LIVE NOW
Published : Apr 17, 2026, 07:00 AM ISTUpdated : Apr 17, 2026, 10:45 PM IST

India Latest News Live: ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!

ಸಾರಾಂಶ

ನಾಸಿಕ್ ಟಿಸಿಎಸ್ ಬಿಪಿಪೋ ಕಂಪನಿಯಲ್ಲಿ ನಡೆದಿರುವ ಕಾರ್ಪೋರೇಟ್ ಜಿಹಾದ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರೀತಿ ನಾಟಕ, ಔಟಿಂಗ್ ನೆಪದಲ್ಲಿ ಅತ್ಯಾ**ರ, ಲವ್ ಜಿಹಾದ್, ಮತಾಂತರ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಹೆಚ್ಆರ್, ಟೀಂ ಲೀಡರ್ಸ್ ಸೇರಿದಂತೆ 7 ಮಂದಿ ಅರೆಸ್ಟ್ ಆಗಿದ್ದಾರೆ. ಪ್ರಕರಣದ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಇದರ ಬೆನ್ನಲ್ಲೇ ಇದೀಗ ಟಿಸಿಎಸ್ ನಾಸಿಕ್, ಸುರಕ್ಷತಾ ದೃಷ್ಟಿಯಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ಇತ್ತ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಶನ್ ಬಿಲ್ ರಾಜಕೀಯ ಮಾಡಬಾರದು. ಇದು ಐತಿಹಾಸಿಕ ಬಿಲ್ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇಂದಿನ ದೇಶ ವಿದೇಶಗಳ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

 

10:45 PM (IST) Apr 17

ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!

ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್‌ಗೆ ಇವರ ಕಾರು ಡಿಕ್ಕಿ ಹೊಡೆದಿದೆ.

Read Full Story

10:16 PM (IST) Apr 17

ಹೊಸ ಬೈಕ್ ಖರೀದಿಸುವ ಪ್ಲ್ಯಾನ್ ಇದೆಯೇ? ಶೋರೂಮ್‌ಗೆ ಹೋಗುವ ಮುನ್ನ ಈ 5 ವಿಷಯ ಮರೆಯಬೇಡಿ!

ಹೊಸ ಬೈಕ್ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಾಗಿದ್ದು, ಕೇವಲ ವಿನ್ಯಾಸ ನೋಡಿ ನಿರ್ಧರಿಸುವುದು ತಪ್ಪು. ಖರೀದಿಯ ಮೊದಲು ಬಜೆಟ್, ಮೈಲೇಜ್, ನಿರ್ವಹಣಾ ವೆಚ್ಚ, ಮತ್ತು ಅಗತ್ಯ ಫೀಚರ್‌ಗಳನ್ನು ಪರಿಗಣಿಸುವುದು ಬಹಳ ಮುಖ್ಯ. 

Read Full Story

09:43 PM (IST) Apr 17

Chiyaan Vikram - ಡಬ್ಬಿಂಗ್ ಆರ್ಟಿಸ್ಟ್‌ನಿಂದ ಟಾಪ್ ಹೀರೋವರೆಗೆ... ನಟ ವಿಕ್ರಮ್ ಶಿಖರ ಮುಟ್ಟಿದ ಕಥೆ ಗೊತ್ತಾ?

ನಟ ವಿಕ್ರಮ್ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಪಟ್ಟ ಕಷ್ಟಗಳು, ಅದರಿಂದ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಬಂದ ಕಥೆಯನ್ನು ಈ ಗ್ಯಾಲರಿಯಲ್ಲಿ ನೋಡೋಣ.

Read Full Story

09:27 PM (IST) Apr 17

ಕನ್ನಡಿಗ ರಾಕೇಶ್‌ ಗಾಂವ್ಕರ್‌ ಸ್ಥಾಪಿಸಿದ ಏರ್‌ ಟ್ಯಾಕ್ಸಿ ಸರಳಾ ಏವಿಯೇಷನ್‌ನಲ್ಲಿ ಪಾಲು ಖರೀದಿಸಿದ ಇಂಡಿಗೋ!

ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್‌ಅಪ್ 'ಸರಳಾ ಏವಿಯೇಷನ್' ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. 'ಶೂನ್ಯ' ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.

