ನವದೆಹಲಿ: ‘ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸರ್ಕಾರವನ್ನು ತಮ್ಮ ವೈಯಕ್ತಿಕ ಆಸ್ತಿಯೆಂದು ಪರಿಗಣಿಸಿದರೆ ಅದಕ್ಕಿಂತ 10 ಪಟ್ಟು ಎದುರಿಸಬೇಕಾಗುತ್ತದೆ ಎನ್ನುವ ಸಂದೇಶ ವಿದ್ಯಾರ್ಥಿಗಳು ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು’ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಮಾತನಾಡಿರುವ ರಾಹುಲ್ ಗಾಂಧಿ, ‘ಧರ್ಮೇಂದ್ರ ಪ್ರಧಾನ್ ಭ್ರಷ್ಟಾಚಾರದ ಸಂಕೇತವಿದ್ದಂತೆ, ಅವರು ಹೋಗಿದ್ದು ಒಳ್ಳೆಯದಾಯ್ತು. ವಿದ್ಯಾರ್ಥಿಗಳ ಪ್ರತಿಭಟನೆಯು ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಪ್ರತಿನಿಧಿಸುವ ಭೂತಕಾಲ ಮತ್ತ ದೇಶದ ಭವಿಷ್ಯದ ನಡುವಿನ ಸಂಘರ್ಷ. ಭವಿಷ್ಯ ಭೂತಕಾಲವನ್ನು ಸೋಲಿಸುತ್ತದೆ’ ಎಂದಿದ್ದಾರೆ.
ಮುಂದುವರೆದಂತೆ, ‘ ಹೋರಾಟದ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಕೇಂದ್ರ ಗೃಹ ಸಚಿವರೇ ನೇರ ಹೊಣೆ’ ಎಂದು ಕಿಡಿಕಾರಿದರು.
10:42 PM (IST) Jul 26
Amala Akkineni Leaving Cinema: ಒಂದು ಕಾಲದ ಸ್ಟಾರ್ ನಟಿ ಅಮಲಾ ಅಕ್ಕಿನೇನಿ, ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದಕ್ಕೆ ಅಕ್ಕಿನೇನಿ ಕುಟುಂಬದ ನಿರ್ಬಂಧ ಕಾರಣ ಎಂದು ಹಲವರು ಭಾವಿಸಿದ್ದರು.
09:49 PM (IST) Jul 26
ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಾಧನೆ ಮಾಡಿದೆ. ವೈಟ್‌ಲೈಫ್ಟಿಂಗ್ ವಿಭಾಗದಲ್ಲಿ ಮೀರಾ ಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ವಿಶೇಷ ಅಂದರೆ ಮೀರಾಬಾಯಿ ಚಾನು ಅಪರೂಪದ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
09:04 PM (IST) Jul 26
ನೀಟ್ ಅಕ್ರಮದಿಂದ ಶುರುವಾದ ವಿದ್ಯಾರ್ಥಿಗಳ ಹೋರಾಟ ಇದೀಗ ದೇಶದ ಪರೀಕ್ಷಾ ಸುಧಾರಣೆಗೆ ನಾಂದಿ ಹಾಡಿದೆ. ಪ್ರಧಾನಿ ನರೇಂದ್ರ ಮೋದಿ ಇದೀಗ ಪರೀಕ್ಷಾ ಸುಧಾರಣೆಗೆ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ಈ ತಂಡದಲ್ಲಿ ಯಾರೆಲ್ಲಾ ಇದ್ದಾರೆ.
08:18 PM (IST) Jul 26
3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದ ಮೂಲಕ ಸರಣಿ ಕ್ಲೀನ್ ಸ್ಪೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರ ಭಾರತದ ಗೆಲುವಿನಲ್ಲಿ ಪ್ರಮುಖ ಕಾರಣವಾಗಿದೆ.
07:51 PM (IST) Jul 26
'ಲೆನಿನ್' ಸಿನಿಮಾ ಹಿಟ್ ಆದ ಬಳಿಕ ನಟಿ ಭಾಗ್ಯಶ್ರೀ ಬೋರ್ಸೆ ಬಗ್ಗೆ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಅವರ ಸಂಭಾವನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.
