Published : Feb 12, 2026, 07:08 AM ISTUpdated : Feb 12, 2026, 11:12 PM IST

India Latest News Live: ಉತ್ತರ ಕೊರಿಯಾಗೆ 13 ವರ್ಷದ ಮಗಳನ್ನು ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಿದ ಕಿಮ್‌ ಜಾಂಗ್‌ ಉನ್‌!

ಸಾರಾಂಶ

ನ್ಯೂಯಾರ್ಕ್‌/ ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಈಗಾಗಲೇ 80ಕ್ಕೂ ಹೆಚ್ಚು ಸಲ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಯುದ್ಧದ ವೇಳೆ 10 ವಿಮಾನಗಳನ್ನು ಹೊಡೆದುರುಳಿಸಲಾಯಿತು’ ಎಂದಿದ್ದಾರೆ. ಇದೇ ವೇಳೆ ಟ್ರಂಪ್‌, ‘ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಪ್‌ ಅವರು ಯುದ್ಧ ನಿಲ್ಲಿಸಿದ್ದರಿಂದ 1 ಕೋಟಿ ಮಂದಿ ಜೀವ ಉಳಿಯಿತು ಎಂದು ನನ್ನಲ್ಲಿ ಹೇಳಿದ್ದರು’ ಎಂದಿದ್ದಾರೆ.

Kim Jong Un

11:12 PM (IST) Feb 12

ಉತ್ತರ ಕೊರಿಯಾಗೆ 13 ವರ್ಷದ ಮಗಳನ್ನು ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಿದ ಕಿಮ್‌ ಜಾಂಗ್‌ ಉನ್‌!

Kim Jong Un Names Daughter Kim Ju Ae as Official Successor ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ 13 ವರ್ಷದ ಮಗಳು ಕಿಮ್ ಜು ಏ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ತಿಳಿಸಿದೆ.

Read Full Story

10:48 PM (IST) Feb 12

ಕ್ರಿಕೆಟ್‌ ಶಿಶು ನಮೀಬಿಯಾಗೆ ಟಿ20 ಭಯ ತೋರಿಸಿದ ಭಾರತ, 93 ರನ್‌ಗಳ ಭರ್ಜರಿ ಜಯ!

India Defeats Namibia by 93 Runs: T20 World Cup 2026 Match Update ಟಿ20 ವಿಶ್ವಕಪ್ ಪಂದ್ಯದಲ್ಲಿ, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 

Read Full Story

10:37 PM (IST) Feb 12

ಐಪಿಎಲ್ ಬೆಟ್ಟಿಂಗ್ ಮಾನನಷ್ಟ ಮೊಕದ್ದಮೆ - 10 ಲಕ್ಷ ರೂ. ಪಾವತಿಸುವಂತೆ ಧೋನಿಗೆ ಹೈಕೋರ್ಟ್ ಆದೇಶ!

IPL Betting Case: Madras HC Orders MS Dhoni to Pay ₹10 Lakh 2013 ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮನ್ನು ನಂಟು ಮಾಡಿದ್ದಕ್ಕಾಗಿ ಎಂಎಸ್ ಧೋನಿ 100 ಕೋಟಿ ರೂಪಾಯಿ ಪರಿಹಾರ ಕೋರಿದ್ದಾರೆ.

 

Read Full Story

10:00 PM (IST) Feb 12

ಪಾಕ್‌ ವಿರುದ್ಧದ ಪಂದ್ಯಕ್ಕೆ ಫಿಟ್‌ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್‌ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್‌ ಯಾದವ್‌

Will Abhishek Sharma Miss India vs Pakistan Clash? Surya Gives Update ಟೀಮ್ ಇಂಡಿಯಾದ ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ಅವರ ಆರೋಗ್ಯದ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ನೀಡಿರುವ ಅಪ್‌ಡೇಟ್, ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಕುರಿತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

 

Read Full Story

09:49 PM (IST) Feb 12

ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು..

ವೈದ್ಯರು ತನಗೆ ಗಂಡು ಮಗು ಜನಿಸಿದೆ ಎಂದು ಸುಳ್ಳು ಹೇಳಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

09:13 PM (IST) Feb 12

ಭಾರತದ 'ಜಲ' ಹೊಡೆತಕ್ಕೆ ಬೆದರಿದ ಇಸ್ಲಾಮಾಬಾದ್; ಸಾವಲ್ಕೋಟ್ ಅಣೆಕಟ್ಟು ಯೋಜನೆಯಿಂದ ಪಾಕಿಸ್ತಾನಕ್ಕಿಲ್ಲ ನೀರು?

