ಭಂಡಾರ: ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಬರಬೇಕಿದ್ದ 2 ಸಾವಿರ ರು.ಹಣದ ಬದಲು ಕೇವಲ 1 ಪೈಸೆ ರು. ಜಮೆ ಆಗಿರುವ ಸಂದೇಶ ಬಂದಿದೆ. ಈ ಬೆನ್ನಲ್ಲೇ ‘ತಾಂತ್ರಿಕ ದೋಷದಿಂದ ತಪ್ಪು ಸಂದೇಶ ಬಂದಿದೆ. ಆದರೆ ಪೂರ್ತಿ ಹಣ ಜಮಾ ಆಗಿದೆ’ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
ಭಂಡಾರ ಜಿಲ್ಲೆಯ ಜೇವನಾಳ ಗ್ರಾಮದ 65 ವರ್ಷದ ರೈತ ಮಹಿಳೆ ಲಕ್ಷ್ಮೀಬಾಯಿ ಎನ್ನುವವರ ಮೊಬೈಲ್‌ಗೆ ‘ಕಿಸಾನ್ ಕಂತಿನ ಹಣವಾಗಿ 0.01 ರು. ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ’ ಎನ್ನುವ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಇಲಾಖೆ ‘ಸಂದೇಶ ತಾಂತ್ರಿಕ ದೋಷದಿಂದ ಹೋಗಿದೆ. ದಾಖಲೆಗಳ ಪ್ರಕಾರ ರೈತನ ಖಾತೆಗೆ 2000 ರು. ಯಶಸ್ವಿಯಾಗಿ ಜಮಾ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
10:43 PM (IST) Jul 01
ಮಹೇಶ್ ಬಾಬು ಅವರನ್ನು ಮದುವೆಯಾಗಬೇಕೆಂಬ ಆಸೆ ಇತ್ತು ಎಂದು ನಟಿ ಚಾರ್ಮಿ ಕೌರ್ ಹೇಳಿದ ಹಳೆಯ ಕಾಮೆಂಟ್ ಮತ್ತೆ ವೈರಲ್ ಆಗಿದೆ. ನಮ್ರತಾ ಬಗ್ಗೆ ಹೇಳಿದ ತಮಾಷೆಯ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
10:41 PM (IST) Jul 01
ಸೋಶಿಯಲ್ ಮೀಡಿಯಾದಲ್ಲಿ ನೋ ವೈಭವ್ ಟ್ರೆಂಡ್ ಆಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ವೈಭವ್ ಕೈಬಿಡಲಾಗಿದೆ. ಇತ್ತ ಆರಂಭದಲ್ಲೇ ಭಾರತ 2 ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ತಂಡದ ಆಯ್ಕೆ ಟ್ರೋಲ್ ಮಾಡಲಾಗುತ್ತಿದೆ.
09:58 PM (IST) Jul 01
ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಕ್ಕಿಲ್ಲ.
09:26 PM (IST) Jul 01
ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ ನೇಹಾ ಧೂಪಿಯಾ, ತಮ್ಮ 'ಬ್ಯಾಕ್ ಶಾಟ್' ಫೋಟೋಗಳನ್ನು ಕ್ಲಿಕ್ಕಿಸಿದ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಅಗೌರವದ ವರ್ತನೆ' ಎಂದು ಹೇಳಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
09:22 PM (IST) Jul 01
08:08 PM (IST) Jul 01
ಔಷಧೀಯ ಕಂಪನಿಯ ಪ್ರಾಯೋಜಿತ ವಿದೇಶಿ ಪ್ರವಾಸ ಕೈಗೊಂಡಿದ್ದಕ್ಕಾಗಿ ಗುಜರಾತ್ ವೈದ್ಯಕೀಯ ಮಂಡಳಿಯು ಮೂವರು ಪ್ರಖ್ಯಾತ ಚರ್ಮರೋಗ ವೈದ್ಯರ ನೋಂದಣಿಯನ್ನು 13 ತಿಂಗಳ ಕಾಲ ಅಮಾನತುಗೊಳಿಸಿದೆ. ವೃತ್ತಿಪರ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಠಿಣ ಕ್ರಮ ಜರುಗಿಸಲಾಗಿದೆ.
07:51 PM (IST) Jul 01
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಜೊತೆ ಮದುವೆ ವದಂತಿಗಳಿಂದಾಗಿ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಿದ್ರೆ ಯಾರು ಈ ಅನಿರುಧ್? ಅವರ ಶಿಕ್ಷಣ, ವೃತ್ತಿ, ಕುಟುಂಬ ಮತ್ತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
07:32 PM (IST) Jul 01
07:07 PM (IST) Jul 01
06:52 PM (IST) Jul 01
ಸಲ್ಮಾನ್ ಖಾನ್, ಕರಣ್ ಜೋಹರ್, ಅಕ್ಷಯ್ ಖನ್ನಾ ಸೇರಿದಂತೆ ಬಾಲಿವುಡ್‌ನ 9 ಕೋಟ್ಯಾಧಿಪತಿ ನಟರು 50 ವರ್ಷ ದಾಟಿದರೂ ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳಿವೆ.
