Published : Feb 04, 2026, 06:51 AM ISTUpdated : Feb 04, 2026, 11:26 PM IST

India Latest News Live: ಖಾಸಗಿ ಬಸ್‌ ಅಡಿಗೆ ಬೀಳುತ್ತಿದ್ದ ಬಾಲಕಿ ಪವಾಡದಂತೆ ಪಾರು - ಎದೆ ಝಲ್ ಎನಿಸುವ ವೀಡಿಯೋ

ಸಾರಾಂಶ

ನವದೆಹಲಿ: ಭಾರತದ ಆರ್ಥಿಕತೆಯನ್ನು ಡೆಡ್‌ ಎಕಾನಮಿ ಎಂದು ಟೀಕಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಬಿಜೆಪಿಯು ಎಲಾನ್‌ ಮಸ್ಕ್‌ ಇತ್ತೀಚಿನ ಪೋಸ್ಟ್‌ ಉಲ್ಲೇಖಿಸಿ ತಿರುಗೇಟು ನೀಡಿದ್ದು, ‘ದೇಶಕ್ಕೆ ಅವಮಾನಬೇಡಿ, ಗೌರವಿಸಿ’ ಎಂದಿದೆ. ಭಾರತ ಜಿಡಿಪಿ ಬೆಳವಣಿಗೆಯಲ್ಲಿ ಜಾಗತಿಕವಾಗಿ ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತಿದೆ ಎನ್ನುವ ಐಎಂಎಫ್‌ ವರದಿ ಉಲ್ಲೇಖಿಸಿ ವಿಶ್ವದ ನಂ.1 ಸಿರಿವಂತ ಉದ್ಯಮಿ ಮಸ್ಕ್‌, ‘ಅಧಿಕಾರದ ಸಮತೋಲನ ಬದಲಾಗುತ್ತಿದೆ’ ಎಂದಿದ್ದರು. 

ಈ ಪೋಸ್ಟ್‌ ಅನ್ನು ಕೇಂದ್ರ ಸಚಿವ ಕಿರಣ್‌ ರಿಜಿಜು ಹಂಚಿಕೊಂಡಿದ್ದು, ‘ ನಾನು ಸಾಮಾನ್ಯವಾಗಿ ಭಾರತೀಯರಲ್ಲದವರು ಹೇಳಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ. ಸರ್ಕಾರವನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು. ಭಾರತವನ್ನು ಅವಮಾನಿಸಬೇಡಿ, ಸಾಧನೆಯನ್ನು ಕುಗ್ಗಿಸಬೇಡಿ ಎಂದು ರಾಹುಲ್‌ ಗಾಂಧಿಯವರಿಗೆ ಹೇಳಲು ಇದನ್ನು ಉಲ್ಲೇಖಿಸುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.

11:26 PM (IST) Feb 04

ಖಾಸಗಿ ಬಸ್‌ ಅಡಿಗೆ ಬೀಳುತ್ತಿದ್ದ ಬಾಲಕಿ ಪವಾಡದಂತೆ ಪಾರು - ಎದೆ ಝಲ್ ಎನಿಸುವ ವೀಡಿಯೋ

ಕೇರಳದ ಕೋಝಿಕೋಡ್‌ನಲ್ಲಿ ಪುಟ್ಟ ಬಾಲಕಿಯೊಬ್ಬಳು ಅಜಾಗರೂಕತೆಯಿಂದ ರಸ್ತೆ ದಾಟಲು ಯತ್ನಿಸಿದ್ದಾಳೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್‌ನ ಚಕ್ರದಡಿ ಸಿಲುಕುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story

11:04 PM (IST) Feb 04

"ಬೆದರಿಕೆಗೆ ಬಗ್ಗಲ್ಲ, ಬೇಕಿದ್ರೆ ಟ್ರಂಪ್ ಅವಧಿ ಮುಗಿಯೋವರೆಗೂ ಕಾಯ್ತೀವಿ" - ದೋವಲ್ ಎಚ್ಚರಿಕೆ ಬೆನ್ನಲ್ಲೇ ಆಯ್ತು ಟ್ರೇಡ್‌ ಡೀಲ್‌!

