Published : Feb 19, 2026, 06:58 AM ISTUpdated : Feb 19, 2026, 10:54 PM IST

India Latest News Live: ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ - ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!

ಸಾರಾಂಶ

ಕಾಬೂಲ್ ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿಯನ್ನು ಇನ್ನಷ್ಟು ಶೋಷನೀಯಗೊಳಿಸುವಂತಹ ಕ್ರಿಮಿನಲ್‌ ಕಾನೂನೊಂದನ್ನು ತಾಲಿಬಾನ್‌ ಸರ್ಕಾರ ಜಾರಿಗೆ ತಂದಿದೆ. ಇದರನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.

ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಅಂತೆಯೇ ಪತಿಯ ಆಣತಿಯಿಲ್ಲದೆ ಸಂಬಂಧಿಕರ ಮನೆಗೆ ಹೋಗುವ ಸ್ತ್ರೀಯರಿಗೆ 3 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.

10:54 PM (IST) Feb 19

ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ - ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!

ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿತರಾಗಿದ್ದ ಅಮೆರಿಕದ ಉದ್ಯಮಿ ಸಾರಾ ಹೂಕರ್, ದೆಹಲಿಯ ಭೀಕರ ಟ್ರಾಫಿಕ್‌ನಿಂದಾಗಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು. ನಾಲ್ಕು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ, ಅಂತಿಮವಾಗಿ ಹೋಟೆಲ್‌ನಲ್ಲಿ ರೂಮ್ ಸರ್ವಿಸ್ ಮೂಲಕ ಊಟ ಮಾಡಿದ್ದಾರೆ.

Read Full Story

09:52 PM (IST) Feb 19

ದೇಶದಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ - 12 ರಾಜ್ಯಗಳಲ್ಲಿ ವಂಚನೆ ಜಾಲ

ಭಾರತದಲ್ಲಿ ನಕಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯುಜಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. ದೇಶದ 12 ರಾಜ್ಯಗಳಲ್ಲಿ 32 ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವೇಶ ಪಡೆಯುವ ಮುನ್ನ ಯುಜಿಸಿ ವೆಬ್‌ಸೈಟ್‌ನಲ್ಲಿ ಪಟ್ಟಿ ಪರಿಶೀಲಿಸುವಂತೆ ಸೂಚಿಸಲಾಗಿದೆ. 

Read Full Story

09:29 PM (IST) Feb 19

ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್‌ ವಿಡಿಯೋ ವೈರಲ್!

AI ಸಮ್ಮಿಟ್‌ನಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾದ ರೋಬೋಡಾಗ್‌ ಅನ್ನು ತಮ್ಮದೆಂದು ಹೇಳಿಕೊಂಡು ವಿವಾದಕ್ಕೆ ಸಿಲುಕಿದೆ. ಸತ್ಯ ಬಯಲಾಗುತ್ತಿದ್ದಂತೆ ಕ್ಷಮೆಯಾಚಿಸಿದರೂ, ಈಗ ವಿಶ್ವವಿದ್ಯಾಲಯವು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದೆ.
Read Full Story

08:24 PM (IST) Feb 19

53 ಕ್ಷೇತ್ರಗಳಲ್ಲಿ 'ಕೈ' ಸೋಲಿಗೆ ಕಾರಣವಾದ ರಾಹುಲ್​ ಗಾಂಧಿ ನಾಯಿ? ಏನಿದು ರೋಚಕ ಘಟನೆ?

ರಾಹುಲ್ ಗಾಂಧಿಯವರ ನಾಯಿಗೆ ಸಿಕ್ಕ ಪ್ರಾಮುಖ್ಯತೆಯಿಂದ ಬೇಸತ್ತು ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ತೊರೆದರು. ಇದರ ಪರಿಣಾಮವಾಗಿ ಅಸ್ಸಾಂನಲ್ಲಿ ಕಾಂಗ್ರೆಸ್ 53 ಸ್ಥಾನಗಳನ್ನು ಕಳೆದುಕೊಂಡು ಅಧಿಕಾರ ಕಳೆದುಕೊಂಡಿತು. ಈ ಘಟನೆಯು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
Read Full Story

08:20 PM (IST) Feb 19

ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ

ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ 10ನೇ ಕ್ಲಾಸ್‌ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಕೊನೆಗೂ ವೈಭವ್ ತಂದೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.

