Covid-19: ಸೋಂಕು ತಗುಲಿ 18 ತಿಂಗಳ ವರೆಗೆ ಸಾವಿನ ಅಪಾಯ ಹೆಚ್ಚು-ಅಧ್ಯಯನ

By Vinutha Perla  |  First Published Jan 20, 2023, 10:47 AM IST

ಕಳೆದೆರಡು ವರ್ಷಗಳಲ್ಲಿ ಕೋವಿಡ್ ಜನಜೀವನವನ್ನು ಸಂಪೂರ್ಣವಾಗಿ ಹೈರಾಣ ಮಾಡಿದೆ. ಲಸಿಕೆ ಹಾಕಿದ ನಂತ್ರ ಸೋಂಕು ಹರಡುವಿಕೆ ಸ್ಪಲ್ಪ ಮಟ್ಟಿಗೆ ಕಡಿಮೆಯಾದರೂ, ಇದರಿಂದ ಹಲವರಲ್ಲಿ ಆರೋಗ್ಯ ಸಮಸ್ಯೆಗಳೂ ಕಂಡು ಬಂದವು. ಸದ್ಯ ಈ ಹಿಂದೆ ಕೋವಿಡ್ 19 ಸೋಂಕು ತಗುಲಿದ್ದವರು ಬೆಚ್ಚಿಬೀಳುವಂತಹಾ ಆತಂಕಕಾರಿ ಮಾಹಿತಿಯೊಂದು ಬಹಿರಂಗವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ದೇಶಾದ್ಯಂತ ಅಲ್ಲೋಲಕಲ್ಲೋಲವನ್ನುಂಟು ಮಾಡಿತ್ತು. ಸೋಂಕಿನ ತೀವ್ರತೆಗೆ ಕೋಟ್ಯಾಂತರ ಮಂದಿ ಅಸ್ವಸ್ಥರಾದರು. ಅಸಂಖ್ಯಾತ ಮಂದಿ ಮೃತಪಟ್ಟರು. ಸರ್ಕಾರ ಹಂತ ಹಂತವಾಗಿ ಲಸಿಕೆಯನ್ನು ಬಿಡುಗಡೆ ಮಾಡಿದ ನಂತರ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂತು. ಆದರೆ ಕ್ರಮೇಣ ಲಸಿಕೆಯಿಂದಲೂ ಆರೋಗ್ಯ (Health) ಹದಗೆಡುತ್ತಿರುವಯದಾಗಿ ಹಲವರು ಆರೋಪಿಸಿದರು. ಇತ್ತೀಚಿನ ಅಧ್ಯಯನದ ಮಾಹಿತಿಯ ಪ್ರಕಾರ, ಕೋವಿಡ್ ಸೋಂಕು ತಗುಲಿದ ಕನಿಷ್ಠ 18 ತಿಂಗಳವರೆಗೆ ಕೋವಿಡ್ ರೋಗಿಗಳು ಹೆಚ್ಚಿನ ಸಾವಿನ ಅಪಾಯವನ್ನು ಹೊಂದಿರುತ್ತಾರಂತೆ. 

ಕೋವಿಡ್ ಸೋಂಕು ತಗುಲಿದ್ದವರಿಗೆ ಸಾವಿನ ಅಪಾಯ ಹೆಚ್ಚು
ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ (ESC) ನ ಜರ್ನಲ್ ಕಾರ್ಡಿಯೋವಾಸ್ಕುಲರ್ ರಿಸರ್ಚ್‌ನಲ್ಲಿ ಪ್ರಕಟವಾದ ಸುಮಾರು 160,000 ಭಾಗವಹಿಸುವವರ ಅಧ್ಯಯನದ ಪ್ರಕಾರ, ಸೋಂಕಿತವಲ್ಲದ ಭಾಗವಹಿಸುವವರಿಗೆ ಹೋಲಿಸಿದರೆ ಕೋವಿಡ್ ರೋಗಿಗಳು (Covid patients) ಹಲವಾರು ಹೃದಯರಕ್ತನಾಳದ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಇದು ಅವರ ಹೆಚ್ಚಿನ ಸಾವಿನ (Death) ಅಪಾಯಗಳಿಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

Latest Videos

undefined

Covid-19: ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜವಂತೆ, ಸತ್ಯ ಒಪ್ಪಿಕೊಂಡ ಕೇಂದ್ರ ಸರ್ಕಾರ

'ಕೋವಿಡ್-19 ರೋಗಿಗಳನ್ನು ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಕನಿಷ್ಠ ಒಂದು ವರ್ಷದವರೆಗೆ ಮೇಲ್ವಿಚಾರಣೆ ಮಾಡಬೇಕು ಎಂದು ಸಂಶೋಧನೆಗಳು ಸೂಚಿಸುತ್ತವೆ, ಇದು ದೀರ್ಘಕಾಲದ ಕೋವಿಡ್‌ನ ಭಾಗವಾಗಿರುವ ಸೋಂಕಿನ ಹೃದಯರಕ್ತನಾಳದ ತೊಡಕುಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ' ಎಂದು ಹಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಇಯಾನ್ ಸಿಕೆ ವಾಂಗ್ ತಿಳಿಸಿದ್ದಾರೆ. ಸೋಂಕಿಲ್ಲದ ವ್ಯಕ್ತಿಗಳಿಗೆ ಹೋಲಿಸಿದರೆ, ಸೋಂಕಿನ ಮೊದಲ ಮೂರು ವಾರಗಳಲ್ಲಿ ಕೋವಿಡ್-19 ರೋಗಿಗಳು ಸಾಯುವ ಸಾಧ್ಯತೆಯು 81 ಪಟ್ಟು ಹೆಚ್ಚಾಗಿದೆ ಮತ್ತು 18 ತಿಂಗಳ ನಂತರ ಐದು ಪಟ್ಟು ಹೆಚ್ಚಾಗಿರುತ್ತದೆ ಎಂಬ ವಿಚಾರ ಅಧ್ಯಯನದಿಂದ ಬಹಿರಂಗವಾಗಿದೆ.