Sawalkot Dam: India's ₹5,129 Cr Project Ignites Tension with Pakistan ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಶಿಕ್ಷೆಯ ಕ್ರಮವಾಗಿ ಕಳೆದ ವರ್ಷ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಂತರ ಭಾರತವು ಸಾವಲ್ಕೋಟ್ ಮೆಗಾ ಅಣೆಕಟ್ಟು ಯೋಜನೆಯ ಕೆಲಸವನ್ನು ಪ್ರಾರಂಭಿಸಿದೆ.

 

Read Full Story

09:10 PM (IST) Feb 12

ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ

ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ ಬಯಲಾಗಿದೆ. ಯುವ ಸಮೂಹ ಹೂಡಿಕೆ ವಿಚಾರದಲ್ಲಿ ಚಿನ್ನವನ್ನೇ ಆಯ್ಕೆ ಮಾಡುತ್ತಿದ್ದಾರೆ. ಸ್ಮೈಟನ್ ಪಲ್ಸ್ ಎಐ ಸರ್ವೇ ಮಾಹಿತಿ ಇಲ್ಲಿದೆ.

 

Read Full Story

08:44 PM (IST) Feb 12

ಅತ್ತಿಗೆ ನಾದಿನಿ ಕಲಹ - ಸೋದರನ ಬಿಡುಗಡೆಗೆ ಜತೆಯಾಗಿ ಕೆಲಸ ಮಾಡುವಂತೆ ಸೆಲೀನಾ ಜೇಟ್ಲಿ, ಅತ್ತಿಗೆಗೆ ಸೂಚಿಸಿದ ಕೋರ್ಟ್

ಯುಎಇ ಜೈಲಿನಲ್ಲಿ 18 ತಿಂಗಳಿಂದ ಬಂಧನದಲ್ಲಿರುವ ಸಹೋದರ ವಿಕ್ರಾಂತ್ ಜೇಟ್ಲಿ ಬಿಡುಗಡೆಗೆ ನಟಿ ಸೆಲೀನಾ ಜೇಟ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಸೆಲೀನಾ ಮತ್ತು ಅವರ ಅತ್ತಿಗೆ ಚಾರುಲ್ ಜೇಟ್ಲಿ ನಡುವಿನ ಕಲಹ ಬಹಿರಂಗವಾಗಿದೆ.

Read Full Story

07:28 PM (IST) Feb 12

ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ,ಅಲರ್ಟ್ ಘೋಷಣೆ

ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಭೀತಿ ಆವರಿಸಿದೆ. ನರ್ಸ್ ಸಾವಿನ ಬೆನ್ನಲ್ಲೇ ಎಲ್ಲೆಡೆ ಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ.

 

Read Full Story

07:00 PM (IST) Feb 12

ದೇಶದ ಪ್ರಸಿದ್ಧ ಐಸ್‌ಕ್ರೀಮ್‌ ಬಾಸ್ಕಿನ್‌ ರಾಬಿನ್ಸ್‌, ಕ್ವಾಲಿಟಿ ವಾಲ್ಸ್‌ನ ಒಡತಿ ಸಚಿನ್‌ ತೆಂಡುಲ್ಕರ್‌ ಸೊಸೆ!

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಾಂದೋಕ್ ಅವರನ್ನು ವಿವಾಹವಾಗಲಿದ್ದಾರೆ. ಸಾನಿಯಾ ಅವರು ಬಾಸ್ಕಿನ್-ರಾಬಿನ್ಸ್ ಇಂಡಿಯಾದಂತಹ ಬ್ರ್ಯಾಂಡ್‌ಗಳನ್ನು ಹೊಂದಿರುವ ಯಶಸ್ವಿ ಉದ್ಯಮಿಯಾಗಿದ್ದು, ಪ್ರಾಣಿ ಕಲ್ಯಾಣದಲ್ಲೂ ತೊಡಗಿಸಿಕೊಂಡಿದ್ದಾರೆ.
Read Full Story

06:54 PM (IST) Feb 12

ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಅಂಟಿತಾ ಕಳಂಕ? ಕುಡಿದು ಬಿಟ್ಟ ಕೂಲ್ ಡ್ರಿಂಗ್ಸ್ ಮರುಬಳಕೆ ವಿವಾದ

ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಅಂಟಿತಾ ಕಳಂಕ? ಕುಡಿದು ಬಿಟ್ಟ ಕೂಲ್ ಡ್ರಿಂಗ್ಸ್ ಮರುಬಳಕೆ ವಿವಾದ ಜೋರಾಗಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ.