 

Read Full Story

08:01 PM (IST) Feb 19

ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ದೇವರಿಗೆ ಹರಕೆ ಹೊತ್ತ 4 ತಿಂಗಳ ಬಳಿಕ ಪವಾಡ

ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ಮನೆ ಕ್ಲೀನ್ ಮಾಡಿ ಬೇಡದ ವಸ್ತುಗಳನ್ನು ಗುಜುರಿಗೆ ಮಾರಾಟ ಮಾಡಲಾಗಿತ್ತು. ಇದರಲ್ಲಿ ಚಿನ್ನವೂ ಹೋಗಿತ್ತು. ದೇವರಿಗೆ ಹರಕೆ ಹೊತ್ತ ಬಳಿಕ ನಡೆಯಿತು ಪವಾಡ

 

Read Full Story

07:21 PM (IST) Feb 19

ಚೀನಾ ರೋಬೋಡಾಗ್ ತಮ್ಮದೆಂದು ತೋರಿಸಿದ ಗಾಲ್ಗೋಟಿಯಾಸ್ ವಿವಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು

Galgotias robodog controversy: ವಿಶ್ವ ಮಟ್ಟದ ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ಅನ್ನು ತಮ್ಮದೆಂದು ಹೇಳಿ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಮುಜುಗರಕ್ಕೀಡಾಗಿತ್ತು. ಈ ಘಟನೆಯ ನಂತರಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಶ್ವವಿದ್ಯಾನಿಲಯವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

Read Full Story

06:53 PM (IST) Feb 19

ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ

ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ, ಇರಾನ್ ಮೇಲೆ ಏರ್‌ಸ್ಟ್ರೈಕ್ ಮಾಡಲು ಅಮೆರಿಕ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಟ್ರಂಪ್ ಅಂತಿಮ ಆದೇಶಕ್ಕಾಗಿ ಕಾಯುತ್ತಿದೆ. ಸ್ಟ್ರೈಕ್ ನಡೆದರೆ ಭಾರತದಲ್ಲಿ ಹಲು ವಸ್ತುಗಳ ಬೆಲೆ ಏರಿಕೆಯಾಗಲಿದೆ.

 

Read Full Story

06:49 PM (IST) Feb 19

Tata Share - 7 ಲಕ್ಷ ಕೋಟಿ ತೊಳೆದು ಹೋದ ದಿನದಲ್ಲಿ, ಶೇ.13ರಷ್ಟು ಏರಿಕೆ ಕಂಡ ಟಾಟಾ ಷೇರು!

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳು ಒಂದೇ ದಿನದಲ್ಲಿ ಶೇ. 13 ರಷ್ಟು ಏರಿಕೆ ಕಂಡಿವೆ. ಎನ್. ಚಂದ್ರಶೇಖರನ್ ಅವರ ಮರು ನೇಮಕಾತಿ ಸುದ್ದಿ ಮತ್ತು ಕಂಪನಿಯ ಡಿಸೆಂಬರ್ ತ್ರೈಮಾಸಿಕದಲ್ಲಿನ ಶೇ. 284.45 ರಷ್ಟು ಲಾಭದ ಹೆಚ್ಚಳವು ಈ ಜಿಗಿತಕ್ಕೆ ಪ್ರಮುಖ ಕಾರಣಗಳಾಗಿವೆ.
Read Full Story

06:47 PM (IST) Feb 19

ಧೂಮಪಾನಕ್ಕಿಂತಲೂ ಇದರಿಂದ ಸಾಯೋರು ಅಧಿಕ, ಜೋಪಾನ!

ಮಹಾ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಇತ್ತೀಚೆಗೆ ಬೆಂಗಳೂರು ಗ್ರಾಮೀಣ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದ್ದರು.

