ನವದೆಹಲಿ: ಏ.22ರಂದು ಕನ್ನಡಿಗ ಸೇರಿ 26 ಜನರನ್ನು ಬಲಿ ಪಡೆದಿದ್ದ ಪಹಲ್ಗಾಂ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಅದರ ಮುಖವಾಣಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರ ಸಂಘಟನೆಗಳು ಮತ್ತು ಪಾಕಿಸ್ತಾನದ ಹ್ಯಾಂಡ್ಲರ್ ಸೇರಿದಂತೆ 7 ಆರೋಪಿಗಳನ್ನು ದಾಳಿಗೆ ಹೊಣೆ ಮಾಡಿದೆ.
ಆರೋಪಪಟ್ಟಿಯಲ್ಲಿ ದಾಳಿಯಲ್ಲಿ ಪಾಕಿಸ್ತಾನದ ಸಂಚು, ಆರೋಪಿಗಳ ಪಾತ್ರ ಮತ್ತು ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಎಲ್‌ಇಟಿ/ಟಿಆರ್‌ಎಫ್ ಸಂಘಟನೆ ಈ ದಾಳಿಯ ಯೋಜನೆ ರೂಪಿಸಿದ್ದು, ಆರೋಪಿಗಳಿಗೆ ನೆರವು ಮತ್ತು ದಾಳಿಯ ಕಾರ್ಯಗತಗೊಳಿಸುವಿಕೆ ಕುರಿತು ನಡೆಸಿದ ತಯಾರಿಗಳನ್ನು ವಿವರಿಸಲಾಗಿದೆ.
11:31 PM (IST) Dec 16
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ ಜಾರಿ ಮಾಡಲಾಗುತ್ತಿದೆ. ವಾಯು ಮಾಲಿನ್ಯ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಾಲೀಕರಿಗೆ ಕೇವಲ ಒಂದೇ ದಿನ ಸಮಯ ನೀಡಲಾಗಿದೆ.
10:49 PM (IST) Dec 16
ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೂಡಿ ಹಾಕಿದ ಕೋಣೆಯಲ್ಲಿ ತಲೆ ಉಪಯೋಗಿಸಿದ ಹೊಟೆಲ್ ಮ್ಯಾನೇಜರ್ ಅಪಹರಣಕಾರರ ಬಂಧನದಿಂದ ಹೊರಬಂದ ಘಟನೆ ನಡೆದಿದೆ.
09:57 PM (IST) Dec 16
ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ, ಹೌದು, ಇದು ಟ್ಯಾಕ್ಸ್ ಕಡಿತ ಮಾಡಿ ನೀಡುವ ಮೊತ್ತವಲ್ಲ, 18 ಕೋಟಿಯಲ್ಲಿ ಮತ್ತೆ ತೆರಿಗೆ ಕಡಿತ, ಇತರ ಕಡಿತಗಳು ಸೇರಿಕೊಳ್ಳಲಿದೆ.
08:13 PM (IST) Dec 16
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಮಧ್ಯಪ್ರದೇಶದ ಎಡಗೈ ವೇಗಿ ಮಂಗೇಶ್ ಯಾದವ್ ಅವರನ್ನು 5.20 ಕೋಟಿ ರುಪಾಯಿ ನೀಡಿ ಖರೀದಿಸಿದೆ. 30 ಲಕ್ಷ ಮೂಲ ಬೆಲೆ ಹೊಂದಿದ್ದ ಇವರಿಗಾಗಿ ಸನ್‌ರೈಸರ್ಸ್ ಹೈದರಾಬಾದ್ ಜೊತೆ ತೀವ್ರ ಪೈಪೋಟಿ ನಡೆಸಿತ್ತು.
07:51 PM (IST) Dec 16
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ, ಮಹಿಳಾ ತಂಡದ ಐತಿಹಾಸಿಕ ಸಾಧನೆಗೆ ಟಾಟಾ ಈ ಉಡೊಗೊರೆ ಘೋಷಿಸಿತ್ತು. ಇದೀಗ 21.29 ಲಕ್ಷ ರೂಪಾಯಿ ಬೆಲೆಯ ಟಾಟಾ ಸಿಯೆರಾ ಕಾರು ಗಿಫ್ಟ್ ಕೊಟ್ಟಿದೆ.