Read Full Story

07:42 PM (IST) Apr 17

ತಪ್ಪು ಟ್ರೇನ್‌ನಿಂದ ಇಳಿಯೋದೆ ಬೆಟರ್ - ವಿಚ್ಛೇದನದ ಬಗ್ಗೆ ಮೌನ ಮುರಿದ ಬಿಂದಾಸ್ ನಟಿ ಹನ್ಸಿಕಾ!

ನಟಿ ಹನ್ಸಿಕಾ ಮೋಟ್ವಾನಿ, ಪತಿ ಸೊಹೈಲ್ ಖತೂರಿಯಾ ಜೊತೆಗಿನ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬ ನೀಡಿದ ಬೆಂಬಲವನ್ನು ನೆನೆದಿದ್ದು, ತಾವೀಗ ಭಾವನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Read Full Story

07:42 PM (IST) Apr 17

Breaking - ವಿಪಕ್ಷಗಳಿಗೆ ಜಯ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲು ಕಂಡಿದೆ. ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಇಲ್ಲದೆ ತ್ವರಿತವಾಗಿ ಜಾರಿಗೊಳಿಸಲು ಯತ್ನಿಸಿದ ಈ ಮಸೂದೆಯು, ಅಗತ್ಯವಾದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾಯಿತು.
Read Full Story

07:28 PM (IST) Apr 17

ಸಿನಿಮಾ ಫೋಟೋ - ಹೆಣ್ಣಿನ ಬಗ್ಗೆ ಕಾಂಗ್ರೆಸ್​ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut

ಸಂಸದೆಯಾದ ಬಳಿಕ ಕಂಗನಾ ರಣಾವತ್, ತಮ್ಮ ಹಳೆಯ ಫೋಟೋ ಬಳಸಿ ಅಶ್ಲೀಲ ಕಮೆಂಟ್ ಮಾಡಿದ್ದ ಕಾಂಗ್ರೆಸ್ ವಕ್ತಾರರ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ್ದಾರೆ. ನಟಿಯಾಗಿ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ನನ್ನ ಧರ್ಮ ಎಂದ ಅವರು, ಈ ಕೀಳು ಮನಸ್ಥಿತಿಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
Read Full Story

07:02 PM (IST) Apr 17

ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಚಿತ್ರಿಸಿ 'ವಿಷು' ಹಬ್ಬದ ವಿಶ್‌; ರೆಸ್ಟೋರೆಂಟ್‌ ಮಾಲೀಕ ಆರ್ಶದ್‌ ಅರೆಸ್ಟ್‌!

ಕೇರಳದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಇರಿಸಿದ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ.

Read Full Story

06:21 PM (IST) Apr 17

Avengers - Doomsday - ಡಾಕ್ಟರ್ ಡೂಮ್ ಆದ ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ ವಾಪಸ್ - ಧೂಳೆಬ್ಬಿಸಿದ ಟ್ರೇಲರ್!

'ಅವೆಂಜರ್ಸ್: ಡೂಮ್ಸ್‌ಡೇ' ಸಿನಿಮಾದ ಮೊದಲ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ವೆರೈಟಿ ವರದಿ ಪ್ರಕಾರ, ಈ ಕಾರ್ಯಕ್ರಮದಲ್ಲಿ ರಾಬರ್ಟ್ ಡೌನಿ ಜೂನಿಯರ್ ಮತ್ತು ಕ್ರಿಸ್ ಇವಾನ್ಸ್ ಕೂಡ ಭಾಗವಹಿಸಿದ್ದರು.

Read Full Story

06:03 PM (IST) Apr 17

Street Fighter - ಹಾಲಿವುಡ್‌ಗೆ ಹಾರಿದ ವಿದ್ಯುತ್ ಜಮ್ವಾಲ್ - ಜೇಸನ್ ಮೊಮೊವಾ ಜೊತೆ ಭರ್ಜರಿ ಫೈಟಿಂಗ್

ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಜೊತೆಗೆ ಹಾಲಿವುಡ್‌ನ ದೊಡ್ಡ ತಾರೆಯರು ನಟಿಸಿದ್ದಾರೆ.