Read Full Story

06:46 PM (IST) Feb 12

ಟಿ20 ವಿಶ್ವಕಪ್‌ - ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ; ಭಾರತ ತಂಡದಲ್ಲಿ ಎರಡು ಮೇಜರ್ ಚೇಂಜ್

ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಭಾರತ ಮತ್ತು ನಮೀಬಿಯಾ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳಾಗಿದ್ದು, ಸಂಜು ಸ್ಯಾಮ್ಸನ್‌ ಮತ್ತು ಜಸ್ಪ್ರೀತ್ ಬುಮ್ರಾ ಆಡುವ ಹನ್ನೊಂದರ ಬಳಗಕ್ಕೆ ಮರಳಿದ್ದಾರೆ.
Read Full Story

06:24 PM (IST) Feb 12

ಮನೆಯ ದೇವರ ಕೋಣೆಯಲ್ಲಿ ಈ 4 ವಸ್ತುಗಳನ್ನಿಟ್ಟು ನೋಡಿ; ಲಕ್ಷ್ಮಿ ತಾಂಡವ ಆಡೋದು ಪಕ್ಕಾ!

ವಾಸ್ತು ಪ್ರಕಾರ, ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಸ್ಥಾನವಿದೆ. ಇಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಇಡುವುದರಿಂದ ದೇವರು ಪ್ರಸನ್ನರಾಗುತ್ತಾರೆ. ಹೀಗಾಗಿ ಈ ನಾಲ್ಕು ವಸ್ತುಗಳನ್ನು ತಪ್ಪದೇ ಮನೆಯ ದೇವರ ಕೋಣೆಯಲ್ಲಿಡಿ.

 

Read Full Story

06:10 PM (IST) Feb 12

ನಾಲ್ವರಿದ್ದ ಹೆಲಿಕಾಪ್ಟರ್ ವಿದ್ಯಾರ್ಥಿಗಳಿದ್ದ ಶಾಲಾ ಮೈದಾನದಲ್ಲಿ ತುರ್ತು ಭೂಸ್ವರ್ಶ, ವಿಡಿಯೋ ಸೆರೆ

ನಾಲ್ವರಿದ್ದ ಹೆಲಿಕಾಪ್ಟರ್ ವಿದ್ಯಾರ್ಥಿಗಳಿದ್ದ ಶಾಲಾ ಮೈದಾನದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಭಯಾಕನ ವಿಡಿಯೋ ಸೆರೆಯಾಗಿದೆ.

Read Full Story

05:31 PM (IST) Feb 12

ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು

ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು ಕಂಡಿದ್ದಾಳೆ. ಪೊಲೀಸ್ ಎಂದು ಕಂಠಪೂರ್ತಿ ಕುಡಿದಿದ್ದಾನೆ. ಆದರೆ ಈತನ ಆಟಾಟೋಪಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.

 

Read Full Story

05:17 PM (IST) Feb 12

ಇಸ್ಕಾನ್ ದೇವಸ್ಥಾನಕ್ಕೆ ಕ್ಯಾಬ್ ಬುಕ್; ಸೆ*ಕ್ಸ್ ಆಫರ್ ನೋಡಿ ಡ್ರೈವರ್ ಕಕ್ಕಾಬಿಕ್ಕಿ! ಚಾಟ್ ಸ್ಕ್ರೀನ್ ಶಾಟ್ ವೈರಲ್

ನವದೆಹಲಿ: ಕ್ಯಾಬ್ ಡ್ರೈವರ್‌ಗಳು ದಿನನಿತ್ಯದ ತಮ್ಮ ಜೀವನದಲ್ಲಿ ಹಲವು ವಿಚಿತ್ರ ಸನ್ನಿವೇಶಗಳನ್ನು ಎದುರಿಸುತ್ತಾರೆ. ಆದರೆ ಇದೀಗ ಇಸ್ಕಾನ್ ಟೆಂಪಲ್‌ಗೆ ಕ್ಯಾಬ್ ಬುಕ್ ಮಾಡಿ, ಆಮೇಲೆ ಸೆ*ಕ್ಸ್ ಆಫರ್ ಕೊಟ್ಟಿದ್ದಾರೆ. ಇದಾದ ಬಳಿಕ ಆಗಿದ್ದೇನು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

05:11 PM (IST) Feb 12

ಸಿನಿಮಾ ಮೀರಿಸುವ ರೋಚಕ ಕ್ರೈಂ ಥ್ರಿಲ್ಲರ್ ಸ್ಟೋರಿ ಇದು - ಕೊಲೆಯಾದ ಪತ್ನಿಯ ರಹಸ್ಯ ಬಯಲು ಮಾಡಿದ ಆಧಾರ್ ಕಾರ್ಡ್ ಒಟಿಪಿ

