ಜಮ್ಮು: ಪಾಕ್ ಬೆಂಬಲಿತ 30 ಉಗ್ರರು ಜಮ್ಮು ಪ್ರಾಂತ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಎತ್ತರದ ಪ್ರದೇಶಗಳು, ಹಿಮಭರಿತ ಪರ್ವತಗಳಲ್ಲಿ ಅಡಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಡಿ.21ರಿಂದ ತೀವ್ರ ಚಳಿಯ ಅವಧಿ ಆರಂಭವಾಗಿದ್ದು, ಈ ವೇಳೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಕೊಂಚ ಮಟ್ಟಿಗೆ ಕಡಿಮೆಗೊಳಿಸುತ್ತದೆ. ಈ ಅವಧಿಯ ಲಾಭ ಪಡೆಯಲು ಉಗ್ರರು ಜಮಾಯಿಸಿದ್ದು, ಕಿಶ್ತ್‌ವಾರ್ ಮತ್ತು ದೋಡಾ ಪ್ರದೇಶದಲ್ಲಿದ್ದಾರೆ ಎನ್ನಲಾಗಿದೆ.
08:29 PM (IST) Dec 29
ಪ್ರೀತಿಸಿದ ಹುಡುಗಿ ಬೆನ್ನಲ್ಲೇ ಪೋಷಕರು ತೋರಿಸಿದಾಕೆ ಜೊತೆಗೂ ಮದುವೆ, ಮೃತ ಕತೆ ಕಟ್ಟಿ ತಗ್ಲಾಕೊಂಡ ಘಟನೆ ಇದು. ಅಪಘಾತದಲ್ಲಿ ಮೃತಪಟ್ಟ ರೀತಿ ಘಟನೆ ಸೃಷ್ಟಿ ಮಾಡಿದ್ದಾನೆ. ಪರಿಣಾಮ ಈತನ ಎರಡು ಮದುವೆಯಿಂದ ಹಿಡಿದು ಎಲ್ಲಾ ಕಳ್ಳಾಟ ಬಯಲಾಗಿದೆ.
07:18 PM (IST) Dec 29
ಇಲ್ಲೊಂದು ಕಡೆ ಗರ್ಭಾಶಯದ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದ 82 ವರ್ಷದ ಮಹಿಳೆಗೆ ತೀವ್ರ ಆಘಾತ ಕಾದಿತ್ತು.ಆಕೆಗೆ ಸ್ಕ್ಯಾನಿಂಗ್ ಮಾಡಿದ ವೈದ್ಯರು ಕೂಡ ಆಘಾತಗೊಂಡಿದ್ದರು. ಕಾರಣ ಆಕೆಯ ಫೆಲ್ವಿಕ್‌ನಲ್ಲಿ ಸ್ಟೋನ್ ಬೇಬಿ ಎಂದು ಕರೆಯುವ ಮಗುವಿತ್ತು.
07:04 PM (IST) Dec 29
ಭಾರತೀಯರು ಮನೆಗಳಲ್ಲಿ ಇಟ್ಟಿರುವ ಚಿನ್ನದ ಮೌಲ್ಯ ಎಷ್ಟು ಗೊತ್ತಾ? ಜಿಡಿಪಿಯನ್ನೇ ಮೀರಿಸಿ ದಾಖಲೆ, ಇದರ ಮೌಲ್ಯ ಭಾರತದ ಜಿಡಿಪಿಯನ್ನೇ ಮೀರಿಸಿದೆ. ಮಾರ್ಗನ್ ಸ್ಟಾನ್ಲಿ ವರದಿ ಈ ಕುರಿತು ರೋಚಕ ಮಾಹಿತಿಯನ್ನು ನೀಡಿದೆ. ಈ ಚಿನ್ನದಲ್ಲಿ ನಿಮ್ಮ ಪಾಲೆಷ್ಟು?
06:40 PM (IST) Dec 29
06:05 PM (IST) Dec 29
2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ, ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ತಮಿಳುನಾಡನ್ನು 4 ವಿಕೆಟ್‌ಗಳಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಮಯಾಂಕ್, ಶ್ರೀಜಿತ್ ಮತ್ತು ಶ್ರೇಯಸ್ ಗೋಪಾಲ್ ಅರ್ಧಶತಕಗಳ ನೆರವಿನಿಂದ 289 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.
