Published : Mar 25, 2026, 06:39 AM ISTUpdated : Mar 25, 2026, 11:17 PM IST

India Latest News Live: INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್‌ನಿಂದ ಏಕಕಾಲಕ್ಕೆ ಟೇಕಾಫ್ ಆದ Mig-29ಕೆ ಫೈಟರ್ ಜೆಟ್ - ವೀಡಿಯೋ ಭಾರಿ ವೈರಲ್

ಸಾರಾಂಶ

ಮುಂಬೈ: ಇರಾನ್ ಇಂಧನ ಮೌಲಸೌಕರ್ಯಗಳ ಮೇಲಿನ ದಾಳಿಗೆ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಷೇರು ಪೇಟೆ ಚೇತರಿಸಿಕೊಂಡಿದೆ. ಮಂಗಳವಾರ ಬಾಂಬೆ ಷೇರು ಪೇಟೆ ಸಂವೇದಿ ಸೂಚ್ಯಂಕ 1372 ಅಂಕ ಏರಿಕೆಯೊಂದಿಗೆ 74,0 68ರಲ್ಲಿ ಅಂತ್ಯವಾಗಿದೆ. ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 399 ಅಂಕ ಹೆಚ್ಚಳದೊಂದಿಗೆ 22,912ರಲ್ಲಿ ಮುಕ್ತಾ ಯವಾಗಿದೆ. ಸೋಮವಾರ ಸೆನ್ಸೆಕ್ಸ್ 1936 ಅಂಕ ಇಳಿದು 72,696 ರಲ್ಲಿ ಮುಕ್ತಾಯವಾಗಿದ್ದರೆ, ನಿಫ್ಟಿ 601 ಅಂಕ ಕುಸಿದು 22,512 ರಲ್ಲಿ ಅಂತ್ಯವಾಗಿತ್ತು. ವಿದೇಶಿ ಪೇಟೆಗಳೂ ಚೇತರಿಕೆ: ಟ್ರಂಪ್ ಹೇಳಿಕೆಯಿಂದ ಮಂಗಳವಾರ ಫ್ರಾನ್ಸ್, ಜರ್ಮನಿ, ಅಮೆರಿಕ, ಜಪಾನ್ ಸೇರಿ ಜಾಗತಿಕ ಪೇಟೆಗಳೂ ಚೇತರಿಕೆ ಕಂಡವು. ದಿಲ್ಲಿಯಲ್ಲಿ ಚಿನ್ನ ₹1200 ಏರಿಕೆಯಾಗಿದ್ದರೆ, ಬೆಂಗಳೂರಲ್ಲಿ 380 ರು.ನಷ್ಟು ಇಳಿಕೆಯಾಗಿದ್ದವು

Ins vikramaditya and INS vikram

11:17 PM (IST) Mar 25

INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್‌ನಿಂದ ಏಕಕಾಲಕ್ಕೆ ಟೇಕಾಫ್ ಆದ Mig-29ಕೆ ಫೈಟರ್ ಜೆಟ್ - ವೀಡಿಯೋ ಭಾರಿ ವೈರಲ್

ಭಾರತೀಯ ನೌಕಾಪಡೆಯ ಎರಡು ಪ್ರಮುಖ ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿಕ್ರಾಂತ್‌ನಿಂದ ಎರಡು ಮಿಗ್-29ಕೆ ಫೈಟರ್ ಜೆಟ್‌ಗಳು ಏಕಕಾಲಕ್ಕೆ ಟೇಕಾಫ್ ಆಗಿರುವ ದೃಶ್ಯ ವೈರಲ್ ಆಗಿದೆ.

Read Full Story

10:22 PM (IST) Mar 25

ಭಾರತಕ್ಕೂ ಬಂತಾ ಝೋಂಬಿ ಡ್ರಗ್ - ನಿಂತಲೇ ಗಂಟೆಗಳ ಕಾಲ ತೂಕಾಡಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

Zombie drug in Punjab: ಪಂಜಾಬ್‌ನಲ್ಲಿ ಡೆಲಿವರಿ ಯುವಕನೋರ್ವ ಝೋಂಬಿಯಂತೆ ತೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು, ಅಮೆರಿಕಾದಲ್ಲಿ ಕಂಡುಬರುವ ಕ್ಸೈಲಾಜಿನ್ ಎಂಬ 'ಝೋಂಬಿ ಡ್ರಗ್' ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.