Read Full Story

05:37 PM (IST) Apr 17

ಶ್ರೀರಾಮನ ಪಾತ್ರಕ್ಕೆ ರಣಬೀರ್‌ಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ - ನಿರ್ಮಾಪಕ ನಮಿತ್ ಮಲ್ಹೋತ್ರಾ

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ನಟ ರಣಬೀರ್ ಕಪೂರ್ ಜೊತೆಗಿನ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. 2026ರ TIME ಪಟ್ಟಿಯಲ್ಲಿ ರಣಬೀರ್ ಹೆಸರು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Read Full Story

05:25 PM (IST) Apr 17

ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್‌ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Read Full Story

05:21 PM (IST) Apr 17

ನನ್ನ ಹೆಸರು, ಧ್ವನಿ ದುರ್ಬಳಕೆ ಆಗ್ತಿದೆ - ಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್, ನ್ಯಾಯಾಲಯದಿಂದಲೇ ಪ್ರಶ್ನೆ!

ನಟ ಅಲ್ಲು ಅರ್ಜುನ್ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು (personality rights) ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ AI ಬಳಸಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

Read Full Story

05:05 PM (IST) Apr 17

ಆಲಿಯಾ ಭಟ್ ಅಕ್ಕನ ಲೈಫ್‌ಗೆ ಎಂಟ್ರಿ ಕೊಟ್ಟ ಸನ್‌ಶೈನ್ - ಅಂತರಾಷ್ಟ್ರೀಯ ಈಜುಪಟುವಿನ ಜೊತೆ ನಿಶ್ಚಿತಾರ್ಥ!

ನಟಿ ಆಲಿಯಾ ಭಟ್ ಅವರ ಹಿರಿಯ ಸೋದರಿ ಶಾಹೀನ್ ಭಟ್, ತಮ್ಮ 37ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ಈಜುಪಟು ಹಾಗೂ ಫಿಟ್‌ನೆಸ್ ಟ್ರೈನರ್ ಆಗಿರುವ ಇಶಾನ್ ಮೆಹ್ರಾ ಅವರೊಂದಿಗೆ ಶಾಹೀನ್ ಎಂಗೇಜ್ ಆಗಿದ್ದಾರೆ.

Read Full Story

05:05 PM (IST) Apr 17

ಅತ್ತೆ ತೀರಿ ಹೋಗಿ ತಿಂಗಳಾಗಿಲ್ಲ, ಆಗಲೇ ಹಬ್ಬ ಬೇಕಿತ್ತಾ? ದರ್ಶನ್ ಹೀರೋಯಿನ್ ವಿರುದ್ಧ ನೆಟ್ಟಿಗರ ಟೀಕೆ

ದರ್ಶನ್ ಗಜ ಸಿನಿಮಾದ ನಟಿ ನವ್ಯಾ ನಾಯರ್. 2002ರಲ್ಲಿ ರಂಜಿತ್ ನಿರ್ದೇಶನದ 'ನಂದನಂ' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನವ್ಯಾ, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 'ಪಾತಿರಾತ್ರಿ' ಅವರ ನಟನೆಯ ಕೊನೆಯ ಚಿತ್ರ.

Read Full Story

05:01 PM (IST) Apr 17

'ಸೀಕ್ರೆಟ್ ಪ್ರಿವ್ಯೂ' ಮೂಲಕ ಟಾಕ್ಸಿಕ್‌ ಗುಟ್ಟು ರಟ್ಟು; ಯಶ್ 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಏನಿದೆ ಗೊತ್ತಾ?

ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ "ದೊಡ್ಡವರ ಕಾಲ್ಪನಿಕ ಕಥೆ" ನೋಡಲು ರೆಡಿಯಿದ್ದೀರಾ?

Read Full Story

04:47 PM (IST) Apr 17

ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ! ಅನುಮಾನ ಇದ್ರೆ ಈ ವಿಡಿಯೋ ನೋಡಿ

ಐಪಿಎಲ್ 2026ರಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಪಂಜಾಬ್ ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸುಳಿವನ್ನು ಪಾಂಡ್ಯ ನೀಡಿದ್ದಾರೆ. ಈ ಸೋಲಿನಿಂದಾಗಿ ಮುಂಬೈ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
Read Full Story

04:38 PM (IST) Apr 17

'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ - Video Viral

ಆರ್‌ಎಸ್‌ಎಸ್-ಬಿಜೆಪಿಯನ್ನು ವಿಷಪೂರಿತ ಹಾವಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಚಿವ ಜೆ.ಪಿ. ನಡ್ಡಾ ಸಹಾಯ ಮಾಡಿದ್ದಾರೆ. ಮೆಟ್ಟಿಲು ಇಳಿಯಲು ಕಷ್ಟಪಡುತ್ತಿದ್ದ ಖರ್ಗೆಯವರ ಕೈ ಹಿಡಿದು ನಡ್ಡಾ ನಡೆಸಿಕೊಂಡು ಬಂದಿದ್ದು, ಈ ವಿಡಿಯೋ ರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

04:27 PM (IST) Apr 17

"ಟ್ರೀಟ್‌ಮೆಂಟ್‌ಗೇ ಟೈಮ್ ಇಲ್ಲ, ಇನ್ನು ಡೇಟಿಂಗ್?".. ಆ ನಟನ ಜೊತೆಗೆ 'ಏನೂ' ಇಲ್ಲ ಎಂದ ಮೃಣಾಲ್ ಠಾಕೂರ್!

