ನವದೆಹಲಿ: ಟೆಲಿಗ್ರಾಮ್‌ನಲ್ಲಿ ಸಿನಿಮಾ, ಒಟಿಟಿ, ಇತರ ವಿಡಿಯೋಗಳು ಸೇರಿದಂತೆ ಕಾಪಿರೈಟ್ ಹೊಂದಿರುವ ಕಂಟೆಂಟ್‌ಗಳನ್ನು ಅಕ್ರಮವಾಗಿ ಹಂಚುತ್ತಿರುವ ಘಟನೆಗಳು ವ್ಯಾಪಕವಾದ ಬೆನ್ನಲ್ಲೇ ಅದರ ತಡೆಗೆ ಅಗತ್ಯ ಕೈಗೊಳ್ಳುವಂತೆ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಜತೆಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದೆ. ‘ಪ್ರತಿ ಪೈರಸಿ ಚಾನೆಲ್ ಅನ್ನು ಗುರುತಿಸುವ ತನಕ ಸರ್ಕಾರ ಕಾಯಲು ಸಾಧ್ಯವಿಲ್ಲ.
ಪ್ರತಿ ಪೈರಸಿ ಚಾನೆಲ್ ಅನ್ನು ಒಂದೊಂದಾಗಿ ಗುರುತಿಸಿ ತೆಗೆಯುವ ಬದಲು ಇಂತಹ ಅಕ್ರಮಗಳೇ ನಡೆಯದಂತೆ ಆ್ಯಪ್ ಗಮನ ಹರಿಸಬೇಕು, ಈ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿದೆ. ಕಳೆದ ತಿಂಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಜು.21ರಂದು ಮರು ಪರೀಕ್ಷೆ ನಡೆಯುವ ತನಕ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು.
09:41 PM (IST) Jul 05
08:56 PM (IST) Jul 05
Jharkhand strange news ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಎರಡು ಜೀವಂತ ಹಾವುಗಳನ್ನು ಹಸಿಯಾಗಿ ತಿಂದಿದ್ದಾನೆ. ನಂತರ ಮೂರನೇ ಹಾವಿನ ಮೃತದೇಹದೊಂದಿಗೆ ಆಸ್ಪತ್ರೆಗೆ ಬಂದಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಅವನ ಪತ್ನಿ ಬಿಚ್ಚಿಟ್ಟ ಸತ್ಯವೇ ರೋಚಕ.
08:40 PM (IST) Jul 05
Electron Emission: ನಾವು ಬಳಸುವ ಸಾಮಾನ್ಯ ಟ್ಯೂಬ್‌ಲೈಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದರೆ, ಅವುಗಳ ತುದಿಗಳು ಯಾಕೆ ಕಪ್ಪಾಗುತ್ತವೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
08:18 PM (IST) Jul 05
ನಾನು ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿದ್ದರೂ, ಆಕಸ್ಮಿಕವಾಗಿ ನಟನೆಗೆ ಬಂದಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶವೇ ಸಿಕ್ಕಿಲ್ಲ ಎಂದು ನಟಿ ಐಶ್ವರ್ಯ ಲಕ್ಷ್ಮಿ ಹೇಳಿಕೊಂಡಿದ್ದಾರೆ.
07:36 PM (IST) Jul 05
ಅಮೆರಿಕ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಸುಪ್ರೀಂ ಲೀಡರ್ ಅಲ್ ಖಮೇನಿ ಅಂತ್ಯಕ್ರಿಯೆ ನಾಲ್ಕು ತಿಂಗಳ ಬಳಿಕ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ನಾಲ್ವರು ಪುತ್ರರ ಪೈಕಿ ಉತ್ತರಾಧಿಕಾರಿ ಮೊಜ್ತಾಬ ಖಮೇನಿ ಗೈರು ಹಲವು ಅನುಮಾನಕ್ಕೆ ಕಾರಣವಾಗಿದೆ.
06:46 PM (IST) Jul 05
ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ಗಳಿಸಿ ಧೂಳೆಬ್ಬಿಸಿದ ರಾಮ್ ಚರಣ್-ಶಿವಣ್ಣ ನಟನೆಯ 'ಪೆದ್ದಿ' ಸಿನಿಮಾ ಈಗ ಒಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರದ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಿದೆ.
06:27 PM (IST) Jul 05
05:55 PM (IST) Jul 05
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿದ್ದು, ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೊಸ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
05:34 PM (IST) Jul 05
ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾ ಜುಲೈ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಹೊಸ ವಿವಾದ ಹುಟ್ಟುಹಾಕಿವೆ.
05:15 PM (IST) Jul 05
Mandodari Kajal Aggarwal: ‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ಯಾನ್ ಇಂಡಿಯಾ ನಟಿ ಕಾಜಲ್ ಅಗರ್ವಾಲ್ ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
04:56 PM (IST) Jul 05
'ಖತರೋಂ ಕೆ ಖಿಲಾಡಿ' ಶೋನಲ್ಲಿ ಕಾಣಿಸಿಕೊಳ್ಳಲಿರುವ ನಟಿ ಫರ್ಹಾನಾ ಭಟ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ನಡೆದ ಒಂದು ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬನಿಂದ ತಾನು ಹೇಗೆ ಪಾರಾಗಿ ಬಂದೆ ಎಂದು ಅವರು ವಿವರಿಸಿದ್ದಾರೆ.