06:46 PM (IST) Jul 01
ಗೋವಿಂದ ಮತ್ತು ಸುನೀತಾ ದಂಪತಿ 1987ರಲ್ಲಿ ವಿವಾಹವಾಗಿದ್ದಾರೆ. ಟೀನಾ ಮತ್ತು ಯಶ್ವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣುತ್ತಿರುವ 'ಲಾಕ್ ಅಪ್ 2' ಶೋನಲ್ಲಿ ಸುನೀತಾ ತಮ್ಮ ದಾಂಪತ್ಯದ ಅಪಸ್ವರ ಹೇಳಿಕೊಂಡಿದ್ದಾರೆ.
06:35 PM (IST) Jul 01
ಜೂನ್ ತಿಂಗಳಲ್ಲಿ ಭಾರತದ ಜಿಎಸ್‌ಟಿ ಸಂಗ್ರಹವು 1.95 ಲಕ್ಷ ಕೋಟಿ ರೂಪಾಯಿ ತಲುಪಿ, ಶೇಕಡಾ 13.9 ರಷ್ಟು ದಾಖಲೆಯ ಏರಿಕೆ ಕಂಡಿದೆ. ಆಮದು ತೆರಿಗೆಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿವೆ. ಈ ಬೆಳವಣಿಗೆಯು ದೇಶದ ಬಲಿಷ್ಠ ಆರ್ಥಿಕತೆಯನ್ನು ಸೂಚಿಸುತ್ತದೆ.
06:25 PM (IST) Jul 01
ಡುರ್ಹಾಮ್: India vs England 1st T20 Weather Report ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಮೊದಲ ಪಂದ್ಯ ನಡೆಯೋದೇ ಅನುಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
06:17 PM (IST) Jul 01
ಆನ್‌ಲೈನ್ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ವಯಸ್ಸನ್ನು '24'ರ ಬದಲು '1' ಎಂದು ತಪ್ಪಾಗಿ ನಮೂದಿಸಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ₹7,035 ದಂಡ ವಿಧಿಸಲಾಗಿದೆ. ಸೂಕ್ತ ಗುರುತಿನ ಚೀಟಿ ತೋರಿಸಿದರೂ ಟಿಟಿಇ ದಂಡ ವಿಧಿಸಿದೆ.
06:01 PM (IST) Jul 01
ಸೌತ್ ಸೂಪರ್‌ಸ್ಟಾರ್ ಅರ್ಜುನ್ ಸರ್ಜಾ ಅವರ 'ಬ್ಲಾಸ್ಟ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಈಗ ಈ ಚಿತ್ರ ಓಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ. ಅಂದಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದಂತೆ ಈ ಸಿನಿಮಾ ನಂಬರ್ 1 ಸ್ಥಾನಕ್ಕೇರಿದೆ.
04:54 PM (IST) Jul 01
ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬಿತವಾಗಿದ್ದ ಫೋರ್ಡ್ ಕಂಪನಿ, ಕೃತಕ ಬುದ್ಧಿಮತ್ತೆ ನಿರೀಕ್ಷಿತ ಫಲಿತಾಂಶ ನೀಡದ ಕಾರಣ ತನ್ನ ಹಳೆಯ, ಅನುಭವಿ ಎಂಜಿನಿಯರ್‌ಗಳನ್ನು ಮರಳಿ ನೇಮಿಸಿಕೊಳ್ಳುತ್ತಿದೆ. ವಾಹನಗಳ ಗುಣಮಟ್ಟ ಕಾಯ್ದುಕೊಳ್ಳಲು ಮಾನವನ ಸೂಕ್ಷ್ಮ ಅನುಭವಕ್ಕೆ ಪರ್ಯಾಯವಿಲ್ಲ ಎಂದು ಕಂಪನಿ ಒಪ್ಪಿಕೊಂಡಿದೆ.
04:49 PM (IST) Jul 01
04:15 PM (IST) Jul 01
ಡುರ್ಹಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿದೆ. ಹೀಗಿರುವಾಗಲೇ ವೈಭವ್ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.
