ಮುಂದಿನ ಐದು ವರ್ಷಗಳಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳು 1.81 ಲಕ್ಷ ಕೋಟಿ ರು.ನಷ್ಟು ದ್ವಿಪಕ್ಷೀಯ ವ್ಯಾಪಾರದ ಗುರಿ ಹಾಕಿಕೊಂಡಿವೆ ಹಾಗೂ ಚಿಪ್ ಸೇರಿ ವಿವಿಧ ವಸ್ತುಗಳ ತಯಾರಿಕೆಗೆ ಬೇಕಾದ ಅಪರೂಪದ ಖನಿಜಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.

11:52 PM (IST) Feb 22
India AI Mission for farmers: ಭಾರತದ ಮುಂದಿನ ಕೃಷಿ ಕ್ರಾಂತಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಲನೆ ನೀಡಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 'ಇಂಡಿಯಾ AI ಮಿಷನ್' ಅಡಿಯಲ್ಲಿ, ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಸಮಸ್ಯೆಗಳಿಗೆ AI ಪರಿಹಾರ ನೀಡಲಿದೆ.
11:34 PM (IST) Feb 22
11:09 PM (IST) Feb 22
ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ನೀಡಿದ 'ವಿರೋಶ್' ಎಂಬ ಹೆಸರಿನಲ್ಲೇ ತಮ್ಮ ವಿವಾಹವನ್ನು ಆಚರಿಸುವುದಾಗಿ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
10:53 PM (IST) Feb 22
10:33 PM (IST) Feb 22
10:07 PM (IST) Feb 22
ಹೈದರಾಬಾದ್‌ನ ಜ್ಯುಬಿಲಿಹಿಲ್ಸ್‌ನಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರ ನಿವಾಸದ ಮುಂದೆ 4 ಕೋಟಿ ಮೌಲ್ಯದ ಫೆರಾರಿ ಕಾರು ಭೀಕರ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು, ಸರಣಿ ಅಪಘಾತಕ್ಕೆ ಕಾರಣವಾಗಿ ಹಲವರು ಗಾಯಗೊಂಡಿದ್ದಾರೆ.
09:01 PM (IST) Feb 22
Tanya Mittal wedding rumors: ಹಿಂದಿ ಬಿಗ್‌ಬಾಸ್ 19ರ ಸ್ಪರ್ಧಿ ತಾನ್ಯಾ ಮಿತ್ತಲ್ ಮದುಮಗಳ ವೇಷದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮದುವೆಯ ಊಹಾಪೋಹಗಳಿಗೆ ಕಾರಣವಾಗಿದೆ. ಸಿದ್ಧತೆ ಆರಂಭವಾಗಿದೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋ ಪೋಸ್ಟ್ ಮಾಡಿರುವುದರಿಂದ ವೀಡಿಯೋ ಜನರ ಕುತೂಹಲ ಹೆಚ್ಚಾಗಿದೆ.
08:58 PM (IST) Feb 22
08:36 PM (IST) Feb 22
ಯಶಸ್ಸಿಗೆ ಕೇವಲ ಅಂಕಗಳೇ ಮಾನದಂಡವಲ್ಲ, ಅದೃಷ್ಟ ಮತ್ತು ಪ್ರಯತ್ನವೂ ಮುಖ್ಯ. ಈ ಲೇಖನವು ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಸೇರಿದಂತೆ ಹಲವು ಬಾಲಿವುಡ್ ತಾರೆಯರ ಪಿಯುಸಿ ಅಂಕಗಳು ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ವಿವರಿಸುತ್ತದೆ.
08:17 PM (IST) Feb 22
ದೆಹಲಿಯಲ್ಲಿ ಉಗ್ರರ ಪರ ಪೋಸ್ಟರ್‌ಗಳು ಕಾಣಿಸಿಕೊಂಡ ಬೆನ್ನಲ್ಲೇ ದೆಹಲಿ ಪೊಲೀಸರ ವಿಶೇಷ ದಳ ಕಾರ್ಯಾಚರಣೆ ನಡೆಸಿದೆ. ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ದೊಡ್ಡ ಜಾಲವನ್ನು ಭೇದಿಸಿದ್ದು, ಕೋಲ್ಕತ್ತಾ ಮತ್ತು ತಿರುಪ್ಪೂರಿನಲ್ಲಿ ಏಳು ಬಾಂಗ್ಲಾದೇಶಿ ಪ್ರಜೆಗಳು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.