Read Full Story

06:26 PM (IST) Feb 19

2026 ಚೀನೀ ಹೊಸ ವರ್ಷ ಶುರು, ಈ ಕೆಲಸ ಮಾಡಿದರೆ ಹಣ-ಅದೃಷ್ಟ ಓಡಿ ಬರುತ್ತೆ! ಆದ್ರೆ ಆ ತಪ್ಪುಗಳನ್ನು ಮಾಡ್ಬೇಡಿ

ಚೀನಾ ಜ್ಯೋತಿಷ್ಯ ಪದ್ಧತಿಯಲ್ಲಿ ಹೊಸ ವರ್ಷದ ಮೊದಲ ಕೆಲವು ದಿನಗಳು ಪೂರ್ತಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತೆ ಎಂಬ ನಂಬಿಕೆ ಇದೆ. ಈ ಪದ್ಧತಿ ಪ್ರಕಾರ ವರ್ಷ ಪೂರ್ತಿ ಖುಷ್ ಖುಷಿಯಾಗಿ, ಕೈ ತುಂಬಾ ದುಡ್ಡಿರುವಂತೆ ಮಾಡಲು ಹೇಗಿರಬೇಕು?

Read Full Story

06:05 PM (IST) Feb 19

ಸಿನಿ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದ್ದ ನಟಿ ಪ್ರತ್ಯುಷಾ ಸಾವಿನ ಕೇಸ್​ - 24 ವರ್ಷಗಳ ಬಳಿಕ ಈಗ ಶಿಕ್ಷೆ ಪ್ರಕಟ!

ನಟಿ ಪ್ರತ್ಯುಷಾ ಅವರ ಸಾವು 'ಪುನ್ನಗೈ ಮನ್ನನ್' ಚಿತ್ರದ ಕಥೆಯನ್ನು ಹೋಲುತ್ತದೆ. ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮ*ಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದ ಈ ಪ್ರಕರಣದಲ್ಲಿ, 24 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಏನಿದೆ ತೀರ್ಪಿನಲ್ಲಿ?

Read Full Story

05:55 PM (IST) Feb 19

ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ₹10 ಲಕ್ಷ ಕೋಟಿ ಹೂಡಿಕೆ ಘೋಷಿಸಿದ ಅಂಬಾನಿ

ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ಇದಕ್ಕಾಗಿ ಮುಕೇಶ್ ಅಂಬಾನಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ದೆಹಲಿ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಅಂಬಾನಿ ಘೋಷಣೆ ಹಲವು ದೇಶಗಳನ್ನೇ ಚಕಿತಗೊಳಿಸಿದೆ.

 

Read Full Story

05:52 PM (IST) Feb 19

99 ವರ್ಷದ ವೃದ್ಧೆಯ ಕೊಲೆ ಮಾಡಿ ದರೋಡೆ - ಶವ ಕಬ್ಬಿಣದ ಪೆಟ್ಟಿಗೆಗೆ ತುಂಬಿ ಎಸ್ಕೇಪ್

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ 99 ವರ್ಷದ ವೃದ್ಧೆ ಜೋಗಿಂದರ್ ಕೌರ್ ಅವರನ್ನು ದರೋಡೆಕೋರನೊಬ್ಬ ಕೊಲೆ ಮಾಡಿದ್ದಾನೆ. ಒಂಟಿಯಾಗಿ ವಾಸಿಸುತ್ತಿದ್ದ ಅವರ ಶವವು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆಯಾಗಿದ್ದು, ಕಳ್ಳತನದ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Read Full Story

05:25 PM (IST) Feb 19

ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್

ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್, ಅಪ್ಪಟ ಸುಂದರ ಈಕೆ. ಸೀರೆ, ಮಾಡರ್ನ್ ಡ್ರೆಸ್ ಸೇರಿದಂತೆ ಭಿನ್ನ ಶೈಲಿಯಲ್ಲಿ ಈಕೆ ಮಿಂಚುತ್ತಿದ್ದಾಳೆ. ಇನ್ನು ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಟ್ರೆಂಡ್‌ನಲ್ಲಿರುವ ಈ ನೈನಾ ಯಾರು?

 

Read Full Story

05:00 PM (IST) Feb 19

ಕಾಮಾಕ್ಯ ದೇಗುಲದಲ್ಲಿ ಜೊತೆಯಾದ PM-CM ಆಕಾಂಕ್ಷಿಗಳು - ನೆರವೇರತ್ತಾ ಆಸೆ? ಡಿಕೆಶಿ ಹೇಳಿದ್ದೇನು?