06:57 PM (IST) Jul 26
06:44 PM (IST) Jul 26
ನಟ ರಾಮ್ ಚರಣ್ ಅವರ ಕೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಕೊಯಮತ್ತೂರಿನಲ್ಲಿ ನಡೆಯಲಿದೆ. 'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯವಾಗಿತ್ತು. ಪ್ರಮೋಷನ್ ವೇಳೆ ಕೂಡ ಗಾಯದ ನೋವಿನಲ್ಲೇ ಕಾಣಿಸಿಕೊಂಡಿದ್ದರು. ಈ ಸರ್ಜರಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
06:27 PM (IST) Jul 26
Nagarjuna Daughter Wish: ನಟ ನಾಗಾರ್ಜುನ ಅವರಿಗೆ ಹೆಣ್ಣುಮಕ್ಕಳೆಂದರೆ ಬಹಳ ಇಷ್ಟ. ತಮಗೆ ಹೆಣ್ಣು ಮಗುವೇ ಹುಟ್ಟಬೇಕು ಎಂದು ಅವರು ತುಂಬಾ ಆಸೆಪಟ್ಟಿದ್ದರು. ಅದಕ್ಕಾಗಿ ಸಂಭ್ರಮವನ್ನೂ ಆಚರಿಸಿದ್ದರು.
05:38 PM (IST) Jul 26
ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರ ಓಟಿಟಿಯಲ್ಲಿ ಯಾವಾಗ ಮತ್ತು ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
05:14 PM (IST) Jul 26
ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ನಟನೆಯ 'ಸ್ಪಿರಿಟ್' ಚಿತ್ರದಲ್ಲಿ ಕತ್ರಿನಾ ಕೈಫ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ಈ ಬಗ್ಗೆ ಹರಿದಾಡುತ್ತಿರುವ ವರದಿಗಳು ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿವೆ.
04:37 PM (IST) Jul 26
ಸತತ ಸೋಲು, ಮನಸ್ತಾಪ, ಮಾಜಿ ಕ್ರಿಕೆಟಿಗರ ಆಕ್ರೋಶ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಬಳಿಕ ಟೀಂ ಇಂಡಿಯಾ ಜಿಂಬಾಬ್ಬೆ ಸರಣಿ ಗೆದ್ದಿದೆ. ಆದರೆ 3ನೇ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾದಲ್ಲಿ ತಳಮಳ ಶುರುವಾಗಿದೆ.
04:35 PM (IST) Jul 26
ಬಾಲಿವುಡ್‌ನ ಕ್ಯೂಟ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್. ಸೈಫ್ ತನಗೆ ಮದುವೆ ಪ್ರಪೋಸ್ ಮಾಡಿದ್ದು ಹೇಗೆ ಅನ್ನೋ ಸ್ವಾರಸ್ಯಕರ ಕಥೆಯನ್ನು ಕರೀನಾ ಒಮ್ಮೆ ಹಂಚಿಕೊಂಡಿದ್ದರು. ಆ ಕ್ಯೂಟ್ ಕಥೆ ಇಲ್ಲಿದೆ.
04:30 PM (IST) Jul 26
'RRR' ಮೂಲಕ ಆಸ್ಕರ್ ವೇದಿಕೆಯ ಮೇಲೆ ಭಾರತದ ಬಾವುಟ ಹಾರಿಸಿದವರು ಎಸ್‌ಎಸ್ ರಾಜಮೌಳಿ. ರಾಜಮೌಳಿ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಬಾಲಿವುಡ್‌ನ ಖಾನ್‌ಗಳು ಕೂಡ ತಮ್ಮ ಸಿನಿಮಾವನ್ನು ತಿಂಗಳುಗಟ್ಟಲೆ ಮುಂದೂಡುತ್ತಾರೆ. ಅಂತಹ ಈ ಅಜೇಯ ನಿರ್ದೇಶಕನ ಕೆರಿಯರ್‌ನಲ್ಲಿ ಒಂದೂ ಫ್ಲಾಪ್ ಇದೆಯಾ?
