Published : Mar 23, 2026, 06:31 AM ISTUpdated : Mar 23, 2026, 08:49 PM IST

India Latest News Live: ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಹೊರಟೋಯ್ತು! ಚಿನ್ನ ದಿಢೀರ್ ಕುಸಿತಕ್ಕೆ ಕಾರಣ ಯುದ್ಧವಲ್ಲ! ಮತ್ತೇನು?

ಸಾರಾಂಶ

ವಾಷಿಂಗ್ಟನ್‌: ಮಧ್ಯಪ್ರಾಚ್ಯ 22ನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ ಮೇಲಿನ ಮಿಲಿಟರಿ ಕಾರ್ಯಾಚರಣೆಯ ತೀವ್ರತೆ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. ಈ ಸಂಘರ್ಷದಲ್ಲಿ ನಮ್ಮ ಗುರಿಸಾಧನೆಯ ತೀರಾ ಸನಿಹದಲ್ಲಿದ್ದೇವೆ ಎಂದಿರುವ ಅವರು, ಹೊರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನು ಇತರೆ ದೇಶಗಳೂ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಶಿಯಲ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಹಲವು ವಾರಗಳ ತೀವ್ರ ಕದನದ ಬಳಿಕ ಇದೀಗ ಅಮೆರಿಕವು ಇರಾನ್‌ ಮೇಲಿನ ಮಿಲಿಟರಿ ಕಾರ್ಯಾಚರಣೆಯ ತೀವ್ರತೆಯನ್ನು ಕಡಿಮೆಗೊಳಿಸುವ ಕುರಿತು ಪರಿಶೀಲನೆ ನಡೆಸುತ್ತಿದೆ. ಇರಾನ್‌ನ ಕ್ಷಿಪಣಿ ಸಾಮರ್ಥ್ಯ ಕುಗ್ಗಿಸಲಾಗಿದೆ, ರಕ್ಷಣಾ ಕೈಗಾರಿಕಾ ನೆಲೆ ನಾಶ ಮಾಡಲಾಗಿದೆ ಮತ್ತು ನೌಕೆ ಮತ್ತು ವಾಯುುಪಡೆಯ ಸಾಮರ್ಥ್ಯವನ್ನು ಧ್ವಂಸ ಮಾಡುವ ಪ್ರಮುಖ ಗುರಿಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರ ಜತೆಗೆ, ಇರಾನ್‌ ಯಾವತ್ತಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸದಂತೆ ನೋಡಿಕೊಳ್ಳಲಾಗುವುದು ಎಂದು ಪುನರುಚ್ಚರಿಸಿದ್ದಾರೆ.

ಈ ನಡುವೆ, ನಾವು ನಮ್ಮ ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳಾದ ಇಸ್ರೇಲ್‌, ಸೌದಿಅರೇಬಿಯಾ, ಕತಾರ್ ಮತ್ತು ಯುಎಇ, ಬಹರೈನ್‌, ಕುವೈಟ್‌ ಮತ್ತು ಇತರೆ ರಾಷ್ಟ್ರಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

08:49 PM (IST) Mar 23

ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಹೊರಟೋಯ್ತು! ಚಿನ್ನ ದಿಢೀರ್ ಕುಸಿತಕ್ಕೆ ಕಾರಣ ಯುದ್ಧವಲ್ಲ! ಮತ್ತೇನು?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹಠಾತ್ ಕುಸಿತ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಹೆಚ್ಚುತ್ತಿರುವ ಬಡ್ಡಿದರಗಳು, ಬಲಿಷ್ಠ ಡಾಲರ್ ಮತ್ತು ಬಲವಂತದ ಮಾರಾಟ ಈ ಕುಸಿತಕ್ಕೆ ಕಾರಣವಾಗಿದ್ದು, 'ಸುರಕ್ಷಿತ ಹೂಡಿಕೆ' ಎಂಬ ಚಿನ್ನದ ಪಾತ್ರವು ಹೊಸ ಆರ್ಥಿಕ ವಾಸ್ತವಕ್ಕೆ ತಕ್ಕಂತೆ ಬದಲಾಗುತ್ತಿದೆ ಎಂಬುದನ್ನು ಈ ಘಟನೆ ಸೂಚಿಸುತ್ತದೆ.
Read Full Story

07:52 PM (IST) Mar 23

Dhurandhar 2 ನೋಡಿ ತಲೆ ಕೆಟ್ಟುಹೋಯ್ತು - ರಣವೀರ್ ಸಿನಿಮಾ ನೋಡಿ ನಾಗಾರ್ಜುನ ಹೀಗಾ ಹೇಳೋದು!

ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಥಿಯೇಟರ್‌ಗೆ ಬಂದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರ, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Read Full Story

07:43 PM (IST) Mar 23

20 ಬಾರಿ ಬೇಯಿಸಿದರೂ ಬೇಯದ ತಲೆಮಾಂಸ - ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದವನಿಗೆ ನ್ಯಾಯ ನೀಡಿದ ಪೊಲೀಸರು

ಯುಗಾದಿ ಹಬ್ಬಕ್ಕೆ ಖರೀದಿಸಿದ ಮೇಕೆಯ ತಲೆ ಮಾಂಸವು 20 ಬಾರಿ ಬೇಯಿಸಿದರೂ ಬೆಂದಿಲ್ಲವೆಂದು ವ್ಯಕ್ತಿಯೊಬ್ಬರು ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆಯೊಂದು ನಡೆದಿದೆ.

Read Full Story

07:09 PM (IST) Mar 23

ಪಾಕಿಗಳ ನಿದ್ದೆಗೆಡಿಸಿದ ದುರಂಧರ್​-2! ಕನಸಲ್ಲೂ ಭಾರತದ ರಾ ಏಜೆಂಟ್ಸ್​- ಈ ವಿಡಿಯೋ ನೋಡಿ

ಬಾಲಿವುಡ್​ ದಾಖಲೆಗಳನ್ನು ಮುರಿದ 'ದುರಂಧರ್'​ ಚಿತ್ರವು ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಚಿತ್ರದಿಂದ ಪ್ರೇರಿತರಾಗಿ, ಅಲ್ಲಿನ ಜನರು ಭಾರತದ 'ರಾ' ಏಜೆಂಟರು ತಮ್ಮ ನಡುವೆಯೇ ಇರಬಹುದೆಂಬ ಭಯದಿಂದ, ಭಿಕ್ಷುಕರನ್ನು ಸಹ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story

06:22 PM (IST) Mar 23

Dhurandhar 2 - ಬ್ಯಾನ್ ಮಾಡಿದ್ರೂ ಡೋಂಟ್ ಕೇರ್! ಪಾಕ್‌ನಲ್ಲಿ 'ಧುರಂಧರ್ 2' ಪೈರಸಿ ಹಾವಳಿ, ಕೋಟಿ ಕೋಟಿ ನಷ್ಟ!

ಸಿನಿಮಾ ಮಂದಿಗೆ ಪೈರಸಿ ಅನ್ನೋದು ಯಾವಾಗ್ಲೂ ದೊಡ್ಡ ತಲೆನೋವು. ಅದರಲ್ಲೂ ಈಗಿನ ಟೆಕ್ನಾಲಜಿ ಯುಗದಲ್ಲಿ, ಪೈರಸಿ ಕಾಪಿಗಳನ್ನು ತಡೆಯೋದು ದೊಡ್ಡ ಸವಾಲಿನ ಕೆಲಸ. ಅವು ಹರಡುವುದನ್ನು ತಡೆಯುವುದು ಬಹುತೇಕ ಅಸಾಧ್ಯ.

Read Full Story

06:17 PM (IST) Mar 23

ಭಾರತೀಯರು ಹೆಚ್ಚು ಆಸಕ್ತಿ ಹೊಂದಿರುವ ದುಬೈ ರಿಯಲ್ ಎಸ್ಟೇಟ್ ಸಾಮ್ರಾಜ್ಯ ತೀವ್ರ ಹೊಡೆತ, 1ತಿಂಗಳಲ್ಲಿ ಶೇ.44 ಕುಸಿತ!

ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯು ತೀವ್ರ ಕುಸಿತ ಕಂಡಿದೆ. ಫೆಬ್ರವರಿ ಅಂತ್ಯದಿಂದ ಆಸ್ತಿ ಮಾರಾಟದಲ್ಲಿ ಶೇ. 44ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರ ವಿಶ್ವಾಸ ಕುಗ್ಗಿದೆ. ಆದಾಗ್ಯೂ, ಆಸ್ತಿ ಬೆಲೆಗಳಲ್ಲಿ ದೊಡ್ಡ ಕುಸಿತವಾಗಿಲ್ಲ ಮತ್ತು ಪರಿಸ್ಥಿತಿ ಸುಧಾರಿಸಿದರೆ ಮಾರುಕಟ್ಟೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
Read Full Story

05:49 PM (IST) Mar 23

Skin Tanning - ಬಿಸಿಲಿಗೆ ಕಪ್ಪಾದ ಚರ್ಮಕ್ಕೆ ಗುಡ್ ಬೈ ಹೇಳಿ! ದುಬಾರಿ ಕ್ರೀಮ್ ಬೇಡ, ಈ 5 ಮನೆಮದ್ದು ಸಾಕು