'ಸನ್ ಆಫ್ ಸರ್ದಾರ್ 2' ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದರಿಂದ 'ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ" ಎಂದು ಸುದ್ದಿ ಹಬ್ಬಿತ್ತು.

Read Full Story

04:08 PM (IST) Apr 17

Breaking - ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ

ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್‌ಔಟ್‌ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

Read Full Story

03:53 PM (IST) Apr 17

ಪಾರ್ಕ್‌ನಲ್ಲಿರೋ ಹಳೇ ದೇವಸ್ಥಾನ ಒತ್ತುವರಿ ಅಲ್ಲ - ಅರ್ಜಿ ಸಲ್ಲಿಸಿ ಕೋಮು ಗಲಭೆಗೆ ಯತ್ನಿಸಿದವನಿಗೆ ಹೈಕೋರ್ಟ್‌ನಿಂದ ಭಾರೀ ದಂಡ!

ಸಾರ್ವಜನಿಕ ಉದ್ಯಾನವನದಲ್ಲಿರುವ ದಶಕಗಳ ಹಳೆಯ ದೇವಾಲಯವನ್ನು ಒತ್ತುವರಿ ಎಂದು ಪರಿಗಣಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ದುರುದ್ದೇಶಪೂರಿತ ಅರ್ಜಿ ಸಲ್ಲಿಸಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದೆ.

Read Full Story

03:20 PM (IST) Apr 17

ಆ ನಿರ್ದೇಶಕ ನನ್ನ ಕೈ ಹಿಡಿದು ಕೆಟ್ಟದಾಗಿ ಮುಟ್ಟಿದರು, ಆ ಸ್ಪರ್ಶದಲ್ಲಿ ಕಾಮವಿತ್ತು ಎಂದ ಡೈಸಿ ಶಾ; ಯಾರವರು ಗೊತ್ತಾ?

ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ಡೈಸಿ ಶಾ ಅವರ ಈ ಹೇಳಿಕೆ ಈಗ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. "ಬಣ್ಣದ ಲೋಕದ ಮಿನುಗುವಿಕೆಯ ಹಿಂದೆ ಇಂತಹ ಕರಾಳ ಮುಖಗಳೂ ಇರುತ್ತವೆ, ಹುಡುಗಿಯರು ಎಚ್ಚರಿಕೆಯಿಂದ ಇರಬೇಕು" ಎಂಬ ಸಂದೇಶವನ್ನು ಅವರು ತಮ್ಮ ಮಾತಿನ ಮೂಲಕ ರವಾನಿಸಿದ್ದಾರೆ.

Read Full Story

03:13 PM (IST) Apr 17

ಈ ಸೀಸನ್‌ ಐಪಿಎಲ್‌ನ ಅತ್ಯುತ್ತಮ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್! ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಬಗ್ಗೆ ಅಯ್ಯರ್ ಹೇಳಿದ್ದೇನು?

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಅದ್ಭುತ ರಿಲೇ ಕ್ಯಾಚ್ ಹಿಡಿದರು. ಗಾಳಿಯಲ್ಲಿ ಜಿಗಿದು ಚೆಂಡನ್ನು ಹಿಡಿದ ಅವರು, ಬೌಂಡರಿ ಲೈನ್ ದಾಟುವ ಮುನ್ನ ಸಹ ಆಟಗಾರನಿಗೆ ಎಸೆದು ವಿಕೆಟ್ ಪತನಕ್ಕೆ ಕಾರಣರಾದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಸ್ವತಃ ಅಯ್ಯರ್ ಹೇಳಿದ್ದಾರೆ.
Read Full Story