03:42 PM (IST) Jul 01
ಟೀಸರ್‌ನ ಕೊನೆಯಲ್ಲಿ ಯಶ್ ಮತ್ತು ಮಹಿಳಾ ಫೈಟರ್‌ಗಳ ನಡುವಿನ ಸಂಘರ್ಷದ ದೃಶ್ಯವಿದೆ. ಅಲ್ಲಿ ಯಶ್ ಹೊಡೆಯುವ ಆ ಒಂದು ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗಿದೆ. "ಲೇಡೀಸ್ ಅಂಡ್ ಲೇಡೀಸ್.. ಒಬ್ಬೊಬ್ಬರಾಗಿ ಬರ್ತೀರಾ ಅಥವಾ ಎಲ್ಲರೂ ಒಟ್ಗೇ ಬರ್ತೀರಾ?" ಎಂದು ಯಶ್ ಕೇಳುವ ಸ್ಟೈಲ್ ಫ್ಯಾನ್ಸ್‌ಗೆ ಹಬ್ಬದಂತಿದೆ.
03:06 PM (IST) Jul 01
ಚಿನ್ನ ಹಳದಿ ಬಣ್ಣದಲ್ಲಿಯೇ ಯಾಕಿರುತ್ತೆ? ಇಲ್ಲಿದೆ ವೈಜ್ಞಾನಿಕ ರಹಸ್ಯ. ಚಿನ್ನದ ಪರಮಾಣುವಿನಲ್ಲಿರುವ ಎಲೆಕ್ಟ್ರಾನ್‌ಗಳು ಅತಿ ವೇಗವಾಗಿ ಚಲಿಸುವುದರಿಂದ, ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತದ ಪರಿಣಾಮಗಳು ಇದಕ್ಕೆ ಕಾರಣವಾಗಿವೆ.
01:50 PM (IST) Jul 01
ವೆನೆಜುವೆಲಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಉತ್ತರ ಪ್ರದೇಶ ಮೂಲದ ರಾಕೇಶ್ ಚೌಹಾಣ್ ಪ್ರಕರಣದಲ್ಲಿ ಮತ್ತಷ್ಟು ತಿರುವು ಪಡೆದುಕೊಂಡಿದೆ. ಭಾರತಕ್ಕೆ ತರಲಾದ ರಾಕೇಶ್ ಮೃತದೇಹಲ್ಲಿ ಮೆದುಳು, ಶ್ವಾಸಕೋಶ ಸೇರಿದಂತೆ ಹಲವು ಆಂತರಿಕ ಭಾಗಗಳಿಲ್ಲದಿರುವುದು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
12:13 PM (IST) Jul 01
ಬೆಂಗಳೂರು: ಹಾಲಿ ಚಾಂಪಿಯನ್ ಭಾರತ ತಂಡವಿಂದು ಬಲಿಷ್ಠ ಇಂಗ್ಲೆಂಡ್ ಎದುರು ಟಿ20 ಸರಣಿಯನ್ನಾಡಲು ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯಕ್ಕೆ ಇದೀಗ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಪ್ರಕಟವಾಗಿದೆ. ಇಂಗ್ಲೆಂಡ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.
11:55 AM (IST) Jul 01
11:00 AM (IST) Jul 01
ಬೆಂಗಳೂರು: ಆಷಾಢ ಮಾಸ ಶುರುವಾದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಾಣಲಾರಂಭಿಸಿದೆ. ಇದು ಚಿನ್ನ ಖರೀದಿಸುವವರ ಪಾಲಿಗೆ ನಿಜಕ್ಕೂ ಸಿಹಿಸುದ್ದಿಯಾಗಿದೆ. ಅಷ್ಟಕ್ಕೂ ಜುಲೈ 01ರಂದು ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.
09:19 AM (IST) Jul 01
ಚೆಸ್ಟರ್-ಲೆ-ಸ್ಟ್ರೀಟ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರಿವಾಗಲೇ ನಾಯಕ ಶ್ರೇಯಸ್ ಅಯ್ಯರ್ ಅವರ ಅಹಂನಿಂದ ಕೂಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅಯ್ಯರ್ ಏನಂದ್ರು ನೋಡೋಣ ಬನ್ನಿ.
08:57 AM (IST) Jul 01
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವಿನ ಗಾಢ ಸ್ನೇಹದ ಬಗ್ಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಮಾತನಾಡಿದ್ದಾರೆ. ಟ್ರಂಪ್ ಅವರು ಮೋದಿಯನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬುದಕ್ಕೆ ಸ್ವಾರಸ್ಯಕರ ಪ್ರಸಂಗವೊಂದನ್ನು ವಿವರಿಸಿದ್ದಾರೆ.
08:51 AM (IST) Jul 01
08:18 AM (IST) Jul 01
08:03 AM (IST) Jul 01
07:44 AM (IST) Jul 01
ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ.
07:34 AM (IST) Jul 01
07:08 AM (IST) Jul 01
ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.