ಬೇಸಿಗೆ ಶುರುವಾಯ್ತು ಅಂದ್ರೆ ಸಾಕು, ಸ್ಕಿನ್ ಕಪ್ಪಾಗೋ ಚಿಂತೆ ಶುರು. ಸುಡು ಬಿಸಿಲು ಚರ್ಮವನ್ನು ಟ್ಯಾನ್ ಮಾಡುತ್ತೆ. ಮೊದಲೇ ಸ್ವಲ್ಪ ಕೇರ್ ಮಾಡಿದ್ರೆ, ಸ್ಕಿನ್ ಡ್ಯಾಮೇಜ್ ಆಗೋದನ್ನು ತಪ್ಪಿಸಬಹುದು. ಇವು ಚರ್ಮಕ್ಕೆ ತಂಪು ನೀಡಿ, ಹೊಳಪು ಕೊಡುತ್ತವೆ.

Read Full Story

05:33 PM (IST) Mar 23

ಇರಾನ್​ ಈ ಒಂದು ಅಪಾಯಕ ಹೆಜ್ಜೆ ಇಟ್ಟರೆ ಇಡೀ ವಿಶ್ವವೇ ಸ್ತಬ್ಧ! ಇಂಟರ್​ನೆಟ್​ ಇಲ್ಲದೇ ಜಗತ್ತು ಅಲ್ಲೋಲ ಕಲ್ಲೋಲ

ಇರಾನ್-ಇಸ್ರೇಲ್ ಯುದ್ಧದ ಭೀತಿಯ ನಡುವೆ, ಇರಾನ್‌ನ ಒಂದು ಹೆಜ್ಜೆಯು ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಪ್ರಮುಖ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸಾಗರದೊಳಗಿನ ಇಂಟರ್ನೆಟ್ ಕೇಬಲ್‌ಗಳಿಗೆ ಹಾನಿಯಾದರೆ, ಇಡೀ ವಿಶ್ವದ ಇಂಟರ್ನೆಟ್ ಸಂಪರ್ಕವೇ ಕಡಿತಗೊಂಡು ಸ್ತಬ್ಧವಾಗುವ ಆತಂಕ ಎದುರಾಗಿದೆ.
Read Full Story

05:07 PM (IST) Mar 23

ಈ ಜಾಗದಲ್ಲಿ ಕಿಸ್​ ಕೊಡೋ ಮುನ್ನ ಎಚ್ಚರ! ಗೆಳತಿ ಕೊಟ್ಟ ಮುತ್ತಿನಿಂದ ರಕ್ತ ಹೆಪ್ಪುಗಟ್ಟಿ ಯುವಕನ ಸಾವು- ಆಗಿದ್ದೇನು

ಮೆಕ್ಸಿಕೋದಲ್ಲಿ, ಗೆಳತಿ ನೀಡಿದ ದೀರ್ಘ ಚುಂಬನದಿಂದಾಗಿ 18 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕುತ್ತಿಗೆಯ ಮೇಲೆ ನೀಡಿದ ಲವ್ ಬೈಟ್‌ನಿಂದ ರಕ್ತ ಹೆಪ್ಪುಗಟ್ಟಿ, ಅದು ಮೆದುಳಿಗೆ ಸಾಗಿ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
Read Full Story

04:50 PM (IST) Mar 23

3 ದಿನಗಳಲ್ಲಿ 500 ಕೋಟಿ - ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಬರೆದ 'ಧುರಂಧರ್‌ 2'

ರಿಲೀಸ್‌ ಆದ ಮೂರೇ ದಿನದಲ್ಲಿ ವಿಶ್ವಮಟ್ಟದಲ್ಲಿ 500 ಕೋಟಿ ರು. ಕ್ಲಬ್‌ ಸೇರುವ ಮೂಲಕ ಧುರಂಧರ್‌ 2 ಹೊಸ ದಾಖಲೆ ಬರೆದಿದೆ. ಸದ್ಯಕ್ಕೀಗ ಸಿನಿಮಾದ ಒಟ್ಟು ಗಳಿಕೆ 505 ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ.

Read Full Story

04:36 PM (IST) Mar 23

ಯುಎಸ್ ಏರ್‌ಪೋರ್ಟ್ ಭದ್ರತಾ ಅಧಿಕಾರಿಗಳಿಗೆ ಸ್ಯಾಲರಿ ನೀಡೋದಾಗಿ ಎಲಾನ್ ಮಸ್ಕ್ ಹೇಳಿದ್ದೇಕೆ? ಟ್ರಂಪ್ ಸರ್ಕಾರಕ್ಕೆ ಏನಾಗಿದೆ?

