Healthy Eating Habits: ಕೊರೋನಾ ಕಾಲದಲ್ಲಿ ನಿಮ್ಮ ಆಹಾರಶೈಲಿ ಹೀಗಿರಲಿ

By Suvarna News  |  First Published Dec 28, 2021, 9:28 PM IST

ಕೋವಿಡ್ (Covid), ಡೆಲ್ಟಾ, ಓಮಿಕ್ರಾನ್ ಸಾಲು ಸಾಲು ಸೋಂಕು ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ (Health)ದ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ. ಹೀಗಾಗಿ ತಿನ್ನುವ ಆಹಾರ (Food)ದ ಬಗ್ಗೆಯೂ ಪ್ರತ್ಯೇಕ ಕಾಳಜಿ ವಹಿಸಬೇಕಾದುದು ಮುಖ್ಯ. ಸೋಂಕಿನ ವಿರುದ್ಧ ಹೋರಾಡಲು ತಿನ್ನುವ ಆಹಾರದಲ್ಲಿ ಏನೇನಿದ್ದರೆ ಉತ್ತಮ
 


ಕೊರೋನಾ ಸೋಂಕು ಆರಂಭ ಆದಾಗಿನಿಂದಲೂ ಜನರು ಹೆಚ್ಚು ಭಯಭೀತರಾಗಿದ್ದಾರೆ. ಕಣ್ಣಿಗೆ ಕಾಣದ ವೈರಸ್‌ವೊಂದು ಅತಿವೇಗವಾಗಿ ಹರಡುವ ರೀತಿ, ಸಾವು-ನೋವಿನ ಪ್ರಮಾಣ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ಹೀಗಾಗಿ ಜೀವ, ಜೀವನದ ಬಗ್ಗೆ ಜನರು ಹೆಚ್ಚೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕೊರೋನಾದ ಬೆನ್ನಲ್ಲೇ ಸೋಂಕಿನ ರೂಪಾಂತರಿಯೆಂದು ಗುರುತಿಸಿಕೊಂಡ ಡೆಲ್ಟಾ, ಓಮಿಕ್ರಾನ್‌ಗಳ ಹಾವಳಿ ಜನರು ತಮ್ಮ ಆರೋಗ್ಯದ ಬಗ್ಗೆ ಮತ್ತಷ್ಟು ಮುತುವರ್ಜಿ ವಹಿಸುವಂತೆ ಮಾಡಿದೆ. ಹೀಗಾಗಿ ಜನರು ಬಿಸಿ ನೀರು ಕುಡಿಯುವುದು, ಆರೋಗ್ಯಕರ ಗಿಡಮೂಲಿಕೆಗಳ ಕಷಾಯ ಮಾಡಿ ಕುಡಿಯುವುದು ಮೊದಲಾದ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.

ಜೀವಕ್ಕೇ ಅಪಾಯ ತಂದೊಡ್ಡುವ ಮಾರಕ ವೈರಸ್‌ಗಳ ಕಾಟ ಮುಗಿದಿಲ್ಲ. ಹೊಸ ಹೊಸ ರೂಪಾಂತರಿಗಳು ಮನುಷ್ಯನನ್ನು ಮತ್ತಷ್ಟು ಭಯ ಬೀಳಿಸುತ್ತಿವೆ. ಹೀಗಾಗಿ ಆರೋಗ್ಯಕರ ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಹಾಗಾದ್ರೆ ಸಾಂಕ್ರಾಮಿಕ ರೋಗಗಳು ಎಲ್ಲೆಡೆ ಹರಡುತ್ತಿರುವ ಸಂದರ್ಭದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸುವುದು ಉತ್ತಮ ಎಂದು ತಿಳಿದುಕೊಳ್ಳೋಣ.

Latest Videos

Food And Health: ಸಮತೋಲಿತ ಆಹಾರ ಸೇವನೆ ಕ್ರಮ ಹೀಗಿರಲಿ..

ಪ್ರೋಟೀನ್ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ (Eat Protein Food, Fruits And Vegetables)

ಕೋವಿಡ್ (Covid) ವಿರುದ್ಧ ಹೋರಾಡಲು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ, ಆರೋಗ್ಯಕರ ಆಹಾರ ಪದ್ಧತಿಯಲ್ಲಿ, ಪ್ರೋಟೀನ್ ಭರಿತ ಆಹಾರವನ್ನು ಸೇರಿಸಲು ಮರೆಯದಿರಿ. ನಿಮ್ಮ ಡಯಟ್ ಚಾರ್ಟ್ ಪ್ರತಿ ವಾರ ಐದು ದಿನ ಬೇಯಿಸಿದ ಮೊಟ್ಟೆಗಳಿರಲಿ. ಆಹಾರದಲ್ಲಿ ಧಾನ್ಯಗಳ ಮಿಶ್ರಣವಿರಲಿ. ಗೋಧಿ, ಅಕ್ಕಿ, ಬೀನ್ಸ್, ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ಸಂಸ್ಕರಿಸಿದ ಆಹಾರ (Food)ವನ್ನು ಸೇವಿಸುವುದನ್ನು ಕಡಿಮೆ ಮಾಡಿ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ (Drink Enough Water Every Day)

