್ರೇಲ್ ಯುದ್ಧದ ಕಾರಣ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ 24/7 ತುರ್ತು ಕಾರ್ಯಾಚರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ.
08:08 AM (IST) Mar 02
ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಕನ್ನಡಿಗರು ವಿದೇಶದಲ್ಲಿ ಸಿಲುಕಿದ್ದಾರೆ. ಶಾಸಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಸೇರಿದಂತೆ ಹಲವರು ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದು, ತಮ್ಮನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರಕ್ಕೆ ಮನವಿ.
07:08 AM (IST) Mar 02
ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ, ವೆಸ್ಟ್‌ಇಂಡೀಸ್ ವಿರುದ್ಧ ಭಾರತ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ ಅವರ ಅಜೇಯ 97 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ತಂಡ ಗೆಲುವಿನ ದಡ ಸೇರಿತು.