ಕುಡಿಬೇಡಿ, ಸೇದ್ಬೇಡಿ: ಆರೋಗ್ಯದ ವಿಷಯದಲ್ಲಿ @40ಕ್ಕೆ ಯಾಮಾರಬೇಡಿ!

By Web DeskFirst Published Nov 1, 2019, 3:11 PM IST
Highlights

ನಲವತ್ತರ ಹೊಸಿಲಿಗೆ ಕಾಲಿಡುತ್ತಿದ್ದೀರಿ ಎಂದರೆ ಆರೋಗ್ಯದ ವಿಷಯದಲ್ಲಿ ಕೆಲವೊಂದು ಹೆಚ್ಚಿನ ಕಾಳಜಿ ಅಗತ್ಯ. ಇದಕ್ಕಾಗಿ ಕೆಲವೊಂದು ಅಭ್ಯಾಸಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. 

ನಲವತ್ತಾಗುವ ಹೊತ್ತಿಗೆ ದೇಹ, ಆಸಕ್ತಿ, ಜವಾಬ್ದಾರಿಗಳು ಎಲ್ಲವೂ ಬದಲಾಗುತ್ತವೆ. ಆದರೆ, ನಿಮ್ಮ ಜೀವನಶೈಲಿ ಮಾತ್ರ ಹಳೆಯದರಂತೆಯೇ ಮುಂದುವರಿದರೆ ಮಾತ್ರ ಕಷ್ಟ ಕಷ್ಟ. ಆರೋಗ್ಯದ ವಿಷಯದಲ್ಲಿ ಇಳಿಕೆಕ್ರಮ ತಲುಪುವ ಸಮಯದಲ್ಲಿ ಅದನ್ನು ಇಳಿಯದಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಅರಿತು ಅಳವಡಿಸಿಕೊಳ್ಳಿ. 

ಚಟಗಳಿಗೆ ಬೈಬೈ

ಜಗತ್ತಿನಲ್ಲಿ ಹಸಿವಿನ ಸಮಸ್ಯೆಗೆ ಗಾಂಧಿಯ ಆಹಾರ ನೀತಿ ಪರಿಹಾರವೇ?

ಸಿಗರೇಟ್ ಸೇವನೆ, ಕುಡಿತ ಇತ್ಯಾದಿ ಚಟಗಳನ್ನು ಒಂದು ರೇಂಜ್‌ಗೆ ನಿಮ್ಮ ದೇಹ ಯೌವನದಲ್ಲಿ ತಡೆದುಕೊಳ್ಳಬಹುದು. ಆದರೆ, ದೇಹಕ್ಕೆ ವಯಸ್ಸಾದಂತೆಲ್ಲ ಈ ಚಟಗಳ ಅಡ್ಡ ಪರಿಣಾಮಗಳನ್ನೆದುರಿಸುವ ಶಕ್ತಿ ಕುಂದುತ್ತದೆ. ಅದು ಸೋಲುತ್ತಾ ಬರುತ್ತದೆ. ಹೀಗಾಗಿ, ಮೊದಲು ಚಟಗಳಿಂದ ಮುಕ್ತರಾಗಿ. 

ರೋಗ ತಡೆಗಟ್ಟಲು ಗಮನ ಕೊಡಿ

ವಯಸ್ಸಾದಂತೆಲ್ಲ ಬಿಪಿ, ಶುಗರ್, ಹೃದಯದ ಸಮಸ್ಯೆಗಳು, ಕೊಲೆಸ್ಟೆರಾಲ್ ಮುಂತಾದ ಕಾಯಿಲೆಗಳು ಬರುವ ಸಂಭವ ಜಾಸ್ತಿ. ಹಾಗಾಗಿ, 40ರ ಆರಂಭದಿಂದಲೇ ಈ ಎಲ್ಲ ಕಾಯಿಲೆಗಳಿಗೆ ಆಗಾಗ ಸಾಮಾನ್ಯ ಚೆಕಪ್ ಮಾಡಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಯಾವುದನ್ನೇ ಆಗಗಲಿ, ಆರಂಭದಲ್ಲಿ ಗುರುತಿಸಿದರೆ ಚಿಕಿತ್ಸೆ ಸುಲಭ. ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಕೂಡಾ 40ರಿಂದ ಪ್ರತಿ ವರ್ಷ ಮಾಡಿಸಿ. ಇದಲ್ಲದೆ, ಮೇಲಿನ ಕಾಯಿಲೆಗಳು ಬರದಂತೆ ನೋಡಿಕೊಳ್ಳಲು ಎಂಥ ಡಯಟ್ ಫಾಲೋ ಮಾಡಬೇಕು, ದೇಹವನ್ನು ಹೇಗೆ ಫಿಟ್ ಆಗಿಟ್ಟುಕೊಳ್ಳಬೇಕು ಎಂಬುದರತ್ತ ಗಮನ ಹರಿಸಿ.