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ತಾಂತ್ರಿಕ ದೇವಿಯು ಇವರ ರಾಜಕೀಯ ಬಯಕೆಗಳನ್ನು ಈಡೇರಿಸುವಳೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

Read Full Story

04:34 PM (IST) Feb 19

ಟಾಪ್-5 ಸಾರ್ವಕಾಲಿಕ ಶ್ರೇಷ್ಠ ಟಿ20 ಕ್ರಿಕೆಟಿಗರನ್ನು ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಇವರೆಲ್ಲ ಡೇಂಜರಸ್ ಬ್ಯಾಟರ್ಸ್‌

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಶ್ರೇಷ್ಠ ಟಾಪ್ 5 ಟಿ20 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

04:30 PM (IST) Feb 19

ಹಾರಿ ಹೋಗಿ ಸೈನ್ ಬೋರ್ಡ್‌‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ

ಹಾರಿ ಹೋಗಿ ಸೈನ್ ಬೋರ್ಡ್‌‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿ ಬಹಿರಂಗವಾಗಿದೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಅಸಲಿ ಕತೆ ಇಲ್ಲಿದೆ.

 

Read Full Story

04:25 PM (IST) Feb 19

ಪ್ರಧಾನಿಗೆ ಪತ್ರ ಬರೆದರೂ ಸಿಗದ ರಕ್ಷಣೆ - ವಿಸ್ಲ್ ಬ್ಲೋವರ್ ಕಾಯ್ದೆಗೆ ನಾಂದಿಯಾದ ನಿಷ್ಠಾವಂತ ಅಧಿಕಾರಿಯ ಕೊ*ಲೆ!

ಪ್ರಾಮಾಣಿಕ ಐಇಎಸ್ ಅಧಿಕಾರಿ ಸತ್ಯೇಂದ್ರ ದುಬೆ, ದೇಶದ ಪ್ರತಿಷ್ಠಿತ 'ಸುವರ್ಣ ಚತುಷ್ಪಥ' ಹೆದ್ದಾರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದರು.  ಆದರೆ, ಅವರ ಅಮಾನುಷ ಹತ್ಯೆ 'ಮಾಹಿತಿ ನೀಡುವವರ ಸಂರಕ್ಷಣಾ ಕಾಯ್ದೆ' ಜಾರಿಗೆ ಬರಲು ಪ್ರೇರಣೆಯಾಯಿತು.

Read Full Story

04:16 PM (IST) Feb 19

ಅವಲಕ್ಕಿ ಮೇಲೆ ಕುಳಿತೇ ಅವಲಕ್ಕಿ ಪ್ಯಾಕಿಂಗ್‌ - ಪೋಹಾ ಪ್ಯಾಕಿಂಗ್ ವಿಡಿಯೋ ನೋಡಿ ಸಿಡಿಸಿಡಿಯಾದ ವೀಕ್ಷಕರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಕಾರ್ಮಿಕರು ಅವಲಕ್ಕಿಯ ರಾಶಿಯ ಮೇಲೆ ಕುಳಿತುಕೊಂಡು ಅಶುಚಿಯಾಗಿ ಪ್ಯಾಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಆಹಾರ ಸುರಕ್ಷತೆ ಮತ್ತು FSSAIನಂತಹ ನಿಯಂತ್ರಕ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.
Read Full Story

03:56 PM (IST) Feb 19

'ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲವೂ ಫ್ರೀ ಅಂದ್ರೆ ಕೆಲಸ ಮಾಡೋರು ಯಾರು?' ಉಚಿತ ಭಾಗ್ಯದ ವಿರುದ್ಧ ಸುಪ್ರೀಂ ಕೋರ್ಟ್ ಗರಂ!

ಚುನಾವಣೆಗೂ ಮುನ್ನ ಘೋಷಿಸುವ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ದೇಶದ ಆರ್ಥಿಕತೆಗೆ ಮಾರಕವಾದ ಇಂತಹ ನೀತಿಗಳ ಬದಲು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕೆಂದು ನ್ಯಾಯಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒತ್ತಿಹೇಳಿದೆ.
Read Full Story

03:33 PM (IST) Feb 19

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದ್ವೆ - ಶೆಟ್ಟರ ಗ್ಯಾಂಗಿಗೆ ಇದ್ಯಾ ಇನ್ವಿಟೇಷನ್?