04:16 PM (IST) Jul 26
ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ 'ರಾಮಾಯಣ' ಚಿತ್ರತಂಡವು ಭಾಗವಹಿಸಿದ್ದವರಿಗೆ ವಿಶೇಷ ಉಡುಗೊರೆ ನೀಡಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಈ ಗಿಫ್ಟ್ ಬಾಕ್ಸ್‌ನಲ್ಲಿ ಚಿನ್ನದ ಬಣ್ಣದ ಶಂಖವಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
04:02 PM (IST) Jul 26
ಪ್ರೀತಿಗೆ ಭಾಷೆಯ ಹಂಗಿಲ್ಲ, ದೇಶದ ಗಡಿಗಳಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಪ್ತಸಾಗರದಾಚೆಯ ಸ್ಪೇನ್ ದೇಶದ ಹುಡುಗ ಹಾಗೂ ಆಂಧ್ರಪ್ರದೇಶದ ಹುಡುಗಿ ಈಗ ಅಪ್ಪಟ ತೆಲುಗು ಸಂಪ್ರದಾಯದಂತೆ ಮದುವೆಯಾಗಿ ದಂಪತಿಗಳಾಗಿದ್ದಾರೆ. ಈ ಅಪರೂಪದ ಪ್ರೇಮಕಥೆ ಮತ್ತು ಮದುವೆಯ ಕುರಿತಾದ ವಿಶೇಷ ವರದಿ ಇಲ್ಲಿದೆ.
03:42 PM (IST) Jul 26
ಕಾಕ್ರೋಚ್ ಜನತಾ ಪಾರ್ಟಿಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಇದೀಗ ಹಲವು ಜನತಾ ಪಾರ್ಟಿ ಹಾಗೂ ಆಂದೋಲನಗಳು ಹುಟ್ಟಿಕೊಂಡಿದೆ. ಈ ಪೈಕಿ ಜನರಲ್ ಜನತಾ ಪಾರ್ಟಿ ಕೂಡ ಒಂದು. ಏನಿದು? ಉದ್ದೇಶವೇನು?
03:39 PM (IST) Jul 26
ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಉಳುಮೆ ಮಾಡುವಾಗ 4ನೇ ಶತಮಾನದ ಅಪರೂಪದ ಗಣೇಶನ ವಿಗ್ರಹಗಳು ಪತ್ತೆಯಾಗಿವೆ. ಕೆಂಪು ಮರಳುಗಲ್ಲಿನ ಈ ಪುಟ್ಟ ಗಣಪನ ಹಿಂದಿದೆ 1600 ವರ್ಷಗಳ ಇತಿಹಾಸ! ಪೂರ್ಣ ವಿವರ ಇಲ್ಲಿದೆ.
02:30 PM (IST) Jul 26
ಜಾಕೋಬ್ ಆಂಡ್ ಕೋ ಸಂಸ್ಥೆ ಸಲ್ಮಾನ್ ಖಾನ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ ವಿಶೇಷ ಎಡಿಷನ್ ವಾಚ್. ಭಾರತದ ಧ್ವಜದ ಬಣ್ಣ ಮತ್ತು 'SK' ಹೆಸರಿನ ಈ ವಾಚ್ ಬೆಲೆ ಬರೋಬ್ಬರಿ 41 ಲಕ್ಷ ರೂಪಾಯಿ! ಪೂರ್ಣ ವಿವರ ಇಲ್ಲಿದೆ.
01:54 PM (IST) Jul 26
ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ.