Read Full Story

10:21 PM (IST) Mar 25

30 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ಹೋಂಡಾ WN7 ಬೈಕ್ - ಏನಿದರ ವಿಶೇಷ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಸಿದ್ಧ ಹೋಂಡಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ WN7, 'ಗೋಲ್ಡ್ iF ಡಿಸೈನ್' ಪ್ರಶಸ್ತಿಯನ್ನು ಗೆದ್ದಿದೆ. ಇದರ ವಿಶಿಷ್ಟ ವಿನ್ಯಾಸದಲ್ಲಿ ಬ್ಯಾಟರಿಯೇ ಫ್ರೇಮ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ ನೀಡುತ್ತದೆ. 

Read Full Story

10:01 PM (IST) Mar 25

ಒಂದೇ ಒಂದು ಹೆಸರು... ಬದುಕು ಸೂಪರ್‌ - ನಟಿಯರಿಗೆ ಭಾರತಿರಾಜ ಇಟ್ಟ ಲಕ್ಕಿ ನೇಮ್ಸ್ ಸೀಕ್ರೆಟ್ ಏನು?

ಭಾರತಿರಾಜ ಅವರು ಪರಿಚಯಿಸಿದ ನಟಿಯರು ಸೂಪರ್‌ಸ್ಟಾರ್‌ಗಳಾಗಲು ಅವರು ಇಟ್ಟ 'ರಾಶಿ' ಹೆಸರುಗಳೂ ಒಂದು ಕಾರಣ. ಈ ಹೆಸರು ಬದಲಾವಣೆಯ ಹಿಂದಿನ ರಹಸ್ಯ ಮತ್ತು ಅದರ ಹಿಂದಿರುವ ಸ್ವಾರಸ್ಯಕರ ಕಥೆಗಳನ್ನು ಇಲ್ಲಿ ನೋಡೋಣ.

Read Full Story

08:56 PM (IST) Mar 25

'ನಮ್ಮ ಷರತ್ತು ಒಪ್ಪಿದ್ರೆ ಮಾತ್ರ ಯುದ್ಧ ಮುಗಿಸ್ತೇವೆ' - ಟ್ರಂಪ್‌ ಆರ್ಡರ್‌ಗೆ ಡೋಂಟ್ ಕೇರ್ ಅಂದ ಇರಾನ್‌!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಇರಾನ್, ಯುದ್ಧ ನಿಲ್ಲಿಸಲು ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿದೆ. ಹೋರ್ಮುಜ್ ಜಲಸಂಧಿಯ ಮೇಲೆ ಸಾರ್ವಭೌಮತ್ವ ಮತ್ತು ಯುದ್ಧದ ನಷ್ಟಕ್ಕೆ ಪರಿಹಾರ ನೀಡುವುದು ಇರಾನ್‌ನ ಪ್ರಮುಖ ಬೇಡಿಕೆಗಳಾಗಿವೆ. 

Read Full Story

08:43 PM (IST) Mar 25

ಚಿರು ಬೆಂಬಲದೊಂದಿಗೆ ಸೋಶಿಯಲ್ ಮೀಡಿಯಾಗೆ ಪವನ್ ಪತ್ನಿ ಎಂಟ್ರಿ - 1800 ಕೋಟಿ ಆಸ್ತಿ ಬಿಟ್ಟು ಬಂದಿದ್ದೇಕೆ?

ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿದೆಲಾ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲಿ ಅವರು ಚಿರಂಜೀವಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Read Full Story

08:33 PM (IST) Mar 25

'ನಮ್ಮದು ದಲ್ಲಾಳಿ ರಾಷ್ಟ್ರವಲ್ಲ' - ಇರಾನ್-ಅಮೆರಿಕ ಸಂಧಾನಕ್ಕೆ ಮುಂದಾದ ಪಾಕ್‌ಗೆ ಜೈಶಂಕರ್ ಪವರ್‌ಫುಲ್ ಕೌಂಟರ್!