07:39 PM (IST) Feb 22
07:14 PM (IST) Feb 22
Countries advised to leave Iran: ಇರಾನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಮೆರಿಕದ ಸಂಭವನೀಯ ಮಿಲಿಟರಿ ಕಾರ್ಯಾಚರಣೆಯ ಬೆದರಿಕೆಯ ಹಿನ್ನೆಲೆಯಲ್ಲಿ, ಸೆರ್ಬಿಯಾ ಹಾಗೂ ಸ್ವೀಡನ್ ದೇಶಗಳು ತಮ್ಮ ಪ್ರಜೆಗಳಿಗೆ ತಕ್ಷಣವೇ ಇರಾನ್ ತೊರೆಯುವಂತೆ ಸೂಚಿಸಿವೆ.
06:42 PM (IST) Feb 22
05:31 PM (IST) Feb 22
ಪಾಕಿಸ್ತಾನ ಅಂದ್ರೆ ಜಗತ್ತಿನ ಬೇರೆ ದೇಶಗಳು ಮೂಗು ಮುರಿಯೋದೇ ಜಾಸ್ತಿ. ರಾಜಕೀಯ ಅಸ್ಥಿರತೆ, ತೀವ್ರ ಹಣದುಬ್ಬರದ ಕಾರಣದಿಂದಾಗಿ ಅಲ್ಲಿನ ನಿವಾಸಿಗಳೇ ದೇಶ ಬಿಟ್ಟು ದೂರ ಹೋಗಿ ನೆಲೆಸಲು ಬಯಸುತ್ತಾರೆ. ಹೀಗಿರುವಾಗ ಅಲ್ಲಿಗೆ ಮದುವೆಯಾಗಿ ಬಂದ ಅಮೆರಿಕನ್ ಯುವತಿ ತಮ್ಮ ಬದುಕಿನ ಕತೆ ಹೇಳಿಕೊಂಡಿದ್ದು ವೈರಲ್ ಆಗಿದೆ.
04:37 PM (IST) Feb 22
04:34 PM (IST) Feb 22
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯ ಚಾಟ್ರೂ ಪ್ರದೇಶದಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಕಾರ್ಯಾಚರಣೆ ವೇಳೆ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
04:28 PM (IST) Feb 22
ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಆಭರಣಗಳನ್ನು ತ್ಯಜಿಸುತ್ತಿದ್ದರೆ, ಪುರುಷರು ಮಹಿಳೆಯರ ಆಭರಣಗಳನ್ನು ಧರಿಸುವ ಟ್ರೆಂಡ್ ಶುರುವಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮಂಗಳಸೂತ್ರದ ವಿನ್ಯಾಸದ ಬ್ರೇಸ್ಲೆಟ್ ಧರಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
04:19 PM (IST) Feb 22
ಕೇರಳದ ಕೊಚ್ಚಿಯಲ್ಲಿ 21 ವರ್ಷದ ಯುವಕನೋರ್ವ ಕುಟುಂಬದೊಂದಿಗೆ ಉಪಹಾರ ಸೇವಿಸುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಚರ್ಚ್‌ನಿಂದ ಬಂದ ನಂತರ ತಿಂಡಿ ತಿನ್ನುವಾಗ ಈ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಬೇಕಿದೆ.
03:35 PM (IST) Feb 22
girl saves toddlers from lift: ಹಠಾತ್ತನೆ ಸ್ಥಗಿತಗೊಂಡ ಲಿಫ್ಟ್‌ನಲ್ಲಿ ಸಿಲುಕಿದ್ದ ಇಬ್ಬರು ಪುಟ್ಟ ಮಕ್ಕಳನ್ನು, ಬಾಲಕಿಯೊಬ್ಬಳು ತನ್ನ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾಳೆ. ತನ್ನ ಕೈ ಮತ್ತು ಕಾಲುಗಳನ್ನು ಬಳಸಿ ಲಿಫ್ಟ್ ಬಾಗಿಲನ್ನು ತೆರೆದು ಮಕ್ಕಳನ್ನು ಹೊರತಂದ ಈಕೆಯ ಸಾಹಸದ ವಿಡಿಯೋ ವೈರಲ್ ಆಗಿದೆ.