ಕೊಲೆಯಾಗಿದ್ದಾಳೆ ಎನ್ನಲಾದ ಹೆಂಡ್ತಿ ಮಾಡಿದ ಆಧಾರ್ ಕಾರ್ಡ್ ಅಪ್‌ಡೇಟ್‌ನಿಂದಾಗಿ ಈಗ ಆಕೆಯ ಪೋಷಕರು ಕೊಲೆ ಆರೋಪದಿಂದ ಮುಕ್ತರಾಗಿದ್ದರೆ, ಇತ್ತ ಸಂದೀಪ್‌ಗೆ ತನ್ನ ಪತ್ನಿ ಮಗ ಬದುಕಿರುವ ವಿಚಾರ ತಿಳಿದು ಖುಷಿ ದುಃಖ ಎರಡು ಜೊತೆ ಜೊತೆಗೆ ಆಗಿದೆ. ಅದೇಕೆ ಅಂತೀರಾ ಮುಂದೆ ಓದಿ

Read Full Story

04:28 PM (IST) Feb 12

Viral Video - ನೋರಾ ಫತೇಹಿ ಡಾನ್ಸ್‌ ನೋಡ್ತಾ ಮೈಮರೆತ ಸೂರ್ಯ; ಸ್ಟೇಡಿಯಂನಲ್ಲೇ ಗಂಡನನ್ನ ರೆಡ್‌ಹ್ಯಾಂಡ್‌ ಆಗಿ ಹಿಡಿದ ಹೆಂಡ್ತಿ ದಿವಿಶಾ ಶೆಟ್ಟಿ!

ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ಅವರ ನೃತ್ಯವನ್ನು ಡ್ರೆಸ್ಸಿಂಗ್ ರೂಮ್‌ನಿಂದ ಸೂರ್ಯಕುಮಾರ್ ಯಾದವ್ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಇದೇ ವೇಳೆ, ಗ್ಯಾಲರಿಯಲ್ಲಿದ್ದ ಅವರ ಪತ್ನಿ ದಿವಿಶಾ ಶೆಟ್ಟಿ ಈ ದೃಶ್ಯವನ್ನು ವಿಡಿಯೋ ಮಾಡಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. 

Read Full Story

04:01 PM (IST) Feb 12

ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು

ಹಳೇ ಸಿನಿಮಾ ಹಾಡು, ಸಿಗರೇಟು; ನ್ಯೂಸ್ ಆ್ಯಂಕರ್ ಸಲ್ಮಾ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್‌ನಲ್ಲಿ ಅನಾವರಣಗೊಂಡಿದೆ.

Read Full Story

04:01 PM (IST) Feb 12

ಅಮೆರಿಕಾದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

ಸಿಯಾಟಲ್‌ನಲ್ಲಿ ಪೊಲೀಸ್ ಅಧಿಕಾರಿಯ ವಾಹನಕ್ಕೆ ಬಲಿಯಾದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 260 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 2023ರಲ್ಲಿ ನಡೆದ ಈ ಅಪಘಾತ ಮತ್ತು ನಂತರ ಅಧಿಕಾರಿಯೊಬ್ಬರ ಅಮಾನವೀಯ ಹೇಳಿಕೆಗಳು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದ್ದವು.
Read Full Story

03:23 PM (IST) Feb 12

Maha Shivaratri - ಶಿವರಾತ್ರಿ ಪೂಜೆ ಮುಗಿಸಿ ಮನೆಗೆ ಬರುವಾಗ ಈ ಒಂದು ವಸ್ತು ತನ್ನಿ, ಹಣದ ಸಮಸ್ಯೆ ಇರಲ್ಲ!

ಮಹಾಶಿವರಾತ್ರಿಗಾಗಿ ಶಿವಭಕ್ತರು ಕಾತುರದಿಂದ ಕಾಯುತ್ತಾರೆ. ಈ ದಿನ ಮಾಡುವ ಕೆಲವು ಕೆಲಸಗಳು ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತವೆ. ಪೂಜೆಯ ನಂತರ ಯಾವ ವಸ್ತುವನ್ನು ಮನೆಗೆ ತರಬೇಕು ಎಂದು ತಿಳಿಯಿರಿ.
Read Full Story

03:09 PM (IST) Feb 12

ಮಿಲಿಯನ್ ಜನರ ಮೆಚ್ಚುಗೆಗಳಿಸಿದ ಪಂಜಾಬಿ ಗರ್ಲ್ ಶಾಯರಿ, ವೈರಲ್ ವಿಡಿಯೋ ಹಿಂದಿದೆ ಬಿಗ್ ಟ್ವಿಸ್ಟ್