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಎಂದಿಗೂ 'ದಲ್ಲಾಳಿ ರಾಷ್ಟ್ರ'ವಾಗಿ ವರ್ತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Read Full Story

06:51 PM (IST) Mar 25

ಚಂದಿರನತ್ತ ನಾಸಾ - ಭೂಮಿಯಿಂದ 3.84 ಲಕ್ಷ ಕಿ.ಮೀ ದೂರದ ಸಾಹಸ, ಅಪಾಯಗಳ ನಡುವೆಯೇ ಏ.1ಕ್ಕೆ ಹಾರಲಿದೆ ಆರ್ಟೆಮಿಸ್ II

ಅಪೋಲೋ ಕಾರ್ಯಕ್ರಮದ ಸುಮಾರು 50 ವರ್ಷಗಳ ನಂತರ, ನಾಸಾದ 'ಆರ್ಟೆಮಿಸ್ II' ಮಿಷನ್ ಮೂಲಕ ನಾಲ್ವರು ಗಗನಯಾತ್ರಿಗಳು ಚಂದ್ರನತ್ತ ಪ್ರಯಾಣ ಬೆಳೆಸಲಿದ್ದಾರೆ. ಈ ತಂಡವು ಚಂದ್ರನ ಮೇಲೆ ಇಳಿಯದೆ, 

Read Full Story

06:37 PM (IST) Mar 25

AR Rahman - 20 ವರ್ಷವಾದ್ರೂ ಬದಲಾಗದ ಮ್ಯಾಜಿಕ್, ಪ್ರತಿ ಸ್ಟೇಜ್‌ನಲ್ಲೂ ಅದೇ ಹಾಡು - ರೆಹಮಾನ್‌ರ ಸಿಗ್ನೇಚರ್ ಗೀತೆ!

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಾವು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದು ನಿರ್ದಿಷ್ಟ ಹಾಡನ್ನು ತಪ್ಪದೇ ಹಾಡುತ್ತಾರೆ. ಆ ಹಾಡಿನ ಹಿಂದಿರುವ ಸೆಂಟಿಮೆಂಟ್ ಮತ್ತು ರಹಸ್ಯವೇನು ಗೊತ್ತಾ?

Read Full Story

06:23 PM (IST) Mar 25

ನನ್ನ ಲವ್ ಲೆಟರ್‌ಗಳನ್ನೆಲ್ಲಾ ಅಪ್ಪ-ಅಮ್ಮ ಸುಟ್ಟು ಹಾಕಿದ್ರು - ನೋವಿನ ಕಥೆ ಬಿಚ್ಚಿಟ್ಟ ನಟಿ ಭಾಗ್ಯಶ್ರೀ

ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದಾಗಲೆಲ್ಲಾ ಜನ ಭಾಗ್ಯಶ್ರೀ ಮತ್ತು ಸಲ್ಮಾನ್ ಖಾನ್‌ರನ್ನು ಇಷ್ಟಪಡುತ್ತಾರೆ. ಮೊದಲ ಚಿತ್ರದಲ್ಲೇ ಭಾಗ್ಯಶ್ರೀ ಸೂಪರ್‌ಹಿಟ್ ಆದರು. ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ನೋವಿನ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

Read Full Story

06:17 PM (IST) Mar 25

ಪುನಃ ಕೋವಿಡ್​ನಂಥ ಸ್ಥಿತಿ ಎಂದ ಪ್ರಧಾನಿ, ಲಾಕ್​ಡೌನ್​ ಬಗ್ಗೆ ಹೇಳಿದ್ರಾ? ಸಂಸತ್ತಿನಲ್ಲಿ ಮೋದಿ ಭಾಷಣವೇನು

ಕೋವಿಡ್ ಸಂಕಷ್ಟದ ನೆನಪು ಮಾಸುವ ಮುನ್ನವೇ ಮಧ್ಯಪ್ರಾಚ್ಯದ ಯುದ್ಧ ಹೊಸ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಮಯದಂತೆ ಒಗ್ಗಟ್ಟು ಮತ್ತು ಸಂಯಮದಿಂದ ಇರಲು ಕರೆ ನೀಡಿದ್ದಾರೆ. ಅವರ ಈ ಹೇಳಿಕೆಯು ಮತ್ತೊಮ್ಮೆ ಲಾಕ್‌ಡೌನ್ ಆಗಬಹುದೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

05:48 PM (IST) Mar 25

Dhurandhar 2 - ರಣವೀರ್ ಸಿಂಗ್ ಸಿನಿಮಾ ನೋಡಿ ಅಮೀಶಾ ಪಟೇಲ್ ಹೇಳಿದ್ದೇನು? ಚಿತ್ರರಂಗಕ್ಕೆ ಕೊಟ್ಟ ಸಲಹೆ ಏನು?