02:04 PM (IST) Apr 17

ಚಿನ್ನಸ್ವಾಮಿಯ ದೋಸೆ, ಇಡ್ಲಿ, ಚಟ್ನಿ ಹಾಡು ವಿವಾದ! ಮೊದಲು ಶುರು ಮಾಡಿದ್ದೇ ಸಿಎಸ್‌ಕೆ! ಈ ಬಗ್ಗೆ ಜಿತೇಶ್ ಹೇಳಿದ್ದೇನು?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ 'ದೋಸೆ, ಇಡ್ಲಿ' ಹಾಡನ್ನು ಪ್ರಸಾರ ಮಾಡಿದ್ದಕ್ಕೆ ಸಿಎಸ್‌ಕೆ ತಂಡವು ಬಿಸಿಸಿಐಗೆ ದೂರು ನೀಡಿದೆ. ಈ ಹಾಡು ತಮ್ಮ ಆಟಗಾರರನ್ನು ಮತ್ತು ತಮಿಳುನಾಡಿನ ಗುರುತನ್ನು ಅಣಕಿಸುವಂತಿದೆ ಎಂದು ಸಿಎಸ್‌ಕೆ ಆರೋಪಿಸಿದ್ದು, ಈ ವಿವಾದದ ಹಿನ್ನೆಲೆ ಕಳೆದ ವರ್ಷ ಜಿತೇಶ್ ಶರ್ಮಾ ಅವರ ವಿಡಿಯೋದಿಂದ ಆರಂಭವಾಗಿತ್ತು.
Read Full Story

01:22 PM (IST) Apr 17

ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ - ಒಂದೇ ದಿನ ಮೂವರು ರೇ*ಪಿಸ್ಟ್‌ಗಳಿಗೆ ಮರಣದಂಡನೆ

ಚೀನಾದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮಕ್ಕಳ ಮೇಲೆ ಘೋರ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರು ಶಿಶು ಕಾಮಿಗಳನ್ನು ಒಂದೇ ದಿನ ಗಲ್ಲಿಗೇರಿಸಲಾಗಿದೆ. ಮಕ್ಕಳ ಮೇಲಿನ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವ ಚೀನಾ, ಈ ಮೂಲಕ ಕಠಿಣ ಸಂದೇಶವನ್ನು ರವಾನಿಸಿದೆ.
Read Full Story

01:21 PM (IST) Apr 17

ಬಾಲಿವುಡ್‌ ಇಬ್ಬರು ಬೆಡಗಿಯರ ಒಗ್ಗಟ್ಟಿಗೆ ಶಾಕ್ ಆದ ನೆಟ್ಟಗರು; ದೀಪಿಕಾ ಡಿಮ್ಯಾಂಡ್‌ಗೆ ಕಂಗನಾ ಜೈ ಅಂದ್ಬಿಟ್ರು ನೋಡಿ!

ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಬಗ್ಗೆ ದೀಪಿಕಾ ಹಾಕಿಕೊಟ್ಟ ಈ ಮಾದರಿಗೆ ಈಗ ಕಂಗನಾ ಅವರ ಸಾಥ್ ಸಿಕ್ಕಿರುವುದು ಸಿನಿಮಾ ಲೋಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಿದೆ! ಬಾಲಿವುಡ್ ಲೋಕದಲ್ಲಿ ನಟಿಯರ ನಡುವೆ ಜಗಳ ಇದೆ ಎಂಬುದನ್ನು ಇದು ಸುಳ್ಳು ಮಾಡಿದ್ಯಾ?

Read Full Story

01:15 PM (IST) Apr 17

ಬಂಧನ ವಿರುದ್ಧ ರಕ್ಷಣೆ ಬಯಸಿದ ಕಾಂಗ್ರೆಸ್ ನಾಯಕನ ಪವರ್ ಖೆರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ಬಂಧನ ವಿರುದ್ಧ ರಕ್ಷಣೆ ಬಯಸಿದ ಕಾಂಗ್ರೆಸ್ ನಾಯಕನ ಪವರ್ ಖೆರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ, ನಿರೀಕ್ಷಾ ಜಾಮೀನು ಕೋರಿದ್ದ ಪವನ್ ಖೆರಾಗೆ ಖಡಕ್ ಸೂಚನೆ ನೀಡಿದೆ. ಇದೀಗ ಖೆರಾ ಸಂಕಷ್ಟ ತೀವ್ರಗೊಂಡಿದೆ.

 

Read Full Story

01:04 PM (IST) Apr 17

Richest Person - ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ, ಈಗ ಏಷ್ಯಾದ ನಂಬರ್ 1 ಶ್ರೀಮಂತ!