06:03 PM (IST) Dec 29
ಚೊಚ್ಚಲ ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಆತಂಕದಲ್ಲಿ, ಪತಿಯೊಬ್ಬ ಆಕೆಯನ್ನೇ ಮನೆಯಲ್ಲೇ ಮರೆತು ಲಗೇಜ್ ಸಮೇತ ಕಾರಿನಲ್ಲಿ ಒಬ್ಬನೇ ಹೊರಟು ಹೋದ ಘಟನೆ ನಡೆದಿದ್ದು, ಈ ಘಟನೆಯವ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
05:22 PM (IST) Dec 29
ನವದೆಹಲಿ: ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಟೆಸ್ಟ್ ತಂಡದಿಂದ ಕೆಳಗಿಳಿಸಿ, ವಿವಿಎಸ್ ಲಕ್ಷ್ಮಣ್‌ಗೆ ಪಟ್ಟ ಕಟ್ಟಲಾಗುತ್ತದೆ ಎನ್ನುವ ಗಾಳಿ ಸುದ್ದಿಯ ಬಗ್ಗೆ ಮೊದಲ ಸಲ ಬಿಸಿಸಿಐ ತುಟಿಬಿಚ್ಚಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
04:27 PM (IST) Dec 29
ಮಿಮಿಕ್ರಿ ಕಲಾವಿದರೊಬ್ಬರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿ ನಕಲು ಮಾಡಿ ಕರ್ತವ್ಯಲೋಪ ಎಸಗಿದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಈ ಘಟನೆಯ ಆಡಿಯೋ ವೈರಲ್ ಆಗಿದೆ.
04:27 PM (IST) Dec 29
ಭಾರತದ ಪ್ರತಿಯೊಂದು ರೈಲ್ವೆ ನಿಲ್ದಾಣಕ್ಕೂ ತನ್ನದೇ ಆದ ಇತಿಹಾಸ ಮತ್ತು ವಿಶೇಷತೆಗಳಿವೆ. ಆದ್ರೆ ದೇಶದಲ್ಲಿ ಹೆಸರಿಲ್ಲದ ಒಂದು ರೈಲ್ವೆ ನಿಲ್ದಾಣ ಇದೆ ಅಂದ್ರೆ ನಂಬ್ತೀರಾ? ಹೌದು, ಪ್ಲಾಟ್‌ಫಾರ್ಮ್ ಮುಂದೆ ಇಟ್ಟಿರೋ ಹಳದಿ ಬೋರ್ಡ್ ಇವತ್ತಿಗೂ ಖಾಲಿಯಾಗೇ ಇರೋ ಒಂದು ಸ್ಟೇಷನ್ ಭಾರತದಲ್ಲಿದೆ.
04:23 PM (IST) Dec 29
ಅಪಘಾತದಲ್ಲಿ ಎಲೆಕ್ಷನ್ ಕಮಿಷನರ್ ತಂದೆಗೆ ಗಂಭೀರ ಗಾಯ, ಒಡಿಶಾ ಪ್ರವಾಸದಲ್ಲಿದ್ದ ಗ್ಯಾನೇಶ್ ಕುಮಾರ್ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ವಾಪಾಸ್ ಆಗಿದ್ದಾರೆ. ಬಿಎಲ್ಒ ಸಭೆಯನ್ನು ರದ್ದು ಮಾಡಿದ್ದಾರೆ
04:03 PM (IST) Dec 29
03:54 PM (IST) Dec 29
ಮುಂಬರುವ ಟಿ20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಗಿಲ್ ಬದಲಿಗೆ ಸ್ಥಾನ ಪಡೆದ ಸಂಜು ಆಯ್ಕೆಯನ್ನು ಮಾಜಿ ಕ್ರಿಕೆಟಿಗ ಉತ್ತಪ್ಪ ಬೆಂಬಲಿಸಿದರೆ, ಇಶಾನ್ ಕಿಶನ್ ಕೂಡ ಆರಂಭಿಕ ಸ್ಥಾನದ ರೇಸ್‌ನಲ್ಲಿದ್ದಾರೆ.