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಎಲ್ಲೆಡೆ ಭರ್ಜರಿ ಮೆಚ್ಚುಗೆ ಗಳಿಸುತ್ತಿದೆ. ಈಗ ನಟಿ ಅಮೀಶಾ ಪಟೇಲ್ ಕೂಡ ಈ ಚಿತ್ರ ಮತ್ತು ಚಿತ್ರತಂಡವನ್ನು ಹೊಗಳಿದ್ದಾರೆ. ಈ ಸಿನಿಮಾ, ವಿಶ್ವಾದ್ಯಂತ ₹700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

Read Full Story

05:34 PM (IST) Mar 25

Fuel Crisis - ದೇಶಾದ್ಯಂತ ಪೆಟ್ರೋಲ್, ಡೀಸೆಲ್‌ಗೆ ಹಾಹಾಕಾರ? ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ!

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದೆಂಬ ಆತಂಕದಲ್ಲಿ ಜನರು ಇಂಧನಕ್ಕಾಗಿ ಮುಗಿಬೀಳುತ್ತಿದ್ದಾರೆ.

Read Full Story

05:28 PM (IST) Mar 25

ನೀನೇನು ಹುಚ್ಚಾ? ಎಂದಿದ್ದ ಅಕ್ಷಯ್ ಖನ್ನಾ - 300 ಆಡಿಷನ್, 2 ವರ್ಷದ ಕಷ್ಟದ ಕಥೆ ಬಿಚ್ಚಿಟ್ಟ ಮುಕೇಶ್!

ಧುರಂಧರ್ 2 ಯಶಸ್ಸಿನ ನಂತರ, ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ತಮ್ಮ 20 ವರ್ಷಗಳ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂ ನೋಡಿ ಕಾಸ್ಟಿಂಗ್ ಮಾಡಲ್ಲ, ಆಡಿಷನ್ ಮೂಲಕವೇ ಆಯ್ಕೆ ಮಾಡ್ತೀನಿ ಎಂದಿರುವ ಅವರು, ಈ ಚಿತ್ರಕ್ಕಾಗಿ 300ಕ್ಕೂ ಹೆಚ್ಚು ಜನರನ್ನು ಆಯ್ಕೆ ಮಾಡಿದ್ದರಂತೆ.

Read Full Story

05:24 PM (IST) Mar 25

ಗಾಂಧಿ ಪ್ರತಿಮೆ ಏರಿ ಅಸಭ್ಯ ವರ್ತನೆ- ವಿಡಿಯೋ ರೆಕಾರ್ಡ್​ - ರಾಜಕೀಯ ತಿರುವು ಪಡೆದ ಘಟನೆ

ಉತ್ತರ ಪ್ರದೇಶದ ಬರೇಲಿಯಲ್ಲಿ ಕೆಲವು ಯುವಕರು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಅಗೌರವ ತೋರಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ರಾಜಕೀಯ ತಿರುವು ಪಡೆದುಕೊಂಡು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

05:19 PM (IST) Mar 25

ಮಧ್ಯಪ್ರಾಚ್ಯ ಸಂಘರ್ಷ - ಎಣ್ಣೆ, ಬಿಯರ್ ರೇಟ್ ಏರಿಸದಿದ್ರೆ ಇಂಡಸ್ಟ್ರಿ ಉಳಿಯಲ್ಲ! ಸರ್ಕಾರದ ಮುಂದೆ ಬೇಡಿಕೆ

ಭಾರತದ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳು ಶೇ. 15ರಷ್ಟು ಬೆಲೆ ಏರಿಕೆಗೆ ಬೇಡಿಕೆ ಇಟ್ಟಿವೆ. ಮಧ್ಯಪ್ರಾಚ್ಯ ಸಂಘರ್ಷದಿಂದ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬೆಲೆ ಪರಿಷ್ಕರಣೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿವೆ.
Read Full Story

05:08 PM (IST) Mar 25

Vande Bharat Accident - ಖೈನಿ ಉಗುಳಲು ಹೋಗಿ ಪ್ರಾಣ ಕಳ್ಕೊಂಡ! ವಂದೇ ಭಾರತ್ ರೈಲಿಗೆ ಸಿಕ್ಕಿ ವ್ಯಕ್ತಿ ದುರ್ಮರಣ

ಬಿಹಾರದ ಬಾರ್ಹ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ. ಈ ನಿಲ್ದಾಣವು ಪೂರ್ವ ಮಧ್ಯೆ ರೈಲ್ವೆಯ ದಾನಾಪುರ ವಿಭಾಗದ ವ್ಯಾಪ್ತಿಗೆ ಬರುತ್ತದೆ.

