ಕೋವಿಡ್ ಮುಗೀತು ಅಂತ ರಿಲೀಫ್ ಆಗುವಂತಿಲ್ಲ, ಹೊಸ ಡೆಡ್ಲಿ ರೂಪಾಂತರಿ ಉಗಮದ ಭೀತಿ

By Vinutha Perla  |  First Published May 25, 2023, 7:58 AM IST

ಶೀಘ್ರದಲ್ಲೇ ಕೋವಿಡ್‌ಗಿಂತ ಅಪಾಯಕಾರಿಯಾದ ಮತ್ತೊಂದು 'ಮಾರಣಾಂತಿಕ ವೈರಸ್' ದಾಳಿ ಬಗ್ಗೆ WHO ಎಚ್ಚರಿಕೆ ನೀಡಿದೆ.
ಹೆಚ್ಚು ಅಪಾಯಕಾರಿ ವೈರಸ್‌ನಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗದಂತಹ ಮತ್ತೊಂದು ಕೋವಿಡ್ -19 ಗೆ ಜಗತ್ತು ಹೇಗೆ ಸಿದ್ಧವಾಗಬೇಕು ಎಂಬುದರ ಬಗ್ಗೆ ಅವರು ಮಾತನಾಡಿದರು.


ಜಿನೇವಾ: 3 ವರ್ಷಗಳ ಕಾಲ ಇಡೀ ಜಗತ್ತೇ ತಲ್ಲಣಪಡುವಂತೆ ಮಾಡಿದ ಕೋವಿಡ್‌ ಸಾಂಕ್ರಾಮಿಕ ಇನ್ನೇನು ಅಂತ್ಯದತ್ತ ಹೆಜ್ಜೆ ಇಟ್ಟಿದೆ ಎನ್ನುವ ಹೊತ್ತಿನಲ್ಲೇ, ‘ಕೋವಿಡ್‌ಗಿಂತಲೂ ಭೀಕರವಾಗಿರುವ ಮುಂದಿನ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಸನ್ನದ್ಧವಾಗಿರಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

ಇಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಟೆಡ್ರೋಸ್‌ ಅಧನೋಮ್‌ ಘೇಬ್ರೆಯೇಸಸ್‌, ‘ಕೋವಿಡ್‌ ಸಾಂಕ್ರಾಮಿಕ (Pandemic) ಅಂತ್ಯವು, ಜಾಗತಿಕ ಆರೋಗ್ಯ ಅಪಾಯದ ಅಂತ್ಯವಲ್ಲ. ಇನ್ನೊಂದು ರೂಪಾಂತರಿಯ (Variant) ಉಗಮ ಆಗಬಹುದು. ಅದರಿಂದ ಹೊಸ ಕೇಸು ಮತ್ತು ಸಾವಿನ ಪ್ರಮಾಣದಲ್ಲಿ (Death rate) ಏರಿಕೆ ಸಾಧ್ಯತೆ ಇದೆ. ಜತೆಗೆ, ಹೊಸದೊಂದು ರೋಗಕಾರಕ ಅಂಶದ ಉಗಮವು ಹಿಂದಿನ ಸಾಂಕ್ರಾಮಿಕಕ್ಕಿಂತ ಭೀಕರವಾಗುವ ಅಪಾಯ ನಮ್ಮ ಮುಂದೆ ಸದಾ ಇದ್ದೇ ಇದೆ. ಹೀಗಾಗಿ ಇಂಥ ಪರಿಸ್ಥಿತಿ ಎದುರಿಸಲು ಜಗತ್ತು ಸದಾ ಕಾಲ ಸನ್ನದ್ಧವಾಗಿರಬೇಕು’ ಎಂದು ಎಚ್ಚರಿಸಿದರು.

Latest Videos

undefined

ಮಾಸ್ಕ್‌ನಿಂದ ನಗೋದು ಹೇಗಂತ ಮರ್ತು ಹೋಯ್ತು, ನಗೋಕು ಟ್ರೈನಿಂಗ್ ಪಡೀತಿದ್ದಾರೆ ಈ ದೇಶದ ಜನ!

ಕೋವಿಡ್-19 ಸಾಂಕ್ರಾಮಿಕ ಆರೋಗ್ಯ ತುರ್ತು ವಿಭಾಗದಿಂದ ಹೊರಗಿಡಲಾಗಿರುವುದು, ಅಪಾಯ ದೂರವಿದೆ ಎಂಬುದು ಅರ್ಥವಲ್ಲ. ಏಕೆಂದರೆ ಮತ್ತೊಂದು ಹೊಸ ಮಾರಣಾಂತಿಕ ವೈರಸ್ ಹೊರಹೊಮ್ಮಬಹುದು, ಇದು ಹೆಚ್ಚಿನ ಪ್ರಮಾಣದಲ್ಲಿ ವಿನಾಶವನ್ನು ಉಂಟುಮಾಡುತ್ತದೆ. COVID-19 ಗಿಂತ ಮಾರಣಾಂತಿಕ ವೈರಸ್‌ಗೆ ಜಗತ್ತು ಸಿದ್ಧವಾಗಿರಬೇಕು. ಎಂದು WHO ಮುಖ್ಯಸ್ಥರು ಹೇಳಿದ್ದಾರೆ.