ನೀರು ಜೀವನಕ್ಕೆ ಅತ್ಯಗತ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರತಿದಿನ 3 ಲೀಟರ್ ನೀರು (Water) ಕುಡಿಯುವುದು ದೇಹಕ್ಕೆ ಅಗತ್ಯವಾದ ಚೈತನ್ಯವನ್ನು ಒದಗಿಸಲು ನೆರವಾಗುತ್ತದೆ. ಮಾತ್ರವಲ್ಲ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ನೀರು ಕುಡಿಯುವುದು ಮಾತ್ರವಲ್ಲದೆ ಹಣ್ಣಿನ ರಸ ಮತ್ತು ನಿಂಬೆ ಜ್ಯೂಸ್‌ನ್ನು ಕುಡಿಯುವುದು ಸಹ ಒಳ್ಳೆಯದು. ಹೀಗಾಗಿ ನೀರು, ಜ್ಯೂಸ್ (Juice), ಮಜ್ಜಿಗೆ ಯಾವುದೇ ಆಗಿರಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯಿರಿ.

Protein Rich Food: ಆಹಾರದಲ್ಲಿ ಧಾನ್ಯಗಳ ಬಳಕೆ ಹೇಗಿರಬೇಕು..? ಯಾವ ಬೇಳೆ ಆರೋಗ್ಯಕ್ಕೆ ಉತ್ತಮ

ಮಧ್ಯಮ ಪ್ರಮಾಣದ ತೈಲ ಮತ್ತು ಕೊಬ್ಬು (Moderate Amount of Oil and Fat)

ಅಡುಗೆ ಮಾಡುವಾಗ ಬೆಣ್ಣೆ ಮತ್ತು ತುಪ್ಪದ ಬದಲಿಗೆ ಆಲಿವ್, ಸೋಯಾ, ಸೂರ್ಯಕಾಂತಿ ಅಥವಾ ಕಾರ್ನ್ ಎಣ್ಣೆಯನ್ನು ಬಳಸಿ. ಸಂಸ್ಕರಿಸಿದ ಮಾಂಸವನ್ನು ತಪ್ಪಿಸಲು ಪ್ರಯತ್ನಿಸಿ. ಏಕೆಂದರೆ ಅವುಗಳು ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿರುತ್ತವೆ. ಮೀನು ಹಾಗೂ ಕೋಳಿ ಮಾಂಸವನ್ನು ಹೆಚ್ಚೆಚ್ಚು ತಿನ್ನಿರಿ. ಇದು ದೇಹಕ್ಕೆ ಅಗತ್ಯವಾದ ಪ್ರೊಟೀನ್, ವಿಟಮಿನ್‌ (Vitamin)ಗಳನ್ನು ಒದಗಿಸುತ್ತದೆ.

ಫಾಸ್ಟ್ ಫುಡ್ ಸೇವನೆ ಕಡಿಮೆ ಮಾಡಿ (Avoid Fast Food)

ಫಾಸ್ಟ್ ಫುಡ್ (Fastfood) ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ನೀವು ಹೆಚ್ಚಾಗಿ ಫಾಸ್ಟ್ ಫುಡ್‌ನ್ನು ಸೇವಿಸುತ್ತಿದ್ದೀರಿ ಎಂದರೆ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಮತ್ತು ಹೈಡ್ರೋಜನೀಕರಿಸಿದ ಕೊಬ್ಬನ್ನು ಸೇವಿಸುತ್ತಿದ್ದೀರಿ ಎಂದರ್ಥ. ಇದು ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು, ಹೀಗಾಗಿ ಮನೆಯಲ್ಲೇ ತಯಾರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಿ.

ಮದ್ಯಪಾನ ಮಾಡದಿರಿ (Avoid Alcohol Usage)

ಕೋವಿಡ್ ಸೋಂಕು ಹರಡಲು ಆರಂಭವಾದಾಗಿನಿಂದಲೂ ಮದ್ಯಪಾನ ಮಾಡುವುದು ಸೋಂಕು ತಗುಲದಂತೆ, ಸೋಂಕು ತಗುಲಿದರೂ ಬೇಗ ಗುಣಮುಖವಾಗುವಂತೆ ಮಾಡುತ್ತದೆ ಎಂಬ ಗಾಳಿಸುದ್ದಿಯೊಂದು ಹಬ್ಬುತ್ತಿದೆ. ಆದರೆ ಅದು ನಿಜವಲ್ಲ. ಅತಿಯಾದ ಮದ್ಯಪಾನವು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಮದ್ಯಪಾನದಿಂದ ದೂರವಿರಿ. ಆರೋಗ್ಯಕರ ಜೀವನವನ್ನು ನಡೆಸಿ.

click me!