How Ajit Doval Bold Stance Secured India-US Trade Deal ಆಗಸ್ಟ್‌ನಲ್ಲಿ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದಾಗ ಮತ್ತು ತೈಲ ಖರೀದಿಯ ಮೂಲಕ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಭಾರತ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿದಾಗ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು.

 

Read Full Story

10:09 PM (IST) Feb 04

ಲಿಫ್ಟ್‌ನಲ್ಲೇ ಒಡೆದ ಹೈಡ್ರೋಜನ್‌ ಬಲೂನ್‌, ಮೂವರಿಗೆ ಸುಟ್ಟ ಗಾಯ; ವಿಡಿಯೋ ವೈರಲ್‌!

Hydrogen Balloon Blast: ಗೋರೆಗಾಂವ್ (ಪಶ್ಚಿಮ) ದಲ್ಲಿರುವ ಪೆಟ್ರೋಲ್ ಪಂಪ್‌ನ ಎದುರಿನ ಕಟ್ಟಡವಾದ ಅನ್ಮೋಲ್ ಟವರ್‌ನ ಲಿಫ್ಟ್‌ನಲ್ಲಿ ಹೈಡ್ರೋಜನ್ ಅನಿಲ ತುಂಬಿದ ಬಲೂನ್‌ಗಳ ಬೃಹತ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರಿಗೆ ಸುಟ್ಟ ಗಾಯಗಳಾಗಿವೆ.

 

Read Full Story

09:48 PM (IST) Feb 04

'ಬಟ್ಟೆ ಕಳಚು, ದೇಹ ತೋರಿಸು ಅಂದಿದ್ದ..' ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಡಾಲಿ ಧನಂಜಯ ಹೀರೋಯಿನ್‌!

ನಟಿ ಐಶ್ವರ್ಯಾ ರಾಜೇಶ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆಡಿಷನ್ ವೇಳೆ ಛಾಯಾಗ್ರಾಹಕರೊಬ್ಬರು ಬಟ್ಟೆ ಕಳಚಿ ದೇಹ ತೋರಿಸುವಂತೆ ಕೇಳಿದ್ದ ಕಹಿ ಅನುಭವವನ್ನು ಅವರು ವಿವರಿಸಿದ್ದಾರೆ. 

Read Full Story

09:39 PM (IST) Feb 04

ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ - ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ

ಕಲಾವಿದರಿಗೆ ವಯಸ್ಸಿನ ಹಂಗಿಲ್ಲ ನಿಜ ಆದರೆ ಸಣ್ಣ ಮಕ್ಕಳನ್ನು ವಯಸ್ಕರು ಮಾಡುವಂತಹ ಪಾತ್ರಗಳಲ್ಲಿ ತೋರಿಸುವುದು ಎಷ್ಟು ಸರಿ? ಎಂದು ಟಿವಿ ಶೋವೊಂದರ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

Read Full Story

09:09 PM (IST) Feb 04

ಮೋದಿ ಆದೇಶ, PSLV ಫೇಲ್ಯೂರ್‌ ಬೆನ್ನಲ್ಲೇ ತಿರುವನಂತಪುರ ಬಾಹ್ಯಾಕಾಶ ಕೇಂದ್ರಕ್ಕೆ ಗುಪ್ತ ಭೇಟಿ ನೀಡಿದ NSA ಅಜಿತ್‌ ದೋವಾಲ್‌!

ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪಿಎಸ್‌ಎಲ್‌ವಿ ಉಡಾವಣೆಗಳಲ್ಲಿನ ನಿರಂತರ ವೈಫಲ್ಯಗಳನ್ನು ತನಿಖೆ ಮಾಡಲು ತಿರುವನಂತಪುರಂನಲ್ಲಿರುವ ವಿಎಸ್‌ಎಸ್‌ಸಿಗೆ ಭೇಟಿ ನೀಡಿದರು. 

