ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಎಕ್ಸ್‌ಪ್ರೆಸ್‌ವೇಗಳಲ್ಲಿ ಇನ್ಮುಂದೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಿದಂತೆ ಆದೇಶಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಪ್ರಕಾರ, ರಸ್ತೆಗಳಲ್ಲಿ ನಿಗದಿ ಪಡಿಸಿರುವ ಗರಿಷ್ಠ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ವೇಗದಲ್ಲಿ ಚಲಾಯಿಸಿದರೂ ಚಲನ್ ಜಾರಿಮಾಡಬಾರದು. ಅದಕ್ಕಿಂತ ಹೆಚ್ಚಿನ ವೇಗ ಮೀರಿದರೆ ಚಲನ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸ್ವಲ್ಪ ವೇಗದಲ್ಲಿಯೂ ಚಲಿಸಿದರೂ ದಂಡ ಬೀಳುವ ಆತಂಕದಲ್ಲಿ ವಾಹನ ಸವಾರರು ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.

10:59 PM (IST) Oct 29
10:47 PM (IST) Oct 29
ಬಾಲಿವುಡ್ ಸೆಲೆಬ್ರಿಟಿ ಓರಿ ಅವರು 'ಥುಂಬಾಡ್' ಚಿತ್ರದ ಹಸ್ತರ್ ರೂಪದಲ್ಲಿ ಕಾಣಿಸಿಕೊಂಡು ಹ್ಯಾಲೋವೀನ್ ಆಚರಿಸಿದ್ದಾರೆ. ಇದರ ಬೆನ್ನಲ್ಲೇ 'ಥುಂಬಾಡ್ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಆಲಿಯಾ ಭಟ್ ಮತ್ತು ನವಾಜುದ್ದೀನ್ ಸಿದ್ದಿಕಿ ನಟಿಸುವುದು ಖಚಿತವಾಗಿದೆ.
10:30 PM (IST) Oct 29
10:17 PM (IST) Oct 29
09:31 PM (IST) Oct 29
ನಟಿ ಕೀರ್ತಿ ಸುರೇಶ್ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ, ತಮ್ಮ ಕೆಲಸವೇ ಉತ್ತರ ನೀಡಲಿ ಎಂದು ಹೇಳಿದ್ದಾರೆ. ಅಭಿಮಾನಿಗಳ ಜೊತೆಗಿನ ಒಡನಾಟ ಮತ್ತು ವೈಯಕ್ತಿಕ ಮಿತಿಗಳ ಬಗ್ಗೆ ನಟಿ ಹಂಚಿಕೊಂಡ ವಿಚಾರಗಳು ಇಲ್ಲಿವೆ.
08:52 PM (IST) Oct 29
1999ರಲ್ಲಿ ಅನಿಲ್ ಕುಂಬ್ಳೆ ಅವರ 10 ವಿಕೆಟ್ ಸಾಧನೆಯನ್ನು ತಡೆಯಲು ಪಾಕಿಸ್ತಾನದ ಆಟಗಾರರು ಉದ್ದೇಶಪೂರ್ವಕವಾಗಿ ರನ್ ಔಟ್ ಆಗಲು ಸಂಚು ರೂಪಿಸಿದ್ದರು ಎಂಬ ರಹಸ್ಯವನ್ನು ವಕಾರ್ ಯೂನಿಸ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
07:26 PM (IST) Oct 29
ಸೂಪರ್‌ಸ್ಟಾರ್ ರಜನಿಕಾಂತ್ ‘ಜೈಲರ್ 2’ ಬಳಿಕವೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಧರ್ಮನ್’ ಚಿತ್ರದ ಚಿತ್ರೀಕರಣದ ಜೊತೆಗೆ ಕಮಲ್ ಹಾಸನ್ ಜೊತೆಗಿನ ಮೆಗಾ ಮಲ್ಟಿಸ್ಟಾರರ್‌ನ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.
06:43 PM (IST) Oct 29
06:30 PM (IST) Oct 29
ಕಾಫಿ ವಿತ್ ಕರಣ್ 9 ಶೋನಲ್ಲಿ ತಾರಾ ಸುತಾರಿಯಾ ಬಗ್ಗೆ ಕಮೆಂಟ್ ಮಾಡಿದ ಜಾನ್ವಿ ಕಪೂರ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ವೀರ್ ಪಹಾರಿಯಾಗೆ ಜಾನ್ವಿ ನೀಡಿದ ಸಲಹೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
06:30 PM (IST) Oct 29
06:27 PM (IST) Oct 29
05:10 PM (IST) Oct 29
04:59 PM (IST) Oct 29
ಅಂಟಾರ್ಕ್ಟಿಕಾದಿಂದ ಹಿಂದೂ ಮಹಾಸಾಗರಕ್ಕೆ ಹರಿಯುವ ಬೃಹತ್ ಜಲರಾಶಿಯ ಗುಣಲಕ್ಷಣಗಳಲ್ಲಿ 2016ರ ನಂತರ ಭಾರಿ ಬದಲಾವಣೆಯಾಗಿದೆ ಎಂದು ಐಐಎಸ್‌ಸಿ ಮತ್ತು ಯುಕೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
04:59 PM (IST) Oct 29
04:12 PM (IST) Oct 29
ವಿನೋದ್ ಕಾಪ್ರಿ ನಿರ್ದೇಶನದ ‘ಪೈರ್’ ಸಿನಿಮಾ ಅ.30ರಂದು ಬಿಡುಗಡೆಯಾಗುತ್ತಿದೆ. ಹಿಮಾಲಯದ ಹಳ್ಳಿಯ 80ರ ವೃದ್ಧ ಪದಮ್ ಸಿಂಗ್ ಹಾಗೂ 70ರ ಹೀರಾದೇವಿ ನಟಿಸಿರುವ ಈ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ 18 ಪ್ರಶಸ್ತಿಗಳನ್ನು ಗೆದ್ದಿದೆ.
