ಮುಂಬೈ: ಮಹಾರಾಷ್ಟ್ರದಲ್ಲಿ ಜ.15ರಂದು ನಗರಾಡಳಿತ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರು. ನೀಡುವ ‘ಲಡ್ಕಿ ಬಹಿನ್’ ಯೋಜನೆಯ ಜನವರಿಯ ಕಂತನ್ನು ತಡೆಹಿಡಿಯುವಂತೆ ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಳೆದ ಡಿಸೆಂಬರ್‌ನ ಹಣ ಈವರೆಗೆ ಫಲಾನುಭವಿಗಳ ಖಾತೆ ತಲುಪಿಲ್ಲ. ಹೀಗಿರುವಾಗ, ಇದನ್ನು ಮತ ಸೆಳೆಯುವ ತಂತ್ರವಾಗಿ ಸರ್ಕಾರ ಬಳಸಬಹುದು ಹಾಗೂ 2 ತಿಂಗಳ (ಡಿಸೆಂಬರ್, ಜನವರಿ) ಹಣ ಸೇರಿ ಒಟ್ಟು 3000 ರು.ಅನ್ನು ಮಕರಸಂಕ್ರಾಂತಿಯ ಉಡುಗೊರೆಯೆಂದು ಘೋಷಿಸಿ ಖಾತೆಗಳಿಗೆ ಜಮೆ ಮಾಡುವ ಸಾಧ್ಯತೆಯಿದೆ ಎಂದು ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಆಯೋಗ ಈ ಆದೇಶ ಹೊರಡಿಸಿದೆ. ಇತ್ತೀಚಗೆ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯಡಿ 10,000 ರು. ಹಂಚಿದ್ದು ವಿವಾದವಾಗಿತ್ತು.

02:28 PM (IST) Jan 13
ಭಾರತೀಯ ರೈಲ್ವೆ, ಜನವರಿ 12, 2026 ರಿಂದ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಈ ಕ್ರಮವು ನಕಲಿ ಖಾತೆಗಳು ಮತ್ತು ಏಜೆಂಟರ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
02:20 PM (IST) Jan 13
ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ನವೀಕರಿಸಿದ ವಿನ್ಯಾಸ, ಹಲವು ಹೊಸ ಬಣ್ಣಗಳು, ಸುಧಾರಿತ ಒಳಾಂಗಣ ವೈಶಿಷ್ಟ್ಯಗಳು, 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಹೊಸ 1.2 ಲೀಟರ್ ಐಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.
01:58 PM (IST) Jan 13
ಭಾರತಕ್ಕೆ ಭೇಟಿ ನೀಡಿದ ಜೆನ್ನಿ ಆಡಂ ಎಂಬ ವಿದೇಶಿ ಪ್ರವಾಸಿ ಮಹಿಳೆ, ಭಾರತೀಯರೊಂದಿಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದ ರೀಲ್ಸ್ ಮಾಡಿದ್ದಾರೆ. ಈ ವೈರಲ್ ವಿಡಿಯೋ ಭಾರತೀಯರ ಅತಿಥಿ ಸತ್ಕಾರವನ್ನು ಜಗತ್ತಿಗೆ ಸಾರಿದೆ.
01:30 PM (IST) Jan 13
ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರವು ಚೀನಾ, ಯುಎಇ ಮತ್ತು ಭಾರತದಂತಹ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಪರಿಣಾಮ ಬೀರಲಿದೆ.
01:18 PM (IST) Jan 13
12:24 PM (IST) Jan 13
ಗ್ಲುಕೋಮಾ ಯಾವುದೇ ಆರಂಭಿಕ ಲಕ್ಷಣಗಳಿಲ್ಲದೆ ಸದ್ದಿಲ್ಲದೆ ದೃಷ್ಟಿಯನ್ನು ಹಾನಿಗೊಳಿಸುವ ಕಾಯಿಲೆಯಾಗಿದೆ. ಇದು ಆಪ್ಟಿಕ್ ನರವನ್ನು ಹಾನಿಗೊಳಿಸಿ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ, ಇದು ಸಾಮಾನ್ಯವಾಗಿ ರೋಗವು ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಪತ್ತೆಯಾಗುತ್ತದೆ.
11:59 AM (IST) Jan 13
ಅತಿವೇಗದ ಚಾಲನೆಗೆ ಚಲನ್ ವಿಧಿಸಿ, ವರ್ಷದ ಕೊನೆಯಲ್ಲಿ ಅದರಿಂದ ವಿನಾಯಿತಿ ಪಡೆಯುತ್ತೀರಿ. ಇದರಿಂದ, ವರ್ಷಾಂತ್ಯದಲ್ಲಿ ಪೊಲೀಸರು ರಿಯಾಯಿತಿ ನೀಡುತ್ತಾರೆ ಎಂದು ಜನರು ಭಾವಿಸುತ್ತಾರೆ ಮತ್ತು ಅವರು ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಹೇಳಿದ್ದಾರೆ.
11:34 AM (IST) Jan 13
2025ರ ಐಪಿಎಲ್ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ, ಆರ್‌ಸಿಬಿ 2026ರ ಐಪಿಎಲ್‌ಗೆ ಹೊಸ ತವರು ಮೈದಾನದ ಹುಡುಕಾಟದಲ್ಲಿದೆ. ಸುರಕ್ಷತಾ ವರದಿಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಅಲಭ್ಯವಾಗಿದೆ.
10:36 AM (IST) Jan 13
10:12 AM (IST) Jan 13
10:08 AM (IST) Jan 13
09:04 AM (IST) Jan 13
ವಡೋದರಾ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೊಹ್ಲಿಯೂ ತನ್ನ ಅಭಿಮಾನಿಗಳನ್ನು ಗೌರವಿಸುತ್ತಾ ಬಂದಿದ್ದಾರೆ. ಆದರೆ ಇದೀಗ ವಿರಾಟ್ ಕೊಹ್ಲಿ ತಮ್ಮ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದಾರೆ. ಯಾಕೆ? ಏನಾಯ್ತು?