Read Full Story

08:39 PM (IST) Feb 04

ವಾರಣಾಸಿ ಸಿನಿಮಾ ಶೂಟ್‌ - ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು

ಏಳು ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ, ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರಕ್ಕೆ ಒಪ್ಪಿಕೊಳ್ಳುವ ಮುನ್ನ ಅವರು ನಿರ್ದೇಶಕರಿಗೆ ಒಂದು ಮನವಿ ಮಾಡಿದ್ದರಂತೆ, ಪ್ರಿಯಾಂಕಾ ಮನವಿಯ ಪರಿಣಾಮ ಮಹೇಶ್ ಬಾಬು ಮೇಲಾಯ್ತು ಹಾಗಿದ್ದರೆ ಅದೇನು?

Read Full Story

08:22 PM (IST) Feb 04

ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಾಪಾಸ್‌ ನೀಡಿದ್ದ ಪೌರ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಹಾಕಿ ಸನ್ಮಾನಿಸಿದ ರಜನಿಕಾಂತ್‌!

ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ, ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ ಚಿನ್ನವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಅವರ ಈ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ ಸೂಪರ್ ಸ್ಟಾರ್ ರಜನಿಕಾಂತ್, ಪದ್ಮಾ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

Read Full Story

07:58 PM (IST) Feb 04

ಕ್ರಿಕೆಟ್ ಪ್ರೇಮಿಗಳೇ ಗಮನಿಸಿ - ಬದಲಾಯ್ತು 73 ನಿಯಮಗಳು; ಅಕ್ಟೋಬರ್‌ನಿಂದ ಹೊಸ ಆಟ ಶುರು!

ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC) ಕ್ರಿಕೆಟ್‌ನ 73 ನಿಯಮಗಳನ್ನು ಬದಲಾಯಿಸಿದ್ದು, ಇವು ಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿವೆ. ಟೆಸ್ಟ್ ಪಂದ್ಯದ ಕೊನೆಯ ಓವರ್, ಓವರ್‌ತ್ರೋ, ಡೆಡ್ ಬಾಲ್, ಹಿಟ್ ವಿಕೆಟ್, ಮತ್ತು ಬ್ಯಾಟ್-ಬಾಲ್ ಮಾನದಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
Read Full Story

07:29 PM (IST) Feb 04

ರಾಜಧಾನಿಯಲ್ಲಿ ಕೇವಲ 15 ದಿನದಲ್ಲಿ 807 ಜನ ನಾಪತ್ತೆ - ಮಕ್ಕಳು ಹದಿಹರೆಯದವೇ ಹೆಚ್ಚು ಬೆಚ್ಚಿ ಬೀಳಿಸಿದ ವರದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 15 ದಿನಗಳಲ್ಲಿ 807 ಜನರು ನಾಪತ್ತೆಯಾಗಿದ್ದು, ಇವರಲ್ಲಿ ಬಹುಪಾಲು ಮಹಿಳೆಯರು ಮತ್ತು ಹೆಣ್ಣುಮಕ್ಕಳೇ ಸೇರಿದ್ದಾರೆ. ಪ್ರತಿದಿನ ಸರಾಸರಿ 54 ಜನರು ಕಾಣೆಯಾಗುತ್ತಿದ್ದು, ಪೊಲೀಸರು ಇನ್ನೂ 572 ಜನರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

Read Full Story

06:54 PM (IST) Feb 04

ಮನೆ ಬಾಗಿಲಿಗೆ ಕಸದ ವ್ಯಾನ್ ಬರಲಿಲ್ಲವೆಂದು Porter ಬಳಸಿದ ಕಿಲಾಡಿ ಲೇಡಿ; ವಿಡಿಯೋ ವೈರಲ್!