07:44 PM (IST) Dec 16
ಭವಿಷ್ಯದಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಯುದ್ಧ ನಡೆಯಲಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಸೈನಿಕರನ್ನು ಹೊಂದಿರುವ ಸೈನ್ಯವನ್ನು ಹೊಂದುವ ಅಗತ್ಯವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಪ್ರಶ್ನಿಸಿದ್ದಾರೆ.
07:28 PM (IST) Dec 16
ಭಾರತ ಪ್ರವಾಸದಲ್ಲಿದ್ದ ಲಿಯೋನಲ್ ಮೆಸ್ಸಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಭಿಮಾನಿಗಳತ್ತ ಎಸೆದ ಫುಟ್ಬಾಲ್‌ಗಾಗಿ ದೊಡ್ಡ ಕಿತ್ತಾಟವೇ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.
06:59 PM (IST) Dec 16
19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ, 'ಡ್ಯಾಡ್ಸ್ ಆರ್ಮಿ' ಎಂದು ಟೀಕೆಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇಬ್ಬರು ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಮೇಲೆ 28.40 ಕೋಟಿ ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದೆ.
06:57 PM (IST) Dec 16
Why Women Don't Wear Gold Jewelry Below The Waist ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪವಿತ್ರವಾಗಿ ಪರಿಗಣಿಸಲಾಗುತ್ತದೆ. ಈ ಕಾರಣದಿಂದ, ಮಹಿಳೆಯರು ಸೊಂಟದ ಕೆಳಗೆ ಚಿನ್ನದ ಆಭರಣಗಳನ್ನು ಧರಿಸುವುದನ್ನು ದೇವಿಗೆ ಮಾಡುವ ಅವಮಾನವೆಂದು ಭಾವಿಸಲಾಗುತ್ತದೆ.
06:53 PM (IST) Dec 16
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಇದು ಮ್ಯಾನೇಜರ್‌ಗೆ ಉದ್ಯೋಗಿ ಕಳುಹಿಸಿದ ಲೀವ್ ಅಪ್ಲೀಕೇಶನ್ ಇಮೇಲ್. ಈ ಮೆಸೇಜ್‌ಗೆ ಕಂಪನಿ ಮ್ಯಾನೇಜರ್ ಮಾಡಿದ್ದೇನು? ರಜೆ ಅನುಮತಿಸಿದ್ರಾ, ಇಲ್ಲಾ ನೋ ಎಂದ್ರಾ?
06:10 PM (IST) Dec 16
ಐಪಿಎಲ್ 2026 ರ ಮಿನಿ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ನಿರ್ಮಿಸಿದೆ. ಸಿಎಸ್‌ಕೆ, ಅನ್‌ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ತಲಾ 14.20 ಕೋಟಿ ರೂಪಾಯಿ ನೀಡಿ, ಒಟ್ಟು 28.40 ಕೋಟಿ ರೂಪಾಯಿಗೆ ಖರೀದಿಸಿದೆ.
06:06 PM (IST) Dec 16
ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ 16 ಜನರನ್ನು ಕೊಂದ ಹಂತಕ ಸಾಜೀದ್ ಅಕ್ರಮ್ ಹೈದರಾಬಾದ್ ಮೂಲದವನು ಎಂದು ತಿಳಿದುಬಂದಿದೆ. ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾದ ಕಾರಣಕ್ಕೆ ಕುಟುಂಬದಿಂದ ದೂರವಾಗಿದ್ದ ಈತ, ತನ್ನ ಮಗನೊಂದಿಗೆ ಯಹೂದಿಯರ ಹಬ್ಬದ ಮೇಲೆ ದಾಳಿ ನಡೆಸಿದ್ದ.
05:22 PM (IST) Dec 16
ಟಾಟಾ ಸಫಾರಿ ಸೇರಿ ದಿಗ್ಗಜರಿಗೆ ಶಾಕ್ ಕೊಟ್ಟ ಎಂಜಿ ಹೆಕ್ಟರ್, ಕಡಿಮೆ ಬೆಲೆಗೆ ಫೇಸ್‌ಲಿಫ್ಟ್ ಕಾರು ಲಾಂಚ್, ಬೆಂಗಳೂರಿನಲ್ಲಿ ಹೊಸ ಎಂಜಿ ಹೆಕ್ಟರ್ ಕಾರು ಬಿಡುಗಡೆ ಮಾಡಿದೆ. ಹೊಸ ಕಾರು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ವಿಶೇಷ ಅಂದರೆ ಶೇ.100ರಷ್ಟು ಸಾಲವೂ ಲಭ್ಯವಿದೆ.