ಗೌತಮ್ ಅದಾನಿ ಈಗ ಏಷ್ಯಾದ ನಂಬರ್ 1 ಶ್ರೀಮಂತ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಹೊಸ ಪಟ್ಟಿ ಪ್ರಕಾರ, ಅದಾನಿ  ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷರ ನಿವ್ವಳ ಆಸ್ತಿ 92.6 ಬಿಲಿಯನ್ ಡಾಲರ್ . ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ. ಅಂಬಾನಿ 20ನೇ ಸ್ಥಾನ..

Read Full Story

01:02 PM (IST) Apr 17

ಟೋಲ್ ದಾಟುವ ಮುನ್ನ ಎಚ್ಚರ, ಸರಕು ಸಾಗಾಣೆ ಮಾಡೋ ವಾಹನ ಮಾಲೀಕರಿಗೆ ಶಾಕ್ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!

ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓವರ್‌ಲೋಡ್ ವಾಹನಗಳಿಗೆ ಕಡಿವಾಣ ಹಾಕಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಟೋಲ್ ಪ್ಲಾಜಾಗಳಲ್ಲಿ "ವೈ-ಇನ್-ಮೋಶನ್" ತಂತ್ರಜ್ಞಾನ ಬಳಸಿ ವಾಹನಗಳ ತೂಕವನ್ನು ಅಳೆದು, ನಿಗದಿತ ಮಿತಿಗಿಂತ ಹೆಚ್ಚು ಭಾರವಿದ್ದಲ್ಲಿ 4 ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ. ಈ ಕ್ರಮಕ್ಕೆ ಲಾರಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Read Full Story

12:51 PM (IST) Apr 17

ರಾವಣನ ಹಣ್ಣು ರಾಮ ಕದ್ದ - ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು

ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್‌ಟಿಗೆ ಹೋಲಿಸಿದ್ದು,  ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Read Full Story

12:30 PM (IST) Apr 17

ಫೋನ್ ಸ್ವಿಚ್ ಆಫ್ ಆಗಿ ನೆರವೂ ಸಿಗಲಿಲ್ಲ, ಇಬ್ಬರು ಕಾನೂನು ವಿದ್ಯಾರ್ಥಿಗಳ ದುರಂತ ಸಾವು

ಫೋನ್ ಸ್ವಿಚ್ ಆಫ್ ಆಗಿ ನೆರವೂ ಸಿಗಲಿಲ್ಲ, ಇಬ್ಬರು ಕಾನೂನು ವಿದ್ಯಾರ್ಥಿಗಳ ದುರಂತ ಸಾವು, ಒಬ್ಬನ ಬಳಿ ಫೋನ್ ಇರಲಿಲ್ಲ, ಮತ್ತೊಬ್ಬನ ಫೋನ್ ಸ್ವಿಚ್ ಆಫ್. ಇಷ್ಟೇ ನೆರವಿಗೆ ಕರೆ ಮಾಡಲು ಸಾಧ್ಯವಾಗದೆ ಸಾವು ಕಂಡಿದ್ದಾರೆ.

 

Read Full Story

12:25 PM (IST) Apr 17

ಅತ್ತೆ ಮಾವ ತನ್ನ ಮಗುವಿಗಿಂತ ಓರಗಿತ್ತಿಯ ಮಗುವನ್ನೇ ಹೆಚ್ಚು ಪ್ರೀತಿಸುತ್ತಾರೆಂದು ಆ ಮಗುವಿಗೆ ಆಸಿಡ್ ಕುಡಿಸಿದ ಮಹಿಳೆ

ಹೈದರಾಬಾದ್‌ನಲ್ಲಿ, ಅತ್ತೆ-ಮಾವ ತನ್ನ ಮಗನಿಗಿಂತ ಓರಗಿತ್ತಿಯ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾರೆ ಎಂಬ ಅಸೂಯೆಯಿಂದ ಮಹಿಳೆಯೊಬ್ಬಳು ಆ ಬಾಲಕನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿ ಕೊಲ್ಲಲು ಯತ್ನಿಸಿದ್ದಾಳೆ. ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
Read Full Story

12:22 PM (IST) Apr 17

ಸೂರ್ಯ ನಟನೆಯ 'ಕರುಪ್ಪು' ಚಿತ್ರದಿಂದ ಎಆರ್ ರೆಹಮಾನ್ ಹೊರಬಂದಿದ್ದು ಯಾಕೆ? ಕೊನೆಗೂ ಸತ್ಯ ಹೊರಬಂತು!