ಮಿಲಿಯನ್ ಜನರ ಮೆಚ್ಚುಗೆಗಳಿಸಿದ ಯುವತಿ ಶಾಯರಿ, ವೈರಲ್ ವಿಡಿಯೋ ಹಿಂದಿದೆ ಬಿಗ್ ಟ್ವಿಸ್ಟ್, ಈಕೆಯ ನಗು, ಸೌಂದರ್ಯಕ್ಕೆ ಜನ ಮಾರುಹೋಗಿದ್ದಾರೆ. ಹೇಳಿದ ಕವಿತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ವಿಡಿಯೋದಲ್ಲಿರುವ ಟ್ವಿಸ್ಟ್ ಏನು?

 

Read Full Story

02:19 PM (IST) Feb 12

Sarla Maheshwari passes away - ದೂರದರ್ಶನದ ಖ್ಯಾತ ನಿರೂಪಕಿ 'ಸರಳ' ಧ್ವನಿ ಈಗ ನೆನಪು ಮಾತ್ರ

1980ರ ದಶಕದಲ್ಲಿ ದೂರದರ್ಶನದ ಖ್ಯಾತ ನಿರೂಪಕಿಯಾಗಿದ್ದ ಸರಳ ಮಹೇಶ್ವರಿ ಅವರು ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ ಸರಳ ವ್ಯಕ್ತಿತ್ವ ಮತ್ತು ಸ್ಪಷ್ಟ ವಾರ್ತಾ ವಾಚನದಿಂದ ಗುರುತಿಸಿಕೊಂಡಿದ್ದ ಅವರು, ಅಂದಿನ ಕಾಲದಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದರು.
Read Full Story

01:56 PM (IST) Feb 12

ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? ನಿಜವಾಗುತ್ತಾ ಜ್ಯೋತಿಷಿ ಹೇಳಿದ್ದ ಆ ಭವಿಷ್ಯ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಹೊಸ್ತಿಲಲ್ಲಿ, ವಿಜಯ್ ಅವರ ಮಾಜಿ ಗೆಳತಿಯೊಂದಿಗಿನ ಹಳೆಯ ಫೋಟೋಗಳು ವೈರಲ್ ಆಗಿವೆ. ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿಯಲು ಕಾರಣವಾದ ಘಟನೆಯಂತೆಯೇ, ಈಗ ರಶ್ಮಿಕಾ ಕೂಡ ಎದುರಿಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

Read Full Story

01:18 PM (IST) Feb 12

Business Ideas - ನಿಮ್ಮ ಊರಲ್ಲೇ ಶುರು ಮಾಡಬಹುದಾದ ಕಡಿಮೆ ರಿಸ್ಕ್‌ನ ಬ್ಯುಸಿನೆಸ್‌ಗಳಿವು!

ಕೆಲಸವೇ ಇರಲಿ, ವ್ಯಾಪಾರವೇ ಆಗಲಿ, ನಮ್ಮಲ್ಲಿ ಅದೃಷ್ಟ ಮತ್ತು ಬುದ್ಧಿವಂತಿಕೆ ಇದ್ದರೆ ಖಂಡಿತ ಯಶಸ್ಸು ಸಾಧಿಸಬಹುದು. ಓದಿಲ್ಲದಿದ್ದರೂ, ಜಾಣ್ಮೆಯಿಂದ ವ್ಯಾಪಾರ ಮಾಡಿ ಲಕ್ಷಗಟ್ಟಲೆ ಸಂಪಾದಿಸಬಹುದು ಎಂಬುದು ಹಲವರ ಅಭಿಪ್ರಾಯ.
Read Full Story

01:08 PM (IST) Feb 12

ಅಳಿಯನೊಂದಿಗೆ ಓಡಿ ಹೋಗಿದ್ದ ಅತ್ತೆ, ಈಗ ಮಾಜಿ ಗಂಡನ ಸೋದರಮಾವನ ಜೊತೆ ಸಂಸಾರ! ಆಂಟಿ ಹಿಂದೆ ಹೋಗಿ ಬೆಪ್ಪಾದ ರಾಹುಲ್ !

