Published : Jul 04, 2025, 01:19 PM ISTUpdated : Jul 04, 2025, 11:42 PM IST

India latest news live 4th June 2025: ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ

ಸಾರಾಂಶ

ನವದೆಹಲಿ: ಭಾರತದ ವಿರುದ್ಧ ಈ ಹಿಂದೆ ಗಡಿಯಲ್ಲಿ ಕಿರಿಕಿರಿ ಮಾಡಿದ್ದ ಚೀನಾ ಈಗ ವ್ಯಾಪಾರ ಸಮರ ಆರಂಭಿಸಿದೆ. ಆ್ಯಪಲ್ ಸಂಸ್ಥೆಯ ಐಫೋನ್‌ಗಳ ಅತಿದೊಡ್ಡ ಉತ್ಪಾದಕ ಕಂಪನಿಯಾದ ತೈವಾನ್ ಮೂಲದ ಫಾಕ್ಸ್ ಚೀನಾದ ಒತ್ತಡಕ್ಕೆ ಮಣಿದು ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ಭಾರತದಲ್ಲಿರುವ ತನ್ನ ಘಟಕಗಳಿಂದ ಸುಮಾರು 300ಕ್ಕೂ ಹೆಚ್ಚು ಚೀನಾ ಮೂಲದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ವಾಪಸ್ ಕರೆಸಿಕೊಂಡಿದೆ. ಇದಲ್ಲದೆ, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಆಯಸ್ಕಾಂತಗಳ (ರೇರ್ ಅರ್ತ್ ಮ್ಯಾಗ್ನೆಟ್) ರಪ್ತಿಗೂ ಚೀನಾ ನಿರ್ಬಂಧ ಹೇರಿದೆ.

 jaipur airport an air india flight

11:42 PM (IST) Jul 04

ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ

ಭೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕುಸಿದು ಬಿದ್ದ ಪೈಲೆಟನ್ನು ಆಸ್ಪತ್ರೆ ದಾಖಲಿಸಲಾಗಿದೆ.

Read Full Story

11:06 PM (IST) Jul 04

ಕೇದಾರನಾಥದಲ್ಲಿ ಭಾರೀ ಅನಾಹುತ; ಗೌರಿಕುಂಡ ಬಳಿ ಭೂಕುಸಿತ, ಸಿಲುಕಿದ ಸಾವಿರಾರು ಯಾತ್ರಿಗಳು!

ಉತ್ತರಾಖಂಡದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತಗೊಂಡಿದೆ. ಸಾವಿರಾರು ಯಾತ್ರಿಕರು ಮಾರ್ಗದಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಚಾಲನೆಯಲ್ಲಿದೆ. ಹವಾಮಾನ ಸುಧಾರಿಸಿದ ನಂತರ ಯಾತ್ರೆಯನ್ನು ಪುನರಾರಂಭಿಸುವ ಸಾಧ್ಯತೆ ಇದೆ.
Read Full Story

11:06 PM (IST) Jul 04

ಜೈಸ್ವಾಲ್ ಡಿಆರ್‌ಎಸ್ ರಿವ್ಯೂವ್‌‌ಗೆ ಕೆಂಡಾಮಂಡಲವಾದ ಸ್ಟೋಕ್ಸ್, ಅಂಪೈರ್ ಬಳಿ ಆಕ್ಷೇಪ

ಯಶಸ್ವಿ ಜೈಸ್ವಾಲ್ LWD ಔಟ್‌ಗೆ ಡಿಆರ್‌ಎಸ್ ರಿವ್ಯೂವ್ ಪಡೆದಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಂಡಾಮಂಡಲವಾದ ಘಟನೆ ನಡಿದಿದೆ. ಅಷ್ಟಕ್ಕೂ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

Read Full Story

10:46 PM (IST) Jul 04

ಸಂವಿಧಾನದಿಂದ 'ಜಾತ್ಯಾತೀತ'& 'ಸಮಾಜವಾದಿ' ಪದ ತೆಗೆಯಲು ಯಾವ ನಾಯಕನಿಂದಲೂ ಸಾಧ್ಯವಿಲ್ಲ - ಬಿಜೆಪಿ ಆರೆಸ್ಸೆಸ್‌ಗೆ ಖರ್ಗೆ ಸವಾಲು!

ಸಂವಿಧಾನದಿಂದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. 

Read Full Story

10:06 PM (IST) Jul 04

Heart attack death - ಕೊಪ್ಪಳದಲ್ಲಿ ಹೃದಯಾಘಾತಕ್ಕೆ ರಂಗಭೂಮಿ ಕಲಾವಿದ ಬಲಿ!

ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಹವ್ಯಾಸಿ ರಂಗಭೂಮಿ ಕಲಾವಿದ ನಿಂಗನಗೌಡ (65) ಹೃದಯಾಘಾತದಿಂದ ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಮನೆಯಿಂದ ಹೊರಗೆ ಬಂದಾಗ ಎದೆನೋವು ಕಾಣಿಸಿಕೊಂಡಿದ್ದು, ಮನೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
Read Full Story

09:59 PM (IST) Jul 04

407 ರನ್‌ಗೆ ಇಂಗ್ಲೆಂಡ್ ಆಲೌಟ್, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 180 ರನ್ ಮುನ್ನಡೆ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ನಡುವೆಯೂ ಭಾರತ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಆಲೌಟ್ ಮಾಡಿದ ಭಾರತ 180 ರನ್ ಮುನ್ನಡೆ ಪಡೆದಿದೆ.

 

Read Full Story

09:44 PM (IST) Jul 04

ರಾಜ್ಯದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ ಇದು, ಇಲ್ಲಿದೆ ಸಂಪರ್ಕ ಸಂಖ್ಯೆ, ಸೇವ್ ಮಾಡ್ಕೊಳ್ಳಿ!

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ರಾಜ್ಯದ ಒಂದು ಆಸ್ಪತ್ರೆ ಉಚಿತ ಚಿಕಿತ್ಸೆ ನೀಡುತ್ತಿದೆ ಎಂಬುದು ಬಹುತೇಕ ಗೊತ್ತಿಲ್ಲ, ಉಚಿತವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ಯಾವುದು? ಇಲ್ಲಿ ತಿಳಿಯೋಣ.

 

Read Full Story

09:36 PM (IST) Jul 04

ನಗರದಲ್ಲಿ ಪಾರಿವಾಳಕ್ಕೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರದ ಸೂಚನೆ

ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ಈ ಸೂಚನೆ ನೀಡಿದ್ದೇಕೆ?

 

Read Full Story

09:16 PM (IST) Jul 04

ಪತನದ ಬಳಿಕ ವಿಮಾನಯಾನ ಕಂಪನಿಗೆ ಸಿಗುವ ವಿಮೆ ಹಣ ಎಷ್ಟು?

ಜೂನ್ 12ರ ಅಹಮದಾಬಾದ್ ವಿಮಾನ ದುರಂತದಲ್ಲಿ 270 ಜನರು ಸಾವನ್ನಪ್ಪಿದ್ದರು. ಟಾಟಾ ಗ್ರೂಪ್ ಮೃತರಿಗೆ ಪರಿಹಾರ ಘೋಷಿಸಿತ್ತು. ವಿಮಾನಯಾನ ಕಂಪನಿಗಳು ವಿಮಾ ಕ್ಲೈಮ್‌ಗಳನ್ನು ಹೇಗೆ ಮಾಡಿಕೊಳ್ಳುತ್ತವೆ ಮತ್ತು ಅಹಮದಾಬಾದ್ ದುರಂತದಲ್ಲಿ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

08:53 PM (IST) Jul 04

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ

ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.

 

Read Full Story

08:31 PM (IST) Jul 04

ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸಿ, ಅಪ್ರಾಪ್ತೆಯನ್ನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಲತ್ಕಾರ ಯತ್ನ, ಕಾಮುಕ ಸಯೀದ್ ಅರೆಸ್ಟ್

ರಾಯ್‌ಬರೇಲಿಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. 