ಉರಿ, ಕೆಂಪು ಗುಳ್ಳೆ, ತುರಿಕೆಯುಳ್ಳ ಚರ್ಮ ಸಮಸ್ಯೆ ಇದ್ರೆ ಈ ಆಹಾರ ಬೇಡ

ಪ್ರತಿ ರಾತ್ರಿ ಚೆನ್ನಾಗಿ ನಿದ್ರಿಸಿ

ಇದುವರೆಗೂ ನಿದ್ದೆಗೆಟ್ಟು ಕಷ್ಟ ಪಟ್ಟು ದುಡಿದಾಗಿದೆ. ಅರ್ಧ ರಾತ್ರಿವರೆಗೆ ಮೂವಿ ಮ್ಯಾರಥಾನ್ ನೋಡಿ ಖುಷಿ ಪಟ್ಟಾಗಿದೆ. ಈಗ ನಿದ್ರೆಯನ್ನು ಎಂಜಾಯ್ ಮಾಡಬೇಕಾದ ಸಮಯ. ಪ್ರತಿದಿನ ಕನಿಷ್ಠ 8ರಿಂದ 9 ಗಂಟೆ ರಾತ್ರಿ ನಿದ್ರಿಸಿ. ವಯಸ್ಸಾದ ಮೇಲೆ ಹಾರ್ಮೋನ್‌ಗಳ ಬದಲಾವಣೆ ಹಾಗೂ ಜೀವನದ ಒತ್ತಡಗಳಿಂದಾಗಿ ನಿದ್ರೆಯ ಗುಣಮಟ್ಟ ಇಳಿಯುತ್ತದೆ. ಹಾಗಾಗಿ, ಹೆಚ್ಚು ಕಾಲ ದೇಹಕ್ಕೆ ರೆಸ್ಟ್ ಕೊಡಲು ಏನು ಬೇಕೋ ಅದನ್ನು ಮಾಡಿ. ಯೋಗ, ಧ್ಯಾನಾಭ್ಯಾಸ, ವ್ಯಾಯಾಮಗಳು, ಮಲಗುವಾಗ ಮೊಬೈಲ್‌ನಿಂದ ದೂರ ಉಳಿವುದು, ಹಾಲು ಕುಡಿಯುವುದು- ಮುಂತಾದ ಅಭ್ಯಾಸಗಳು ನಿದ್ರೆಯ ಗುಣಮಟ್ಟ ಹೆಚ್ಚಿಸುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ, ಒತ್ತಡ ಕಡಿಮೆಯಾಗುತ್ತದೆ. 

ಅಲಾರಾಂ ಇಲ್ಲದೆ ಎದ್ದೇಳಿ

ಯಾವಾಗಲೂ ನಿದ್ರೆಯಿಂದ ಎಚ್ಚರವಾದಾಗಲೇ ಏಳಬೇಕು. ಒತ್ತಾಯಪೂರ್ವಕವಾಗಿ ಏಳುವುದು ಆರೋಗ್ಯಕರ ಲಕ್ಷಣವಲ್ಲ. ನಿಮ್ಮ ನಿದ್ರೆಯ ಸೈಕಲ್ ಪೂರ್ಣಗೊಳ್ಳದೆ ಎದ್ದರೆ ಫ್ರೆಶ್ ಆಗಿರುವುದು ಸಾಧ್ಯವಿಲ್ಲ. ಅಲ್ಲದೆ, ಅಲಾರಾಂ ಬಳಕೆಯಿಂದ ಬಿಪಿ ಹಾಗೂ ಹೃದಯ ಬಡಿತ ಏರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾಗಿ, ಎಚ್ಚರವಾದಾಗ ಏಳುವುದು ಅಭ್ಯಾಸ ಮಾಡಿಕೊಳ್ಳಿ. ಸಾಮಾನ್ಯವಾಗಿ ನಾವು ಪ್ರತಿದಿನ ಏಳುವ ಸಮಯಕ್ಕೆ ಸರಿಯಾಗಿ ತಾನಾಗಿಯೇ ಎಚ್ಚರಾಗುತ್ತದೆ. 

ಕೀಳರಿಮೆಯಿಂದ ಪಾರಾಗುವುದು ಹೇಗೆ?

