ಬಿಪಿ, ಶುಗರ್ ನಂತಹ ಖಾಯಿಲೆ ಇದೆ ಎಂದಾಗ ನಾವು ಹೆಚ್ಚು ಎಚ್ಚರಿಕೆಯಿಂದ ಇರ್ತೇವೆ. ಹೃದಯದ ಆರೋಗ್ಯಕ್ಕೆ ಮಹತ್ವ ನೀಡ್ತೇವೆ. ಆದ್ರೆ ಯಾವುದೇ ಸಮಸ್ಯೆ ಇಲ್ಲ ಎಂದಾಗ ನಿರ್ಲಕ್ಷ್ಯ ಮಾಡೋದು ಹೆಚ್ಚು. ಇದೇ ನಿರ್ಲಕ್ಷ್ಯ ನಿಮ್ಮ ಪ್ರಾಣ ತೆಗೆಯಬಹುದು ಎಚ್ಚರ.
ಹೃದಯಾಘಾತ ಎನ್ನುವುದು ಈಗಿನ ದಿನಗಳಲ್ಲಿ ಎಲ್ಲರ ಭಯಕ್ಕೆ ಕಾರಣವಾಗಿದೆ. ಯಾಕೆಂದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಿಗೂ ಹೃದಯಾಘಾತವಾಗ್ತಿದೆ. ಸಣ್ಣದಾಗಿ ಎದೆಯಲ್ಲಿ ನೋವು ಕಾಣಿಸಿಕೊಂಡ್ರೂ ಅದನ್ನು ನಿರ್ಲಕ್ಷ್ಯಿಸೋದು ಅಪಾಯಕಾರಿ. ಹಿಂದೆ ಹೃದಯಾಘಾತದ ಮೊದಲು ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಹಾಗೆ ಕೆಲ ರೋಗಿಗಳಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು ಎನ್ನಲಾಗ್ತಿತ್ತು.
ಅಧಿಕ ರಕ್ತದೊತ್ತಡ (BP), ಮಧುಮೇಹ (Diabetes), ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವ ಜನರಿಗೆ ಹಾಗೂ ಧೂಮಪಾನಿಗಳಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂಬುದು ನಿಮಗೆಲ್ಲ ಗೊತ್ತು. ಹೃದಯ ಸಂಬಂಧಿ ಖಾಯಿಲೆ ಆನುವಂಶಿಕವೂ ಹೌದು. ಆದ್ರೆ ಈ ಎಲ್ಲ ಹಿನ್ನಲೆಯಿಲ್ಲದ ಜನರಿಗೂ ಹೃದಯಘಾತ (Heart Attack) ವಾಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.ಅಧ್ಯಯನ (Study) ದಲ್ಲಿ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ 2,379 ಜನರ ಡೇಟಾವನ್ನು ಪರಿಶೀಲಿಸಲಾಗಿದೆ. ಮದ್ರಾಸ್ ವೈದ್ಯಕೀಯ ಕಾಲೇಜಿನ ವೈದ್ಯರು ಅಧ್ಯಯನದ ವರದಿ ಬಿಡುಗಡೆ ಮಾಡಿದ್ದಾರೆ.
undefined
ಬ್ಯಾಡ್ ಕೊಲೆಸ್ಟ್ರಾಲ್ ಇದ್ರೆ ಡೇಂಜರ್, ನಿಮ್ಮ ರಕ್ತದಲ್ಲಿದು ಇದೆಯಾ ಚೆಕ್ ಮಾಡ್ಕೊಳ್ಳಿ!
ಅಪಾಯಕಾರಿ ಅಂಶಗಳಿಲ್ಲದೆ ಸಾವಿನ ಸಂಭವನೀಯತೆ ಹೆಚ್ಚು : ಬಿಪಿ ಇಲ್ಲ ಶುಗರ್ ಇಲ್ಲ, ಹಿರಿರ್ಯಾರೂ ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಆರೋಗ್ಯ ಸರಿಯಾಗಿದೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿದೆ ನಮಗೆ ಹೃದಯಾಘಾತವಾಗಲ್ಲವೆಂದು ಅನೇಕರು ಭಾವಿಸ್ತಾರೆ. ಆದ್ರೆ ಇದು ಸಂಪೂರ್ಣ ತಪ್ಪು ಎನ್ನುತ್ತಾರೆ ಮದ್ರಾಸ್ ವೈದ್ಯಕೀಯ ಕಾಲೇಜಿನ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯ ಪ್ರಾಧ್ಯಾಪಕ ಡಾ ಜಿ ಜಸ್ಟಿನ್ ಪೌಲ್. ಅಪಾಯಕಾರಿ ಅಂಶ ಇರುವವರಿಗಿಂತ ಅಪಾಯಕಾರಿ ಅಂಶ ಇರದವರು ಸಾವನ್ನಪ್ಪುವುದು ಹೆಚ್ಚು. ಯಾಕೆಂದ್ರೆ ಅಪಾಯಕಾರಿ ಅಂಶವಿರುವ ಜನರು ವೈದ್ಯರಿಂದ ಚಿಕಿತ್ಸೆ ಪಡೆಯುವ ಜೊತೆಗೆ ಜೀವನ ಶೈಲಿ ಬದಲಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಯಾವುದೇ ಸಮಸ್ಯೆಯಿಲ್ಲದ ವ್ಯಕ್ತಿ ವೈದ್ಯರ ಸಲಹೆ ಇರಲಿ, ವೈದ್ಯಕೀಯ ಪರೀಕ್ಷೆಗೂ ಒಳಗಾಗೋದಿಲ್ಲ.