ಮಗಳ ಭಾವಿ ಪತಿ ರಾಹುಲ್ ಜೊತೆ ಪಲಾಯನ ಮಾಡಿ ಸುದ್ದಿಯಾಗಿದ್ದ ಅನಿತಾ ದೇವಿ, ಇದೀಗ ಆತನನ್ನೂ ತೊರೆದಿದ್ದಾಳೆ. ರಾಹುಲ್‌ನಿಂದ ದೂರವಾಗಿರುವ ಆಕೆ, ಸದ್ಯ ತನ್ನ ಮಾಜಿ ಪತಿಯ ಭಾವ ಜಿತೇಂದ್ರ ಕುಮಾರ್ ಎಂಬಾತನ ಜೊತೆ ವಾಸವಾಗಿದ್ದಾಳೆ. ಅನಿತಾ ದೇವಿ ಕೈ ಕೊಟ್ಟಿದ್ದಕ್ಕೆ ಪೊಲೀಸ್ ಠಾಣೆ ಸುತ್ತಾಟ

Read Full Story

12:51 PM (IST) Feb 12

2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ 2 ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ?

ಬಿಗ್ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ರಕ್ಷಿತಾಗೆ, ವರ್ತೂರ್ ಸಂತೋಷ್ ಅವರು 2 ಲಕ್ಷ ರೂಪಾಯಿಗಳ ಬದಲಾಗಿ ಎರಡು ಹಳ್ಳಿಕಾರ್ ಹಸುಗಳನ್ನು ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Read Full Story

12:23 PM (IST) Feb 12

ರಾಜ್‌ಪಾಲ್ ಯಾದವ್ ಮೊದಲ ಪತ್ನಿಗೇನಾಗಿತ್ತು? ಆ ದುರಂತದ ಬಗ್ಗೆ ಕಣ್ಣೀರಿಟ್ಟ ಹಾಸ್ಯ ನಟ

ಚೆಕ್ ಬೌನ್ಸ್ ಪ್ರಕರಣದಿಂದಾಗಿ ಸುದ್ದಿಯಲ್ಲಿರುವ ನಟ ರಾಜಪಾಲ್ ಯಾದವ್ ಅವರ ವೈಯಕ್ತಿಕ ಜೀವನವೂ ಒಂದು ರೀತಿ ದುರಂತ ಕಥೆ. ಕೇವಲ 20ನೇ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡರೂ, ಕುಟುಂಬದ ಬೆಂಬಲದಿಂದ ಅವರು ಜೀವನವನ್ನು ಮತ್ತೆ ಕಟ್ಟಿಕೊಂಡರು. ಅವರ ಕಥೆ ಕುಟುಂಬ ಮತ್ತು ಪ್ರೀತಿಗೆ ಒಂದೊಳ್ಳೆಯ ಉದಾಹರಣೆ.

Read Full Story

12:22 PM (IST) Feb 12

ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು - ವೀಡಿಯೋ

ತನ್ನ ಮದುವೆಯ ದಿನ, ಬಾಲ್ಯದಿಂದ ತನ್ನನ್ನು ಸಾಕಿ ಬೆಳೆಸಿದ ಆಯಾ ಬಂದಿದ್ದನ್ನು ಕಂಡು ವಧುವೊಬ್ಬಳು ಭಾವುಕಳಾಗುತ್ತಾಳೆ. 'ಅಮ್ಮ' ಎಂದು ಕರೆಯುತ್ತಾ ಆಕೆಯನ್ನು ಅಪ್ಪಿ ಅಳುವ ವಧು ಮತ್ತು ಅವಳನ್ನು ಸಮಾಧಾನಿಸುವ ಆಯಾಳ ಈ ಭಾವನಾತ್ಮಕ ವಿಡಿಯೋ  ವೈರಲ್ ಆಗಿದೆ.

Read Full Story

12:20 PM (IST) Feb 12

Priyanka Gandhi - ನಾನು ಯಾರನ್ನೂ ಪ್ರಚೋದಿಸಿಲ್ಲ, ಶಾಂತವಾಗಿಯೇ ಮಾತನಾಡಿದ್ದೆ - ರಿಜಿಜು ಆರೋಪಕ್ಕೆ ತಿರುಗೇಟು

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರನ್ನು ಪ್ರಚೋದಿಸಿದ್ದಾರೆ ಎಂಬ ಕಿರಣ್ ರಿಜಿಜು ಅವರ ಆರೋಪವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ತಳ್ಳಿಹಾಕಿದ್ದಾರೆ. ತಾನು ಶಾಂತವಾಗಿಯೇ ಮಾತನಾಡಿದ್ದೆ ಎಂದಿದ್ದಾರೆ. ಸಂಸದರು ತಮ್ಮ ಮೇಲೆ ನಿಂದನೆ ಮಾಡಿದ್ದಾರೆ ಎಂದು ರಿಜಿಜು ಆರೋಪಿಸಿದ್ದರು.