01:30 PM (IST) Jul 26
ಸಾಮಾಜಿಕ ಜಾಲತಾಣದಲ್ಲಿ 'E20 ಜನತಾ ಪಾರ್ಟಿ' ಎಂಬ ಹೊಸ ಅಭಿಯಾನವೊಂದು ಶುರುವಾಗಿದ್ದು, ಶುದ್ಧ ಪೆಟ್ರೋಲ್ ನೀಡುವಂತೆ ಒತ್ತಾಯಿಸುತ್ತಿದೆ. ಆದರೆ, ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಹಾಳಾಗುವುದಿಲ್ಲ, ಈ ಇಂಧನ ವಾಹನಗಳಿಗೆ ಸಂಪೂರ್ಣ ಸುರಕ್ಷಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
01:28 PM (IST) Jul 26
ಟೀಂ ಇಂಡಿಯಾ ಸ್ಟಾರ್‍ಗಳಿಗೆ ಬಿಸಿಸಿಐ ವಿದೇಶಿ ಲೀಗ್ ಆಡಲು ಅನುಮತಿ ನೀಡುವುದಿಲ್ಲ. ಹೀಗಿದ್ದೂ ಇಂಗ್ಲೆಂಡ್‌ನಲ್ಲಿ ನಮ್ಮ ಮೂವರು ಆಟಗಾರರು ಮಿಂಚುತ್ತಿದ್ದಾರೆ. ಇದು ಹೇಗೆ? ಬಿಸಿಸಿಐ ಕುತೂಹಲಕಾರಿ ನಿಯಮ ಹೀಗಿದೆ..
01:08 PM (IST) Jul 26
ಯಾವುದೇ ಸಿನಿಮಾ ಆಗಲಿ, ವಿಜಯ್ ಚಿತ್ರ ಎಂದರೆ ಅಲ್ಲಿ ಹಬ್ಬದ ವಾತಾವರಣ ಗ್ಯಾರಂಟಿ. 'ಜನ ನಾಯಗನ್' ಚಿತ್ರ ಮೊದಲ ದಿನ ಭಾರತದಾದ್ಯಂತ ಬರೊಬ್ಬರಿ 42.7 ಕೋಟಿ ರೂಪಾಯಿ ಗಳಿಸುವ ಮೂಲಕ ಅಕ್ಷರಶಃ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿತು. ಈ ಸಿನಿಮಾ ಭರ್ಜರಿ ಆರಂಭವನ್ನೇ ಪಡೆದುಕೊಂಡಿತ್ತು. ಆದರೆ ಈಗ ಏನಾಗ್ತಿದೆ?
01:03 PM (IST) Jul 26
12:47 PM (IST) Jul 26
12:35 PM (IST) Jul 26
12:07 PM (IST) Jul 26
11:43 AM (IST) Jul 26
Smartphone: ರಿಯಲ್‌ಮಿ P4R 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಈ ಫೋನ್ 144Hz ಡಿಸ್‌ಪ್ಲೇ, 8000mAh ಬ್ಯಾಟರಿ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
11:34 AM (IST) Jul 26
11:26 AM (IST) Jul 26
11:15 AM (IST) Jul 26
09:16 AM (IST) Jul 26
ಭಾರತದ ಜನಪ್ರಿಯ ಸ್ಕೂಟರ್ ಹೋಂಡಾ ಆಕ್ಟಿವ್ ಅನ್ನು ಕೇವಲ 20,000 ರೂಪಾಯಿ ಡೌನ್‌ಪೇಮೆಂಟ್ ಪಾವತಿಸಿ ಖರೀದಿಸಬಹುದಾಗಿದೆ. ಉಳಿದ ಮೊತ್ತವನ್ನು ಸುಲಭ ಮಾಸಿಕ ಕಂತುಗಳಲ್ಲಿ (EMI) ಪಾವತಿಸುವ ಮೂಲಕ ಹೊಸ ಸ್ಕೂಟರ್ ಅನ್ನು ಮನೆಗೆ ತರಬಹುದು.
09:13 AM (IST) Jul 26
ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆ ಹಿಂಪಡೆದಿದೆ. ಇದರ ಬೆನ್ನಲ್ಲೇ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಜಂತರ್ ಮಂತರ್‌ನಲ್ಲಿ ಮಧ್ಯರಾತ್ರಿ ಸ್ವಚ್ಛತಾ ಕಾರ್ಯ..
08:39 AM (IST) Jul 26
08:21 AM (IST) Jul 26