ಕೊಡಗಿನ ಬ್ಯೂಟಿ, ಇದೀಗ ನ್ಯಾಷನಲ್ ಕ್ರಶ್ ಎಂದು ಕರೆಯಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯುತ್ತಿದ್ದು, ಕರ್ನಾಟಕದ ಶೆಟ್ಟರ ಗ್ಯಾಂಗಿಗೆ ಆಹ್ವಾನವಿದ್ಯಾ?

 

Read Full Story

03:21 PM (IST) Feb 19

ವಡೆ ಜಂಕ್​ಫುಡ್​ ಅಲ್ಲ, ಹೀಗೆ ತಿಂದರೆ ಅಮೃತ- ಬಹು ಕಾಯಿಲೆ ವಾಸಿ - ವೈದ್ಯರು ಹೇಳಿದ್ದು ಕೇಳಿ

ಜಂಕ್‌ಫುಡ್ ಎಂದು ಪರಿಗಣಿಸಲಾಗುವ ವಡೆಯು ಕೇವಲ ತಿಂಡಿಯಲ್ಲ, ಅದೊಂದು ಔಷಧ ಎನ್ನುತ್ತಾರೆ ಆಯುರ್ವೇದ ತಜ್ಞರು. ನಿರ್ದಿಷ್ಟ ವಿಧಾನದಲ್ಲಿ ತಯಾರಿಸಿದ ಉದ್ದಿನ ವಡೆಯನ್ನು ಬೆಣ್ಣೆಯೊಂದಿಗೆ ಸೇವಿಸುವುದರಿಂದ ನರ ದೌರ್ಬಲ್ಯ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಬಹುದು ಎಂದಿದ್ದಾರೆ.

Read Full Story

03:19 PM (IST) Feb 19

ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಪಿಸಿಬಿಗೆ ಮುಂದೆ ಕಣ್ಣೀರು

ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಕ್ರಿಕೆಟಿಗ ತನಗೆ ಮಾಡಿದ್ದ ಮೆಸೇಜ್‌ಗಳನ್ನು ಮಾಜಿ ಪತ್ನಿ ಸನ್ನಿಯಾ ಅಶ್ಫಾಕ್ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಪಿಸಿಬಿಗೆ ಭಾವನಾತ್ಮಕ ಮನವಿ ಕಳುಹಿಸಿದ್ದಾರೆ. ಏನಿದು ಪ್ರಕರಣ

 

Read Full Story

02:05 PM (IST) Feb 19

ಅತಿಹೆಚ್ಚು ಹಿಂದೂ ಧರ್ಮವನ್ನು ಪಾಲಿಸುವ ಟಾಪ್ 6 ದೇಶಗಳಿವು! ಈ ಲಿಸ್ಟ್‌ನಲ್ಲಿದೆಯಾ ಪಾಕಿಸ್ತಾನ?

ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ತನ್ನ ವಿಶಿಷ್ಠ ಆಚರಣೆ ಮೂಲಕ ಜಗತ್ತಿಗೆ ಹಲವು ವಿಚಾರಗಳಲ್ಲಿ ಹಿಂದೂ ಧರ್ಮವು ಸ್ಪೂರ್ತಿಯಾಗಿದೆ. ಅತಿಹೆಚ್ಚು ಹಿಂದೂ ಧರ್ಮವನ್ನು ಅನುಸರಿಸುವ ಜಗತ್ತಿನ ಟಾಪ್ 6 ದೇಶಗಳು ಯಾವುವು ನೋಡೋಣ ಬನ್ನಿ.

Read Full Story

02:03 PM (IST) Feb 19

ಕಾನ್ಪುರ ಕ್ರಿಕೆಟ್ ಪಂದ್ಯದ ನಡುವೆ ಜೇನುನೊಣ ದಾಳಿಗೆ ಅಂಪೈರ್ ಸಾವು, ಆಟಗಾರರು ಗಂಭೀರ

ಕಾನ್ಪುರ ಪಂದ್ಯದ ನಡುವೆ ಜೇನುನೊಣ ದಾಳಿಗೆ ಅಂಪೈರ್ ಸಾವು, ಏಕಾಏಕಿ ಜೇನುನೊಣ ದಾಳಿ ನಡೆಸಿದೆ. ಆಟಗಾರರು, ಅಂಪೈರ್ ಸೇರಿದಂತೆ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ತೀವ್ರ ದಾಳಿಯಿಂದ ಅಂಪೈರ್ ಮೃತಪಟ್ಟರೆ, ಕ್ರಿಕೆಟಿಗರು ಪರಿಸ್ಥಿತಿ ಗಂಭೀರವಾಗಿದೆ.