Read Full Story

05:00 PM (IST) Mar 25

ಅಗ್ನಿವೀರರಿಗೆ ಬಂಪರ್ - ಶೇ. 20ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಗೆ ರಾಜ್ಯಗಳಿಗೆ ಕೇಂದ್ರದ ಪತ್ರ!

ಕೇಂದ್ರ ಗೃಹ ಸಚಿವಾಲಯವು ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿದ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವಂತೆ ರಾಜ್ಯಗಳಿಗೆ ಪತ್ರ ಬರೆದಿದೆ. ಈ ಕ್ರಮವು ಅಗ್ನಿವೀರರ ಪುನರ್ವಸತಿ  ಗುರಿಯನ್ನು ಹೊಂದಿದೆ.

Read Full Story

04:40 PM (IST) Mar 25

ಭೀಕರ ಕಾರು ಅಪಘಾತದಲ್ಲಿ 30 ವರ್ಷದ ನಟಿ ಸಾವು - ಸಿಸಿಟಿವಿಯಲ್ಲಿ ಸೆರೆಯಾಯ್ತು ನಡುಕ ಹುಟ್ಟಿಸುವ ದೃಶ್ಯ!

ಖ್ಯಾತ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. 

Read Full Story

04:10 PM (IST) Mar 25

ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?

ಆರ್‌ಸಿಬಿ ಹೊಸ ಚೇರ್ಮನ್‌ ಆರ್ಯಮನ್‌ ಬಿರ್ಲಾ ಅವರ ಅಕ್ಕ ಅನನ್ಯ ಬಿರ್ಲಾ, ಕೇವಲ ಉದ್ಯಮಿಯ ಮಗಳಲ್ಲದೆ ಸ್ವಂತ ಪರಿಶ್ರಮದಿಂದ ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ಬೆಳೆದಿದ್ದಾರೆ. 17ನೇ ವಯಸ್ಸಿಗೆ 'ಸ್ವತಂತ್ರ ಮೈಕ್ರೋಫಿನ್' ಸ್ಥಾಪಿಸಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

Read Full Story

03:18 PM (IST) Mar 25

ಏಪ್ರಿಲ್​ 1 ರಿಂದ ಕೆಲವು ಬ್ಯಾಂಕ್​ ವಹಿವಾಟು, ATM ಹಣ ವಿತ್​ಡ್ರಾನಲ್ಲಿ ಬದಲಾವಣೆ - ಇಲ್ಲಿದೆ ಡಿಟೇಲ್ಸ್​

ಏಪ್ರಿಲ್ 1 ರಿಂದ, ಎಚ್‌ಡಿಎಫ್‌ಸಿ ಬ್ಯಾಂಕ್ ಯುಪಿಐ ಆಧಾರಿತ ನಗದು ಹಿಂಪಡೆಯುವಿಕೆಗೆ ಶುಲ್ಕ ವಿಧಿಸಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ದೈನಂದಿನ ನಗದು ಹಿಂಪಡೆಯುವ ಮಿತಿಯನ್ನು ಪರಿಷ್ಕರಿಸಿದೆ. ಇದರೊಂದಿಗೆ, ಜಿಯೋ ಪೇಮೆಂಟ್ಸ್ ಬ್ಯಾಂಕ್ ಕ್ಯೂಆರ್ ಕೋಡ್ ಆಧರಿತ ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸಿದೆ.

Read Full Story

03:14 PM (IST) Mar 25

Sonia Gandhi - ದೆಹಲಿ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲು, ಆರೋಗ್ಯ ಸ್ಥಿರ

ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆ ಮತ್ತು ಮೂತ್ರನಾಳದ ಸೋಂಕಿನ ಶಂಕೆ ಇದ್ದು, ವೈದ್ಯರ ತಂಡ ತಪಾಸಣೆ ನಡೆಸುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
Read Full Story

02:53 PM (IST) Mar 25

ಹೊಸ ಬೆಡ್ಶಿಟ್ ತೊಳಿಯದೇ ಬಳಸಿದವನಿಗೆ ಆಘಾತ - ಬೆಳಗಾಗುತ್ತಲೇ ನೀಲಿ ಬಣ್ಣಗೆ ತಿರುಗಿದ ದೇಹ

ಅಂಗಡಿಯಿಂದ ತಂದ ಹೊಸದಾದ ವಸ್ತುಗಳನ್ನು ಅಂದರೆ ಬಟ್ಟೆ ಬೆಡ್‌ಶಿಟ್‌ಗಳು ಮುಂತಾದವುಗಳನ್ನು ತೊಳೆದೇ ಬಳಸಬೇಕು ಇಲ್ಲದೇ ಹೋದರೆ ದೊಡ್ಡ ಅನಾಹುತವಾಗುವುದಂತು ಪಕ್ಕಾ ಇಲ್ಲೊಂದು ಕಡೆ ಬೆಡ್‌ಶಿಟ್ ತೊಳೆಯದೇ ಅದನ್ನೇ ಹೊದ್ದುಕೊಂಡು ಮಲಗಿದ್ದರಿಂದ ವ್ಯಕ್ತಿಯೊಬ್ಬನಿಗೆ ಏನಾಯ್ತು ನೋಡಿ..