05:12 PM (IST) Dec 16
05:12 PM (IST) Dec 16
ಬ್ರೆಜಿಲ್‌ನಲ್ಲಿ ತೀವ್ರ ಚಂಡಮಾರುತದ ಅಬ್ಬರಕ್ಕೆ ಹವಾನ್ ಮೆಗಾಸ್ಟೋರ್‌ನ ಹೊರಗಿದ್ದ 24 ಮೀಟರ್ ಎತ್ತರದ ಸ್ವಾತಂತ್ರ್ಯ ಪ್ರತಿಮೆಯು ಕುಸಿದು ಬಿದ್ದಿದೆ. ಗಂಟೆಗೆ 90 ಕಿ.ಮೀ ವೇಗದ ಗಾಳಿಗೆ ಪ್ರತಿಮೆ ಉರುಳಿದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
04:38 PM (IST) Dec 16
ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು , ಇಷ್ಟೇ ಅಲ್ಲ ವಿಡಿಯೋ ಮೂಲಕ ಪೊಲೀಸ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ, ಅಷ್ಟಕ್ಕೂ ಏನಿದು ಘಟನೆ?
04:17 PM (IST) Dec 16
30 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ 60 ವರ್ಷದ ಮಹಿಳೆಯನ್ನು ಗ್ರೀನ್ ಕಾರ್ಡ್ ಸಂದರ್ಶನದ ವೇಳೆ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ಪತಿ ಗ್ರೀನ್ ಕಾರ್ಡ್ ಹೊಂದಿದ್ದು, ಮಗಳು ಅಮೆರಿಕದ ಪ್ರಜೆಯಾಗಿದ್ದರೂ, ಅವರನ್ನು ಅಡೆಲಾಂಟೋದಲ್ಲಿರುವ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
04:07 PM (IST) Dec 16
IPL Mini-Auction History: List of Most Expensive Players from Cameron Green to Chris Morris ಪ್ರತಿ ವರ್ಷ ನಡೆಯುವ ಐಪಿಎಲ್ ಮಿನಿ ಹರಾಜು, ತಂಡದ ಡೈನಾಮಿಕ್ಸ್‌ಅನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸುತ್ತದೆ.
03:43 PM (IST) Dec 16
ಒಜಿ ನಿರ್ದೇಶಕನಿಗೆ 3 ಕೋಟಿ ರೂ ಕಾರು ಗಿಫ್ಟ್ ಕೊಟ್ಟ ಪವನ್ ಕಲ್ಯಾಣ್, ನಟ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಡುಗೊರೆಯಾಗಿ ನೀಡಿದ್ದು ಯಾವ ಕಾರು? ನಿರ್ದೇಶಕ ಸುಜೀತ್ ಭಾವುಕರಾಗಿದ್ದೇಕೆ?
03:40 PM (IST) Dec 16
19ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರುಪಾಯಿಗೆ ಯಶಸ್ವಿಯಾಗಿ ಖರೀದಿಸಿದೆ. ಕಳೆದ ಬಾರಿ ಕೆಕೆಆರ್ ತಂಡದಲ್ಲಿದ್ದ ಅಯ್ಯರ್, ಈ ಬಾರಿ ಕಡಿಮೆ ಮೊತ್ತಕ್ಕೆ ಆರ್‌ಸಿಬಿ ಸೇರಿದ್ದಾರೆ.
03:11 PM (IST) Dec 16
Chandrapur Farmer Kidney: ಚಂದ್ರಾಪುರದಲ್ಲಿ ರೈತನೊಬ್ಬ ಸಾಲವನ್ನು ತೀರಿಸಲು ತನ್ನ ಕಿಡ್ನಿಯನ್ನೇ ಮಾರಿದ ಘಟನೆ ನಡೆದಿದೆ. ಸಾಲ ಕೊಟ್ಟ ವ್ಯಕ್ತಿ ರೈತನ ಕಿಡ್ನಿ ಮಾರಿ ತನ್ನ ಹಣ ಕಟ್ಟಿಸಿಕೊಂಡಿದ್ದಾನೆ ಅನ್ನೋ ವಿಚಾರ ಆಕ್ರೋಶಕ್ಕೆ ಕಾರಣವಾಗಿದೆ.
03:09 PM (IST) Dec 16
ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 25.20 ಕೋಟಿ ರುಪಾಯಿಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಈ ಮೂಲಕ ಅವರು ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದು, ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ವಿದೇಶಿ ಆಟಗಾರ ಎಂಬ ಹೊಸ ದಾಖಲೆ ಬರೆದಿದ್ದಾರೆ.