 

Read Full Story

01:57 PM (IST) Feb 19

ಮೂರು ಗಂಡು ಮಕ್ಕಳನ್ನು ಕೊಂದು 18 ವರ್ಷ ಜೈಲಿಗೆ ಹೋಗಿ ಬಂದವನಿಂದ ಆಶ್ರಯ ನೀಡಿದ ಮಹಿಳೆಯ ಕೊಲೆ

18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ, ತನಗೆ ಆಶ್ರಯ ನೀಡಿದ್ದ ಮಹಿಳೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ಮೂವರು ಮಕ್ಕಳನ್ನು ಕೊಂದಿದ್ದ ಈತ, ಭೋಪಾಲ್‌ನಲ್ಲಿ ಈ ಕೃತ್ಯ ಎಸಗಿದ್ದು, ಬಳಿಕ ರೈಲಿಗೆ ತಲೆಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.

Read Full Story

01:47 PM (IST) Feb 19

ಭಾರತದ ಶ್ರೀಮಂತ, ಬಡ ರಾಜ್ಯಗಳ ಪಟ್ಟಿ - ಉತ್ತರ ಪ್ರದೇಶ, ಗುಜರಾತ್, ಕರ್ನಾಟಕದ ಸ್ಥಾನವೆಷ್ಟು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು? ಈ ಪಟ್ಟಿಯಲ್ಲಿ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಪ್ರಾಬಲ್ಯ ಸಾಧಿಸಿದ್ದು, ಅರುಣಾಚಲ ಪ್ರದೇಶವು ಅತಿ ಕಡಿಮೆ ಆರ್ಥಿಕ ಉತ್ಪಾದನೆ ಹೊಂದಿದೆ.

Read Full Story

01:24 PM (IST) Feb 19

ಹೆಂಡತಿ ಖಾಸಗಿ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಪತಿ, ಕೋಲಾಹಲ ಸೃಷ್ಟಿಸಿದ ಕ್ಲಿಪ್

ಹೆಂಡತಿ ಖಾಸಗಿ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಪತಿ, ಸೋಶಿಯಲ್ ಮೀಡಿಯಾಗಳಲ್ಲಿ ಈ ಕ್ಲಿಪ್‌ನಿಂದ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಮತ್ತಷ್ಟು ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಏನಿದು ಗಂಡ ಹೆಂಡತಿಯ ಖಾಸಗಿ ವಿಡಿಯೋ ಪ್ರಕರಣ

 

Read Full Story

01:21 PM (IST) Feb 19

ಟಿ20 ವಿಶ್ವಕಪ್‌ನಲ್ಲಿ ಶಿವಂ ದುಬೆ ಅಬ್ಬರ, ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ ಉಡೀಸ್!

ಅಹಮದಾಬಾದ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಟಿ20 ವಿಶ್ವಕಪ್ 2026 ಪಂದ್ಯದಲ್ಲಿ ಶಿವಂ ದುಬೆ ಕೇವಲ 31 ಎಸೆತಗಳಲ್ಲಿ 66 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡಿದ್ದಾರೆ.

Read Full Story

01:12 PM (IST) Feb 19

ರಕ್ಷಿತ್​ ಶೆಟ್ಟಿ ಚಾಕ್ಲೇಟ್​ ತಿನ್ನೋ ಮಗುವಲ್ಲ - Rashmika Mandanna ಮದ್ವೆಗೆ ಪ್ರಮೋದ್​ ಶೆಟ್ಟಿ ರಿಯಾಕ್ಷನ್​!

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ಚರ್ಚೆಯಲ್ಲಿರುವಾಗಲೇ, ರಕ್ಷಿತ್ ಶೆಟ್ಟಿ ಜೊತೆಗಿನ ಅವರ ಹಿಂದಿನ ನಿಶ್ಚಿತಾರ್ಥದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮಾತನಾಡಿದ ನಟ ಪ್ರಮೋದ್ ಶೆಟ್ಟಿ ಹೇಳಿದ್ದೇನು?