Read Full Story

08:08 PM (IST) Jul 04

ದತ್ತಾ ಬದಲು ಕುತ್ತಾ, ತಪ್ಪಾಗಿ ಹೆಸರು ಪ್ರಿಂಟ್ ಮಾಡಿದ ಅಧಿಕಾರಿ ಅಡ್ಡಗಟ್ಟಿ ನಾಯಿ ರೀತಿ ಬೊಗಳಿದ ವ್ಯಕ್ತಿ

ರೇಶನ್ ಕಾರ್ಡ್‌ನಲ್ಲಿ ಶ್ರೀಂಕಾತಿ ದತ್ತಾ ಬದಲು ಶ್ರೀಕಾಂತಿ ಕುತ್ತಾ ಎಂದು ತಪ್ಪಾಗಿ ಪ್ರಿಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ನಡು ರಸ್ತೆಯಲ್ಲಿ ಅಧಿಕಾರಿ ಕಾರು ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾನೆ. ನಾಯಿಯಂತೆ ಬೊಗಳಿ ಆಕ್ರೋಶ ಹೊರಹಾಕಿದ ವಿಡಿಯೋ ವೈರಲ್ ಆಗಿದೆ.

Read Full Story

07:48 PM (IST) Jul 04

ಭಾನುವಾರ ಬೆಳಗ್ಗೆ 7 ಗಂಟೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ!

ಜುಲೈ 06, 2025 ರಂದು ಬೆಳಿಗ್ಗೆ 7:00 ರಿಂದ 8:00 ರವರೆಗೆ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ನಿರ್ವಹಣಾ ಕಾರ್ಯಗಳಿಂದಾಗಿ ಈ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು.

Read Full Story

07:47 PM (IST) Jul 04

ನಟಿಸಿದ ಬಹುತೇಕ ಎಲ್ಲಾ ಚಿತ್ರ ಸೂಪರ್‌ಹಿಟ್‌ ಆದ್ರೂ, ನಟಿಗೆ ಈಗ ಅವಕಾಶವೇ ಇಲ್ಲ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬಾಲ್ಯದ ಫೋಟೋ ಒಬ್ಬ ಸ್ಟಾರ್ ನಾಯಕಿಯದ್ದು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಈ ನಟಿ, ಪುನೀತ್ ರಾಜ್‌ಕುಮಾರ್ ಅವರೊಂದಿಗೂ ಕನ್ನಡದಲ್ಲಿ ನಟಿಸಿದ್ದಾರೆ. ಈ ರಹಸ್ಯಮಯ ನಟಿ ಯಾರು?
Read Full Story

07:37 PM (IST) Jul 04

ಅಸ್ಸಾಂ ಕಾರ್ಮಿಕರ ಹೆಸರಲ್ಲಿ ಕೊಡಗಿಗೆ ನುಸುಳಿದ ಬಾಂಗ್ಲಾ ಪ್ರಜೆಗಳು! ತನಿಖೆಗೆ ಮುಂದಾದ ಪೊಲೀಸರು!

ಕೊಡಗಿನ ಕಾಫಿ ತೋಟಗಳಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ತಾನು ಬಾಂಗ್ಲಾದೇಶದವನೆಂದು ಒಪ್ಪಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Read Full Story

07:32 PM (IST) Jul 04

ಜುಲೈ 5ಕ್ಕೆ ಸುನಾಮಿ ಭವಿಷ್ಯ ನುಡಿದ ಬಾಬ ವಂಗಾ, ನಿನ್ನೆ ಪ್ರಿಡಿಕ್ಷನ್ ನಿಜವಾದ ಬೆನ್ನಲ್ಲೇ ಆತಂಕ

ಜುಲೈ 5ರಂದು ಸುನಾಮಿ ಅಪ್ಪಳಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದೀಗ ಆತಂಕ ಹೆಚ್ಚಾಗಲು ಮತ್ತೊದು ಕಾರಣವಿದೆ. ಬಾಬಾ ಜುಲೈ 3 ರಂದು ಐಸ್‌ಲೆಂಡ್‌ನಲ್ಲಿ ಭೂಕಂಪವಾಗಲಿದೆ ಅನ್ನೋ ಭವಿಷ್ಯ ನಿಜವಾಗಿದೆ. ಹೀಗಾಗಿ ನಾಳೆ ಸುನಾಮಿ ಅಪ್ಪಳಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Read Full Story

07:30 PM (IST) Jul 04

ಭಾರತ ಬಿಟ್ಟು ಈಗಲೇ ತೊಲಗಿ, ಆಪಲ್ ಉತ್ಪಾದನೆಯ 300ಕ್ಕೂ ಹೆಚ್ಚು ತಂತ್ರಜ್ಞರನ್ನು ಮರಳಿ ಕರೆಸಿಕೊಂಡ ಚೀನಾ!