02:09 PM (IST) Feb 22
ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದ ಸೋದರಿಯರಿಬ್ಬರೂ ತಮ್ಮದೇ ಮದುವೆಗೆ ಇನ್ನೇನು ಒಂದು ದಿನ ಬಾಕಿ ಇರುವಾಗ ಶವವಾಗಿ ಪತ್ತೆಯಾಗಿದ್ದಾರೆ. ರಾಜಸ್ಥಾನ ಜೋಧ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮದುವೆಯ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
01:33 PM (IST) Feb 22
01:16 PM (IST) Feb 22
12:53 PM (IST) Feb 22
ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿಂದು ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅಹಮದಾಬಾದ್‌ನಲ್ಲಿ ಸಂಜೆ 7 ಗಂಟೆಗೆ ನಡೆಯುವ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾಜಿ ಆಟಗಾರ ಸಂಜಯ್ ಬಂಗಾರ್ ಮಾತನಾಡಿದ್ದಾರೆ. ಅವರು ಎರಡು ಬದಲಾವಣೆಗಳನ್ನು ಸೂಚಿಸಿದ್ದಾರೆ.
12:15 PM (IST) Feb 22
ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಮುರಿದುಕೊಂಡಿರುವ ಮಲೈಕಾ ಅರೋರಾ, ಇದೀಗ ತಮಗಿಂತ 19 ವರ್ಷ ಚಿಕ್ಕವರಾದ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಜೊತೆ ಕಾಣಿಸಿಕೊಂಡಿದ್ದಾರೆ. ಇಟಲಿಯ ರೋಮ್‌ನಲ್ಲಿ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿವೆ.
11:59 AM (IST) Feb 22
ವಿಚ್ಛೇದನದ ನಂತರವೂ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿ ನತಾಶಾ ಸ್ಟಂಕೋವಿಕ್ ಮತ್ತು ಪುತ್ರ ಅಗಸ್ತ್ಯನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ದುಬಾರಿ ಉಡುಗೊರೆ ಈಗ ಹಾರ್ದಿಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ
11:49 AM (IST) Feb 22
11:06 AM (IST) Feb 22
wedding called off over pet dog: ಉತ್ತರ ಪ್ರದೇಶದಲ್ಲಿ, ಮದುವೆ ಸಮಾರಂಭದ ವೇಳೆ ವಧುವಿನ ಸಾಕುನಾಯಿ ಬೊಗಳಿದ್ದಕ್ಕೆ ವರನ ಕಡೆಯವರು ಅದಕ್ಕೆ ಥಳಿಸಿದ್ದಾರೆ. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದು, ಹೊಡೆದಾಟವಾಗಿದೆ. ಇದರಿಂದಾಗಿ ವಧು ಮದುವೆಯಾಗಲು ನಿರಾಕರಿಸಿದ್ದು, ಮದುವೆಯೇ ರದ್ದಾಗಿದೆ.
10:07 AM (IST) Feb 22
ಅಮೆರಿಕ ಸುಪ್ರೀಂ ಕೋರ್ಟ್ ಹಿಂದಿನ ತೆರಿಗೆಗಳನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಕಾನೂನಿನಡಿ ಭಾರತ ಸೇರಿದಂತೆ ಎಲ್ಲಾ ದೇಶಗಳ ಮೇಲೆ ಶೇ.15ರಷ್ಟು ತಾತ್ಕಾಲಿಕ ಸುಂಕ ವಿಧಿಸಲು ನಿರ್ಧರಿಸಿದ್ದಾರೆ.
08:05 AM (IST) Feb 22
ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಭಾರತ ತಂಡ ಭಾನುವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅಭಿಷೇಕ್ ಶರ್ಮಾ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ನಡುವೆ, ಮಾಜಿ ಆಟಗಾರ ದೀಪ್‌ದಾಸ್ ಗುಪ್ತಾ ಭಾರತದ ಸಂಭಾವ್ಯ ಆಡುವ ಬಳಗವನ್ನು ಪ್ರಕಟಿಸಿದ್ದಾರೆ.
07:20 AM (IST) Feb 22
ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ, ಗುಂಪು ಹಂತದಲ್ಲಿ ಅಜೇಯವಾಗಿರುವ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಕಳೆದ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಕಾಯುತ್ತಿದೆ.
07:19 AM (IST) Feb 22
ಅಣ್ವಸ್ತ್ರಕ್ಕೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ನಿಲ್ಲಿಸಲು ಇರಾನ್ ಒಪ್ಪದಿದ್ದರೆ, ಆ ದೇಶದ ಮೇಲೆ ಸೀಮಿತ ದಾಳಿ ನಡೆಸಲು ಅಮೆರಿಕ ಯೋಜಿಸುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ಮತ್ತು ಪುತ್ರ ಮೋಜತಬಾ ಖಮೇನಿ ಅವರ ಹತ್ಯೆಗೂ ಟ್ರಂಪ್ ಸ್ಕೆಚ್ ಹಾಕಿದ್ದಾರೆ ಎಂದು ವರದಿಯಾಗಿದೆ.