Read Full Story

01:03 PM (IST) Feb 19

ಸ್ವಿಮ್ಮಿಂಗ್ ಪೂಲ್‌ನಲ್ಲಿ ಗರ್ಲ್‌ಫ್ರೆಂಡ್‌ ಜೊತೆ ಎಂಜಾಯ್ ಮಾಡ್ತಿರೋ ಈ ಕ್ರಿಕೆಟಿಗ ಯಾರು ಗೊತ್ತಾಯ್ತಾ?

ಗ್ರೌಂಡ್‌ನಲ್ಲಿ ತಮ್ಮ ಆಟದಿಂದ ಅದ್ಭುತಗಳನ್ನು ಸೃಷ್ಟಿಸುವ ಕ್ರಿಕೆಟಿಗರು, ನಿಜ ಜೀವನದಲ್ಲಿಯೂ ಅಷ್ಟೇ ಜಾಲಿಯಾಗಿರುತ್ತಾರೆ. ಮೇಲಿನ ಫೋಟೋದಲ್ಲಿರುವ ಈ ಸ್ಟಾರ್ ಆಟಗಾರ ಕೂಡಾ ಅಂಥವರಲ್ಲೇ ಒಬ್ಬರು. ಅಂದಹಾಗೆ, ಈ ಆಟಗಾರ ಯಾರೆಂದು ಗುರುತಿಸಿದ್ರಾ?

 

Read Full Story

01:00 PM (IST) Feb 19

ಹಾರ್ಟ್ ಆಪರೇಷನ್‌ಗೂ ಮುನ್ನ ಕೊನೆಯಾಸೆ ತೀರಿಸಿಕೊಂಡ 96ರ ವರ್ಷದ ವೃದ್ಧ - ವೀಡಿಯೋ ಭಾರಿ ವೈರಲ್

old man last cigarette viral video: 96 ವರ್ಷದ ವೃದ್ಧರೊಬ್ಬರು, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ತಾನು ಬದುಕುಳಿಯುವುದಿಲ್ಲ ಎಂಬ ಭಯದಿಂದ ಕೊನೆಯ ಸಿಗರೇಟ್ ಸೇದಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಅವರು ಧೂಮಪಾನ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

12:58 PM (IST) Feb 19

ಈ ಯುವತಿಯಂತೆ ನೀವೂ ತಿಂಗಳಿಗೆ 3 ಲಕ್ಷ ಗಳಿಸಬೇಕೇ? ಇಲ್ಲಿದೆ ಸೂಪರ್ ಬ್ಯುಸಿನೆಸ್ ಐಡಿಯಾ

ಬ್ಯುಸಿನೆಸ್ ಮಾಡಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಆದರೆ, ನಷ್ಟವಾದರೆ ಏನು ಮಾಡೋದು ಅಂತಾ ಹೆದರಿ ಹಿಂದೆ ಸರಿಯುತ್ತಾರೆ. ಆದರೆ ಈ ಯುವತಿಯ ಕಥೆ ಕೇಳಿದರೆ, ನಿಮಗೂ ವ್ಯಾಪಾರದಲ್ಲಿ ಲಕ್ಷ ಲಕ್ಷ ಗಳಿಸಬಹುದು ಅನ್ನೋ ಧೈರ್ಯ ಬರುತ್ತದೆ. ಹಾಗಾದ್ರೆ ಯಾವುದು ಈ ಬ್ಯುಸಿನೆಸ್ ಅಂತ ನೋಡೋಣ ಬನ್ನಿ

Read Full Story

12:42 PM (IST) Feb 19

ಕ್ಯಾಬ್ ಡ್ರೈವರ್ ಡೇಟಿಂಗ್ ಪ್ರೊಫೈಲ್‌ಗೆ ಸಿಇಒ ಶಾಕ್, ಡೇಟಿಂಗ್ ಆ್ಯಪ್‌ನಲ್ಲಿ 23 ಮಂದಿ ಮ್ಯಾಚ್

ಕ್ಯಾಬ್ ಡ್ರೈವರ್ ಡೇಟಿಂಗ್ ಪ್ರೊಫೈಲ್‌ಗೆ ಸಿಇಒ ಶಾಕ್, ಡ್ರೈವರ್ ಬಳಸುತ್ತಿದ್ದ ಡೇಟಿಂಗ್ ಆ್ಯಪ್‌ನಲ್ಲಿ ಆತನ ಪ್ರೊಫೈಲ್‌ಗೆ 23 ಯುವತಿಯರ ಪ್ರೊಫೈಲ್ ಮ್ಯಾಚ್ ಆಗಿದೆ. ಇದರಲ್ಲಿ ಹೈಲಿ ಎಜುಕೇಟೆಡ್ ಮಹಿಳೆಯರು ಇದ್ದರು.