ಆಪಲ್‌ನ ಐಫೋನ್ ತಯಾರಕ ಫಾಕ್ಸ್‌ಕಾನ್, ಭಾರತದಿಂದ ಚೀನೀ ಇಂಜಿನಿಯರ್‌ಗಳನ್ನು ವಾಪಸ್ ಕರೆಸಿಕೊಂಡಿದೆ. ಚೀನಾ ತಂತ್ರಜ್ಞಾನ ವರ್ಗಾವಣೆಯನ್ನು ತಡೆಯಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಇದು ಆಪಲ್‌ನ ಭಾರತದ ಉತ್ಪಾದನಾ ಯೋಜನೆಗಳಿಗೆ ಹಿನ್ನಡೆಯಾಗಿದೆ.
Read Full Story

07:29 PM (IST) Jul 04

ಮಾನವ ದೇಹದಲ್ಲಿ 500 ಕೆಲಸ ಮಾಡುವ ಲಿವರ್‌ಗೆ ಒಳ್ಳೆಯ Vs ಕೆಟ್ಟ ಪಾನೀಯಗಳು ಯಾವುವು?

ಲಿವರ್ ಆರೋಗ್ಯಕ್ಕೆ ಪಾನೀಯಗಳ ಪ್ರಭಾವದ ಬಗ್ಗೆ ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಸಂಸ್ಥೆಗಳ ತಜ್ಞರು ಮಾಹಿತಿ ನೀಡಿದ್ದಾರೆ. ನೀರು ಲಿವರ್‌ಗೆ ಅತ್ಯುತ್ತಮ ಪಾನೀಯವಾಗಿದ್ದು, ಪ್ಯಾಕ್ ಮಾಡಿದ ಹಣ್ಣಿನ ರಸ ಹಾನಿಕಾರಕ. ಸಕ್ಕರೆ ಪಾನೀಯಗಳು ಲಿವರ್‌ಗೆ ಹಾನಿ ಮಾಡುತ್ತವೆ.
Read Full Story

07:14 PM (IST) Jul 04

ಪ್ರವೀಣ್ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಅಬ್ದುಲ್ ರೆಹಮಾನ್ ಕೇರಳದಲ್ಲಿ ಬಂಧನ!

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ NIA ಬಲೆಗೆ ಬಿದ್ದಿದ್ದಾನೆ. ಕತಾರ್‌ನಿಂದ ಕೇರಳಕ್ಕೆ ಬಂದ ತಕ್ಷಣವೇ ಬಂಧನವಾಗಿದೆ. ಈ ಹತ್ಯೆಯಲ್ಲಿ ಒಟ್ಟು 28 ಜನರ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದೆ.
Read Full Story

06:55 PM (IST) Jul 04

ಮೆಟಾ ಸೇರಿದ ಬೆಂಗಳೂರಿನಲ್ಲಿ ಸಂಶೋಧನೆ ನಡೆಸಿದ್ದ ಓಪನ್‌ಎಐ ತಜ್ಞ, ₹854 ಕೋಟಿ ವೇತನ!

ಓಪನ್‌ಎಐನ ಟ್ರಾಪಿಟ್ ಬನ್ಸಾಲ್ ಮೆಟಾದ ಸೂಪರ್ ಇಂಟೆಲಿಜೆನ್ಸ್ ಘಟಕಕ್ಕೆ ಸೇರಿದ್ದಾರೆ. ₹854 ಕೋಟಿ ಬೋನಸ್ ಪಡೆದಿರಬಹುದು ಎಂಬ ವರದಿಗಳಿವೆ. ChatGPT ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬನ್ಸಾಲ್, ಈಗ ಮೆಟಾದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
Read Full Story

06:22 PM (IST) Jul 04

ಮಾರುತಿಯಿಂದ ಹೊಸ SUV, ಬ್ರೆಝಾಗಿಂತ ದೊಡ್ಡ ಗಾತ್ರ, ಗ್ರ್ಯಾಂಡ್ ವಿಟಾರಗಿಂತ ಕಡಿಮೆ ಬೆಲೆ

ಮಾರುತಿ ಸುಜುಕಿ ಹೊಸ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಇದು ಬ್ರೆಝಾ ಕಾರಿಗಿಂತ ದೊಡ್ಡ ಗಾತ್ರ, ಗ್ರ್ಯಾಂಡ್ ವಿಟಾರಗಿಂತ ಕಡಿಮೆ ಬೆಲೆಯ ಕಾರನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಲು ಸಜ್ಜಾಗಿದೆ.

