ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫಿಲಿಪ್ಪೀನ್ಸ್‌ನ ಮನಿಲಾ ಪ್ರವಾಸದಲ್ಲಿ ಕರ್ನಾಟಕದ ಬೀದರ್‌ನ ಪ್ರಸಿದ್ಧ ಬಿದರಿ ಕಲೆಯ ಹೂದಾನಿಗಳನ್ನು ಜಾಗತಿಕ ನಾಯಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.ನ.16-17ರಂದು ನಡೆದ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ಕರಕುಶಲ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಉಡುಗೊರೆಗಳನ್ನು ನೀಡಲಾಯಿತು. ಮೋದಿ ನೀಡಿದ ಬಿದರಿ ಕಲೆಯ ಬೆಳ್ಳಿ ಕುಸುರಿ ಹೂದಾನಿಗಳನ್ನು ಮ್ಯಾನ್ಮಾರ್ ಮತ್ತು ಬ್ರೂನೈ ದೇಶಗಳ ನಾಯಕರು ಸ್ವೀಕರಿಸಿದರು.
ಕರ್ನಾಟಕದ ಬೀದರ್ ಜಿಲ್ಲೆಯ ಈ ಸಾಂಪ್ರದಾಯಿಕ ಲೋಹದ ಕಲೆಗೆ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ಮಾನ್ಯತೆ ಲಭಿಸಿದೆ. ಇದನ್ನು ಸತು ಮತ್ತು ತಾಮ್ರದ ಮಿಶ್ರಲೋಹದಿಂದ ತಯಾರಿಸಲಾಗುತ್ತದೆ.