03:49 PM (IST) Dec 29
ಸ್ಮೃತಿ ಮಂಧನಾ To ತಮನ್ನಾ, ಈ ವರ್ಷ ಹಲವು ಸೆಲೆಬ್ರೆಟಿಗಳು ತಮ್ಮ ಸಂಬಂಧ ಮುರಿದುಕೊಂಡು ಬೇರೆ ಬೇರೆಯಾಗಿದ್ದಾರೆ. ಈ ಪೈಕಿ ಕೆಲವು ಕೋಹಾಲ ಸೃಷ್ಟಿಸಿದೆ. ಅನ್ಯೋನ್ಯವಾಗಿದ್ದ ಸಂಬಂಧಗಳು ಆರೋಪ ಪ್ರತ್ಯಾರೋಪ, ಹಲವು ಟ್ವಿಸ್ಟ್ ಮೂಲಕ ಬೇರ್ಪಟ್ಟಿದೆ.
03:03 PM (IST) Dec 29
ಇತ್ತೀಚೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಕಿರಣ್ ರಾವ್, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಆಸ್ಪತ್ರೆಯ ರಿಸ್ಟ್ ಬ್ಯಾಂಡ್‌ನಲ್ಲಿದ್ದ ಅವರ ಹೆಸರು ನೋಡಿ ಅವರ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.
02:55 PM (IST) Dec 29
ಹೊತ್ತಿ ಉರಿದ ಚಲಿಸುತ್ತಿದ್ದ ರೈಲಿನ ಬೋಗಿ, ಟಾಟಾ ನಗರ ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಬೋಗಿಗಳು ಹೊತ್ತಿ ಉರಿದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿರುವುದಾಗಿ ವರದಿಯಾಗಿದೆ.
01:55 PM (IST) Dec 29
ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರನ್ನು ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಬಹ್ರೇನ್‌ನಲ್ಲಿ ನಡೆದ ಖಾಸಗಿ ಪಂದ್ಯಾವಳಿಯಲ್ಲಿ ಎನ್‌ಒಸಿ ಇಲ್ಲದೆ ಭಾರತೀಯ ತಂಡಕ್ಕಾಗಿ ಆಡಿದ್ದು ಮತ್ತು ಭಾರತದ ಧ್ವಜವನ್ನು ಹೊದ್ದು ಸಂಭ್ರಮಿಸಿದ್ದರು.
01:43 PM (IST) Dec 29
ನಟ ದಳಪತಿ ವಿಜಯ್ 33 ವರ್ಷಗಳ ಸಿನಿ ಪಯಣಕ್ಕೆ ವಿದಾಯ ಹೇಳಿದ್ದಾರೆ. ಮಲೇಷ್ಯಾದಲ್ಲಿ ದಾಖಲೆಯ ಕಾರ್ಯಕ್ರಮದ ನಂತರ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ನೂಕುನುಗ್ಗಲಿಗೆ ಸಿಲುಕಿ ಕುಸಿದುಬಿದ್ದರು.
01:12 PM (IST) Dec 29
ಬಾಲಿವುಡ್ ನಟ ವರುಣ್ ಧವನ್ ತಮ್ಮ ಮುದ್ದಿನ ಶ್ವಾನ 'ಏಂಜೆಲ್' ಅನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
12:31 PM (IST) Dec 29
2017ರ ಉನ್ನಾವೋ ಅ*ತ್ಯಾಚಾರ ಪ್ರಕರಣದಲ್ಲಿ ದೋಷಿ ಕುಲದೀಪ್ ಸೆಂಗಾರ್‌ಗೆ ನೀಡಲಾಗಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುವುದಿಲ್ಲ, ಪ್ರಕರಣದ ಮುಂದಿನ ವಿಚಾರಣೆ ಜನವರಿಯಲ್ಲಿ ನಡೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
12:21 PM (IST) Dec 29
ಕೇಂದ್ರ ಸರ್ಕಾರವು ಮುಂಬೈ ಬಂದರಿನಲ್ಲಿ 'ವಿಕ್ಷಿತ್ ಭಾರತ್ ಮುಂಬೈ ಮರೀನಾ' ಎಂಬ ವಿಶ್ವ ದರ್ಜೆಯ ಮರೀನಾ ನಿರ್ಮಾಣಕ್ಕೆ 887 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಕಡಲ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ ಹೊಂದಿದ್ದು, 424 ವಿಹಾರ ನೌಕೆಗಳಿಗೆ ಸ್ಥಳಾವಕಾಶ ಕಲ್ಪಿಸಲಿದೆ.
11:55 AM (IST) Dec 29
11:55 AM (IST) Dec 29
11:43 AM (IST) Dec 29
10:53 AM (IST) Dec 29