‘ಮುಂದಿನ ಸಾಂಕ್ರಾಮಿಕ ನಮ್ಮ ಮುಂದೆ ಎದುರಾದಾಗ ನಾವೆಲ್ಲಾ ಅದನ್ನು ಒಂದಾಗಿ, ಸಮಾನವಾಗಿ ಮತ್ತು ನಿರ್ಣಾಯಕ ರೀತಿಯಲ್ಲಿ ಎದುರಿಸಲು ಸಿದ್ಧರಾಗಿರಬೇಕು’ ಎಂದು ಕರೆ ಕೊಟ್ಟರು. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಪಟ್ಟಿಯಿಂದ ಕೊರೋನಾವನ್ನು ಕೈಬಿಟ್ಟಿತ್ತು. 4 ವರ್ಷದಲ್ಲಿ ಲಕ್ಷಾಂತರ ಜನರು ಸೋಂಕಿಗೆ ಬಲಿಯಾಗಿದ್ದರು.

Covid : ಬೆಂಬಿಡದ ಭೂತ ಕೊರೊನಾದಿಂದ ಕಾಡ್ತಿದೆ ಈ ಸಮಸ್ಯೆ

ಕೊರೋನಾ ಎಮರ್ಜೆನ್ಸಿಗೆ ಗುಡ್‌ಬೈ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
ಕೋವಿಡ್‌ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತು ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೇ ತಿಂಗಳ ಆರಂಭದಲ್ಲಿ ಘೋಷಿಸಿತ್ತು. ಈ ಮೂಲಕ 70 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಜಗತ್ತನ್ನು ಆತಂಕಕ್ಕೆ ದೂಡಿದ್ದ ಸಾಂಕ್ರಾಮಿಕವೊಂದು ಅಂತ್ಯಗೊಳ್ಳುವ ಸುಳಿವು ನೀಡಿತ್ತು. 2020ರ ಜನವರಿ 30ರಂದು ಕೋವಿಡ್‌ ಅನ್ನು ಡಬ್ಲ್ಯುಎಚ್‌ಒ ಜಾಗತಿಕ ತುರ್ತು ಎಂದು ಘೋಷಿಸಿತ್ತು. ಏಕೆಂದರೆ ಭಾರಿ ಸಂಖ್ಯೆಯ ಜನರು ಸೋಂಕಿಗೆ ತುತ್ತಾಗುವ ಮುನ್ಸೂಚನೆ ಆಗ ಸಿಕ್ಕಿತ್ತು. ಹೀಗೆ ಘೋಷಿಸಿದ ಕಾರಣ ಸರ್ಕಾರಗಳು ತಮ್ಮೆಲ್ಲ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಆದ್ಯತೆ ನೀಡಿದ್ದವು ಹಾಗೂ ಕೋವಿಡ್‌ ವಿರುದ್ಧ ಸಮರ ಸಾರಿದ್ದವು.

ಎಚ್ಚರದಿಂದ ಇರಿ - ಡಬ್ಲ್ಯುಎಚ್‌ಒ:‘ಕೋವಿಡ್‌ ಸಾಂಕ್ರಾಮಿಕವನ್ನು ಜಾಗತಿಕ ತುರ್ತು ಅಲ್ಲ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಆದರೆ ಇದರ ಅರ್ಥ ಆರೋಗ್ಯ ಕ್ಷೇತ್ರಕ್ಕೆ ಈ ಸೋಂಕಿನಿಂದ ಯಾವುದೇ ಅಪಾಯವಿಲ್ಲ ಎಂಬುದಲ್ಲ. ಹೊಸ ತಳಿಗಳು ಸೃಷ್ಟಿ ಆಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ಡಬ್ಲ್ಯುಎಚ್‌ಒನ ಮುಖ್ಯಸ್ಥ ಟೆಡ್ರೋಸ್‌ ಅದಾನೋಮ್‌ ಘೇಬ್ರಿಯೇಸಿಸ್‌ ಅಂದೇ ಸ್ಪಷ್ಟಪಡಿಸಿದರು.

ಸೋಂಕು ಇಳಿಕೆ: ಸೋಂಕು ಇಳಿಕೆ ಆಗುತ್ತಿರುವ ಕಾರಣ ಅಮೆರಿಕದಲ್ಲಿ ಘೋಷಿಸಲಾಗಿರುವ ಕೋವಿಡ್‌ ತುರ್ತು ಪರಿಸ್ಥಿತಿ ಮೇ 11ಕ್ಕೆ ಮುಕ್ತಾಯವಾಗಲಿದ್ದು, ಜರ್ಮನಿ, ಫ್ರಾನ್ಸ್‌ ಮತ್ತು ಬ್ರಿಟನ್‌ಗಳು ಕಳೆದ ವರ್ಷವೇ ಬಹುತೇಕ ಕೋವಿಡ್‌ ನೀತಿಗಳ ಪಾಲನೆಯನ್ನು ಕೈಬಿಟ್ಟಿವೆ. 3 ಅಲೆ ಕಂಡ ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಕೇಸು ದಾಖಲಾದರೂ ಮಾಮೂಲಿ ಕೆಮ್ಮು - ನೆಗಡಿಯಂತೆ ಸೋಂಕು ಇತ್ತು. ಆಸ್ಪತ್ರೆ ದಾಖಲೀಕರಣ ತುಂಬಾ ಕಮ್ಮಿ ಇತ್ತು.

click me!