Read Full Story

01:36 PM (IST) Mar 25

30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್

30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ ಆಗಿದ್ದಾನೆ. ಬೆದರಿಸಿ ಅಪ್ರಾಪ್ತರ ಮೇಲೆ ಅತ್ಯಾ**ರ ಎಸಗುತ್ತಿದ್ದ ಈತ ವಿಡಿಯೋ ಮಾಡಿ ಸೊಲ್ಲೆತ್ತದ್ದಂತೆ ಮಾಡಿದ್ದ. ಇದೀಗ ವಿಡಿಯೋ ಲೀಕ್ ಆಗಿ ಕೋಲಾಹಲ ನಡೆದಿದೆ.

 

Read Full Story

01:29 PM (IST) Mar 25

ಗ್ಯಾಸ್​ ಬುಕಿಂಗ್​ ನಿಜವಾದ ರೂಲ್ಸ್​ ಹೀಗಿದೆ - ಜಾಲತಾಣದ ಫೇಕ್​ ನ್ಯೂಸ್​ ನಂಬಬೇಡಿ ಎಂದ ಕೇಂದ್ರ ಸರ್ಕಾರ

ಎಲ್​ಪಿಜಿ ಸಿಲಿಂಡರ್ ಬುಕಿಂಗ್​ಗೆ ಹೊಸ ನಿಯಮ ಜಾರಿಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ   ಹಳೆಯ ನಿಯಮವೇ ಮುಂದುವರಿದಿದೆ ಎಂದು ತಿಳಿಸಿರುವ ಸರ್ಕಾರ ಅದರ ಡಿಟೇಲ್ಸ್​ ಹಂಚಿಕೊಂಡಿದೆ. ದೇಶದಲ್ಲಿ ಸಾಕಷ್ಟು ಎಲ್​ಪಿಜಿ ದಾಸ್ತಾನು ಲಭ್ಯವಿದೆ ಎಂದು ಸರ್ಕಾರ ಭರವಸೆ ನೀಡಿದೆ.

Read Full Story

01:03 PM (IST) Mar 25

7 ಮಕ್ಳಳಿದ್ರೂ ಅಕ್ರಮ ಸಂಬಂಧ, 7 ವರ್ಷದ ಮಗನ ಮುಂದೆಯೇ ಹೆಂಡತಿ, ಫ್ರೆಂಡ್‌ಗೆ ಗಂಡ ಗುಂಡಿಕ್ಕಿ ಕೊಂದ!

ಪತ್ನಿ ಹಾಗೂ ತನ್ನ ಆಪ್ತ ಸ್ನೇಹಿತನ ನಡುವಿನ ಅಕ್ರಮ ಸಂಬಂಧದಿಂದ ಕೋಪಗೊಂಡ ವ್ಯಕ್ತಿಯೊಬ್ಬ, ಇಬ್ಬರನ್ನೂ ಮನೆಗೆ ಕರೆದು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಾಜಿಯಾಬಾದ್‌ನಲ್ಲಿ ನಡೆದ ಈ ಭೀಕರ ಕೃತ್ಯಕ್ಕೆ ದಂಪತಿಯ 7 ವರ್ಷದ ಮಗನೇ ಸಾಕ್ಷಿಯಾಗಿದ್ದು, ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.
Read Full Story

12:57 PM (IST) Mar 25

ಭಾರತೀಯ ರಕ್ಷಣಾ ಪಡೆಯ SSC ಮಹಿಳಾ ಅಧಿಕಾರಿಗಳಿಗೆ ಗುಡ್ ನ್ಯೂಸ್

women ssc officers pension rights: ಸೇನೆಯ ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸುವ ಮಹಿಳಾ ಶಾರ್ಟ್ ಸರ್ವೀಸ್ (SSC) ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.