Read Full Story

12:18 PM (IST) Feb 12

ವಾಹನ ಚಲಿಸಿದರೆ ರಸ್ತೆ ಮೇಲೆ ಮೊಳಗಲಿದೆ 'ಜೈ ಹೋ' ನಿನಾದ - ಭಾರತದ ಮೊದಲ Musical Road

 ಭಾರತದ ಮೊದಲ "ಸಂಗೀತ ರಸ್ತೆ"ಯನ್ನು ಉದ್ಘಾಟಿಸಲಾಗಿದೆ. ಈ 500 ಮೀಟರ್ ಉದ್ದದ ರಸ್ತೆಯ ಮೇಲೆ ವಾಹನಗಳು ನಿರ್ದಿಷ್ಟ ವೇಗದಲ್ಲಿ ಚಲಿಸಿದಾಗ, ಎ.ಆರ್. ರೆಹಮಾನ್ ಅವರ ಪ್ರಸಿದ್ಧ 'ಜೈ ಹೋ' ಗೀತೆಯ ಸ್ವರಗಳು ಕೇಳಿಸುತ್ತವೆ.  

Read Full Story

12:10 PM (IST) Feb 12

ಪ್ರೇಮಿಗಳ ದಿನಕ್ಕಾಗಿ ಫ್ಲಿಪ್‌ಕಾರ್ಟ್‌ನಿಂದ ಬಿಗ್‌ ಗಿಫ್ಟ್! ಐಫೋನ್‌ ಬೆಲೆಯಲ್ಲಿ 13 ಸಾವಿರ ರೂ. ಮೆಗಾ ಡಿಸ್ಕೌಂಟ್

Flipkart Valentine's Day sale Offer: ಫ್ಲಿಪ್‌ಕಾರ್ಟ್, ಪ್ರೇಮಿಗಳ ದಿನದ ವಿಶೇಷ ಸೇಲ್‌ನಲ್ಲಿ ಐಫೋನ್ ಮೇಲೆ ಬರೋಬ್ಬರಿ ₹13,000 ಮೆಗಾ ಡಿಸ್ಕೌಂಟ್ ನೀಡುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.

Read Full Story

12:03 PM (IST) Feb 12

T20 ವಿಶ್ವಕಪ್‌ - ಭಾರತಕ್ಕಿಂದು ನಮೀಬಿಯಾ ಸವಾಲು; ಇಂದು ಕಣಕ್ಕಿಳೀತಾರಾ ಅಭಿಷೇಕ್ ಶರ್ಮಾ?

ಟಿ20 ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಸೆಣಸಲಿದೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಇದೊಂದು ಪೂರ್ವಾಭ್ಯಾಸ ಪಂದ್ಯವಾಗಿದ್ದು, ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡು ಬೃಹತ್ ಗೆಲುವು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.  

Read Full Story

11:53 AM (IST) Feb 12

260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್!

260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತವು ತಾಂತ್ರಿಕ ದೋಷದಿಂದಲ್ಲ, ಬದಲಾಗಿ ಉದ್ದೇಶಪೂರ್ವಕ ಕೃತ್ಯವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇಟಾಲಿಯನ್ ಪತ್ರಿಕೆಯೊಂದು ಈ ವರದಿ ಮಾಡಿದ್ದು, ಪೈಲಟ್‌ಗಳ ನಡುವಿನ ಸಂಭಾಷಣೆಯು ಈ ಅನುಮಾನವನ್ನು ಮತ್ತಷ್ಟು ದಟ್ಟವಾಗಿಸಿದೆ.
Read Full Story

11:19 AM (IST) Feb 12

ನಮೀಬಿಯಾ ಎದುರಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಬರೋಬ್ಬರಿ 3 ಮೇಜರ್ ಚೇಂಜ್! ಅಭ್ಯಾಸದ ವೇಳೆ ಮತ್ತೊಬ್ಬ ಆಟಗಾರನಿಗೆ ಗಾಯ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಆತಿಥೇಯ ಭಾರತ ತಂಡವು ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಬಿಗ್ ಶಾಕ್ ಎದುರಾಗಿದ್ದು ಮತ್ತೊಬ್ಬ ಆಟಗಾರ ಗಾಯಗೊಂಡಿದ್ದಾನೆ. ಹೀಗಾಗಿ ಇಂದಿನ ಪಂದ್ಯಕ್ಕೆ ಭಾರತ ತಂಡವು ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

 

Read Full Story

11:08 AM (IST) Feb 12

Fakir Baba - ವಿಷದ ಲಡ್ಡು ತಿನ್ನಿಸಿ 6 ಜನರ ಸರಣಿ ಕೊಲೆ; ದೆಹಲಿಯಲ್ಲಿ 'ಫಕೀರ್ ಬಾಬಾ' ಅರೆಸ್ಟ್!