 

Read Full Story

11:56 AM (IST) Feb 19

T20 World Cup 2026 - ಸೂಪರ್‌-8ನಲ್ಲಿ ಭಾರತದ ಎದುರಾಳಿಗಳು ಯಾರು? ಮೊದಲ ಪಂದ್ಯ ಎಲ್ಲಿ? ಯಾವಾಗ? ಸಂಪೂರ್ಣ ವೇಳಾಪಟ್ಟಿ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಲಿನ ಗ್ರೂಪ್‌ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಸೂಪರ್-8 ಹಂತದ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಭಾರತ ಸೂಪರ್-8 ಹಂತದಲ್ಲಿ ಯಾವಾಗ? ಯಾವ ತಂಡವನ್ನು ಎದುರಿಸಲಿದೆ ಎನ್ನುವುದನ್ನು ನೋಡೋಣ ಬನ್ನಿ

Read Full Story

11:23 AM (IST) Feb 19

ಹೆಂಡ್ತಿ ಗಂಡನ ದಾಸಿ, ಆಕೆಗೆ ಮನಬಂದಂತೆ ಹೊಡೀಬಹುದು - ತಾಲಿಬಾನ್ ಹೊಸ ಕಾನೂನು!

ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಸ್ತ್ರೀ ಸ್ವಾತಂತ್ರ್ಯ ಅಂದರೇನು ಎಂದು ಕೇಳುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಹುಚ್ಚು ಸರ್ಕಾರದಲ್ಲಿ ತಾಲಿಬಾನಿಗಳು ಇದೀಗ ಹೊಸದೊಂದು ಕಾನೂನು ಜಾರಿಗೆ ತಂದಿದ್ದಾರೆ.

 

Read Full Story

11:18 AM (IST) Feb 19

ಡಿವೋರ್ಸ್ ಬಳಿಕ ಮರು ಮದುವೆಯಾಗಿದ್ದ ಗರ್ಭಿಣಿ ಪತ್ನಿಯನ್ನು ಕೊಂದ ಮಾಜಿ ಪತಿ

ಹೈದರಾಬಾದ್‌ನಲ್ಲಿ, ವಿಚ್ಛೇದನದ ನಂತರ ಮರುಮದುವೆಯಾಗಿ ಗರ್ಭಿಣಿಯಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ರನ್ನು ಆಕೆಯ ಮಾಜಿ ಪತಿ  ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮರುಮದುವೆಯಿಂದ ಅಸಮಾಧಾನಗೊಂಡಿದ್ದ ಮಾಜಿ ಪತಿ ಈ ಕೃತ್ಯವೆಸಗಿದ್ದಾನೆ.

Read Full Story

11:00 AM (IST) Feb 19

ಭಾರತದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಮುಸ್ಲಿಮರಿದ್ದಾರೆ; ಕೇರಳದಲ್ಲಿ ಎಷ್ಟಿದ್ದಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬೆಂಗಳೂರು: ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದವರು ದೇಶದ ಎಲ್ಲಾ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ನಾವಿಂದು ಯಾವ ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯ ಮುಸ್ಲಿಮರಿದ್ದಾರೆ. ನೆರೆಯ ಕೇರಳದಲ್ಲಿ ಅವರ ಸಂಖ್ಯೆ ಎಷ್ಟು ನೋಡೋಣ ಬನ್ನಿ.

 

Read Full Story

10:44 AM (IST) Feb 19

ಹಾರ್ದಿಕ್ ಪಾಂಡ್ಯ ವಿಶ್ವದಾಖಲೆ - ಟಿ20 ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ!

2026ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 6000 ರನ್ ಮತ್ತು 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

More Trending News