ಪೋರ್ಟರ್‌ನಲ್ಲಿ ಪಾರ್ಸೆಲ್ ಬುಕ್ ಮಾಡಿದ ಮಹಿಳೆಯೊಬ್ಬರು, ಡೆಲಿವರಿ ಏಜೆಂಟ್ ಕೈಗೆ ಮನೆಯ ಕಸವಿದ್ದ ಬಾಕ್ಸ್ ನೀಡಿದ್ದಾರೆ. ಡ್ರಾಪ್ ಲೊಕೇಶನ್ ಕಸದ ರಾಶಿಯಾಗಿದ್ದು, ಅದನ್ನು ಅಲ್ಲಿ ಎಸೆಯುವಂತೆ ಸೂಚನೆ ನೀಡಿದ ಘಟನೆ ಇದಾಗಿದೆ. ಈ ವಿಚಿತ್ರವಾದರೂ ಸೃಜನಾತ್ಮಕ ಬಳಕೆಯನ್ನು ಲೇಖನವು ವಿವರಿಸುತ್ತದೆ.

Read Full Story

06:53 PM (IST) Feb 04

ಫೋಟೊ, ವಿಡಿಯೋ ಡಿಲೀಟ್​ ಮಾಡಿದ್ರೂ ಮೆಮೊರಿ ಫುಲ್​ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ

ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರವೂ ಫೋನ್ ಮೆಮೊರಿ ಫುಲ್ ಎಂದು ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರವಿದೆ. ಗೂಗಲ್ ಕ್ರೋಮ್‌ನ ಸೈಟ್ ಸೆಟ್ಟಿಂಗ್ಸ್‌ನಲ್ಲಿ ಸಂಗ್ರಹವಾಗಿರುವ ಅನಗತ್ಯ ಡೇಟಾವನ್ನು ತೆಗೆದುಹಾಕುವ ಮೂಲಕ ಸ್ವಲ್ಪ ಜಾಗವನ್ನು ಪಡೆಯಬಹುದು. ಇಲ್ಲಿದೆ ಟಿಪ್ಸ್​

Read Full Story

05:46 PM (IST) Feb 04

ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್‌ ಮಾಡಿ 30 ಕೋಟಿ ಸಂಪಾದಿಸಿದ ಯುವತಿಗೆ ಸಂಕಷ್ಟ

ಚೀನಾದ ಝೋ ಯುವಾನ್ ಎಂಬ ಮಹಿಳೆ, ಪುರುಷರನ್ನು ಆಕರ್ಷಿಸುವುದು ಹೇಗೆ ಎಂಬ ಆನ್‌ಲೈನ್ ಕೋರ್ಸ್ ಮೂಲಕ ಸುಮಾರು 30 ಕೋಟಿ ರೂ. ಗಳಿಸಿದ್ದಾರೆ. ಈ ಕೋರ್ಸ್‌ಗೆ ಅಲ್ಲಿನ ಸಂಪ್ರದಾಯವಾದಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆಕೆ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದಾರೆ.

Read Full Story

05:35 PM (IST) Feb 04

ದೇಶದ ಶೇ.84ರಷ್ಟು ಚಿಂದಿ ಆಯುವವರು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದವರು - ಕೇಂದ್ರ ಸರ್ಕಾರದ ಮಾಹಿತಿ

ಕೇಂದ್ರ ಸರ್ಕಾರವು ದೇಶದ ತ್ಯಾಜ್ಯ ಆಯುವವರ ಗಣತಿಯ ಮೊದಲ ಡೇಟಾವನ್ನು ಬಿಡುಗಡೆ ಮಾಡಿದ್ದು, ನಮಸ್ತೆ ಯೋಜನೆಯಡಿ 1.52 ಲಕ್ಷ ಕಾರ್ಮಿಕರನ್ನು ಗುರುತಿಸಲಾಗಿದೆ. ಈ ವರದಿಯ ಪ್ರಕಾರ, ಒಟ್ಟು ಕಾರ್ಮಿಕರಲ್ಲಿ ಶೇ. 84.5ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

Read Full Story

05:07 PM (IST) Feb 04

Mahindra XUV 7XO - ಡಾಲ್ಬಿ ವಿಷನ್, ಅಟ್ಮಾಸ್ ಸೌಂಡ್! ಭಾರತದಲ್ಲೇ ಮೊದಲ ಬಾರಿಗೆ ಬಂದ ಕಾರಿದು!