Read Full Story

06:16 PM (IST) Jul 04

ಮ್ಯಾಟ್ರಿಮೊನಿ ಹೆಂಡತಿ ಮಾತು ಕೇಳಿ ₹9.34 ಲಕ್ಷ ಕಳೆದುಕೊಂಡ ಟೆಕ್ಕಿ!

ದಾವಣಗೆರೆಯ ಟೆಕ್ಕಿಯೊಬ್ಬರು ಮ್ಯಾಟ್ರಿಮೊನಿ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ಮಾತು ನಂಬಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ₹9.34 ಲಕ್ಷ ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ಟೆಕ್ಕಿ ದಾವಣಗೆರೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Read Full Story

06:14 PM (IST) Jul 04

ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ಬಳ್ಳಾರಿ ಜೈಲಿನಲ್ಲಿ ಸೌಲಭ್ಯ ನೀಡಲು ತಿರಸ್ಕಾರ - ಜೈಲಿನ ಹಳೆಯ ಪೋಟೋ ವೈರಲ್

ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳಿಗಾಗಿ ಒತ್ತಾಯಿಸಿ, ನಿರಾಕರಿಸಿದಾಗ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಲಿನ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

06:01 PM (IST) Jul 04

ಬಿಹಾರ ಚುನಾವಣೆ - ಸ್ಯಾನಿಟರಿ ಪ್ಯಾಡ್‌ನಲ್ಲಿ ರಾಹುಲ್‌ ಗಾಂಧಿ ಫೋಟೋ ಹಾಕಿ ಕಾಂಗ್ರೆಸ್‌ ಪ್ರಚಾರ!

ಬಿಹಾರ ಚುನಾವಣೆಗೆ ಮುನ್ನ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಕಾಂಗ್ರೆಸ್ ನಡೆಯನ್ನು ಬಿಜೆಪಿ ಟೀಕಿಸಿದೆ. ಪ್ಯಾಡ್‌ಗಳ ಮೇಲೆ ರಾಹುಲ್ ಗಾಂಧಿ ಚಿತ್ರ ಇರುವುದನ್ನು 'ಮಹಿಳೆಯರಿಗೆ ಮಾಡಿದ ಅವಮಾನ' ಎಂದು ಬಿಜೆಪಿ ಕರೆದಿದೆ. 

 

Read Full Story

05:54 PM (IST) Jul 04

ಬಿಜಿಪಿಗೆ ಮೊದಲ ಮಹಿಳಾ ಅದ್ಯಕ್ಷೆ? ನಿರ್ಮಲಾ ಸೀತಾರಾಮನ್ ಸೇರಿ ರೇಸ್‌ನಲ್ಲಿ ಪ್ರಮುಖರು

ಇದೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಈ ಪೈಕಿ ಮೂವರು ಮಹಿಳಾ ನಾಯಕಿಯರ ಹೆಸರು ಮುಂಚೂಣಿಯಲ್ಲಿದೆ. ನಿರ್ಮಾಲಾ ಸೀತಾರಾಮನ್ ಸೇರಿದಂತೆ ಅಧ್ಯೆಕ್ಷೆ ಪಟ್ಟಿ ರೇಸ್‌ನಲ್ಲಿ ಮಹಿಳಾ ನಾಯಕಿಯರು ಯಾರು?

Read Full Story

05:43 PM (IST) Jul 04

ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್‌ಗೆ ಹೈಕೋರ್ಟ್‌ ತಾತ್ಕಾಲಿಕ ರಿಲೀಫ್; ಜು.8ರವರೆಗೆ ಬಂಧಿಸಬೇಡಿ!

