ಮುಂಬೈ: ಅಪಾರ್ಟ್‌ಮೆಂಟ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಪ್ರಕರಣದಲ್ಲಿ ಬಾಲಿವುಡ್ ನಟ ಕಮಾಲ್ ರಶೀದ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ‘ಜ.18ರಂದು ಅಂಧೇರಿ ಬಳಿಯ ಓಶಿವಾರಾದ ನಳಂದಾ ಸೊಸೈಟಿಯ 2ನೇ ಮತ್ತು ನಾಲ್ಕನೇ ಮಹಡಿಯ ಮನೆಗಳ ಗುಂಡಿನ ದಾಳಿ ನಡೆದಿತ್ತು. ಬರಹಗಾರರು ಮತ್ತು ಮಾಡೆಲ್‌ಗಳನು ವಾಸವಿದ್ದ ಮನೆಯ ಮೇಲೆ ನಡೆದ ಗುಂಡಿನ ದಾಳಿ ತನಿಖೆ ವೇಳೆ, ಅಲ್ಲಿ ಸಿಕ್ಕ ಗುಂಡು ಕಮಾಲ್ ಖಾನ್ ಗನ್‌ನಿಂದ ಹಾರಿದ್ದು ಎಂದು ಸಾಬೀತಾಗಿತ್ತು. ವಿಚಾರಣೆ ವೇಳೆ ದಾಳಿ ನಡೆಸಿದ್ದನ್ನು ಖಾನ್ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ

08:28 AM (IST) Jan 25
2026ನೇ ಸಾಲಿನ IPL ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ರಣಜಿ ಟ್ರೋಫಿ ಆಡುವ ವೇಳೆ ಗಂಭೀರ ಗಾಯ ಮಾಡಿಕೊಂಡಿದ್ದು, ಅವರು ಐಪಿಎಲ್ ಆಡುವ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ.
07:49 AM (IST) Jan 25
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ, ತನ್ನ ಗುಂಪನ್ನು ತೊರೆದು ಪರ್ವತದತ್ತ ಸಾಗುತ್ತಿರುವ ಒಂಟಿ ಪೆಂಗ್ವಿನ್ ವಿಡಿಯೋದ ಅಸಲಿ ಕಥೆ ಬೇರೆಯೇ ಇದೆ. ಹಾಗಿದ್ದರೆ ಈ ಪೆಂಗ್ವಿನ್‌ನ ನಿಜವಾದ ಸ್ಟೋರಿ ಏನು?
07:22 AM (IST) Jan 25
ಶ್ರೀಮಂತ ಮಹಿಳೆಯರನ್ನು ಗುರಿಯಾಗಿಸಿ ಜಿಮ್ ಮೂಲಕ ಮತಾಂತರ ಮತ್ತು ಹಣ ಸುಲಿಗೆ ಮಾಡುತ್ತಿದ್ದ ವಿದೇಶಿ ನಂಟಿನ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಸಹಪಾಠಿಯನ್ನು ಮತಾಂತರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಐವರು ಅಪ್ರಾಪ್ತ ಮುಸ್ಲಿಂ ಬಾಲಕಿಯರ ವಿರುದ್ಧ ಪ್ರಕರಣ ದಾಖಲಾಗಿದೆ.
06:01 AM (IST) Jan 25