Poison Ladoo Murders Fakir Baba Arrested ದೆಹಲಿಯ ಪೀರಾಗಢಿಯಲ್ಲಿ ಕಾರಿನಲ್ಲಿ ಮೂರು ಶವಗಳು ಪತ್ತೆಯಾದ ಬಳಿಕ ಪೊಲೀಸರು ಫಕೀರ್ ಬಾಬಾನನ್ನು ಬಂಧಿಸಿದ್ದಾರೆ. ಈತ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಒಟ್ಟು ಆರು ಕೊಲೆಗಳನ್ನು ಮಾಡಿರುವ ಶಂಕೆ ವ್ಯಕ್ತವಾಗಿದೆ.

Read Full Story

10:36 AM (IST) Feb 12

ಬಂಗಾರ ಖರೀದಿಸುವವರಿಗೆ ಗುಡ್‌ ನ್ಯೂಸ್; ಒಂದೇ ದಿನ 1200 ರುಪಾಯಿ ಕುಸಿತ! ಬೆಂಗಳೂರಲ್ಲಿಂದು ಚಿನ್ನದ ಬೆಲೆ ಎಷ್ಟು?

ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಗಗನದತ್ತ ಮುಖಮಾಡಿದ ಚಿನ್ನದ ದರದಲ್ಲಿ ಭರ್ಜರಿ ಕುಸಿತ ಕಂಡಿದ್ದು, ಇಂದು ದೊಡ್ಡ ಮೊತ್ತದ ಇಳಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಹಾಗಿದ್ದರೇ ಫೆಬ್ರವರಿ 12ರ ಬೆಳಗ್ಗೆ ಚಿನ್ನ ಬೆಲೆ ಎಷ್ಟು ನೋಡೋಣ ಬನ್ನಿ.

Read Full Story

09:45 AM (IST) Feb 12

ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ - ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!

ಪೋಷಕರ ವಿರೋಧದ ನಡುವೆ ಅನ್ಯಕೋಮಿನ ಅಜಿತ್‌ನನ್ನು ಪ್ರೀತಿಸಿ ಮದುವೆಯಾಗಿದ್ದ ಸನಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕ್ಷಯರೋಗದಿಂದ ಮೃತಪಟ್ಟಿದ್ದಾಳೆಂದು ಪತಿ ಹೇಳಿದರೆ, ಇದು ಕೊ*ಲೆ ಎಂದು ಪೋಷಕರು ಆರೋಪಿಸಿದ್ದು, ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read Full Story

08:59 AM (IST) Feb 12

ಒಂದೇ ಆರ್ಡರ್‌ನಿಂದ ಗಗನಕ್ಕೇರಿದ ಷೇರು ಬೆಲೆ; ಹೂಡಿಕೆದಾರರಿಗೆ ಶೇ.7950 ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್

ಕಂಪನಿಯು 135 ಕೋಟಿ ರೂಪಾಯಿ ಮೌಲ್ಯದ ಹೊಸ ಆರ್ಡರ್ ಪಡೆದ ನಂತರ ಅದರ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭ ನೀಡಿರುವ ಈ ಮಲ್ಟಿಬ್ಯಾಗರ್ ಷೇರು, ಫೆಬ್ರವರಿ 11 ರಂದು 5% ಅಪ್ಪರ್ ಸರ್ಕ್ಯೂಟ್ ತಲುಪಿದೆ.

Read Full Story

08:58 AM (IST) Feb 12

ಈ 5 ದಿನಾಂಕಗಳಲ್ಲಿ ಹುಟ್ಟಿದ್ರೆ ಅದೃಷ್ಟ ನಿಮ್ಮ ಕಾಲು ಬುಡದಲ್ಲಿರುತ್ತೆ; ಸರ್ಕಾರಿ ಉದ್ಯೋಗ ಹುಡುಕಿಕೊಂಡು ಬರುತ್ತೆ!

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಜನ್ಮ ದಿನಾಂಕಕ್ಕೂ ಒಬ್ಬ ಅಧಿಪತಿ ಗ್ರಹ ಇರುತ್ತದೆ. ಕೆಲವು ವಿಶೇಷ ದಿನಾಂಕಗಳಲ್ಲಿ ಜನಿಸಿದವರಿಗೆ ಗ್ರಹಗಳ ಅನುಗ್ರಹ ಹುಟ್ಟಿನಿಂದಲೇ ಇರುತ್ತದೆ. ಇವರಿಗೆ ಅದೃಷ್ಟ ಕೂಡ ಹೆಚ್ಚಾಗಿರುತ್ತೆ. ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.

 

Read Full Story

More Trending News