03:05 PM (IST) Dec 16
ಮಹಾತ್ಮಾ ಗಾಂಧಿ ನನ್ನ ಕುಟುಂಬ ಸದಸ್ಯರಲ್ಲ, ಬಿಲ್ ವಿರೋಧ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಹೇಳಿದ್ದೇನು? ಜಿ ರಾಮ್ ಜಿ ಮಸೂದೆ ವಿರೋಧಿಸಿ ಪ್ರಿಯಾಂಕಾ ಗಾಂಧಿ ಪ್ರತಿಭಟನೆ ವೇಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಏನಿದು ಹೇಳಿಕೆ?
02:49 PM (IST) Dec 16
GPS Tracker Exposes Wife Cheating with Lover in Hotel ಪಂಜಾಬ್‌ನ ಅಮೃತಸರದಲ್ಲಿ ವ್ಯಕ್ತಿಯೊಬ್ಬ ತನ್ನ 15 ವರ್ಷಗಳ ದಾಂಪತ್ಯದಲ್ಲಿ ಎರಡನೇ ಬಾರಿಗೆ ತನ್ನ ಪತ್ನಿಯನ್ನು ಹೋಟೆಲ್‌ನೊಳಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ ಎಂದು ಹೇಳಲಾಗಿದೆ.
02:45 PM (IST) Dec 16
1947ರ ವಿಭಜನೆಯ ನಂತರ ಇದೇ ಮೊದಲ ಬಾರಿಗೆ, ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾನಿಲಯವು ಸಂಸ್ಕೃತ ಅಧ್ಯಯನ ಕೋರ್ಸ್ ಅನ್ನು ಮರು ಪ್ರಾರಂಭಿಸಿದೆ. ಇದರ ಹಿಂದಿನ ಉದ್ದೇಶ ಏನು ಡಿಟೇಲ್ ಸ್ಟೋರಿ ಇಲ್ಲಿದೆ.
02:30 PM (IST) Dec 16
ಐಪಿಎಲ್ 2026ರ ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರಿಗಾಗಿ ಹೊಸ ಸಂಬಳದ ಮಿತಿ ನಿಯಮವನ್ನು ಪರಿಚಯಿಸಲಾಗಿದೆ. ಈ ನಿಯಮದ ಪ್ರಕಾರ, ವಿದೇಶಿ ಆಟಗಾರರು ಗರಿಷ್ಠ 18 ಕೋಟಿ ರೂಪಾಯಿ ಮಾತ್ರ ಗಳಿಸಬಹುದು. ಬಿಡ್ಡಿಂಗ್ ಮೊತ್ತವು ಈ ಮಿತಿಯನ್ನು ಮೀರಿದರೆ, ಹೆಚ್ಚುವರಿ ಹಣ ಬಿಸಿಸಿಐ ಕಲ್ಯಾಣ ನಿಧಿಗೆ ಹೋಗುತ್ತದೆ.
01:18 PM (IST) Dec 16
ಜಗತ್ತಿನೆಲ್ಲೆಡೆ ಹಲವು ವಿಚಿತ್ರ ಸಂಪ್ರದಾಯಗಳಿಗೆ ಕೆಲವು ಸ್ಥಳಗಳಲ್ಲಿ ನಡೆಯುವ ಸಂಪ್ರದಾಯವನ್ನು ನೋಡಿದರೆ ಎಷ್ಟೊಂದು ವಿಚಿತ್ರ ಅನಿಸುವುದು. ಅದೇ ರೀತಿ ಇಲ್ಲೊಂದು ಕಡೆ ಮದುವೆಗೂ ಮುನ್ನ ನಡೆಯುವ ವಿಚಿತ್ರ ಸಂಪ್ರದಾಯ ನೋಡಿದರೆ ನೀವು ಹುಡುಗಿಯಾಗಿದ್ದರೆ ಮದುವೆಗೂ ಮೊದಲು ನೀವು ಎಸ್ಕೇಪ್ ಆಗೋದು ಗ್ಯಾರಂಟಿ.