03:51 PM (IST) Oct 29
ಬಾಂಗ್ಲಾದೇಶದ ಗಲಭೆ ವೇಳೆ ಅಂದಿನ ಪ್ರಧಾನಿ ಶೇಕ್ ಹಸಿನಾ ಹೆಲಿಕಾಪ್ಟರ್ ಮೂಲಕ ದೇಶ ತೊರೆಯುತ್ತಿರುವ ದೃಶ್ಯ ಸೆರೆ ಹಿಡಿದಿದ್ದ ಮಾಜಿ ವಾಯುಸೇನಾಧಿಕಾರಿ ಶವವಾಗಿ ಪತ್ತೆಯಾಗಿದ್ದಾರೆ. ನದೀ ತೀರದಲ್ಲಿ ಶವ ಪತ್ತೆಯಾಗಿದೆ.
03:47 PM (IST) Oct 29
03:31 PM (IST) Oct 29
02:40 PM (IST) Oct 29
ಭಾರತೀಯ ರೈಲ್ವೆಯು 'ಘರ್ ಸೇ ಘರ್ ತಕ್' ಎಂಬ ಹೊಸ ಆ್ಯಪ್ ಆಧಾರಿತ ಪಾರ್ಸೆಲ್ ಸೇವೆಯನ್ನು ಪರಿಚಯಿಸುತ್ತಿದೆ. ಇದರ ಮೂಲಕ ಗ್ರಾಹಕರು ಮನೆಯಿಂದಲೇ ಪಾರ್ಸೆಲ್ ಬುಕ್ ಮಾಡಬಹುದು ಮತ್ತು ಲಾಜಿಸ್ಟಿಕ್ಸ್ ಕಂಪನಿಗಳು ಮನೆಗೇ ಬಂದು ಪಿಕ್ ಅಪ್ ಮಾಡಿ ಡೆಸ್ಟಿನೇಷನ್ ವಿಳಾಸಕ್ಕೆ ತಲುಪಿಸುತ್ತವೆ.
02:35 PM (IST) Oct 29
01:43 PM (IST) Oct 29
01:08 PM (IST) Oct 29
01:03 PM (IST) Oct 29
12:59 PM (IST) Oct 29
ಆರೆಸ್ಸೆಸ್ ಮತ್ತು ಬಿಜೆಪಿ ಭದ್ರಕೋಟೆಯಾದ ನಾಗ್ಪುರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಬಿಜೆಪಿಯೊಳಗಿನ ಭಿನ್ನಮತ, ಅಸಿಂಧು ಮತಗಳು ಮತ್ತು ಮಹಾವಿಕಾಸ್ ಅಘಾಡಿಯ ಒಗ್ಗಟ್ಟು ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ಸೋಲಿಗೆ ಕಾರಣವಾದವು.
11:55 AM (IST) Oct 29
11:54 AM (IST) Oct 29
11:22 AM (IST) Oct 29
ಉತ್ತರ ಪ್ರದೇಶದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಭರ್ಜರಿ ಗೆಲುವು ಸಾಧಿಸಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಗೆಲುವು ಪಡೆದುಕೊಂಡಿದೆ.
11:18 AM (IST) Oct 29
11:17 AM (IST) Oct 29
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ನಟ ನಾಸಿರುದ್ದೀನ್ ಶಾ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾ ಅವರನ್ನು ಅಪಾಯಕಾರಿ 'ಅರ್ಬನ್ ನಕ್ಸಲ್' ಎಂದು ಕರೆದಿರುವ ಸಚಿವರು, ಅವರ ನಿಜಬಣ್ಣ ಈಗ ಬಯಲಾಗಿದೆ ಎಂದಿದ್ದಾರೆ.
11:06 AM (IST) Oct 29
10:21 AM (IST) Oct 29
4 ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಆದರೆ, ಆರೆಸ್ಸೆಸ್ ಭದ್ರಕೋಟೆಯಾದ ನಾಗ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ನಾಗ್ಪುರ ಇನ್ಮುಂದೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆಯಾ?
10:14 AM (IST) Oct 29
ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಆಂಧ್ರದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಲಾ 20-26 ಸೆ.ಮೀನವರೆಗೆ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಾವಿರಾರು ಜನರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
09:44 AM (IST) Oct 29
08:43 AM (IST) Oct 29
ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದ ಹಾಗೂ ಸಂಪ್ರದಾಯ ಪಾಲಿಸದ ಹಿಂದೂಯೇತರರಿಗೆ ದೇವಸ್ಥಾನದ ಆವರಣದೊಳಗೆ ಪ್ರವೇಶ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಧಾರ್ಮಿಕ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ಆದೇಶ ನೀಡಲಾಗಿದೆ.
08:26 AM (IST) Oct 29