ನ್ಯೂಯಾರ್ಕ್: ನ್ಯೂಯಾರ್ಕ್‌ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆರ್‌ಎಸ್‌ಎಸ್ ಮೋಹನ್ ಭಾಗವತ್ ಅವರು ಭಾಗಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್ ವಿರುದ್ಧ ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸಿದ್ದಾರೆ, ‘ಒಂದು ಜಗತ್ತು: ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಭಾಗವತ್ ಮಾತನಾಡಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಖಲಿಸ್ತಾನಿ ಪರ ಹೋರಾಟಗಾರರು ‘ಆರ್‌ಎಸ್‌ಎಸ್ ಹಿಂದೂ ಪ್ರಾಬಲ್ಯ ಮತ್ತು ಅಲ್ಪಸಂಖ್ಯಾತರನ್ನು ಹೊರಗಿಡುವಲ್ಲಿ ಉತ್ತೇಜಿಸುತ್ತಿದೆ’ ಎಂದು ಆರೋಪಿಸಿ ಪ್ರತಿಭಟಿಸಿದರು. ಈ ವೇಳೆ ಖಲಿಸ್ತಾನಿ ಧ್ವಜಗಳನ್ನು ಪ್ರದರ್ಶಿಸಿ, ಅವರ ಪರ ಘೋಷಣೆಗಳನ್ನು ಕೂಗಿದರು. ಭಾರತದ ರಾಷ್ಟ್ರಧ್ವಜ, ಭಾಗವತ್ ಫೋಟೋಗಳನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ದೇಶವಿರೋಧಿ ಕೃತ್ಯ ಎಸಗಿದರು.

10:49 PM (IST) Aug 31
ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕಿನಿಂದ ಬಳಲುತ್ತಿರುವ 87 ವರ್ಷದ ಅಣ್ಣಾ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
09:50 PM (IST) Aug 31
ಕೇರಳದ ಗ್ರಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹಮದ್ ಅವರು ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಬರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಸಮರ್ಥಿಸಿಕೊಂಡಿದ್ದಾರೆ.
09:29 PM (IST) Aug 31
08:47 PM (IST) Aug 31
ಭಾರತದ 7.8% ಜಿಡಿಪಿ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ನ ಪವನ್ ಖೇರಾ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಕೇವಲ ಒಂದು ತ್ರೈಮಾಸಿಕದ ಬೆಳವಣಿಗೆಯನ್ನು 'ಆರ್ಥಿಕ ವಸಂತ' ಎನ್ನಲಾಗದು
08:28 PM (IST) Aug 31
07:53 PM (IST) Aug 31
ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಎಲಿಸ್ ಪೆರಿ 120 ಕೋಟಿ ರೂ. ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮಿಥಾಲಿ ರಾಜ್, ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಕೂಡ ಟಾಪ್ 5ನಲ್ಲಿ ಸ್ಥಾನ ಪಡೆದಿದ್ದು, ಮಹಿಳಾ ಕ್ರಿಕೆಟ್‌ನ ಬೆಳೆಯುತ್ತಿರುವ ಆರ್ಥಿಕ ಶಕ್ತಿಯನ್ನು ಸಾರಿದ್ದಾರೆ.
07:13 PM (IST) Aug 31
ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ 'ಕಾನೂನುಬಾಹಿರವಾಗಿ' ರಚನೆಯಾದ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಭಾರತ ತಿರಸ್ಕರಿಸಿದ್ದು, ತನ್ನ ಸಾರ್ವಭೌಮ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
06:51 PM (IST) Aug 31
05:54 PM (IST) Aug 31
05:28 PM (IST) Aug 31
05:14 PM (IST) Aug 31
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಮೊದಲ ಮಗುವಿನ ಹೆಸರಿನ ಬಗ್ಗೆ ಅಭಿಮಾನಿಯೊಬ್ಬರು ವಿಶೇಷ ಸಲಹೆ ನೀಡಿದ್ದಾರೆ. ‘ಸಮ್ರಾಜ್’ ಎಂಬ ಹೆಸರು ಸೂಚಿಸಿದ ಫ್ಯಾನ್‌ಗೆ ಸಮಂತಾ ತಮಾಷೆಯಾಗಿ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.