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಭಾಷೆ ಬಳಕೆ ಆರೋಪದ ಪ್ರಕರಣದಲ್ಲಿ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಜುಲೈ 8ರವರೆಗೆ ಬಂಧನ ಮಾಡದಂತೆ ತೀರ್ಪು ನೀಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.

Read Full Story

05:42 PM (IST) Jul 04

ಹುಲಿಗಳ ಹತ್ಯಾಕಾಂಡದ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಿದ ಉನ್ನತ ಮಟ್ಟದ ತನಿಖಾ ಸಮಿತಿ

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿನ ಬಗ್ಗೆ ತನಿಖಾ ತಂಡ ವರದಿ ಸಲ್ಲಿಸಿದ್ದು, ಮೂವರು ಅರಣ್ಯ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಹುಲಿಗಳ ಸಾವಿಗೆ ರಾಸಾಯನಿಕ ವಿಷಪ್ರಾಶನ ಕಾರಣ ಎಂದು ವರದಿ ತಿಳಿಸಿದೆ. ಈ ಘಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
Read Full Story

05:34 PM (IST) Jul 04

stray dog attack - ಟ್ಯೂಷನ್‌ ಹೊರಟಿದ್ದ ವಿದ್ಯಾರ್ಥಿನಿ ಸೇರಿ ಬರೋಬ್ಬರಿ 20 ಜನರಿಗೆ ಕಚ್ಚಿದ ಬೀದಿನಾಯಿ!

ಪ್ರದೇಶದ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕ್ರಮ ಕೈಗೊಳ್ಳಲಾಗುವುದು ಎಂದು ಪೋತ್ತನ್‌ಕೋಡ್ ಪಂಚಾಯತ್ ಅಧ್ಯಕ್ಷ ಟಿ.ಆರ್. ಅನಿಲ್ ಹೇಳಿದ್ದಾರೆ.

Read Full Story

05:22 PM (IST) Jul 04

ಟೊಮ್ಯಾಟೋ ಸೊಪ್ಪು ಸೇರಿ ಈ ತರಕಾರಿ ಮನೆಯ ಬಾಲ್ಕನಿಯಲ್ಲೇ ಬೆಳೆಯಬಹುದು!

ಬಿಸಿಲಿನಲ್ಲಿ ಹಸಿಮೆಣಸಿನಕಾಯಿ ಚೆನ್ನಾಗಿ ಬೆಳೆಯುತ್ತದೆ. ಸೂರ್ಯನ ಬೆಳಕು ಬೀಳುವಂತೆ ಬಾಲ್ಕನಿಯಲ್ಲಿ ಹಸಿಮೆಣಸಿನಕಾಯಿ ಗಿಡ ನೆಡಬಹುದು.

Read Full Story

04:42 PM (IST) Jul 04

2026ರ ತಮಿಳುನಾಡು ಚುನಾವಣೆಗೆ ಜೋಸೆಫ್‌ ವಿಜಯ್‌ ಸಿಎಂ ಅಭ್ಯರ್ಥಿ, ಟಿವಿಕೆ ಘೋಷಣೆ!

ನಟ ಜೋಸೆಫ್ ವಿಜಯ್ 2026ರ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಬಿಜೆಪಿ ಅಥವಾ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ. 

 

Read Full Story

04:40 PM (IST) Jul 04

ಒಂದೇ ತಾಯಿ ಗರ್ಭದಲ್ಲಿ ಜನಿಸಿದ 4 ವರ್ಷದ ಗಂಡು ಹೆಣ್ಣು ಅವಳಿಗೆ ಮದುವೆ - ಏನಿದು ವಿಚಿತ್ರ ಸಂಪ್ರದಾಯ

ಥೈಲ್ಯಾಂಡ್‌ನಲ್ಲಿ ನಾಲ್ಕು ವರ್ಷದ ಅವಳಿ ಮಕ್ಕಳನ್ನು ಪರಸ್ಪರ ಮದುವೆ ಮಾಡಲಾಗಿದ್ದು, ಈ ವಿಚಿತ್ರ ಸಂಪ್ರದಾಯ ಈಗ ಜನರ ಕುತೂಹಲ ಕೆರಳಿಸಿದೆ.