04:39 PM (IST) Jul 05
'ಟಾಕ್ಸಿಕ್' ನಟಿ ಹುಮಾ ಖುರೇಷಿಗೆ 40 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ. ಹಲವು ನಟರ ಜೊತೆ ಅವರ ಹೆಸರು ಕೇಳಿಬಂದರೂ, ಮದುವೆ ಮಾತು ಮಾತ್ರ ಮುನ್ನೆಲೆಗೆ ಬಂದಿರಲಿಲ್ಲ. ಹಾಗಾದ್ರೆ ನಟಿಯ ಮುಂದಿನ ಪ್ಲ್ಯಾನ್ ಏನು? ಇಲ್ಲಿದೆ ವಿವರ.
04:21 PM (IST) Jul 05
ಹಿಂದೆ ಮದುವೆಯೇ ಬೇಡ ಎಂದಿದ್ದ ಸೌತ್ ನಟಿ ಐಶ್ವರ್ಯ ಲಕ್ಷ್ಮಿ, ಇದೀಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ತನಗೀಗ ತಾಯಿಯಾಗುವ ಆಸೆ ಇದೆ, ಅದಕ್ಕಾಗಿ ಒಳ್ಳೆಯ ತಂದೆಯಾಗಬಲ್ಲ ಸಂಗಾತಿ ಬೇಕು ಎಂದು ಹೇಳಿದ್ದಾರೆ.
04:10 PM (IST) Jul 05
03:20 PM (IST) Jul 05
02:34 PM (IST) Jul 05
Instagram Paid advertisements ಗಳು ಇತ್ತೀಚೆಗೆ ಮಕ್ಕಳ ಲೈಂ ಗಿಕ ಶೋಷಣೆ ದೌರ್ಜನ್ಯದ (CSEAM) ವಿಷಯವನ್ನೇ ಪ್ರಚಾರ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(META)ಗೆ ನೋಟಿಸ್ ನೀಡಿದೆ. ಇಂತಹ ಕಂಟೆಂಟ್ ಅನ್ನು ತೆಗೆದುಹಾಕಲು MeitY ಆದೇಶಿಸಿದೆ.
02:23 PM (IST) Jul 05
ಬೆಂಗಳೂರಿನ ಟೆಕ್ ಉದ್ಯಮಿ ಪ್ರಿಯಮ್ ರಾಜ್, ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯ ಅವರ ಹಳೆಯ ಕಿಂಗ್‌ಫಿಶರ್ ವಿಲ್ಲಾವನ್ನು ಬಾಡಿಗೆಗೆ ನೀಡಬಹುದೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದಾರೆ. ಈ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು, 1.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ.
02:04 PM (IST) Jul 05
01:56 PM (IST) Jul 05
ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್, ಕೇವಲ 200 ರೂಪಾಯಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಂಬರ್ ಒನ್ ಆಗಿರುವ ರಿಲಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.
01:44 PM (IST) Jul 05
01:10 PM (IST) Jul 05
ಮನೆಯಲ್ಲಿ ನಡೆಯುವ ಈ ಸರಳ ವಿವಾಹದಲ್ಲಿ ಆಮೀರ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ, ಬಾಲಿವುಡ್‌ನ ಈ ಪ್ರೇಮಕಥೆ ಈಗ ಮದುವೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳು ದಂಪತಿಯ ಮೊದಲ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
12:18 PM (IST) Jul 05
ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ
12:15 PM (IST) Jul 05
Jammu Kashmir textbook controversy ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಆರೋಪದ ಮೇಲೆ 8 ಹೊರಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.
11:32 AM (IST) Jul 05
11:14 AM (IST) Jul 05
10:57 AM (IST) Jul 05
09:50 AM (IST) Jul 05
ಭಾರತದ ಗ್ರಾಹಕ ನ್ಯಾಯ ವ್ಯವಸ್ಥೆಯು ಎದುರಿಸುತ್ತಿದ್ದ ವಿಳಂಬ ಮತ್ತು ಸಂಕೀರ್ಣತೆಗಳಿಗೆ 'ಇ-ಜಾಗೃತಿ' ಪೋರ್ಟಲ್ ಡಿಜಿಟಲ್ ಪರಿಹಾರ ಒದಗಿಸಿದೆ. ದೂರು ದಾಖಲಾತಿಯಿಂದ ಹಿಡಿದು ಪರಿಹಾರದವರೆಗೆ ಸಂಪೂರ್ಣ ಪ್ರಕ್ರಿಯೆ ಸರಳಗೊಳಿಸಿ, ನ್ಯಾಯವನ್ನು ಎಲ್ಲರಿಗೂ ವೇಗವಾಗಿ ಪರಿಹಾರ ತಲುಪುವಂತೆ ಮಾಡಿದೆ.
09:30 AM (IST) Jul 05
09:21 AM (IST) Jul 05
ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .
09:08 AM (IST) Jul 05
ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.
08:55 AM (IST) Jul 05