Read Full Story

12:35 PM (IST) Mar 25

ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು - 9 ವರ್ಷದ ಪುಟಾಣಿ ಸಾವು

ಇಂಜೆಕ್ಷನ್ ಎಂದರೆ ಭಯಪಡುವ ಅನೇಕರಿದ್ದಾರೆ. ಅನಾರೋಗ್ಯಕ್ಕೀಡಾದಾಗ ವೈದ್ಯರು ಇಂಜೆಕ್ಷನ್ ನೀಡುವುದಕ್ಕೆ ಮುಂದಾದರೆ ಇಂಜೆಕ್ಷನ್ ಬೇಡ ಡಾಕ್ಟ್ರೆ ಮಾತ್ರೆ ಕೊಡಿ ಎಂದು ಮಾತ್ರೆ ಕೇಳಿ ಪಡೆಯುವ ಅನೇಕರಿದ್ದಾರೆ. ಆದರೆ ಹೀಗೆ ಇಂಜೆಕ್ಷನ್ ಪಡೆಯದೇ ನಿರ್ಲಕ್ಷ್ಯ ವಹಿಸಿದ ಬಾಲಕಿಯೊಬ್ಬಳ ಪ್ರಾಣವೇ ಹೋಗಿದೆ.

Read Full Story

12:17 PM (IST) Mar 25

ನನ್ನ ಮೇಲೆ ನಿರ್ದೇಶಕನಿಂದ ರೇ*ಪ್​ ಪ್ರಯತ್ನ- ಮನೆಯವ್ರೂ ಸುಮ್ಮನಿದ್ರು - ಮಕ್ಕಳನ್ನೂ ಬಿಡಲ್ಲ ಆತ, ಮೊನಾಲಿಸಾ ಕಣ್ಣೀರು

ಕುಂಭಮೇಳದ ಮೂಲಕ ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕನೊಂದಿಗೆ ವಿವಾಹವಾಗಿ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ತಮಗೆ ಸಿನಿಮಾ ಅವಕಾಶ ನೀಡಿದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧವೇ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದು, ಈ ಹಿಂದೆ ಇದೇ ನಿರ್ದೇಶಕನನ್ನು ಹೊಗಳಿದ್ದು ಚರ್ಚೆಗೆ ಕಾರಣವಾಗಿದೆ.
Read Full Story

11:14 AM (IST) Mar 25

ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ನಿಯಮ, ಎಲ್‌ಪಿಜಿ ನೀಡಲು ಹೊಸ ಮಾರ್ಗಸೂಚಿ ಜಾರಿಗೊಳಿಸಿದ ಕೇಂದ್ರ!

ಭಾರತ್ ಪೆಟ್ರೋಲಿಯಂ (BPCL) ಎಲ್‌ಪಿಜಿ ಗ್ರಾಹಕರಿಗೆ ಹೊಸ ಬುಕ್ಕಿಂಗ್ ನಿಯಮಗಳನ್ನು ಜಾರಿಗೆ ತಂದಿದೆ. ಈ ಪ್ರಕಾರ, ತಿಂಗಳಿಗೆ ಗರಿಷ್ಠ 2 ಸಿಲಿಂಡರ್‌ಗಳ ಮಿತಿ, ನೋಂದಾಯಿತ ಮೊಬೈಲ್‌ನಿಂದ ಬುಕ್ಕಿಂಗ್ ಮತ್ತು ವಿತರಣೆ ವೇಳೆ OTP ದೃಢೀಕರಣ ಕಡ್ಡಾಯವಾಗಿದೆ. ಅಲ್ಲದೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಬುಕ್ಕಿಂಗ್ ಅಂತರವನ್ನು ಹೆಚ್ಚಿಸಲಾಗಿದೆ.
Read Full Story

10:59 AM (IST) Mar 25

ಇಡಿ ದಾಳಿಗೆ ಅಡ್ಡಿಯಾದ ಮಮತಾ ಬ್ಯಾನರ್ಜಿಗೆ ಸುಪ್ರೀಂಕೋರ್ಟ್ ತರಾಟೆ

ED raid on I-PAC Kolkata : ತೃಣಮೂಲ ಕಾಂಗ್ರೆಸ್‌ನ ಸಲಹಾ ಸಂಸ್ಥೆ ಐ-ಪ್ಯಾಕ್ ಮೇಲಿನ ಇ.ಡಿ. ದಾಳಿಗೆ ಅಡ್ಡಿಪಡಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