ಮಹೀಂದ್ರ & ಮಹೀಂದ್ರ ಕಂಪನಿಯು ತನ್ನ XUV 7XO ಕಾರನ್ನು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಫೀಚರ್‌ಗಳನ್ನು ಹೊಂದಿರುವ ಮೊದಲ ವಾಹನ ಇದಾಗಿದ್ದು, ಕಾರಿನೊಳಗಿನ ಮನರಂಜನೆಯ ಅನುಭವವನ್ನೇ ಬದಲಿಸಲಿದೆ.
Read Full Story

04:45 PM (IST) Feb 04

ಬ್ಯಾಚುಲರ್‌ಗಳಿಗೆ ಶಾಕ್! ನಿಯಮ ಉಲ್ಲಂಘಿಸಿದ 10 ಕಟ್ಟಡಗಳ ಕರೆಂಟ್ ಕಟ್ ಮಾಡಿದ ಕುವೈತ್

ಕುವೈತ್‌ನಲ್ಲಿ ಬ್ಯಾಚುಲರ್‌ಗಳು ವಾಸಿಸುವ ಮನೆಗಳ ಮೇಲೆ ಮುನ್ಸಿಪಾಲಿಟಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದ 10 ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂಜಿನಿಯರಿಂಗ್ ಆಡಿಟ್ ಮತ್ತು ಫಾಲೋ-ಅಪ್ ವಿಭಾಗ ಈ ಕಾರ್ಯಾಚರಣೆ ನಡೆಸಿದೆ.
Read Full Story

04:18 PM (IST) Feb 04

ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ - ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್‌

ನಟಿ ಶ್ರುತಿ ಹಾಸನ್ ಅವರು ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 'ಆಳವಿ' ಎಂಬ ಮಗುವಿನ ದುಬಾರಿ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಚಿಕಿತ್ಸೆಯ ನಂತರ ಮಗುವನ್ನು ಭೇಟಿ ಮಾಡಿ ಸಮಯ ಕಳೆದಿದ್ದು, ಮಗುವಿನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ನಟಿಯ ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Read Full Story

02:52 PM (IST) Feb 04

ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!

ಪ್ರಪಂಚದಲ್ಲಿ ಎಂಥೆಂಥಾ ಚಾಲಾಕಿಗಳು ಇರ್ತಾರೆ ನೋಡಿ, ಒಬ್ಬರನ್ನು ಇಲ್ಲಿ ಒಂದು ಕ್ಷಣಕ್ಕೂ ನಂಬಲು ಸಾಧ್ಯವಿಲ್ಲ, ಇವರಿಂದಾಗಿಯೇ ಜನ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ. ಹಾಗೆಯೇ ಇಲ್ಲೊಬ್ಬಳು ಕಷ್ಟದಲ್ಲಿದ್ದೇನೆ ಎಂದು ಹೇಳಿ ಯಾವ ರೀತಿ ಮೋಸ ಮಾಡಲು ಯತ್ನಿಸಿದಳು ನೋಡಿ…

Read Full Story

01:31 PM (IST) Feb 04

T20 World Cup 2026 - ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಈ 5 ಆಟಗಾರರ ಮೇಲೆ ಕಣ್ಣಿಡಿ!

2026ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸುತ್ತಿವೆ. ಈ ಮಹತ್ವದ ಟೂರ್ನಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಬಲ್ಲ ಪ್ರಮುಖ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ. ಇವರೇ ಪಂದ್ಯಾವಳಿಯ ಗೇಮ್ ಚೇಂಜರ್‌ಗಳು.
Read Full Story

12:43 PM (IST) Feb 04

ಗದ್ದೆ ಅಂಚಲ್ಲಿ uniform ಹಾಕ್ಕೊಂಡು ಎಣ್ಣೆ ಹೊಡೀತಾ ಇರೋ ಹೈಸ್ಕೂಲ್ ಹುಡ್ಗೀರು, parents shock! ವಿಡಿಯೋ ವೈರಲ್

ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯರು ಗದ್ದೆ ಬದಿಯಲ್ಲಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳಿಗೆ ಶಿಕ್ಷೆಯ ಬದಲು ಆಪ್ತ ಸಮಾಲೋಚನೆ ಮತ್ತು ಪೋಷಕರ ಜವಾಬ್ದಾರಿಯ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.
Read Full Story

12:42 PM (IST) Feb 04

15ನೇ ವಯಸ್ಸಿಗೆ ಹೈನುಗಾರಿಕೆ ಆರಂಭಿಸಿದ ಹುಡುಗ - 18 ವರ್ಷದ ಯುವಕನ ತಿಂಗಳ ಆದಾಯ ಈಗ 6 ಲಕ್ಷ

ಪಂಜಾಬ್‌ನ 18 ವರ್ಷದ ಸೋಹಲ್‌ಪ್ರೀತ್ ಸಿಂಗ್ ಸಿಧು, ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಬದಲು ಹೈನುಗಾರಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಡೈರಿ ಫಾರ್ಮ್ ಆರಂಭಿಸಿದ ಅವರು, ಇಂದು ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. 

Read Full Story

12:40 PM (IST) Feb 04

ಮದುವೆ ಸಾಬೀತಿಗೆ ಪ್ರಮಾಣಪತ್ರ ಸಾಕಾಗಲ್ಲ - ಡಿವೋರ್ಸ್ ಕುರಿತೂ ಸುಪ್ರೀಂ ​ ಮಹತ್ವದ ತೀರ್ಪಿನಲ್ಲಿ ಹೇಳಿದ್ದೇನು?

ಸುಪ್ರೀಂಕೋರ್ಟ್, ಹಿಂದೂ ವಿವಾಹವು ಕೇವಲ ವ್ಯವಹಾರವಲ್ಲ, ಅದೊಂದು ಪವಿತ್ರ ಸಂಸ್ಕಾರ ಎಂದು ಮಹತ್ವದ ತೀರ್ಪು ನೀಡಿದೆ. 1955ರ ಹಿಂದೂ ವಿವಾಹ ಕಾಯ್ದೆಯಡಿ, ಸಪ್ತಪದಿಯಂತಹ ಆಚರಣೆಗಳು ಅತ್ಯಗತ್ಯವಾಗಿದ್ದು, ವಿವಾಹವನ್ನು ಸಾಬೀತುಪಡಿಸಲು ಕೇವಲ ನೋಂದಣಿ ಪ್ರಮಾಣಪತ್ರ ಸಾಕಾಗುವುದಿಲ್ಲ ಎಂದಿದೆ.

Read Full Story

12:40 PM (IST) Feb 04

"ಕ್ಷಮಿಸಿ ಪಪ್ಪಾ" ಕೊರಿಯನ್ ಆನ್‌ಲೈನ್‌ ಗೇಮ್ ಚಟಕ್ಕೆ 3 ಅಪ್ರಾಪ್ತ ಸಹೋದರಿಯರು 9ನೇ ಮಹಡಿಯಿಂದ ಹಾರಿ ಆತ್ಮ*ಹತ್ಯೆ!

ಗಾಜಿಯಾಬಾದ್‌ನಲ್ಲಿ, ಆನ್‌ಲೈನ್ ಕೊರಿಯನ್ ಗೇಮ್‌ಗೆ ವ್ಯಸನಿಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರು ಕಟ್ಟಡದಿಂದ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪತ್ತೆಯಾದ 8 ಪುಟಗಳ ಡೆತ್ ನೋಟ್, ಅವರ ಮಾನಸಿಕ ಒತ್ತಡ ಮತ್ತು ಗೇಮಿಂಗ್ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದೆ.  

Read Full Story

11:42 AM (IST) Feb 04

ಒಂದೇ ದಿನದಲ್ಲಿ $285 ಬಿಲಿಯನ್ ಸಾಫ್ಟ್‌ ವೇರ್ ಸ್ಟಾಕ್‌ ಉಡೀಸ್; ಶುರುವಾಯ್ತು SaaSpocalypse ಭಯ! ಏನಿದು ಘಟನೆ?

