ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಮದುವೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಕೇತನ್ ಹತ್ಯೆ ಮಾಡಿದ ಭಾವಿ ಪತ್ನಿ ಸಿಯಾ ಗೋಯೆಲ್ ಕ್ರೂ ಮನಸ್ಸನ್ನು ಜನರು ಖಂಡಿಸುತ್ತಿದ್ದಾರೆ. ಇದೇ ವೇಳೆ ಸಿಯಾ ಗೋಯೆಲ್ ತಾಯಿ ಘಟನೆ ಕುರಿತು ಮಾತನಾಡಿದ್ದಾರೆ. ನನ್ನ ಮಗಳು ತಪ್ಪು ಮಾಡಿದ್ದರೆ ನೇಣಿಗೆ ಹಾಕಿ. ಇತ್ತ ಸಿಯಾ ಗೊಯೆಲ್ ತಂದೆ ಕೂಡ ಇದೇ ಮಾತನ್ನು ಹೇಳಿದ್ದಾರೆ. ಮೋದಿ ಸರ್ಕಾರದ ಯೋಜನೆ, ವಿಪಕ್ಷಗಳ ಟೀಕೆ, ಹೊರ್ಮುಜ್‌ನಲ್ಲಿ ಸರಕು ಹಡಗಿನ ಮೇಲೆ ಇರಾನ್ ದಾಳಿ, ದೇಶ, ವಿದೇಶಗಳ ಕ್ಷಣ ಕ್ಷಣದ ಲೈವ್ ಸುದ್ದಿ ಅಪ್‌ಡೇಟ್ ಇಲ್ಲಿದೆ.

10:26 PM (IST) Jun 26
ಮೆಮೊರಿ ಘಟಕಗಳ ಬೆಲೆ ಏರಿಕೆಯಿಂದಾಗಿ ಆಪಲ್ ಭಾರತದಲ್ಲಿ ತನ್ನ ಮ್ಯಾಕ್‌ಬುಕ್, ಐಪ್ಯಾಡ್, ಮತ್ತು ಹೋಮ್‌ಪಾಡ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳ ಬೇಡಿಕೆಯೇ ಈ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಸದ್ಯಕ್ಕೆ ಐಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
09:50 PM (IST) Jun 26
08:04 PM (IST) Jun 26
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಮತ್ತು ಚಿನ್ನಾಭರಣಗಳನ್ನು ನೌಕರರೇ ಕಳ್ಳತನ ಮಾಡಿರುವ ಹಗರಣ ಬಯಲಾಗಿದೆ. ಹಿಡನ್ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಬ್ಯಾಂಕ್ ಠೇವಣಿಯಲ್ಲಾದ ವ್ಯತ್ಯಾಸಗಳಿಂದ ಈ ಕೃತ್ಯ ಬೆಳಕಿಗೆ ಬಂದಿದೆ.
07:03 PM (IST) Jun 26
ಕೇರಳದ ಕೊಲ್ಲಂನಲ್ಲಿ, ಅಕ್ರಮ ಸಂಬಂಧದ ಬಗ್ಗೆ ವಿದೇಶದಲ್ಲಿದ್ದ ಮಗಳಿಗೆ ತಿಳಿಸಿದ್ದಕ್ಕೆ ಅಳಿಯನೇ ವೃದ್ಧ ಅತ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಲವು ದಿನಗಳಿಂದ ನಡೆಯುತ್ತಿದ್ದ ಈ ಕಿರುಕುಳವನ್ನು ವೃದ್ಧೆ ಸಂಬಂಧಿಕರಿಗೆ ತಿಳಿಸಿದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
06:46 PM (IST) Jun 26
ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ನಡೆದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಆರು ಸಶಸ್ತ್ರ ಪಡೆಗಳ ಸಿಬ್ಬಂದಿ ಹೆಸರುಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವೀರ ಯೋಧರ ಹೆಸರುಗಳನ್ನು ನವದೆಹಲಿಯ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಕೆತ್ತಿಸಿ ಗೌರವಿಸಲಾಗುವುದು.
06:45 PM (IST) Jun 26
Kushboo Sundar Daughter Wedding: ರಣಧೀರ ಸಿನಿಮಾ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದ 55ರ ಹರೆಯದ ಖುಷ್ಬೂ ಸುಂದರ್ ಈಗ ಮಗಳ ಮದುವೆ ಖುಷಿಯಲ್ಲಿದ್ದಾರೆ. ಮಗಳ ಮದುವೆಯ ಫೋಟೋಗಳ ಸಮೇತ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ನೋಡಿ.
06:16 PM (IST) Jun 26
ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಭಾವಿ ಪತ್ನಿ ಹಾಗೂ ಆಕೆಯ ಪ್ರೇಮಿಯಿಂದ ಕೊಲೆಯಾದ ಕೇತನ್ ಅಗರ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೃತನ ಕುಟುಂಬಕ್ಕೆ ನ್ಯಾಯದ ಭರವಸೆ ನೀಡಿದ್ದಾರೆ.