Read Full Story

04:21 PM (IST) Jul 04

ಅಮ್ಮಾ ಈ ರೀತಿ ನ್ಯೂಸ್ ಹರಡಿದರೆ ಹೇಗೆ? ತಾಯಿ ಫೇಸ್‌ಬುಕ್ ಪೋಸ್ಟ್‌ ಪ್ರಶ್ನಿಸಿದ ನಿಖಿಲ್ ಕಾಮತ್

ಅಮ್ಮಾ ಈ ರೀತಿ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರೆ ಹೇಗೆ? ಸುದ್ದಿ ಎಲ್ಲೆಡೆ ಹರಡಿದರೆ ಸಮಸ್ಯೆ ಆಗಲಿದೆ. ಇದು ಉದ್ಯಮಿ ನಿಖಿಲ್ ಕಾಮತ್, ತಾಯಿ ರೇವತಿ ಕಾಮತ್ ಫೇಸ್‌ಬುಕ್ ಪೋಸ್ಟ್‌ಗೆ ಹೇಳಿದ ಉತ್ತರ. ಅಷ್ಟಕ್ಕೂ ತಾಯಿ ಸೋಶಿಯಲ್ ಮೀಡಿಯಾದ ಪೋಸ್ಟ್ ನಿಖಿಲ್ ಕಾಮತ್ ಪ್ರಶ್ನಿಸಿದ್ದು ಯಾಕೆ?

Read Full Story

04:19 PM (IST) Jul 04

Ashada Masam 2025 - ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ರಾಜಕಾರಣಿ, ಸೆಲೆಬ್ರಿಟಿಗಳ ದಂಡು!

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢದ ಎರಡನೇ ಶುಕ್ರವಾರ ವಿಶೇಷ ಪೂಜೆಗಳು ನೆರವೇರಿದವು. ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವು ಗಣ್ಯರು ಚಾಮುಂಡೇಶ್ವರಿ ದರ್ಶನ ಪಡೆದರು. ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
Read Full Story

04:15 PM (IST) Jul 04

KSRTC ಪ್ರಯಾಣಿಕರಿಗೆ ಸಿಹಿಸುದ್ದಿ; ಪ್ರೀಮಿಯಂ ಬಸ್‌ಗಳಲ್ಲಿನ ರೌಂಡಪ್ ಚಾರ್ಜಸ್‌ ರದ್ದು

ಕೆಎಸ್‌ಆರ್‌ಟಿಸಿಯ ಪ್ರೀಮಿಯಂ ಸರ್ವಿಸ್ ಬಸ್‌ಗಳಲ್ಲಿ ಜಾರಿಯಲ್ಲಿದ್ದ ರೌಂಡಪ್ ಚಾರ್ಜಸ್‌ಗಳನ್ನು ಹಿಂಪಡೆಯಲಾಗುತ್ತಿದೆ. UPI ವ್ಯವಸ್ಥೆ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹಣ ಉಳಿತಾಯವಾಗಲಿದ್ದು, ನಿಗಮದ ನಷ್ಟವನ್ನೂ ತಪ್ಪಿಸಬಹುದಾಗಿದೆ.
Read Full Story

03:58 PM (IST) Jul 04

'ಒಂದು ಗಡಿ, ಮೂರು ಶತ್ರು..' ಆಪರೇಷನ್‌ ಸಿಂದೂರ್‌ ವೇಳೆ ಪಾಕ್‌ಗೆ ಚೀನಾ-ಟರ್ಕಿ ಸಹಾಯ ಮಾಡಿತ್ತೆಂದ ಡೆಪ್ಯುಟಿ ಆರ್ಮಿ ಚೀಫ್‌!

ದೆಹಲಿಯಲ್ಲಿ ಎಫ್‌ಐಸಿಸಿಐ ಆಯೋಜಿಸಿದ್ದ 'ನವಯುಗದ ಮಿಲಿಟರಿ ತಂತ್ರಜ್ಞಾನಗಳು' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 

Read Full Story

03:23 PM (IST) Jul 04

ಹೃದಯ ಸಮಸ್ಯೆ ಇರುವವರಿಗೆ ಉಚಿತ ಚಿಕಿತ್ಸೆ ನೀಡುವ ರಾಜ್ಯದ ಆಸ್ಪತ್ರೆ ಇದು

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರದ ಶ್ರೀ ಮಧುಸೂಧನ್ ಸಾಯಿ ಆಸ್ಪತ್ರೆಯು ಉಚಿತ ಹೃದಯ ಚಿಕಿತ್ಸೆ ನೀಡುತ್ತಿದೆ.