Read Full Story

09:54 AM (IST) Mar 25

ಇರಾನ್ ತನಗೆ ದುಬಾರಿ ಮೊತ್ತದ 'ಹರ್ಮುಜ್' ಉಡುಗೊರೆ ನೀಡಿದೆ ಎಂದ ಟ್ರಂಪ್

ಇರಾನ್ ವಿರುದ್ಧದ ಯುದ್ಧಕ್ಕೆ 5 ದಿನಗಳ ಕದನ ವಿರಾಮ ಘೋಷಿಸಿರುವುದಾಗಿ ಹೇಳಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಹೊಸ ಹೇಳಿಕೆ ನೀಡಿದ್ದಾರೆ. ಇರಾನ್ ತನಗೆ ಅಗಾಧ ಪ್ರಮಾಣದ ಹಣದಷ್ಟು ಬೆಲೆ ಬಾಳುವ ಉಡುಗೊರೆ ನೀಡಿದೆ ಎಂದು ಹೇಳಿದ್ದಾರೆ.

Read Full Story

08:46 AM (IST) Mar 25

ಯುದ್ಧ ಸಂಕಷ್ಟದ ಬೆನ್ನಲ್ಲೇ ತುರ್ತು ಸರ್ವ ಪಕ್ಷ ಸಭೆ ಕರೆದ ಮೋದಿ, ಇಂದು ಮಹತ್ವದ ಘೋಷಣೆ

ಯುದ್ಧ ಸಂಕಷ್ಟದ ಬೆನ್ನಲ್ಲೇ ತುರ್ತು ಸರ್ವ ಪಕ್ಷ ಸಭೆ ಕರೆದ ಮೋದಿ, ಇಂದು ಮಹತ್ವದ ಘೋಷಣೆ, ಯುದ್ಧ ಬಿಕ್ಕಟ್ಟಿನಿಂದ ಭಾರತದಲ್ಲಿ ಸಮಸ್ಯೆಗಳು ತೀವ್ರಗೊಳ್ಳುತ್ತಿದೆ. ಈಗಾಗಲೇ ಕೋವಿಡ್ ರೀತಿಯ ಪರಿಸ್ಥಿತಿ ಎದುರಾಗುತ್ತಿದೆ ಎಂದಿರುವ ಮೋದಿ ಇಂದು ಸಂಜೆ ಕೆಲ ಘೋಷಣೆ ಮಾಡಲಿದ್ದಾರೆ.

Read Full Story

08:22 AM (IST) Mar 25

ಅವರು ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ ಎಂದ ಇರಾನ್ - ಮತ್ತೆರಡು ದೇಶಗಳು ಇರಾನ್ ವಿರುದ್ಧ ಸಮರಕ್ಕೆ?

ಅಮೆರಿಕಾ-ಇರಾನ್ ಯುದ್ಧ 26ನೇ ದಿನಕ್ಕೆ ಕಾಲಿಟ್ಟಿದ್ದು,ಇರಾನ್ ಸೇನಾ ಸಲಹೆಗಾರ ಮೊಹಿನ್ ರೆಜ್ಜೆ, 'ಅವರು (ಅಮೆರಿಕ) ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ' ಎಂದಿದ್ದಾರೆ.ಯುದ್ಧ ಸ್ಥಗಿತಕ್ಕೆ ಅಮೆರಿಕದ ಕಡೆಯಿಂದ ಯತ್ನಗಳು ಆರಂಭವಾಗಿರುವ ನಡುವೆ ಇರಾನ್ ಕಡೆಯಿಂದ ಇಂತಹ ಹೇಳಿಕೆ ಬಂದಿದೆ.

Read Full Story

07:32 AM (IST) Mar 25

ಯುದ್ಧವಿದರೂ ಚಿನ್ನದ ದರ ಕುಸಿತವೇಕೆ? ಭವಿಷ್ಯದಲ್ಲಿ ಏನಾಗಲಿದೆ?

ಲೇಖನ: ನವ್ಯ ಶ್ರೀ ಶೆಟ್ಟಿ

ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ಚಿನ್ನದ ಬೆಲೆ ಏರುವುದು ಸಾಮಾನ್ಯ. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇರಾನ್ ಸಂಘರ್ಷದ ವೇಳೆ ಚಿನ್ನದ ದರ ಗಣನೀಯವಾಗಿ ಕುಸಿದಿದೆ. ಇದಕ್ಕೇನು ಕಾರಣ ಇಲ್ಲಿದೆ ಡಿಟೇಲ್ ಸ್ಟೋರಿ

Read Full Story

More Trending News