ನಾಲಿಗೆ ಕತ್ತರಿಸಿದ ನಂತರವೂ ಸರಾಗವಾಗಿ ಮಾತನಾಡಿದ ಮಹಿಳೆ, ದಂಗಾದ ವೈದ್ಯರು!
ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಕಾಡುತ್ತೆ ಈ ಹೃದಯಾಘಾತ : ಸದ್ದಿಲ್ಲದೆ ಬರುವ ಈ ಹೃದಯಾಘಾತ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎಂಬುದು ಅಧ್ಯಯನದಿಂದ ಪತ್ತೆಯಾಗಿದೆ. ಬಿಪಿ, ಶುಗರ್, ಮದ್ಯಪಾನ, ಕೊಲೆಸ್ಟ್ರಾಲ್ ಹೆಚ್ಚಿಲ್ಲದ ಮಹಿಳೆಯರು ಯಾವುದೇ ಲಕ್ಷಣ ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು. ಸಾಮಾನ್ಯವಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಲ್ಲ ಎನ್ನುತ್ತಾರೆ ತಜ್ಞರು. ಯಾವುದೇ ಖಾಯಿಲೆಯಿಲ್ಲದೆ ಹೃದಯಾಘಾತಕ್ಕೊಳಗಾದವರ ಸರಾಸರಿ ವಯಸ್ಸು 57.4 ಇತ್ತು ಎಂಬುದು ಅಧ್ಯಯನದಿಂದ ತಿಳಿದಿದೆ. ಖಾಯಿಲೆ ಹೊಂದಿದ್ದು ಹೃದಯಾಘಾತಕ್ಕೊಳಗಾದವರ ವಯಸ್ಸು 55.7 ಇತ್ತು. ಬಿಪಿ, ಶುಗರ್, ಧೂಮಪಾನ, ಕೊಲೆಸ್ಟ್ರಾಲ್ ಸಮಸ್ಯೆಯಿಲ್ಲದೆ ಹೃದಯಾಘಾತಕ್ಕೊಳಗಾಗಿದ್ದವರಲ್ಲಿ ಶೇಕಡಾ 10. 4ರಷ್ಟು ಮಂದಿ ಮೊದಲು ತಂಬಾಕು ಸೇವಕರಾಗಿದ್ದರು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಹೃದಯಾಘಾತಕ್ಕೆ ಇದೂ ಕಾರಣ : ಮೊದಲೇ ಹೇಳಿದಂತೆ ಬಿಪಿ, ಶುಗರ್, ಅಧಿಕ ಕೊಲೆಸ್ಟ್ರಾಲ್, ಧೂಮಪಾನಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಆದ್ರೆ ಇದು ಮಾತ್ರ ಕಾರಣವಲ್ಲ. ಮಾನಸಿಕ ಸ್ಥಿತಿ ಕೂಡ ಹೃದಯಾಘಾತಕ್ಕೆ ಕಾರಣ. ಕೆಲವರು ಒಳಗೊಳಗೆ ಬೇಯುತ್ತಿರುತ್ತಾರೆ. ಯಾರೂ ನನ್ನನ್ನು ಬೆಂಬಲಿಸುವುದಿಲ್ಲ ಎನ್ನುವ ನಿರಾಶೆಯಲ್ಲಿರ್ತಾರೆ. ಮಾನಸಿಕ ಸಮಸ್ಯೆ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತೆ ಎನ್ನುತ್ತಾರೆ ತಜ್ಞರು.
ಹೃದಯದ ಆರೋಗ್ಯ (Heart Health) ಹೀಗೆ ಕಾಪಾಡಿ : ಹೃದಯದ ಬಡಿತ ನಿಂತ್ರೆ ಮುಗೀತು. ಇನ್ನಷ್ಟು ದಿನ ನಾವು ಸುಖಕರ ಜೀವನ ನಡೆಸಬೇಕು ಎಂದಾದರೆ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡ್ಬೇಕು. ಮೂರು ಇಗಳನ್ನು ನಾವು ಸಂಭಾಳಿಸಬೇಕಾಗುತ್ತದೆ. ಈಟಿಂಗ್ ( Eating), ಎಕ್ಸಸೈಜ್( Exercise) ಮತ್ತು ಎಮೇಷನಲ್ ( Emotion). ಈ ಮೂರನ್ನು ಸರಿಯಾಗಿ ಪಾಲನೆ ಮಾಡಿದ್ರೆ ನೀವು ಕೆಟ್ಟ ಜೀನ್ಸ್ ಹೊಂದಿದ್ದರೂ ನಿಮ್ಮ ಹೃದಯದ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.