ಪ್ರಮುಖ ಹೃದಯರಕ್ತನಾಳದ ಕಾಯಿಲೆಯ ಸಾಧ್ಯತೆ ಹೆಚ್ಚಳ
ಸೋಂಕಿತವಲ್ಲದ ಎರಡು ಗುಂಪುಗಳೊಂದಿಗೆ ಹೋಲಿಸಿದರೆ, ಕೋವಿಡ್ -19 ಹೊಂದಿರುವ ರೋಗಿಗಳು ತೀವ್ರ ಹಂತದಲ್ಲಿ ಪ್ರಮುಖ ಹೃದಯರಕ್ತನಾಳದ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ನಂತರದ ಹಂತದಲ್ಲಿ 40 ಪ್ರತಿಶತ ಹೆಚ್ಚು. ಸೋಂಕಿಲ್ಲದ ವ್ಯಕ್ತಿಗಳಿಗೆ ಹೋಲಿಸಿದರೆ, ಕೋವಿಡ್ -19 ರೋಗಿಗಳಲ್ಲಿ ಸಾವಿನ ಅಪಾಯವು ತೀವ್ರ ಹಂತದಲ್ಲಿ 81 ಪಟ್ಟು ಹೆಚ್ಚಾಗಿದೆ ಮತ್ತು ನಂತರದ ಹಂತದಲ್ಲಿ ಐದು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

Covid Cases: ನಾಲ್ಕನೇ ಡೋಸ್‌ ಹಾಕಿಸಿಕೊಳ್ಳಲೇ ಬೇಕಾ ? ಡಾ.ಸಿಎನ್ ಮಂಜುನಾಥ್ ಹೇಳೋದೇನು?

ಚೀನಾದಲ್ಲಿ ಬೀಜಿಂಗ್ ನಿವಾಸಿಗಳೆಲ್ಲರೂ ಜನವರಿ ಅಂತ್ಯದ ವೇಳೆಗೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳಿದೆ. ಅಧ್ಯಯನದ ಪ್ರಕಾರ ತೀವ್ರವಾದ ಕೋವಿಡ್ -19 ಹೊಂದಿರುವ ರೋಗಿಗಳು ಪ್ರಮುಖ ಹೃದಯರಕ್ತನಾಳದ ಕಾಯಿಲೆ (Cardiovascular disease)ಯನ್ನು ಅಭಿವೃದ್ಧಿಪಡಿಸುವ ಅಥವಾ ಸಾಯುವ ಸಾಧ್ಯತೆ ಹೆಚ್ಚು. ಮಯೋಕಾರ್ಡಿಯಲ್ ಇನ್ಫಾರ್ಕ್ಷನ್, ಪರಿಧಮನಿಯ ಹೃದಯ ಕಾಯಿಲೆ, ಹೃದಯ ವೈಫಲ್ಯ ಮತ್ತು ಆಳವಾದ ರಕ್ತನಾಳದ ಥ್ರಂಬೋಸಿಸ್ ಸೇರಿದಂತೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸೋಂಕಿತರಿಗೆ ಹೋಲಿಸಿದರೆ Covid-19 ರೋಗಿಗಳು ಹಲವಾರು ಹೃದಯರಕ್ತನಾಳದ ಪರಿಸ್ಥಿತಿಗಳ ಹೆಚ್ಚಿನ ಸಂಭವನೀಯತೆಯನ್ನು ಹೊಂದಿದ್ದಾರೆ. ಒಟ್ನಲ್ಲಿ ಕೋವಿಡ್ ಸೋಂಕಿನ ತೀವ್ರತೆ ಕಡಿಮೆಯಾದರೂ ಜನರು ವೈರಸ್‌ನಿಂದ ಆತಂಕ ಪಡೋದಂತೂ ತಪ್ಪಿಲ್ಲ.

ಕೆಲವು ಹೃದಯರಕ್ತನಾಳದ ಪರಿಸ್ಥಿತಿಗಳ ಅಪಾಯಗಳು, ಉದಾಹರಣೆಗೆ ಪಾರ್ಶ್ವವಾಯು ಮತ್ತು ಹೃತ್ಕರ್ಣದ ಕಂಪನ - ಕೋವಿಡ್ -19 ರೋಗಿಗಳಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಾಗಿದೆ. ಆದರೆ ನಂತರ ಸಾಮಾನ್ಯ ಮಟ್ಟಕ್ಕೆ ಮರಳಿತು. ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಈ ಅಧ್ಯಯನವನ್ನು ನಡೆಸಲಾಗಿತ್ತು. 

click me!