12:28 PM (IST) Dec 16
2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ನಡೆದ ಸ್ಟಾರ್ ಸ್ಪೋರ್ಟ್ಸ್ ಅಣಕು ಹರಾಜಿನಲ್ಲಿ ಆಟಗಾರರ ಮೇಲೆ ಕೋಟಿಗಳ ಸುರಿಮಳೆಯಾಗಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬರೋಬ್ಬರಿ 30.50 ಕೋಟಿ ರುಪಾಯಿಗೆ ಆಗಿದ್ದಾರೆ. ಇಂದು ಎಷ್ಟು ಮೊತ್ತಕ್ಕೆ ಹರಾಜಾಗುತ್ತಾರೆ ಕಾದು ನೋಡಬೇಕಿದೆ.
12:19 PM (IST) Dec 16
ಇತ್ತೀಚೆಗೆ ಸಂಚಲನ ಸೃಷ್ಟಿಸಿರುವ '40 ನಿಮಿಷದ ವಿಡಿಯೋ' ಹುಡುಕಾಟವು ಒಂದು ದೊಡ್ಡಮಟ್ಟದಲ್ಲಿ ಶುರುವಾಗಿದೆ. 40-minute viral video ಎಂದ ಪದಗಳು ಗೂಗಲ್ ಟ್ರೆಂಡ್‌ನಲ್ಲಿದ್ದು, ಜನರು ಇದು ಯಾವ ವಿಡಿಯೋ ಎಂದು ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡುತ್ತಿದ್ದಾರೆ.
12:19 PM (IST) Dec 16
11:44 AM (IST) Dec 16
11:12 AM (IST) Dec 16
ಎಕ್ಸ್‌ಪ್ರೆಸ್ ವೇಯಲ್ಲಿ ದಟ್ಟ ಮಂಜಿನ ಕಾರಣ ಏಳು ಬಸ್‌ಗಳು ಮತ್ತು ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ನಾಲ್ವರು ಸಜೀವ ದಹನವಾಗಿದ್ದು, 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
11:08 AM (IST) Dec 16
ಲಿಯೋನೆಲ್ ಮೆಸ್ಸಿ ತಮ್ಮ ಭಾರತ ಪ್ರವಾಸದ ವೇಳೆ ದೆಹಲಿಗೆ ಭೇಟಿ ನೀಡಿದರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಂದ ಟಿ20 ವಿಶ್ವಕಪ್‌ಗೆ ಆಹ್ವಾನ ಸ್ವೀಕರಿಸಿದರು. ಹವಾಮಾನ ವೈಪರೀತ್ಯದಿಂದಾಗಿ ಮೋದಿ ಅವರೊಂದಿಗಿನ ಮೆಸ್ಸಿಯ ಭೇಟಿ ರದ್ದಾಯಿತು.
10:54 AM (IST) Dec 16
ಮಾಜಿ ಕಾಂಗ್ರೆಸ್ ನಾಯಕರೊಬ್ಬರು, ದೇಶಕ್ಕೆ ಪರಿಣಾಮಕಾರಿ ವಿಪಕ್ಷದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಆತ್ಮವಿಮರ್ಶೆ ಮಾಡಿಕೊಂಡು ತನ್ನನ್ನು ತಾನು ಬಲಪಡಿಸಿಕೊಳ್ಳುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. \
10:43 AM (IST) Dec 16
ಮುಂಬೈ ಇಂಡಿಯನ್ಸ್ ಕೇವಲ 2.75 ಕೋಟಿ ರು.ನೊಂದಿಗೆ ಹರಾಜಿಗೆ ಆಗಮಿಸಲಿದೆ. ಆದರೆ, ಕೆಕೆಆರ್ ಬಳಿ 64.30 ಕೋಟಿ ರು. ಬಾಕಿ ಇದ್ದು, ಕೆಲ ದುಬಾರಿ ಖರೀದಿಗಳನ್ನು ಮಾಡುವ ನಿರೀಕ್ಷೆ ಇದೆ.
10:19 AM (IST) Dec 16
PM Narendra Modi: ರಾಜ್ಯಸಭೆಯಲ್ಲೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಹಿರಿಯ ನಾಯಕರ ಕ್ಷಮೆಗೆ ಒತ್ತಾಯಿಸಿ ಗುಲ್ಲೆದ್ದ ಪರಿಣಾಮ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
09:56 AM (IST) Dec 16
Petrol Diesel Price: ದೇಶದ ಯಾವ ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ಬೆಲೆಗೆ ಪೆಟ್ರೋಲ್- ಡೀಸೆಲ್ ಮಾರಾಟವಾಗುತ್ತೆ? ಸದನಕ್ಕೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