ಟೆಕ್ನಾಲಜಿ ಕೋಣೆಯಿಂದ ಹೊರಗಿರಲಿ

ಕೆಲವೇ ವರ್ಷದ ಅವಧಿಯಲ್ಲಿ ನಮಗೆ ಸ್ಮಾರ್ಟ್ ಫೋನ್ ಎಂಬುದು ಅಂಟುಜಾಡ್ಯವಾಗಿಬಿಟ್ಟಿದೆ. ಅದನ್ನು ಬಿಟ್ಟು ಒಂದು ನಿಮಿಷವೂ ಇರಲಾಗದು ಎಂಬಂಥ ದುರಭ್ಯಾಸ ಬೆಳೆಸಿಕೊಂಡಿದ್ದೇವೆ. ಈ ಫೋನ್‌ನಿಂದ ಎಷ್ಟು ಪ್ರಯೋಜನಗಳಿವೆಯೋ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅಷ್ಟೇ ತೊಂದರೆಗಳೂ ಇವೆ. ಅದರಲ್ಲೂ ಟಿವಿ, ಫೋನ್, ಲ್ಯಾಪ್‌ಟಾಪ್ ಬೆಳಕು ನಿದ್ರೆಯ ಗುಣಮಟ್ಟವನ್ನು ಕೆಡಿಸುವುದು ಸಾಬೀತಾಗಿದೆ. ಕೋಣೆಯಲ್ಲಿ ಟೆಕ್ನಾಲಜಿ ಬೇಡ. ಮಲಗುವ ಎರಡು ಗಂಟೆಗಳ ಮುನ್ನ ಇವೆಲ್ಲವುಗಳಿಂದ ದೂರವುಳಿಯಿರಿ.

ಡೆಸ್ಕ್‌ನಲ್ಲಿ ಎದ್ದು ಓಡಾಡಿ

ಇಡೀ ದಿನ ಕುಳಿತಚು ಮಾಡುವ ಕೆಲಸದ ಮಧ್ಯೆ ದೇಹಕ್ಕೆ ಬೇಕಾದ ಚಲನೆಯೇ ಸಿಗುವುದಿಲ್ಲ. ಇದರಿಂದ ಹತ್ತು ಹಲವು ಕಾಯಿಲೆಗಳು ಅಟಕಾಯಿಸಿಕೊಳ್ಳಬಹುದು. ಹೀಗೆ ಕುಳಿತಲ್ಲೇ ಇರುವುದು ಸ್ಮೋಕಿಂಗ್ ಸಾಲಿಗೆ ಸೇರುವ ಹೊಸ ಚಟ. ಹಾಗಾಗಿ, ಡೆಸ್ಕ್ ಕೆಲಸದ ಮಧ್ಯೆ ಪ್ರತಿ ಗಂಟೆಗೊಮ್ಮೆ ಎದ್ದು ಓಡಾಡಿ, ಮೆಟ್ಟಿಲು ಹತ್ತಿಳಿಯಿರಿ, ದೇಹವನ್ನು ಸ್ಟ್ರೆಚ್ ಮಾಡಿ. 

ಪ್ರೋಟೀನ್ ಸೇವನೆ ಹೆಚ್ಚಿಸಿ

ಈ ಕಪ್ಪಿಂಗ್ ಥೆರಪಿಗೆ ಸೆಲೆಬ್ರಿಟಿಗಳು ಫುಲ್ ಫಿದಾ!

ಪ್ರೋಟೀನ್ ಹೆಚ್ಚಾಗಿ ಬಳಸದೆಯೇ ಸ್ನಾಯುಗಳ ಆರೋಗ್ಯ ಕಾಪಾಡುವುದು ಕಷ್ಟ. ಪ್ರತಿ ದಿನ 5.5 ಔನ್ಸ್‌ನಷ್ಟು ಪ್ರೋಟೀನ್ ದೇಹಕ್ಕೆ ಅಗತ್ಯ. ಹೀಗಾಗಿ, ಮೊಟ್ಟೆ, ನಟ್ಸ್‌ಗಳ ಸೇವನೆ ಹೆಚ್ಚಿಸಿ.

ಗಟ್ ಹೆಲ್ತ್‌ ಬಗ್ಗೆ ಗಮನ ಕೊಡಿ

ಶೇ.80ರಷ್ಟು ನಮ್ಮ ಇಮ್ಯುನಿಟಿ ಇರುವುದೇ ಗಟ್‌ನಲ್ಲಿ. ಹಾಗಾಗಿ, 40ರ ಬಳಿಕ ಇದರ ಆರೋಗ್ಯ ಚೆನ್ನಾಗಿ ಗಮನಿಸಿಕೊಳ್ಳಬೇಕು. ಇದನ್ನು ನೀವು ಆರ್ಟಿಫಿಶಿಯಲ್ ಸ್ವೀಟ್ನರ್ಸ್ ದೂರವಿಟ್ಟು, ಪ್ರಿಬಯೋಟಿಕ್ ಹಾಗೂ ಪ್ರೊಬಯೋಟಿಕ್ ಆಹಾರಗಳ ಸೇವನೆ ಹೆಚ್ಚಿಸುವ ಮೂಲಕ ಮಾಡಬಹುದು.

click me!