ಇರಾನ್ ಯುದ್ಧಕ್ಕೆ ಶತಕೋಟಿ ಡಾಲರ್ ವ್ಯಯಿಸುತ್ತಿರುವ ಅಮೆರಿಕಾ ತನ್ನ ದೇಶದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಫೆಬ್ರವರಿಯಿಂದ ವೇತನ ನೀಡಿಲ್ಲ. ಈ ಬಿಕ್ಕಟ್ಟಿನ ವೇಳೆ ಉದ್ಯಮಿ ಎಲಾನ್ ಮಸ್ಕ್ ಸಂಬಳ ನೀಡಲು ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು

Read Full Story

04:31 PM (IST) Mar 23

ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ

ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ, ಎಐಎಡಿಎಂಕೆ ಭಾರಿ ಮೇಲುಗೈ ಸಾಧಿಸಿದೆ. ಚುನಾವಣಾ ಆರಂಭಕ್ಕೂ ಮೊದಲೇ ಬಿಜೆಪಿ ಕಾರ್ಯಕರ್ತರು ನಿರಾಸೆ ಅನುಭವಿಸಿದ್ದಾರೆ.

Read Full Story

04:25 PM (IST) Mar 23

ಹೋರ್ಮುಜ್ ಸಂಕಷ್ಟ - ಒಡೆಯಲು ಕಬ್ಬಿಣದ ಕಡಲೆಯಾದ ಇರಾನಿನ ವಿದ್ಯುತ್ ಜಾಲ

ದೊಡ್ಡದಾದ ವಿದ್ಯುತ್ ಘಟಕಗಳನ್ನು ನಾಶಪಡಿಸುವುದು ಸುಲಭವಲ್ಲ. ದಮಾವಂದ್ ನಂತಹ ವಿದ್ಯುತ್ ಘಟಕ ಬಹಳಷ್ಟು ತಂಪಾಗಿಸುವ ಟವರ್‌ಗಳನ್ನು ಹೊಂದಿದ್ದು, 494 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿವೆ.

Read Full Story

04:12 PM (IST) Mar 23

ಧುರಂಧರ್-2 - ಜಗತ್ತನ್ನೇ ಗೆದ್ದ ರಣವೀರ್‌ಗೆ ಸಿಗ್ಲಿಲ್ಲ ಪತ್ನಿಯ ಮೆಚ್ಚುಗೆ..! ಹೆಂಡತಿ ಲೆಫ್ಟ್​, ಗಂಡ ರೈಟ್..!

ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದೆ. ಇಡೀ ಚಿತ್ರರಂಗವೇ ರಣವೀರ್ ಅವರನ್ನು ಶ್ಲಾಘಿಸುತ್ತಿದ್ದರೆ, ಪತ್ನಿ ದೀಪಿಕಾ ಪಡುಕೋಣೆ ಮಾತ್ರ ಮೌನವಾಗಿದ್ದಾರೆ. ಪತಿಯ ಗೆಲುವಿನ ಬಗ್ಗೆ ದೀಪಿಕಾ ಮೌನಕ್ಕೆ ಅವರ ರಾಜಕೀಯ ಸಿದ್ಧಾಂತಗಳೇ ಕಾರಣವೇ ಎಂಬ ಚರ್ಚೆ ಶುರುವಾಗಿದೆ.
Read Full Story

03:38 PM (IST) Mar 23

ವಿಮಾನದಲ್ಲಿ ಶವದೊಂದಿಗೆ 13 ಗಂಟೆಗಳ ಪ್ರಯಾಣ ಮಾಡಿದ 331 ಪ್ರಯಾಣಿಕರು - ಆಗಿದ್ದೇನು?

ವಿಮಾನ ಟೇಕಾಫ್ ಆದ ಒಂದು ಗಂಟೆಯ ನಂತರ ಮಹಿಳೆಯೊಬ್ಬರು ವಿಮಾನದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಈ ಸಮಯದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಮಾಡದೇ ಪಯಣ ಮುಂದುವರೆಸಿದ ಕಾರಣ ವಿಮಾನದ ಪ್ರಯಾಣಿಕರು ಬರೋಬ್ಬರಿ 13 ಗಂಟೆಗಳ ಕಾಲ ವಿಮಾನದಲ್ಲಿ ಶವದೊಂದಿಗೆ ಸಂಚರಿಸುವಂತಾಗಿದೆ.