SaaSpocalypse ಆಂಥೋಪಿಕ್ ಕಂಪನಿಯು ಬಿಡುಗಡೆ ಮಾಡಿದ ಹೊಸ AI ಪ್ಲಗಿನ್‌ಗಳು, ಜಾಗತಿಕ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ 'SaaSpocalypse' ಎಂಬ ಬಿರುಗಾಳಿಯನ್ನೇ ಎಬ್ಬಿಸಿವೆ. ಈ ಅಪ್‌ಡೇಟ್‌ನಿಂದಾಗಿ ಕಾನೂನು ಮತ್ತು ಐಟಿ ವಲಯದ ದೈತ್ಯ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿದೆ.

Read Full Story

11:15 AM (IST) Feb 04

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಕೇಳಿ ಬಂದಿರುವ ಭಾರತೀಯ ಮೂಲದ ಅಮೆರಿಕನ್ ದೀಪಕ್ ಚೋಪ್ರಾ ಯಾರು?

ಅಮೆರಿಕಾದ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಜಗತ್ತಿನ ಹಲವು ಖ್ಯಾತನಾಮರು ಭಾಗಿಯಾಗಿದ್ದಾರೆ ಎನ್ನಲಾದ ಜೆಫ್ರಿ ಎಪ್‌ಸ್ಟೀನ್ ಸೆ*ಕ್ಸ್ ಹಗರಣದ ದಾಖಲೆಗಳು ಒಂದೊಂದಾಗಿ ಬಿಡುಗಡೆಯಾಗುತ್ತಿದೆ ಈಗ ಭಾರತೀಯ ಮೂಲದ ಅಮೆರಿಕನ್ ಧಾರ್ಮಿಕ ಗುರು, ದೀಪಕ್ ಚೋಪ್ರಾ  ಹೆಸರು ಕೂಡ ಈ ಎಪ್‌ಸ್ಟೀನ್ ಹಗರಣದಲ್ಲಿ ಕೇಳಿ ಬಂದಿದೆ

Read Full Story

11:08 AM (IST) Feb 04

Pariksha Pe Charcha ಫ್ರೆಬ್ರವರಿ 6ಕ್ಕೆ 'ಪರೀಕ್ಷಾ ಪೇ ಚರ್ಚಾ' - ವಿದ್ಯಾರ್ಥಿನಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿಯವರ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ 9ನೇ ಆವೃತ್ತಿ ಫೆಬ್ರವರಿ 6 ರಂದು ನಡೆಯಲಿದೆ. ಪರೀಕ್ಷಾ ಭಯ ಹೋಗಲಾಡಿಸಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಪ್ರಧಾನಿ ಸಂವಾದ ನಡೆಸಲಿದ್ದಾರೆ. ಈ ಬಾರಿ ದಾಖಲೆಯ 4.5 ಕೋಟಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

Read Full Story

11:01 AM (IST) Feb 04

ಮನೆಯಲ್ಲೇ 5-ಸ್ಟಾರ್ ಹೋಟೆಲ್ ಫೀಲ್ ಬೇಕಾ? ಈ ಸಿಂಪಲ್ ಟ್ರಿಕ್ಸ್‌ನಿಂದ ಮನೆ ಡೆಕೋರೇಟ್ ಮಾಡಿ!

ನಿಮ್ಮ ಮನೆಯೂ ಶಾಂತ, ಕ್ಲಾಸಿಕ್ ಮತ್ತು ಐಷಾರಾಮಿ ಅನುಭವ ನೀಡಬೇಕೇ? ಹಾಗಿದ್ರೆ ಹೋಟೆಲ್ ಬಿಲ್ ಇಲ್ಲದೆಯೇ 5-ಸ್ಟಾರ್ ಹೋಟೆಲ್ ವೈಬ್ ಪಡೆಯಬಹುದು. ಅದಕ್ಕಾಗಿ ಇಲ್ಲಿ 6 ಅತ್ಯುತ್ತಮ ಹೋಮ್ ಡೆಕೋರ್ ಐಡಿಯಾಗಳಿವೆ.