05:12 PM (IST) Aug 31
ದೆಹಲಿಯಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಚಾಲಕ ಮತ್ತು ನಿರ್ವಾಹಕ ಸಾಮೂಹಿಕ ಅ*ಚಾರ ಎಸಗಿದ್ದಾರೆ. ಸುಮಾರು 47 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಈ ಘೋರ ಕೃತ್ಯ ನಡೆದಿದ್ದು, ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
04:56 PM (IST) Aug 31
ನಝಾಫ್’ಗಢದ ನವಾಬ ವಿರೇಂದ್ರ ಸೆಹ್ವಾಗ್ ತನ್ನ ನಿರ್ಭೀತ ಬ್ಯಾಟಿಂಗ್ನಿಂದಲೇ ಹೆಸರುವಾಸಿ. ಆದರೆ 2002ರ ನಾಟ್ ವೆಸ್ಟ್ ಸರಣಿಯಲ್ಲಿ ಬೇಜವಾಬ್ದಾರಿ ಹೊಡೆತಕ್ಕೆ ಔಟಾದಾಗ, ಕೋಚ್ ಜಾನ್ ರೈಟ್ ಡ್ರೆಸ್ಸಿಂಗ್ ರೂಮ್ನಲ್ಲಿ ಸೆಹ್ವಾಗ್ರ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿದ್ದರು. ಈ ಘಟನೆಯಿಂದ ನೊಂದ ಸೆಹ್ವಾಗ್ ಭಾರತಕ್ಕೆ ಮರಳಲು ನಿರ್ಧರಿಸಿದ್ದರಂತೆ.
04:48 PM (IST) Aug 31
ನಟಿ ತ್ರಿಶಾ ಕೃಷ್ಣನ್ ಲಂಡನ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಜೊತೆಗಿನ ಪ್ರೇಮ ವದಂತಿ ನಡುವೆ ವಿಡಿಯೋ ವೈರಲ್ ಆಗಿದ್ದು, ಸೆಲೆಬ್ರಿಟಿ ಪ್ರೈವಸಿಗೆ ಗೌರವ ನೀಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
04:46 PM (IST) Aug 31
ಮಹಾರಾಷ್ಟ್ರದ 47 ವರ್ಷದ ರಮಾಬಾಯಿ ರಣವೀರ್ ತಮ್ಮ ಮಗಳ ಶಿಕ್ಷಣದ ವೆಚ್ಚಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಾಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದ ಇವರು, ಆ ಬಹುಮಾನದ ಮೊತ್ತವನ್ನು ಮಗಳ ಓದಿಗಾಗಿ ಮೀಸಲಿಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
04:17 PM (IST) Aug 31
04:09 PM (IST) Aug 31
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಅತ್ಯಂತ ಶಕ್ತಿಶಾಲಿ 'ಎಲ್‌ವಿಎಂ-3' ರಾಕೆಟ್ ತಂತ್ರಜ್ಞಾನವನ್ನು ಖಾಸಗಿ ವಲಯಕ್ಕೆ ವರ್ಗಾಯಿಸಲು ಮುಂದಾಗಿದೆ. ಈ ಒಪ್ಪಂದಕ್ಕಾಗಿ ಅದಾನಿ, ಎಲ್&ಟಿ, ಜೆಎಸ್‌ಡಬ್ಲ್ಯೂ ಸೇರಿದಂತೆ ಹಲವು ದೈತ್ಯ ಸಂಸ್ಥೆಗಳು ತೀವ್ರ ಸ್ಪರ್ಧೆ ನಡೆಸುತ್ತಿವೆ.
03:28 PM (IST) Aug 31
01:51 PM (IST) Aug 31
01:43 PM (IST) Aug 31
01:32 PM (IST) Aug 31
12:30 PM (IST) Aug 31
11:55 AM (IST) Aug 31
11:54 AM (IST) Aug 31
11:25 AM (IST) Aug 31
ತಮ್ಮ ನಗು, ನಟನೆ ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ರಶ್ಮಿಕಾ, ಇದೀಗ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಹಂಚಿಕೊಂಡಿರುವ ಒಂದು ಎಮೋಷನಲ್ ಮತ್ತು ಕುತೂಹಲಕಾರಿ ಪೋಸ್ಟ್!
11:07 AM (IST) Aug 31
ಸಿಎಂ ಜೊಸೆಫ್ ವಿಜಯ್ ಹಲವು ಸವಾಲು ಎದುರಿಸಿ ತಮಿಳಿನಾಡಿನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇದೀಗ ಮೈತ್ರಿ ಪಕ್ಷ ಕಾಂಗ್ರೆಸ್ ಮೊದಲ ಶಾಕ್ ಕೊಟ್ಟಿದೆ. ವಿಜಯ್ ಸರ್ಕಾರದ ಕಾಂಗ್ರೆಸ್ ಸಚಿವರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
10:22 AM (IST) Aug 31
10:06 AM (IST) Aug 31
09:40 AM (IST) Aug 31
09:12 AM (IST) Aug 31