Read Full Story

03:32 PM (IST) Mar 23

ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ

ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ, ಭಾರತದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಬರೋಬ್ಬರಿ 200 ಪರ್ಸೆಂಟ್ ಏರಿಕೆಯಾಗಿದೆ.

Read Full Story

03:29 PM (IST) Mar 23

ಮಧ್ಯಾಹ್ನದ ವೇಳೆಗೆ ಪಾತಾಳಕ್ಕಿಳಿದ ಬಂಗಾರದ ಬೆಲೆ! ಈಗ ಒಂದು ಗ್ರಾಮ್‌ಗೆ ಒಂದು ಸಾವಿರ ರುಪಾಯಿ ಕುಸಿತ!

ಬೆಂಗಳೂರು: ಚಿನ್ನ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಸೋಮವಾರ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಸತತವಾಗಿ ಇಳಿಕೆ ಹಾದಿ ಕಂಡಿರುವ ಚಿನ್ನದ ಬೆಲೆ ಇಂದು ಮಧ್ಯಾಹ್ನದ ವೇಳೆಗೆ ಒಂದು ಗ್ರಾಮ್‌ಗೆ ಒಂದು ಸಾವಿರ ರುಪಾಯಿ ಇಳಿಕೆಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

02:47 PM (IST) Mar 23

ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಇತ್ತ ಮಹಿಳೆಯ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇತರ 7 ಗಾಯಗೊಂಡ ವ್ಯಕ್ತಿಗಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

 

Read Full Story

02:07 PM (IST) Mar 23

ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್! ಡಾ.ಖಾನ್ ಅರೆಸ್ಟ್

ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ನಾಲ್ಕು ತಿಂಗಳ ಕಾಲ ಅತ್ಯಾ*ಚಾರ ಎಸಗಿದ ವೈದ್ಯನನ್ನು ಬಂಧಿಸಲಾಗಿದೆ. ಆರೋಪಿ, ಯುವತಿಯ ಅಶ್ಲೀಲ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಮತ್ತು ರೆಸಾರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ.

Read Full Story

01:57 PM (IST) Mar 23

ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್‌ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್‌ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?

ಬೆಂಗಳೂರು: 19ನೇ ಸೀಸನ್ ಐಪಿಎಲ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಆರ್‌ಸಿಬಿ ತಂಡವು ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಐದು ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

Read Full Story

01:54 PM (IST) Mar 23

ಚಕ್ರವರ್ತಿ ರಾಜೀನಾಮೆ ಬೆನ್ನಲ್ಲೇ HDFC ಬ್ಯಾಂಕ್‌ನಲ್ಲಿ ಬಿರುಗಾಳಿ, ಮಂಡಳಿಯ ಪರಿಶೀಲನೆಗೆ ಸಿಇಒ ಶಶಿಧರ್ ಪ್ರತಿಜ್ಞೆ

ಮಾಜಿ ಅಧ್ಯಕ್ಷ ಅತನು ಚಕ್ರವರ್ತಿ ಅವರ ರಾಜೀನಾಮೆಯ ನಂತರ, HDFC ಬ್ಯಾಂಕ್ ಹಿಂದಿನ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ಧವಿದೆ ಎಂದು ಸಿಇಒ ಶಶಿಧರ್ ಜಗದೀಶನ್ ಹೇಳಿದ್ದಾರೆ. ಯಾವುದೇ ಕೊರತೆಗಳು ಕಂಡುಬಂದರೆ, ಕಾರ್ಯಾಚರಣೆ ಅಥವಾ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. 

Read Full Story

01:42 PM (IST) Mar 23

ಚಿನ್ನದ ಮಾರುಕಟ್ಟೆಗೆ 40 ವರ್ಷಗಳಲ್ಲಿಯೇ ಅತಿ ಕೆಟ್ಟ ವಾರ; ಮತ್ತಷ್ಟು ಇಳಿಕೆಯಾಗುತ್ತಾ ಬಂಗಾರ?

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆಯ ಕುಸಿತ ಕಂಡಿದೆ. ಕಳೆದ 40 ವರ್ಷಗಳಲ್ಲೇ ಅತಿ ದೊಡ್ಡ ಇಳಿಕೆಯಾಗಿದ್ದು, ಇದು ಹೂಡಿಕೆದಾರರು ಮತ್ತು ಖರೀದಿದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. 