"ನಾನು ಬೇರೊಂದು ಕಥೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಈ ಚಿತ್ರದ ತಯಾರಕರಿಂದ ಕರೆ ಬಂತು. ಆ ಎರಡನೇ ಕರೆ ನನಗೆ ಬಹಳ ವಿಶೇಷವಾಗಿ ಕಂಡಿತು. ಯಾವುದೋ ಒಂದು ಹಠಾತ್ ಅಂತಃಪ್ರೇರಣೆ ಈ ಚಿತ್ರವನ್ನು ಮಾಡಲು ನನ್ನನ್ನು ಪ್ರೇರೇಪಿಸಿತು" ಎಂದಿದ್ದಾರೆ.  ಆದರೆ, ಎಆರ್‌ ರೆಹಮಾನ್ ಹೊರಬಂದಿದ್ದು ಯಾಕೆ?

Read Full Story

11:55 AM (IST) Apr 17

ರೋಹಿತ್ ಶೆಟ್ಟಿ ಮನೆ ಮುಂದೆ ಹ್ಯಾಟ್ರಿಕ್ ದಾಳಿ ನಡೆಸಿದ್ದ ಶೂಟರ್ ಸೆರೆ; ಯಾರಿವನು, ಯಾಕೆ ದಾಳಿ ನಡೆಸಿದ್ದ ಗೊತ್ತಾ?

ಮುಂಬೈನ ಜುಹುವಿನಲ್ಲಿರುವ ರೋಹಿತ್ ಶೆಟ್ಟಿ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಬ್ಲಾಕ್ ಬಸ್ಟರ್' ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ!

Read Full Story

11:33 AM (IST) Apr 17

TCSನಲ್ಲಿ ಉದ್ಯೋಗಿಗಳ ಮತಾಂತರ ಕಿರುಕುಳ ಕೇಸ್‌ - ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!

ಟಿಸಿಎಸ್‌ನ ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಒತ್ತಾಯಪೂರ್ವಕ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ, ಹೆಚ್‌ಆರ್ ನಿದಾ ಖಾನ್ ತಾನು ಗರ್ಭಿಣಿ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾೆಳೆ. ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿ ಬಂಧಿತರಾಗಿದ್ದಾರೆ.

Read Full Story

11:19 AM (IST) Apr 17

ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

Read Full Story

10:32 AM (IST) Apr 17

ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು

ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್‌ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು? 

 

Read Full Story

10:20 AM (IST) Apr 17

ತನಗೆ GAY LORD ಅಂತ ಹೆಸರಿಟ್ಟ ಪೋಷಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಯುವಕ

boy sues parents over name: ಅಮೆರಿಕಾದ ಯುವಕನೊಬ್ಬ, ತನಗೆ ಪೋಷಕರು 'ಗೇಲಾರ್ಡ್' ಎಂದು ಇಟ್ಟ ಕೆಟ್ಟ ಹೆಸರಿಟ್ಟಿದ್ದರಿಂದ ತೀವ್ರ ಅವಮಾನ ಹಾಗೂ ಭಾವನಾತ್ಮಕ ಯಾತನೆಯಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, 150 ಸಾವಿರ ಡಾಲರ್ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾನೆ.

Read Full Story

09:12 AM (IST) Apr 17

ಮುಂಬೈ ಎದುರು ಶತಕ ಸಿಡಿಸಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಸರಿಗಟ್ಟಿದ ಕ್ವಿಂಟನ್ ಡಿ ಕಾಕ್!

ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ಅವರು ಐಪಿಎಲ್‌ನಲ್ಲಿ 3 ತಂಡಗಳ ಪರ ಶತಕ ಬಾರಿಸಿದ 3ನೇ ಆಟಗಾರ ಎನಿಸಿಕೊಂಡಿದ್ದು, ಟಿ20 ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.
Read Full Story

08:37 AM (IST) Apr 17

ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು

ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು, ಟಿಸಿಎಸ್ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ, ಪುರುಷರ ಮೇಲೂ ಕಾರ್ಪೋರೇಟ್ ಜಿಹಾದ್ ನಡೆಸಿರುವುದು ಬಯಲಾಗಿದೆ.

Read Full Story

More Trending News