Read Full Story

03:19 PM (IST) Jul 04

ರಾಜಮೌಳಿ ಸಿನಿಮಾ ಆಫರ್ ತಿರಸ್ಕರಿಸಿದ ಸೌತ್ ನಟಿ, ಈಗ ಚಾನ್ಸೇ ಕಡಿಮೆಯಾಗೋಯ್ತು!

ಪ್ರಪಂಚವೇ ಮೆಚ್ಚಿಕೊಂಡ ನಿರ್ದೇಶಕ ರಾಜಮೌಳಿ. ಅವ್ರ ಆಫರ್ ಸಿಕ್ಕಿದರೆ ಸಾಕು ಅಂತ ಸ್ಟಾರ್‌ಗಳೇ ಕಾಯುತ್ತಾರೆ. ಆದರೆ, ರಾಜಮೌಳಿ ಸ್ವತಃ ಎರಡೆರಡು ಬಾರಿ ಸಿನಿಮಾ ಆಫರ್ ಕೊಟ್ಟರೂ, ತಿರಸ್ಕರಿಸಿದ ನಟಿಗೆ ಈಗ ಆಫರ್‌ಗಳೇ ಕಡಿಮೆಯಾಗೋಯ್ತು.

Read Full Story

03:13 PM (IST) Jul 04

ಎಮರ್ಜೆನ್ಸಿ ನಿಭಾಯಿಸುವುದು ಹೇಗೆ? ದುರಂತಕ್ಕೂ ಮೊದ್ಲು ಅದೇ ಬೋಯಿಂಗ್ ಕಾಕ್‌ಪಿಟ್‌ನಲ್ಲಿ ರೂಪಾನಿ

ಏರ್ ಇಂಡಿಯಾ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ 241 ಪ್ರಯಾಣಿಕರ ದುರಂತ ಅಂತ್ಯ ಘಟನೆ ಇನ್ನು ಮಾಸಿಲ್ಲ. ಇದರ ನಡುವೆ ವಿಜಯ್ ರೂಪಾನಿ ಇದೇ ಬೋಯಿಂಗ್ ವಿಮಾನದ ಕಾಕ್‌ಪಿಟ್‌ಗೆ ತೆರಳಿ ಪೈಲೆಟ್‌ಗಳಿಂದ ತುರ್ತು ಸಂದರ್ಭ ನಿಭಾಯಿಸುವುದು ಹೇಗೆ ಎಂದು ಮಾಹಿತಿ ಪಡೆದಿದ್ದರು.

Read Full Story

03:06 PM (IST) Jul 04

ಮಂಗಳೂರು - ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ನಿಗೂಢ ಸಾವು! ಕಾರಣವೇನು?

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಬತ್ತು ಪ್ರಾಣಿಗಳು ಮೃತಪಟ್ಟಿವೆ. ಇವುಗಳಲ್ಲಿ ಪುನುಗು ಬೆಕ್ಕು, ಬರಿಂಕ ಸೇರಿವೆ. ಮಳೆಯಿಂದಾಗಿ ಶೀತ ವಾತಾವರಣ ಹೆಚ್ಚಾದ ಪರಿಣಾಮ ಈ ಪ್ರಾಣಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Full Story

03:03 PM (IST) Jul 04

'ಶೀಘ್ರದಲ್ಲೇ ಪುಣಾಣಿಗಳು ಅಮ್ಮ ಎನ್ನಲಿದ್ದಾರೆ..' ಐವಿಎಫ್‌ ಮೂಲಕ ಗರ್ಭಿಣಿಯಾದ ಭಾವನಾ ರಾಮಣ್ಣ ಸಂತಸ!

ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ೪೦ರ ಹರೆಯದಲ್ಲಿ ಒಂಟಿ ತಾಯಿಯಾಗಲು ನಿರ್ಧರಿಸಿದ ಅವರು, ಹಲವು ಸವಾಲುಗಳನ್ನು ಎದುರಿಸಿದ್ದಾರೆ.
Read Full Story

More Trending News