Read Full Story

01:33 PM (IST) Mar 23

ಭಾರತದಲ್ಲಿದೆ ಡೈನೋಸಾರ್‌ಗಿಂತ ಹಳೇ ಪರ್ವತ, ಅಚ್ಚರಿ ಜೊತೆ ವಿಡಿಯೋ ಹಂಚಿದ ಆನಂದ್ ಮಹೀಂದ್ರ

ಭಾರತದಲ್ಲಿದೆ ಡೈನೋಸಾರ್‌ಗಿಂತ ಹಳೇ ಪರ್ವತ, ಅಚ್ಚರಿ ಜೊತೆ ವಿಡಿಯೋ ಹಂಚಿದ ಆನಂದ್ ಮಹೀಂದ್ರ, ನಮ್ಮಲ್ಲೇ ಈ ಅದ್ಭುತ ತಾಣವಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ ಎಂದಿರುವ ಉದ್ಯಮಿ, ನೀವು ಜಗತ್ತಿನ ಸೃಷ್ಟಿಯನ್ನು ನೋಡಿಕೊಂಡು ಬನ್ನಿ ಎಂದಿದ್ದಾರೆ.

 

Read Full Story

01:28 PM (IST) Mar 23

ರನ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ವಿಮಾನ

LaGuardia airport plane crash: ಅಮೆರಿಕಾದ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇಯಲ್ಲಿದ್ದ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

12:50 PM (IST) Mar 23

ಹಬ್ಬದ ದಿನವೇ ಮಸೀದಿಯಿಂದ ಪ್ರಧಾನಿಯನ್ನು ಉಗಿದು ಹೊರದಬ್ಬಿದರು - Video Viral

ರಂಜಾನ್ ಹಬ್ಬದ ವೇಳೆ ಮಸೀದಿಗೆ ಭೇಟಿ ನೀಡಿದ  ಪ್ರಧಾನಿ ತೀವ್ರ ಪ್ರತಿಭಟನೆ ಎದುರಿಸಿದರು. ಗಾಜಾ ಯುದ್ಧದಲ್ಲಿ ಇಸ್ರೇಲ್ ಪರ ನಿಲುವು ತಳೆದಿದ್ದಕ್ಕೆ ಆಕ್ರೋಶಗೊಂಡ ಜನಸಮೂಹ, ಅವರನ್ನು ಮಸೀದಿಯಿಂದ ಹೊರಹೋಗುವಂತೆ ಒತ್ತಾಯಿಸಿ ಮುಖಭಂಗ ಮಾಡಿತು.

Read Full Story

12:50 PM (IST) Mar 23

ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ, ಗರ್ಭಿಣಿ ಮಹಿಳೆಯನ್ನೂ ಬಿಟ್ಟಿಲ್ಲ

ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ, ಗರ್ಭಿಣಿ ಮಹಿಳೆಯನ್ನೂ ಬಿಟ್ಟಿಲ್ಲ, ಜ್ಯೋತಿಷಿ ಹಾಗೂ ಸ್ವಯಂಘೋಷಿತ ದೇವಮಾನವನ ರಾಸಲೀಲೆ ತನಿಖೆ ನಡುವೆ ಹಲವು ಸ್ಫೋಟಕ ಮಾಹಿತಿ ಜೊತೆಗೆ ವಿಡಿಯೋಗಳು ಪತ್ತೆಯಾಗಿದೆ.

 

Read Full Story

12:40 PM (IST) Mar 23

ಕೆಲಸ ಬಿಟ್ಟು ಬ್ಯುಸಿನೆಸ್ ಮಾಡ್ಬೇಕಾ? ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಗಳಿಸೋ ಐಡಿಯಾಗಳಿವು!

ಯಶಸ್ವಿ ಉದ್ಯಮಿಯಾಗಲು ಬರೀ ಹಣವೊಂದಿದ್ದರೆ ಸಾಲದು. ಮಾರುಕಟ್ಟೆಯ ಬೇಡಿಕೆ ಅರ್ಥ ಮಾಡಿಕೊಂಡು, ಸರಿಯಾದ ಕ್ಷೇತ್ರವನ್ನು ಆಯ್ಕೆ ಮಾಡುವುದು ಮುಖ್ಯ. ಕೆಲವು ಬ್ಯುಸಿನೆಸ್‌ಗಳಲ್ಲಿ ನಷ್ಟದ ಭಯವೇ ಇರುವುದಿಲ್ಲ, ಬದಲಾಗಿ ಉತ್ತಮ ಲಾಭವನ್ನೇ ತಂದುಕೊಡುತ್ತವೆ. ಅಂತಹ ಕ್ಷೇತ್ರಗಳು ಯಾವುವು ಎಂದು ಇಲ್ಲಿ ನೋಡೋಣ.
Read Full Story