05:26 PM (IST) Jun 26
04:38 PM (IST) Jun 26
04:33 PM (IST) Jun 26
ಅಯೋಧ್ಯೆ ರಾಮಮಂದಿರ ದೇಣಿಗೆಯಲ್ಲಿನ ದುರುಪಯೋಗದ ಆರೋಪಗಳ ಕುರಿತು ಸಿಎಂ ಯೋಗಿ ಆದಿತ್ಯನಾಥ್ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿರುವವರು, ಸಾಕ್ಷ್ಯಗಳಿದ್ದರೆ ಎಸ್‌ಐಟಿ ಮುಂದೆ ಹಾಜರುಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
04:32 PM (IST) Jun 26
04:10 PM (IST) Jun 26
04:05 PM (IST) Jun 26
Actor Nandamuri Balakrishna Movie: ತೆಲುಗು ನಟ ಬಾಲಯ್ಯ 112ನೇ ಸಿನಿಮಾ ಅಮರಾವತಿಯಲ್ಲಿ ಸೆಟ್ಟೇರಿದೆ. ಈ ಅದ್ದೂರಿ ಮುಹೂರ್ತ ಸಮಾರಂಭಕ್ಕೆ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್, ಕಂದುಲ ದುರ್ಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
04:05 PM (IST) Jun 26
02:36 PM (IST) Jun 26
ರಾಜಸ್ಥಾನ ಮೂಲದ ಆಲ್‌ರೌಂಡರ್ ಜೈ ಮುಂದ್ರಾ, ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಒಂದು ಕಾಲದಲ್ಲಿ ಕ್ರಿಕೆಟ್ ವೃತ್ತಿಜೀವನವನ್ನೇ ತೊರೆಯುವ ಹಂತದಲ್ಲಿದ್ದ ಮುಂದ್ರಾ, ಐರ್ಲೆಂಡ್‌ಗೆ ತೆರಳಿದ ನಂತರ ತಮ್ಮ ಕಠಿಣ ಪರಿಶ್ರಮದಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
01:50 PM (IST) Jun 26
ಪ್ರಿಯಾಂಕಾ ಚೋಪ್ರಾ ಅಮೆರಿಕಕ್ಕೆ ಕಾಲಿಟ್ಟಾಗ ಅಲ್ಲಿನ ಸ್ಟುಡಿಯೋಗಳು ಭಾರತೀಯ ನಟಿಯರನ್ನು ಕೇವಲ ಸಣ್ಣ ಅಥವಾ ಪೋಷಕ ಪಾತ್ರಗಳಿಗೆ ಸೀಮಿತಗೊಳಿಸಿದ್ದವು. ಆದರೆ ಪ್ರಿಯಾಂಕಾ ಅವರಿಗೆ ಬೇಕಾಗಿದ್ದು ಸೈಡ್ ರೋಲ್ ಅಲ್ಲ, ಬದಲಿಗೆ ಕಥೆಯನ್ನು ಮುನ್ನಡೆಸುವ ನಾಯಕಿ ಪಾತ್ರ.
12:50 PM (IST) Jun 26
12:44 PM (IST) Jun 26
12:04 PM (IST) Jun 26
15 ವರ್ಷದ ಭಾರತೀಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಯಿಂದ ಪಾಕಿಸ್ತಾನದಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಗೂಗಲ್ ಟ್ರೆಂಡ್ಸ್ ಪ್ರಕಾರ, ಪಾಕಿಸ್ತಾನಿ ಅಭಿಮಾನಿಗಳು ಅವರ ಬಗ್ಗೆ ಹೆಚ್ಚು ಹುಡುಕಾಟ ನಡೆಸುತ್ತಿದ್ದಾರೆ.
11:47 AM (IST) Jun 26
11:43 AM (IST) Jun 26
ಪುಣೆಯ ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ರನ್ನು ಅವರ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘೋರ ಕೃತ್ಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ ಆಕೆಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಸಿಯಾಳ ಪೋಷಕರೇ ಆಗ್ರಹಿಸಿದ್ದಾರೆ.
09:42 AM (IST) Jun 26
08:55 AM (IST) Jun 26
07:24 AM (IST) Jun 26
ಸಿಯಾ ಗೊಯೆಲ್ ಅರೆಸ್ಟ್ ಆಗುತ್ತಿದ್ದಂತೆ ಕೇತನ್ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಿಂದ ಆಘಾತಗೊಂಡಿರುವ ಸಿಯಾ ಗೊಯೆಲ್ ತಂದೆ ಪ್ರವೀಣ್ ಗೊಯೆಲ್ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಕೇತನ್ ಹತ್ಯೆಯಲ್ಲಿ ಯಾರ ಕೈವಾಡವಿದ್ದರೂ ಶಿಕ್ಷೆ ಆಗಬೇಕು. ತಪ್ಪು ಯಾರೇ ಮಾಡಿದ್ದರು, ಅದು ನನ್ನ ಮಗಳಾಗಿದ್ದರೂ ಕಠಿಣ ಶಿಕ್ಷೆಯಾಗಲಿ ಎಂದು ಪ್ರವೀಣ್ ಗೊಯೆಲ್ ಆಗ್ರಹಿಸಿದ್ದಾರೆ.