Read Full Story

10:37 AM (IST) Feb 04

ದಿನಕ್ಕೆ ಕೇವಲ ₹8 ಖರ್ಚು, ವರ್ಷವಿಡೀ ಅನ್‌ಲಿಮಿಟೆಡ್‌ ಕಾಲ್, ಬಂಪರ್ ಡೇಟಾ! BSNLನ ಈ ಪ್ಲಾನ್ ನೋಡಿದ್ರಾ?

ದುಬಾರಿ ರೀಚಾರ್ಜ್‌ಗಳಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿಯೇ ಇದೆ. BSNL ತನ್ನ ಬಳಕೆದಾರರಿಗೆ ಎರಡು ವಾರ್ಷಿಕ ಪ್ಲಾನ್‌ಗಳನ್ನು ನೀಡುತ್ತಿದೆ. ಒಮ್ಮೆ ರೀಚಾರ್ಜ್ ಮಾಡಿದರೆ, ಪೂರ್ತಿ 365 ದಿನ ಕಾಲ್, ಡೇಟಾ, SMS ಬಗ್ಗೆ ಚಿಂತೆಯೇ ಇರುವುದಿಲ್ಲ. ಇದರಲ್ಲಿ ದಿನದ ಖರ್ಚು ಕೇವಲ 8-9 ರೂ. ಅಷ್ಟೇ.
Read Full Story

10:01 AM (IST) Feb 04

ಮುಗಿತಪ್ಪಾ ಇಳಿಕೆ ಕಾಲ? 5 ದಿನದ ನಂತ್ರ ಏರಿಕೆಯಾಗಿರುವ ಚಿನ್ನದ ಬೆಲೆಯನ್ನೊಮ್ಮೆ ನೋಡಿ

ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ. 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಗಣನೀಯ ಏರಿಕೆ ದಾಖಲಾಗಿದೆ.
Read Full Story

08:53 AM (IST) Feb 04

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ! 30 ವರ್ಷಗಳ ಬಾಯ್ಕಾಟ್‌ದು ಒಂದು ಲೆಕ್ಕ, ಈಗಿನದ್ದು ಒಂದು ಲೆಕ್ಕ!

ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿದೆ. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಬಹಿಷ್ಕಾರಗಳು ಇದೇ ಮೊದಲಲ್ಲ; 1996, 2003ರ ವಿಶ್ವಕಪ್‌ ಸೇರಿದಂತೆ ಹಲವು ತಂಡಗಳು ನಿರ್ದಿಷ್ಟ ಪಂದ್ಯಗಳನ್ನು ಬಹಿಷ್ಕರಿಸಿದ್ದವು.  

Read Full Story

07:30 AM (IST) Feb 04

Father of All Deals - ಟ್ರಂಪ್‌ ಮಣಿಸಿದ ಮೋದಿ? ಭಾರತದ ವ್ಯಾಪಾರ ಇತಿಹಾಸದಲ್ಲೇ ಮೆಗಾ ಡೀಲ್, ಇಲ್ಲಿದೆ ಪೂರ್ಣ ವಿವರ

ಭಾರತ ಮತ್ತು ಅಮೆರಿಕ ನಡುವೆ 'ಫಾದರ್‌ ಆಫ್‌ ಡೀಲ್ಸ್‌' ಎಂದು ಬಣ್ಣಿಸಲಾದ ಮಹತ್ವದ ಒಪ್ಪಂದವೊಂದು ಜಾರಿಯಾಗಿದ್ದು, ಅಮೆರಿಕವು ಭಾರತದ ಮೇಲಿನ ತೆರಿಗೆಯನ್ನು ಶೇ.50ರಿಂದ ಶೇ.18ಕ್ಕೆ ಇಳಿಸಿದೆ. ಈ ಐತಿಹಾಸಿಕ ತೆರಿಗೆ ಕಡಿತದಿಂದಾಗಿ ಭಾರತ ಏಷ್ಯಾದಲ್ಲೇ ಅತ್ಯಂತ ಕಡಿಮೆ ತೆರಿಗೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ.

Read Full Story

More Trending News