12:36 PM (IST) Mar 23

ಸಲಿಂ*ಗಿ ಎಂದು ಮೊದಲು ಗೊತ್ತಾಗೋದು ಹೇಗೆ? Mr. Gay World India ನಿಖಿಲ್​ ಓಪನ್​ ಮಾತು

ದಾವಣಗೆರೆ ಮೂಲದ ಚಾರ್ಟೆಡ್ ಅಕೌಂಟೆಂಟ್ ನಿಖಿಲ್ ಜೈನ್, ತಾವು ಸಲಿಂ*ಗಿ ಎಂದು ಒಪ್ಪಿಕೊಂಡು 'ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025' ಕಿರೀಟವನ್ನು ಗೆದ್ದಿದ್ದಾರೆ. ತಮ್ಮ ಗುರುತನ್ನು ಮುಚ್ಚಿಡದೆ, LGBTQIA+ ಸಮುದಾಯದ ಕುರಿತಾದ ತಪ್ಪು ಕಲ್ಪನೆಗಳನ್ನು ಮುರಿಯಲು ಮತ್ತು ಜಾಗತಿಕ ವೇದಿಕೆಯಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತಲು ಅವರು ಪಣತೊಟ್ಟಿದ್ದಾರೆ.

Read Full Story

11:35 AM (IST) Mar 23

ಗಂಡನಿಲ್ಲದಾಗ ಬಾಡಿಗೆಗೆ ಬಂದ ಯವಕನ ಜೊತೆ ಸರಸ, ಅಡ್ಡಿಯಾದ ಅತ್ತೆ ಕತೆ ಮುಗಿಸಿದ ಸೊಸೆ

ಗಂಡನಿಲ್ಲದಾಗ ಬಾಡಿಗೆಗೆ ಬಂದ ಯವಕನ ಜೊತೆ ಸರಸ, ಅಡ್ಡಿಯಾದ ಅತ್ತೆ ಕತೆ ಮುಗಿಸಿದ ಸೊಸೆ, ಗಂಡ ಕೆಲಸದ ಕಾರಣದಿಂದ ಪ್ರತಿ ದಿನ ಮನೆಗೆ ಬರಲು ಸಾಧ್ಯವಾಗತ್ತಿರಲಿಲ್ಲ. ಹೀಗಾಗಿ ಪ್ರತಿ ದಿನ ಯುವಕನ ಜೊತೆ ಮಂಚದಾಟ ನೆಡೆಯುತ್ತಲೇ ಇತ್ತು.

Read Full Story

11:04 AM (IST) Mar 23

ಕಾಶ್ಮೀರದ ಮುಸ್ಲಿಮರಿಂದ ಯುದ್ಧ ಪೀಡಿತ ಇರಾನ್‌ಗೆ ದೇಣಿಗೆ ಸಂಗ್ರಹ, ಟೆಹ್ರಾನ್ ಭಾವುಕ

ಕಾಶ್ಮೀರದ ಮುಸ್ಲಿಮರಿಂದ ಯುದ್ಧ ಪೀಡಿತ ಇರಾನ್‌ಗೆ ದೇಣಿಗೆ ಸಂಗ್ರಹ, ಟೆಹ್ರಾನ್ ಭಾವುಕ, ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಅತೀ ಬಡವರು ಬಟ್ಟೆ, ಪಾತ್ರೆಗಳನ್ನು ಮಾರಾಟ ಮಾಡಿ ಹಣ ನೀಡಿದ್ದಾರೆ.

 

Read Full Story

11:01 AM (IST) Mar 23

ಚಿನ್ನದ ಬೆಲೆಯಲ್ಲಿ ಮಹಾ ಕುಸಿತ; ವಾರದ ಮೊದಲ ದಿನವೇ ಗೋಲ್ಡ್‌ ರೇಟ್‌ 5950 ರುಪಾಯಿ ಡೌನ್! ಕೈಗೆಟುಕುವ ಬೆಲೆಗೆ ಇಂದಿನ ಗೋಲ್ಡ್ ರೇಟ್

ಬೆಂಗಳೂರು: ಚಿನ್ನ ಖರೀದಿಸುವ ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಕಾದುಕುಳಿತವರಿಗೆ ಇದು ಗುಡ್ ನ್ಯೂಸ್. ವಾರದ ಮೊದಲ ದಿನ ಸೋವಾರವಾದ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಮಾರ್ಚ್ 23ರಂದು ಗೋಲ್ಡ್ ರೇಟ್ ಎಷ್ಟಿದೆ ನೋಡೋಣ ಬನ್ನಿ

 

Read Full Story

10:45 AM (IST) Mar 23

ಅಸ್ಸಾಂ ಚುನಾವಣೆ - ಟಿಕೆಟ್‌ ನೀಡದ ಬಿಜೆಪಿಗೆ ಶಾಕ್ ಕೊಟ್ಟ ಸಚಿವೆ, ರಾತ್ರಿ ಕಾಂಗ್ರೆಸ್‌ ಸೇರಿ ಟಿಕೆಟ್ ಪಡೆದ ನಂದಿತಾ!

ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಸಚಿವೆ ನಂದಿತಾ ಗೊರ್ಲೋಸಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಅವರು ಈಗ ಹಾಫ್ಲಾಂಗ್ (ಎಸ್‌ಟಿ) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
Read Full Story

10:39 AM (IST) Mar 23

ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್

ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್ ನೀಡಿದೆ. ಈಗಾಗಲೇ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿರುವ ಜರ್ಮನಿ, ಭಾರತದ ಯುವ ಹಾಗೂ ನುರಿತ ಪ್ರತಿಭೆಗಳಿಗೆ ಭರ್ಜರಿ ಸ್ವಾಗತ ನೀಡುತ್ತಿದೆ.

 

Read Full Story

10:27 AM (IST) Mar 23

ಐಪಿಎಲ್‌ನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಡಿ; ಈ ಪಟ್ಟಿಯಲ್ಲಿದ್ದಾರೆ ಕನ್ನಡಿಗ!

2026ರ ಐಪಿಎಲ್‌ನಲ್ಲಿ ಆಡಲು ಸಜ್ಜಾಗಿರುವ 10 ಯುವ ಭಾರತೀಯ ಕ್ರಿಕೆಟ್ ಪ್ರತಿಭೆಗಳ ಮೇಲೆ ಎಲ್ಲರ ಕಣ್ಣಿದೆ. ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಕೋಟಿಗಟ್ಟಲೆ ಹಣಕ್ಕೆ ಹರಾಜಾಗಿರುವ ಈ ಆಟಗಾರರು ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ.  

Read Full Story

08:59 AM (IST) Mar 23

IPL 2026 ಚೆನ್ನೈ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಹೊಸ ರೋಲ್! CSK ಕ್ಯಾಂಪ್‌ನಲ್ಲಿ ಶುರುವಾಯ್ತು ಹೊಸ ಲೆಕ್ಕಾಚಾರ!

ಐಪಿಎಲ್ 2026 ಸೀಸನ್‌ಗೆ ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಂದಿರುವ ಸಂಜು ಸ್ಯಾಮ್ಸನ್, ವಿಕೆಟ್ ಕೀಪಿಂಗ್ ಬದಲು ಔಟ್‌ಫೀಲ್ಡರ್ ಆಗಿ ಅಭ್ಯಾಸ ನಡೆಸುತ್ತಿದ್ದಾರೆ. ಎಂ.ಎಸ್. ಧೋನಿಯೇ ವಿಕೆಟ್ ಕೀಪಿಂಗ್ ಮುಂದುವರಿಸುವ ಸಾಧ್ಯತೆಗಳಿದ್ದು, ಸಂಜು ಅವರ ಹೊಸ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.  

Read Full Story

08:07 AM (IST) Mar 23

ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ ಹಿಂದೆಂದಿಗಿಂತ ದುಬಾರಿ! ಗರಿಷ್ಠ ಟಿಕೆಟ್ ಬೆಲೆ ಕೇವಲ ₹47,000

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರಗಳು ಹಿಂದೆಂದಿಗಿಂತಲೂ ದುಬಾರಿಯಾಗಿವೆ. ಕನಿಷ್ಠ ದರ ₹3750 ರಿಂದ ಆರಂಭವಾಗಿ ಗರಿಷ್ಠ ₹47,000 ವರೆಗೆ ತಲುಪಲಿದ್ದು, ಬೇಡಿಕೆಗೆ ಅನುಗುಣವಾಗಿ 'ಡೈನಮಿಕ್‌ ಪ್ರೈಸಿಂಗ್‌' ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.

Read Full Story

07:35 AM (IST) Mar 23

Royal Challengers Bengaluru - 2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿಗೆ ಸೇರಲಿವೆಯಾ ಏಳು ಮಹಾ ದಾಖಲೆಗಳು

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 9000 ರನ್‌, ಒಂದು ತಂಡದ ಪರ 10000 ರನ್‌, ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 4000 ರನ್‌ಗಳಂತಹ ವಿಶ್ವದಾಖಲೆಗಳು ಅವರ ಕೈಗೆಟಕುವ ದೂರದಲ್ಲಿವೆ.
Read Full Story

More Trending News